Tag Archives: ಕವನ

ಅಲ್ರೀ .. ಪಕ್ಕದ್ಮನೆಯವರದ್ದು ಫೌ೦ಡೇಶನ್ ಅ೦ತೆ!!

ಅಲ್ರೀ.. ಪಕ್ಕದ್ಮನೆಯವರದ್ದು ಇವತ್ತು ಫೌ೦ಡೇಶನ್ ಅ೦ತೆ ಕಣ್ರೀ… ನಮ್ಮದೇನ್ರೀ ಕಥೆ? ಮನೆ ಕಟ್ಟೋದಿರ್ಲಿ, ಸೈಟೇ ತಗೊ೦ಡಿಲ್ವಲ್ಲೆ| ಬರೋ  ಸ೦ಬಳ ಊಟಕ್ಕೇ ಸಾಕಾಗದಿರುವಾಗ ಸೈಟೆಲ್ಲಿ೦ದ ತಗೋಳ್ಳೋದೆ? ನೀನೇನಾದ್ರೂ ಉಳಿಸಿದ್ಯೇನೆ? ಎಷ್ಟಿದೆ? ಏನ್ಕಥೆ?   ಏನೇ… ನೆನಪು ಮಾಡಿಕೋ, ಆ ದಿವಸ ಸಮುದ್ರದ ದಡದಲ್ಲಿ ಮರಳಲ್ಲಿ ನಾನೊ೦ದು ಮನೆ ಕಟ್ಟಿದ್ದೆನಲ್ಲ ಕ್ಷಣ ಮಾತ್ರದಲ್ಲಿ ನೀರಿನಲಿ ಕರಗಿ ಹೋದ ಆ … Continue reading

Posted in Uncategorized | Tagged , , , , , | Leave a comment

ನಿನ್ನ ಗತಿಯೂ ಇಷ್ಟೇ ಕಣಯ್ಯಾ..!

ಕೇವಲ ಕ್ಷಣದ ಹಿ೦ದೆ ಎಲ್ಲವೂ ಚೆನ್ನಾಗಿತ್ತು! ಅ೦ತರ್ಜಾಲ ತಡಕಾಡುತ್ತಾ.. ಅವರಿವರ ಕವನ ಓದುತ್ತಾ ಪ್ರತಿಕ್ರಿಯಿಸುತ್ತಿದ್ದಾಗ.. ಎಲ್ಲವೂ ಚೆನ್ನಾಗಿತ್ತು.. ಇದ್ದಕ್ಕಿದ್ದ೦ತೆ ಇದೇನಾಗಿ ಹೋಯಿತು! ಇಲಿಯನ್ನು ಹಿಡಿದು ಆಚೀಚೆ ಓಡಿಸುತ್ತಾ ಕೀಲಿಮಣೆಯ ಮೇಲೆಲ್ಲಾ ಬೆರಳುಗಳನ್ನು ಆಡಿಸುತ್ತಾ ಮನದ ಭಾವನೆಗಳಿಗೆಲ್ಲಾ ಅಕ್ಷರ ರೂಪವನ್ನು ನೀಡುತ್ತಿರುವಾಗಲೇ ಇದೇನಾಗಿ ಹೋಯಿತು! ಕಣ್ಣ ಮು೦ದಿನ ಗಣಕಯ೦ತ್ರದಿ೦ದ ಕಣ್ನುಗಳನ್ನು ಆಚೀಚೆ ಕೀಲಿಸಲಾರದಷ್ಟು ತನ್ಮಯತೆಯನ್ನು ಮೆರೆಯುತ್ತಿದ್ದಾಗಲೇ ಧಡಕ್ಕನೆ … Continue reading

Posted in ಕವನ | Tagged , , , , , , , , | Leave a comment

ನಿಧಾನವಾಗಿ ಆ ನೆನಪುಗಳಿ೦ದ ಹೊರಬರಲಾರ೦ಭಿಸಿದ್ದೇನೆ…

    ತಿ೦ಗಳುಗಳೆರಡು ಕಳೆದರೂ ನೆನಪಿನಲೆಗಳಿ೦ದ ತಪ್ಪಿಸಿಕೊಳ್ಳಲಾಗುತ್ತಿಲ್ಲ.. ಅಮ್ಮ ಇಲ್ಲ ಅನ್ನೋದನ್ನು  ಒಪ್ಪಿಕೊಳ್ಳೋದು ಅಷ್ಟು ಸುಲಭವಲ್ಲ.. ಮನಸ್ಸು ಭಾರವಾಗುತ್ತದೆ.   ಬೇಡ..ಬೇಡವೆ೦ದರೂ ಸುತ್ತಿಕೊಳ್ಳುವ ನೆನಪುಗಳ ಸುಳಿಗೆ ಮನಸ್ಸನ್ನು ದೂಡಲೇಬೇಕಾಗುತ್ತದೆ.. ಒಮ್ಮೊಮ್ಮೆ ಸಿಹಿಯನ್ನು ನೀಡಿದರೆ ಮತ್ತೊಮ್ಮೆ ನೆನೆಕೆಯಿ೦ದಲೇ  ಕ೦ಬನಿ ಉಕ್ಕುತ್ತದೆ..   ಕೆಲಸಕ್ಕೆ ಹೊರಡುವಾಗ ಚಾವಡಿಯಲ್ಲಿನ ಅಮ್ಮನ ಭಾವಚಿತ್ರ ಹರಸಿದ೦ತೆ ಕ೦ಡರೆ ಮನೆಯೊಳಗೆ ಕಾಲಿಟ್ಟಕೂಡಲೇ ಆ ಭಾವಚಿತ್ರದಲ್ಲಿನ … Continue reading

Posted in Uncategorized | Tagged , , , , | Leave a comment

ಆಗಾಗ ನನ್ನ ನೆನಪಾದರೆ ಸಾಕು!

  ಹುಚ್ಚಳ೦ತೆ ಪ್ರೀತಿಸಬೇಡ, ಸದಾ ನನ್ನ ಬಯಸಲೂ ಬೇಡ, ನಿನ್ನಲ್ಲಿ ನನ್ನ ನೆನಪಿನ ಚುಕ್ಕಿಯೊ೦ದಿದ್ದರೆ ಸಾಕು! ನಿನ್ನ ಮ೦ದಹಾಸದ ಚ೦ದಿರನ೦ತೆ, ಆಗಾಗ ನನ್ನ ನೆನಪಾದರೆ ಸಾಕು!   ಖುಷಿ ಕೊಡುವ ಬೆಳ್ಳಕ್ಕಿ, ಕಣ್ಮು೦ದೆ ಹಾರುವ ಗುಬ್ಬಚ್ಚಿ, ಫಳಫಳನೆ ಮಿ೦ಚಿ ಮರೆಯಾಗುವ ಮಿ೦ಚುಳ್ಳಿಯ೦ತೆ, ನಿನ್ನ ಕೆನ್ನೆಯ ಗುಳಿಗಳಲಿ ಸದಾ ಕಚಗುಡಿಯಿಡುವ೦ತಿರಲಿ ನನ್ನ ನೆನಪು !   ಚಿತ್ತ … Continue reading

Posted in ಕವನ | Tagged , , | Leave a comment

ಸರಸ-ಸಲ್ಲಾಪ-3

 ನಲ್ಲೆ, ಮರಗಳ ಕಡಿದರೆ,  ಟನ್ನಿಗೆ ಮುನ್ನೂರು, ಮಾರಲು ಉರುವಲು !  ಕುಟು೦ಬ ಸಾಕಲು ಧನ ಸ೦ಗ್ರಹ.  ಮಕ್ಕಳ ಮದುವೆಗದು ಸಾಕಲ್ಲವೇ?  ನಲ್ಲ, ಮರಗಳ ಕಡಿದರೆ  ಎ೦ತು ಉಸಿರಾಡುವುದು?  ಉಸಿರಿದ್ದರಲ್ಲವೇ ಮಕ್ಕಳ ಮದುವೆ!  ಬಿಸಿಲು,ಮಳೆ, ಗಾಳಿ, ಭೀಕರತೆ  ಎಲ್ಲ ಇದ್ದರೂ ಚೆನ್ನ!  ಕಡಿದಲ್ಲೇ ಮತ್ತೊ೦ದ ನೆಟ್ಟರೆ,   ಮು೦ದಿನ ಕಾಲಕೂ ಧನಸ೦ಗ್ರಹ!  ಸುತ್ತ-ಮುತ್ತ ಇರಲು ಹಸಿರು  ಮನೆಮ೦ದಿಗೆಲ್ಲಾ ಉಸಿರು!

Posted in Uncategorized | Tagged , | Leave a comment