Author: ಶ್ಯಾಮಲಾ ಜನಾರ್ದನನ್

ನಾನು ಶ್ಯಾಮಲಾ ಜನಾರ್ದನನ್. ಮೂಲತಹ ಭದ್ರಾವತಿಯವಳು. ನನ್ನ ತಂದೆಯವರು ಶ್ರೀ ಎಂ ಸುಬ್ಬರಾಯರು, ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಿಗೆ ಪತ್ರಕರ್ತರಾಗಿದ್ದರು. ಬಿಕಾಂ ಪದವಿಯ ನಂತರ ಮದುವೆಯಾಗಿ ಬದುಕನ್ನು ಕಟ್ಟಿಕೊಳ್ಳಲು ದೂರದ ಕೊಲ್ಕತ್ತಾಗೆ ಹೋಗಿ ೨೦ ವರ್ಷಗಳು ನೆಲೆಸಿದೆ. ಅಲ್ಲಿರುವಾಗ ವೃತ್ತಿಯಲ್ಲಿದ್ದು ೨೦೦೦ಕ್ಕೆ ಬೆಂಗಳೂರಿನಲ್ಲಿ ಬಂದು ನೆಲೆಸಿದೆ. ಕೊಲ್ಕತ್ತಾದಲ್ಲಿದ್ದಾಗ ಅಣ್ಣಾಮಲೈ ವಿಶ್ವವಿದ್ಯಾಲಯದ PG Dip in Financial Management ಮಾಡಿದೆ. ಒಬ್ಬನೇ ಮಗ ಹಾಗೂ ಸೊಸೆ (ಇಬ್ಬರೂ ಇಂಜಿನಿಯರ್ ಗಳು) ಅಮೆರಿಕಾದಲ್ಲಿ ನೆಲೆಸಿರುವರು. ಇಲ್ಲಿ ನಾನು ಮತ್ತು ನನ್ನವರು ನಿವೃತ್ತಿ ಜೀವನದಲ್ಲಿ... ಕರ್ನಾಟಕ ಸಂಗೀತ (ಹಾಡುಗಾರಿಕೆ ಮತ್ತು ವೀಣೆ), ಸ್ವಲ್ಪ ಅಧ್ಯಾತ್ಮದ ಗೀಳು, ಭಾವಗೀತೆಗಳು, ಕಸೂತಿ ಹಾಕುವುದು, ಪುಸ್ತಕ ಓದುವುದು, ಮುದ್ರಾ ವಿಜ್ಞಾನ, Occupressure, ಯೋಗ.... ಒಟ್ಟಿನಲ್ಲಿ ಎಲ್ಲಿ ಸತ್ವಯುತ ವಿಷಯ ಇದೆಯೋ ಅದು ನನ್ನನ್ನು ಆಕರ್ಷಿಸುತ್ತದೆ. ತಂದೆಯವರಿಂದಾಗಿ ಅಲ್ಪ ಸ್ವಲ್ಪ ಬರೆಯುವ ಹವ್ಯಾಸ ಕೂಡ ಇದೆ...

ಬದುಕಿನ ಪುಟಗಳು ಭಾಗ – ೪ಬದುಕಿನ ಪುಟಗಳು ಭಾಗ – ೪

ಬದುಕು ನಮಗೆ ನಮ್ಮ ಸ್ವಭಾವವನ್ನು ತಿದ್ದುತ್ತಾ, ತೀಡುತ್ತಾ ಬಾಳದಾರಿಯಲ್ಲಿ ಸಾಗಲು ಅನುವು ಮಾಡಿಕೊಡುತ್ತದೆ. ಯಾವುದೋ ಒಂದು ಊರಿನಲ್ಲಿ, ಯಾರ ಮನೆಯಲ್ಲೋ ಜನಿಸಿ, ಯಾವುದೇ ತರಹದ ಉನ್ನತ ಗುರಿ ಅಥವಾ ಗಮ್ಯ ಎಂಬ ಪದಗಳ ಪರಿಚಯವಿಲ್ಲದೇ ಬೆಳೆದಿರುತ್ತೇವೆ. ಇದು ಹೆಚ್ಚಾಗಿ ನಮ್ಮ ಸಮಕಾಲೀನರ ಬದುಕಿನಲ್ಲಿ ನಡೆದಿರಬಹುದಾದ ವಿಷಯಗಳು. ಏಕೆಂದರೆ ಈಗಿನ

