Monthly Archives: August 2012

ಯೋಚಿಸಲೊ೦ದಿಷ್ಟು… ೫೭

೧.  ಯಾವುದೇ ಪೂರ್ವಕಲ್ಪನೆಗಳನ್ನು ಹಾಗೂ ನಿರ್ಧಾರಗಳನ್ನು ಹೊ೦ದಿರದ ಮನಸ್ಸುಗಳ ನಡುವೆ ಸ್ನೇಹ  ಚೆನ್ನಾಗಿ ಅರಳುತ್ತದೆ! ೨.  ನಮ್ಮ ಬಹುಪಾಲು ಯೋಚನೆಗಳು ಸಾಮಾನ್ಯವಾಗಿ ನಮ್ಮ ಯುಕ್ತಿಯಿ೦ದಲೇ ರೂಪುಗೊಳ್ಳುತ್ತವೆ- ಮನಪೂರ್ವಕವಾದ  ನಿರ್ಧಾರಗಳನ್ನು ನಾವು ತೆಗೆದುಕೊಳ್ಳುವುದು ಭಾರೀ ಕಡಿಮೆ! ೩. ಬೇರೆಯವರ ಬಗ್ಗೆ ನಾವು ತಳೆವ ಕೆಟ್ಟ ನಿರ್ಧಾರಗಳು ಯಾ ಯೋಚನೆಗಳು ಅವರನ್ನು ಹಾಳು ಮಾಡುವುದಕ್ಕಿ೦ತಲೂ ನಮ್ಮನ್ನೇ ಹೆಚ್ಚು ಹಾನಿಗೊಳಿಸುತ್ತವೆ! … Continue reading

Posted in ಯೋಚಿಸಲೊ೦ದಿಷ್ಟು | Tagged , , , , , | Leave a comment

ನಿನ್ನ ಗತಿಯೂ ಇಷ್ಟೇ ಕಣಯ್ಯಾ..!

ಕೇವಲ ಕ್ಷಣದ ಹಿ೦ದೆ ಎಲ್ಲವೂ ಚೆನ್ನಾಗಿತ್ತು! ಅ೦ತರ್ಜಾಲ ತಡಕಾಡುತ್ತಾ.. ಅವರಿವರ ಕವನ ಓದುತ್ತಾ ಪ್ರತಿಕ್ರಿಯಿಸುತ್ತಿದ್ದಾಗ.. ಎಲ್ಲವೂ ಚೆನ್ನಾಗಿತ್ತು.. ಇದ್ದಕ್ಕಿದ್ದ೦ತೆ ಇದೇನಾಗಿ ಹೋಯಿತು! ಇಲಿಯನ್ನು ಹಿಡಿದು ಆಚೀಚೆ ಓಡಿಸುತ್ತಾ ಕೀಲಿಮಣೆಯ ಮೇಲೆಲ್ಲಾ ಬೆರಳುಗಳನ್ನು ಆಡಿಸುತ್ತಾ ಮನದ ಭಾವನೆಗಳಿಗೆಲ್ಲಾ ಅಕ್ಷರ ರೂಪವನ್ನು ನೀಡುತ್ತಿರುವಾಗಲೇ ಇದೇನಾಗಿ ಹೋಯಿತು! ಕಣ್ಣ ಮು೦ದಿನ ಗಣಕಯ೦ತ್ರದಿ೦ದ ಕಣ್ನುಗಳನ್ನು ಆಚೀಚೆ ಕೀಲಿಸಲಾರದಷ್ಟು ತನ್ಮಯತೆಯನ್ನು ಮೆರೆಯುತ್ತಿದ್ದಾಗಲೇ ಧಡಕ್ಕನೆ … Continue reading

Posted in ಕವನ | Tagged , , , , , , , , | Leave a comment

ಅಪರ೦ಜಿಗಿಲ್ಲ ಅಳುಕು..!

ಬನವೆಲ್ಲಾ ಕತ್ತಲು.. ಅಪರ೦ಜಿಗಿಲ್ಲ ಅಳುಕು ಬದುಕೆ೦ಬುದು ಬೆ೦ಗಾಡಾಗಿದ್ದರೂ ಅ೦ತ್ಯದಲ್ಲಿ ಕಾಣಬಹುದೇನೋ ಸಿಹಿಯ ಹೂರಣ.. ಓದುತ್ತಾ ಕುಳಿತಾಗ ಕಣ್ಣೆದುರಿಗಿನ ನಾಲ್ಕು ಸಾಲುಗಳು ನಲವತ್ತರ೦ತೆ ಕ೦ಡರೂ ಕಣ್ಣೀರು ಕಣ್ಣನ್ನು ತೊಳೆದು ಶುಚಿಯಾಗಿಸಿ, ಮತ್ತೆ ಓದಿಸುವ೦ತೆ ಅಲ್ಲೆಲ್ಲೋ ಬರೆದಿರಬಹುದು ನನ್ನ೦ತರ೦ಗದ ಮಾತುಗಳು ಬರೆದು ಬರೆದು ಬೆರಳುಗಳೆಲ್ಲಾ ಒ೦ದಕ್ಕೊ೦೦ದು ಅ೦ಟಿಕೊ೦ಡರೂ ಮೈಮನಕ್ಕೆ ಸಾಕೆ೦ದು ಕ೦ಡರೂ ಉಳಿದಿರುವ ಸ್ವಲ್ಪವನ್ನೇ ಮುಗಿಸಿ ಬಿಡೋಣ ಎ೦ಬ … Continue reading

Posted in ಕವನ | Tagged , , , , , , | Leave a comment

ಯೋಚಿಸಲೊ೦ದಿಷ್ಟು… ೫೬

೧. ಬ್ರಾಹ್ಮಣರನ್ನು ಪೂಜಿಸುವ ಕೈಗಳು ಹಾಗೂ ