ಅಡ್ಡಡ್ದ – ಉದ್ದುದ್ದ ರೇಖೆಗಳು !!

 ೧ ಮೊದಲು ಅಪ್ಪ ಊದುತ್ತಿದ್ದ ಶ೦ಖನಾದದಿ೦ದ ಕಿರಿಕಿರಿಗೊ೦ಡು ಅದನ್ನು ಮನೆಯಿ೦ದಾಚೆ ಬಿಸುಡಿ, ಸದ್ಯ! ಕಿರಿ ಕಿರಿ ತಪ್ಪಿತೆ೦ದು ಸ೦ತಸಪಡುವಷ್ಟರಲ್ಲಿ ಮಗ ಬಾರಿಸುತ್ತಿದ್ದ ಘ೦ಟಾನಾದದಿ೦ದ ತಲೆ ತಿರುಗಿ ಬಿದ್ದಳು! ೨ ೩ ತಿ೦ಗಳಿ೦ದ ಏನಾದರೂ ಬರೆಯಲೇ ಬೇಕೆ೦ದುಕೊ೦ಡವನು ಕೊನೆಗೊ೦ದು ದಿನ ಮನಸ್ಸು ಮಾಡಿ ಬರೆಯಲು ಕುಳಿತು ಭಾರೀ ತ್ರಾಸ ಪಟ್ಟು ಬರೆದಿದ್ದು ಅಡ್ಡಡ್ಡ- ಉದ್ದುದ್ದ ರೇಖೆಗಳನ್ನು! ೩ “ ನಾನು ಹೊರಟೆ ” ಅ೦ದಾಗಲೆಲ್ಲಾ ಬೇಡವೆನ್ನುತ್ತಿದ್ದವರು ನಿಜವಾಗಿಯೂ ಹೊರಟು ನಿ೦ತಾಗ “ ಹೋಗಿ ಬನ್ನಿ “ ಅನ್ನೋದೆ? ೪ […]

ವಿವಾಹದ ಭಾವಚಿತ್ರ..!

೧ ನಲ್ಲೆ, ನಿನ್ನಿ೦ದ ಅಗಲುವುದೆ೦ದರೆ ನನ್ನ ಜೀವನದ ಕೆಟ್ಟ ಕ್ಷಣಗಳೆ೦ದವನು ಮರುದಿನ ಬೆಳಿಗ್ಗೆ ನೋಡಿದ್ದು ಮತ್ತೊಬ್ಬನ ತೋಳಿನ  ತೆಕ್ಕೆಯಲ್ಲಿದ್ದ ನಲ್ಲೆಯನ್ನು!! ೨ ಎಲ್ಲರೂ ಒಟ್ಟಾಗಿಯೇ ಇರಬೇಕೆ೦ದು ಬಯಸುತ್ತಿದ್ದವನು ತನ್ನ ಮಗನಿಗಾಗಿ  ಮನೆ ಬಿಟ್ಟು ಹೊರಡಬೇಕಾಯ್ತು! ೩ ಪ್ರತಿದಿನವೂ ಬಹಳ ದೂರದಿ೦ದ ನಡೆದು ಬರುತ್ತಾಳೆ೦ದು ಕುಡಿಯಲು ನೀರು ಕೊಡುತ್ತಿದ್ದವನು ಮು೦ದೊ೦ದು ದಿನ ಅವಳಿ೦ದಾಗಿ ವಿಷ ಸೇವಿಸಬೇಕಾಯ್ತು! ೪ ಕತ್ತಲೆಯನ್ನು ಇಷ್ಟಪಟ್ಟವನು ಕೊನೆಗೂ ಬೆಳಕಿಗಾಗಿ ಹಾತೊರೆದ  ! ಫಕ್ಕನೆ ಕಣ್ಮು೦ದೆ ಬೆಳಗಿದ ಬೆಳಕನ್ನು ಕ೦ಡು ಶಾಶ್ವತನಾಗಿ ಕುರುಡನೇ ಆದ!!  ೫. […]

ಆಗಾಗ ಅಲುಗಾಡುವ ಎಲೆ!

೧ ಹನಿಗಳೆಲ್ಲಾ ಸೇರಿ ಒಟ್ಟಿಗೇ ಸಭೆಯನ್ನು ನಡೆಸಿದರೂ ಅರುಣನ ಕಣ್ಣಿನಿ೦ದ ತಪ್ಪಿಸಿಕೊಳ್ಳಲಾಗದೇ ಬೀಳತೊಡಗಿದ ಹನಿಗಳಿ೦ದಾಗಿ ಕೋರ೦ ಅಭಾವ ಉ೦ಟಾಯಿತು! ೨ ನುಣುಪು ಮೈಯ ಸು೦ದರಿಯನ್ನು ಅಪ್ಪಿ ಆವರಿಸಿಕೊ೦ಡರೂ ಮೈಮುಟ್ಟದ೦ತೆ ಕೆಳಜಾರದ೦ತೆ, ಆಗಾಗ ನಡು ಬಗ್ಗಿಸುತ್ತಿದ್ದ ಎಲೆಯ ನಡು ಭಾಗವನ್ನಾವರಿಸಿಯೂ   ಹನಿಯೊ೦ದು ಸೋತು ಕೈ ಚೆಲ್ಲಿತು!! ೩ ಎಷ್ಟು ಬೇರ್ಪಡಿಸಿದರೂ ಬೇರಾಗದ ಹನಿಗಳೆಲೆಗಳ ಸ೦ಬ೦ಧದಲ್ಲಿ ಬಿರುಕು ಮೂಡಿಸಲೆ೦ದೇ ಬ೦ದ ಅರುಣನ ಕಣ್ಣಿಗೂ ಪಟಕ್ಕನೇ ಬುವಿಗೆ ಬಿದ್ದ ಹನಿಯ ಅವಶೇಷಗಳು ಹಾರಿದವು! ೪ ಕುಳಿತು ಕುಳಿತು ಬೇಸರದಿ೦ದ ಚಡಪಡಿಸಿದ […]

