Author: ಸುಮನ

ಹುಟ್ಟಿದ್ದು ಮಲೆನಾಡಿನ ಹವ್ಯಕ ಕುಟುಂಬದಲ್ಲಿ. ಸಿವಿಲ್ ಇಂಜಿನಿಯರ್ ಪತ್ನಿಯಾಗಿ ದೇಶ ಹೊರದೇಶಗಳಲ್ಲಿ ವಾಸಮಾಡಿದ ಅನುಭವ. ವಿಜ್ಞಾನದ ಪದವೀಧರೆ ಜೊತೆಗೆ ಟ್ರೈನಿಂಗ್ ಎಂಡ್ ಡೆವಲಪ್ಮೆಂಟ್ ನಲ್ಲಿ PG ಡಿಪ್ಲೊಮಾ ಮಾಡಿಕೊಂಡು ಮಾನವ ಸಂಪನ್ಮೂಲ ತರಬೇತುದಾರರಾಗಿ ದಶಕಕ್ಕೂ ಮೇಲ್ಪಟ್ಟ ಅನುಭವ.. ಲಲಿತ ಕಲೆಗಳಲ್ಲಿ ಆಸಕ್ತಿ, ಭಾಷಾಪ್ರೇಮಿ ಕವನಗಳು ಹಾಗೂ ಲೇಖನಗಳಲ್ಲಿ ವಿಚಾರಗಳನ್ನು ವ್ಯಕ್ತ ಪಡಿಸುವುದು ಇಷ್ಟದ ಹವ್ಯಾಸ

ಮಾನವರಲ್ಲಿ ಆಕ್ರಮಣಶೀಲತೆಮಾನವರಲ್ಲಿ ಆಕ್ರಮಣಶೀಲತೆ

ಮಾನವನ ವರ್ತನೆಯೇ ವಿಚಿತ್ರ. ಅದು ಎಷ್ಟು ಹಿತವಾಗಿರುತ್ತದೆಯೋ ಅಷ್ಟೇ ಅಹಿತವಾಗಿಯೂ ಇರುತ್ತದೆ. ಮನುಷ್ಯರಲ್ಲಿ ಒಳ್ಳೆಯದರ ಜತೆಗೆ ಕೆಟ್ಟ ಗುಣಗಳೂ ಇರುತ್ತವೆ. ನಾವು ಇತರರನ್ನು ಪ್ರೀತಿಸುವುದು, ಪೋಷಿಸುವುದು, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಎಷ್ಟು ನಿಜವೋ, ಇತರರ ಮೇಲೆ ಕೋಪಿಸಿಕೊಳ್ಳುವುದು, ಆಕ್ರಮಣ ಮಾಡುವುದು; ನೋವುಂಟು ಮಾಡುವುದು. ಹಿಂಸೆ, ಬೈಗುಳ ಅಷ್ಟೇ ಸತ್ಯ.

ತೂಗು ಬಾ ತೊಟ್ಟಿಲನು ತಾಯೇತೂಗು ಬಾ ತೊಟ್ಟಿಲನು ತಾಯೇ

ತೂಗು ಬಾ ತೊಟ್ಟಿಲನು ತಾಯೇಮರಳಿ ನನ್ನ ಬಾಲ್ಯವ ನೆನಸುವಂತೆನಿನ್ನ ಜೇನ್ನುಡಿಯ ಜೋಗುಳವಮತ್ತೆ ನೆನಪಿಗೆ ತರುತತೂಗು ಬಾ ತೊಟ್ಟಿಲನು ತಾಯೇ ತೂಗು ಬಾ ತೊಟ್ಟಿಲನು ತಾಯೇನನ್ನ ಮನ ಪ್ರಫುಲ್ಲಿತವಾಗುವಂತೆತಿಳಿಯಾದ ಗಾಳಿ ನನ್ನೆಲ್ಲ ಬೇಗುದಿಯಮರೆಯಾಗಿಸುತಿರಲುತೂಗು ಬಾ ತೊಟ್ಟಿಲನು ತಾಯೇ ತೂಗು ಬಾ ತೊಟ್ಟಿಲನು ತಾಯೇನೆಮ್ಮದಿಯ ನಿದ್ದೆ ನನ್ನ ತಬ್ಬುವಂತೆಜೀವನದ ಜಂಜಾಟವನ್ನೆಲ್ಲವದೂರ ಓಡಿಸುತತೂಗು

ವೃತ್ತಿ ಮತ್ತು ವ್ಯಕ್ತಿಗತ ಬದುಕಿನ ಸಮತೋಲನವೃತ್ತಿ ಮತ್ತು ವ್ಯಕ್ತಿಗತ ಬದುಕಿನ ಸಮತೋಲನ

“ಉದ್ಯೋಗಂ ಪುರುಷ ಲಕ್ಷಣ” ಎನ್ನುತ್ತಾರೆ. ಆದರೆ ಈಗಿನ ಕಾಲದಲ್ಲಿ ಆ ನುಡಿ ಸ್ವಲ್ಪ ಬದಲಾಗಿದೆ. ಪುರುಷರಷ್ಟೇ ಮಹಿಳೆಯರು ಕೂಡ ಉದ್ಯೋಗ ರಂಗದಲ್ಲಿ ತಮ್ಮ ಪಾದಾರ್ಪಣೆಯನ್ನು ಮಾಡಿ ಬಹಳ ಕಾಲವಾಗಿದೆ . ತುಂಬ ಚೆನ್ನಾದ ಅಭಿವೃದ್ಧಿಯನ್ನು ತೋರಿಸುತ್ತಲೂ ಇದ್ದಾರೆ. ಹಿಂದಿನ ಕಾಲದಲ್ಲಿದ್ದ ಹಾಗೆ ಪುರುಷರು ಕೆಲಸಕ್ಕೆ ಹೋಗೋದು, ಹೆಂಗಸರು ಅಡುಗೆ