Badukina putagalu

ಬದುಕಿನ ಪುಟಗಳು ಭಾಗ – 3ಬದುಕಿನ ಪುಟಗಳು ಭಾಗ – 3

ನಮ್ಮ ಬದುಕು ಒಂದು ಪುಸ್ತಕವಿದ್ದಂತೆ. ಅದನ್ನು ಯಾರೆಲ್ಲಾ ಓದಬಹುದು ಎಂಬುದನ್ನು ನಾವೇ ನಿರ್ಧರಿಸಬೇಕಾಗುವುದು. ಪುಸ್ತಕದ ಪುಟಗಳು ಮಗುಚಿದಂತೆಲ್ಲಾ ಅನುಭವಗಳು ಬರೆಯಲ್ಪಡುತ್ತವೆ. ಒಳಮನಸ್ಸು ಎಲ್ಲವನ್ನೂ ದಾಖಲಿಸುತ್ತಾ ಹೋಗುತ್ತದೆ. ಕೆಲವು ಒಳ್ಳೆಯ ಹಾಗೂ ಸಂತೋಷದ ಸಂಗತಿಗಳು, ಘಟನೆಗಳು. ಕೆಲವು ಅಹಿತಕರವಾದ ದಾಖಲೆಗಳು. ಸಂತೋಷದ ಘಟನೆಗಳನ್ನು ನಮ್ಮ ಬದುಕಿನ ಪುಸ್ತಕದ ಪುಟಗಳನ್ನು ಮತ್ತೆ

ದಾಸ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ :ದಾಸ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ :

ಪ್ರವೇಶ ದಾಸರೆಂದರೆ ಭಗವಂತನ ಭಕ್ತರೆಂದರ್ಥವಾಗುವುದು. ದಾಸ ಸಾಹಿತ್ಯ ಯಾವ ಶತಮಾನದಲ್ಲಿ ಹೇಗೆ ಪ್ರಾರಂಭವಾಯಿತು ಎಂದು ಹೇಳುವುದು ಸ್ವಲ್ಪ ಕಷ್ಟವೇ. ಭಗವದ್ಗೀತೆಯಲ್ಲಿಯೇ ಶ್ರೀಕೃಷ್ಣನು ತನ್ನನ್ನು ಆರಾಧಿಸುತ್ತಾ, ಗಾಯನ ಮಾಡಿ ನರ್ತಿಸುವರು ಎಂದು ಉಲ್ಲೇಖಿಸಿರುವನು. ತುಂಬುರು, ನಾರದರು, ಯಕ್ಷರು, ಕಿನ್ನರರು, ಗಂಧರ್ವರು ಮುಂತಾದ ದೇವತಾವರ್ಗದವರೇ ಭಗವಂತನನ್ನು ಸ್ತುತಿಸಿ, ಪ್ರಾರ್ಥಿಸಿ, ಹಾಡಿ, ನರ್ತಿಸುತ್ತಿದ್ದರು.

ಬದುಕಿನ ಪುಟಗಳು ಭಾಗ – ೨ಬದುಕಿನ ಪುಟಗಳು ಭಾಗ – ೨

ಸತ್ವವನ್ನು ಹಂಚುವ ಬಗ್ಗೆ ಆಲೋಚಿಸಿದ್ದೆವು. ಈಗ ಯಾರು ಸತ್ವವನ್ನು ಹಂಚಲು ಸಾಧ್ಯವೆಂದು ನೋಡೋಣ. ನಮ್ಮಲ್ಲಿ ಸಾಕಾಗುವಷ್ಟು ಇದ್ದರೆ ತಾನೇ ನಾವು ಬೇರೆಯವರಿಗೆ ಕೊಡುವ ಯೋಚನೆ ಮಾಡುವುದು? ಇದು ಕೇವಲ ಅನುಭವದ ಅಥವಾ ಬದುಕು ನನಗೆ ಕಲಿಸಿದ ಪಾಠಗಳ ಒಂದು ಪಕ್ಷಿನೋಟ ಅಷ್ಟೆ. ನಾನೇನೂ ದೊಡ್ಡ ತಿಳುವಳಿಕೆಯುಳ್ಳ ವ್ಯಕ್ತಿಯೋ ಅಥವಾ

ನೀಲ ಮೇಘ ಶ್ಯಾಮಲ ಶ್ಯಾಮಲನೀಲ ಮೇಘ ಶ್ಯಾಮಲ ಶ್ಯಾಮಲ

ಬದುಕಿನ ಪುಟಗಳಿಂದ – ಭಾಗ – ೧ ಎಲ್ಲದಕ್ಕಿಂತ ಮೊದಲು “ಬದುಕು” ಎಂದರೇನು ? ಬೇರೆ ಬೇರೆ ನಿಘಂಟುಗಳ ಪ್ರಕಾರ ಬದುಕು ಎಂದರೆ ಜೀವನ, ಬಾಳು, ಜೀವಿಸು, ಕಸುಬು, ಜೀವಿಸಿರು, ಬಾಳನ್ನು ಸಾಗಿಸು ಎಂದೆಲ್ಲಾ ಇದೆ. ಕನ್ನಡ ಸಾಹಿತ್ಯ ಪರಿಷತ್ ಪ್ರಕಟಿಸಿರುವ ನಿಘಂಟಿನಲ್ಲಿ ಮೇಲಿನ ಎಲ್ಲಾ ಅರ್ಥಗಳ ಜೊತೆಗೆ