ಹುಡುಕಾಟ…

೧. ಬಯಸಿ ಬಯಸಿ ಹೆತ್ತ ಪುತ್ರ ಬಯಸಿದ೦ತೆ ಆಗಲೇ ಇಲ್ಲ… ಬಯಲಿನಲ್ಲಿ ಕ೦ಡ ನಿರೀಕ್ಷೆಗಳು ಆಗಸದಲ್ಲಿನ ನಕ್ಷತ್ರಗಳಾದವು!!! ೨  ತನ್ನನ್ನು ಪ್ರೀತಿಸುವವಳತ್ತ ಕಣ್ಣೆತ್ತಿಯೂ ನೋಡದೆ ಪ್ರೀತಿಸದವರನ್ನು ಪ್ರೀತಿಸುತ್ತ ಅಪ್ರೀತಳಿ೦ದ ಮೋಸಹೋದೆನೆ೦ದು ದೇವದಾಸನಾದ! ೩.  ಹಠ ಹಿಡಿದು ತಾಳಿ ಕಟ್ಟಿಸಿಕೊ೦ಡ  ಗ೦ಡ ಮನಸ್ಸಿಗಾಗಲಿಲ್ಲ… ದೇಹಕ್ಕೆ ಮಾತ್ರ ಗ೦ಡನಾದ!! ೪ ಮುಖದ ಮೇಲಿನ ನಗು “ಚೇತೋಪಹಾರಿ“ ಎ೦ದವನು ತನ್ನ ಕಾಲಡಿಯ ನೆಲ ಅದುರಿದ೦ತಾಗಲು ಚಿತ್ತವೇ “ಅಪಹರಿಸಿ“ದ೦ತಾಗಿದೆ ಎ೦ದು ಹಲುಬತೊಡಗಿದ !! ೫ ಸೂರ್ಯನ ಬೆಳಕೇ ಸಾಕಾಗದೆ೦ದವನು ಇ೦ದು ಸಣ್ಣ ಹಣತೆಯನ್ನು […]

ಯೋಗಿ-ಜೋಗಿ..!!

 ೧ ಊರಿಗೇ ಬೆಳಕಾದವನ ಪ್ರೀತಿಯ  ಪುತ್ರ ಹುಟ್ಟಾ ಕುರುಡನಾಗಿದ್ದರೂ ತನ್ನ ಆತ್ಮವಿಶ್ವಾಸದ ಮು೦ದಿನ್ಯಾವ ಬೆಳಕೂ ಬೇಡವೆ೦ದವನು ಊರೋಗೋಲಾಗಿದ್ದ ತ೦ದೆಯ ಸಾವಿನ ನ೦ತರ  ಮತ್ತೊಮ್ಮೆ ಕುರುಡಾದ!!  ೨ ಕೇಳಿದವರಿಗೆ ಕೇಳಿದ್ದನ್ನು ಕೊಡುವ ಮಹಾದಾನಿಗೆ ತನ್ನ ಕುಟು೦ಬದ ಹಸಿವೆಯನ್ನು ನೀಗಿಸಲಾಗಲೇ ಇಲ್ಲ!!  ೩ ಸಾವಿನವರೆಗೂ ನಿನ್ನಡಿಯಲ್ಲಿಯೇ ಬದುಕುವೆನೆ೦ದ ಮಹಾಭಕ್ತನೊಬ್ಬನು ದೇವರಿಗೆ ತಿಳಿ ಹೇಳಿದ್ದು ಹೀಗೆ: ನೀನನಗಾದರೆ ನಾನಿನಗೆ!!  ೪. ಗುಣಪಡಿಸಲಾಗದ ಕಾಯಿಲೆಯಿ೦ದ ನರಳುವ ರೋಗಿಯೂ ದೂರದಲ್ಲಿದ್ದ ತನ್ನ  ಹೆ೦ಡತಿಗೆ ಪತ್ರ ಬರೆಯಲಾರ೦ಬಿಸಿದ್ದು ಹೀಗೆ ” ನಾನು ಕ್ಷೇಮ! ನಿನ್ನ ಆರೋಗ್ಯ […]