ಕಾರ್ಪೊರೇಟ್ ಕಂಪನಿಗಳ ಒಳಹೊರಗು – ೧ಕಾರ್ಪೊರೇಟ್ ಕಂಪನಿಗಳ ಒಳಹೊರಗು – ೧

ಆಸೆ ಆಕಾಂಕ್ಷೆಗಳು:ಪದವಿಪತ್ರ ಕೈಗೆ ಸಿಗುತ್ತಿದ್ದ ಹಾಗೇಯೆ ಯುವಕ ಯುವತಿಯರ ಕೆಲಸದ ಬೇಟೆ ಶುರುವಾಗುತ್ತದೆ. ಮೊದಲೆಲ್ಲ ಸರ್ಕಾರಿ ನೌಕರಿ ಸಿಕ್ಕರೆ ಸಾಕೆಂಬ ಭಾವವಿರುತ್ತಿತ್ತು. ಆದರೆ ಈಗಿನ ಕಾಲದಲ್ಲಿ ಹೆಚ್ಚು ದುಡ್ಡಿನ ಆಸೆಯೋ ಅಥವಾ ಪೊಳ್ಳು ಪ್ರತಿಷ್ಠೆಗಾಗಿಯೋ ಜನರು ಕಾರ್ಪೊರೇಟ್ಗಳಲ್ಲಿ ಕೆಲಸ ಮಾಡಲು ಇಷ್ಟ ಪಡುತ್ತಾರೆ. ಇದನ್ನು ನಾವು ತಪ್ಪೆಂದು ಹೇಳುವುದಕ್ಕಾಗುವುದಿಲ್ಲ.

ಕಳೆದ ಬಾಲ್ಯಕಳೆದ ಬಾಲ್ಯ

ಇಂದು ಓದಿದ ಗುಲ್ಜಾರ್ ಸಾಲುಗಳು;ತಲೆಯೊಳಗೆ ಹೆಚ್ಚಿದ ಗೊಂದಲಗಳು! ಬಾಲ್ಯದ ಬಿಂದಾಸ್ ತನ,ಮರೆಯಾಯಿತೆಲ್ಲೋ…ನಿಯಮಗಳ ಹಿಂದೆ ತನ್ನತನಕಳೆದುಹೋಯಿತೆಲ್ಲೋ! ‘ಬೇಕು’ಗಳ ಅರ್ಥ ಬದಲಾಗಿ,ನಿರಾಸೆಗಳು ಜೊತೆಯಾಗಿ,ನೈಜತೆಗೆ ಕೃತಕತೆಯ ಹೊದಿಕೆ ಹಾಕಿ,ನಲಿವಿಗಿಂತ ನೋವೇ ಹೆಚ್ಚಾಯಿತಲ್ಲೋ!! ಸರಳತೆಯ ಬಾಲ್ಯ ಮರೆಯಾಗಿ,ಸಂಕೀರ್ಣತೆಯ ಯೌವನ ಜೊತೆಯಾಗಿ,ನಿಸ್ಸಹಾಯಕತೆಯ ವೃದ್ಧಾಪ್ಯಕ್ಕೆ,ಪುನಃ ಬಾಲ್ಯ ನೆನಪಾಯಿತಲ್ಲೋ!! ಉಳಿಸಿಕೊಂಡು ಬಾಲ್ಯದ ಎಳೆತನ,ಬೆಳೆಸಿಕೊಂಡು ಯೌವನದ ಹೊಸತನ,ಮುಂದುವರೆಸಿದರೆ ವೃದ್ಧಾಪ್ಯದ ಪ್ರೌಢತೆಯನ್ನ,ಪರಮ

ಕಾದಂಬರಿ ಕಥೆಗಳನ್ನೇಕೆ ಓದಬೇಕು?ಕಾದಂಬರಿ ಕಥೆಗಳನ್ನೇಕೆ ಓದಬೇಕು?

ಒಂದು ಸಾಲಲ್ಲಿ ಏನಾದರು ಬರೆದರೆ ಅದು quote ಅನ್ನಿಸಿಕೊಳ್ಳುತ್ತೆ. ಅದರಲ್ಲಿನ ಗೂಢಾರ್ಥಗಳು ನಮಗೆ ಹೊಳೆಯದೇ ಇರಬಹುದು. ಹಾಗಿರುವಾಗ ಸ್ಪಷ್ಟ ಅರ್ಥಕ್ಕಾಗಿ ಬರಹದ ವಿಸ್ತೃತ ರೂಪದ ಅವಶ್ಯಕತೆ ಉಂಟಾಗುತ್ತದೆ. ಯಾವುದನ್ನೇ ಆದರೂ ನಾವು ಅದು ಏನನ್ನು ಹೇಳ್ತಾ ಇದೆಯೋ ಹಾಗೆಯೇ ಅರ್ಥ ಮಾಡಿಕೊಳ್ಳಲು ಒಂದು ವಿವರಣಾತ್ಮಕ ಬರಹದ ಅವಶ್ಯಕತೆ ಇರುತ್ತದೆ.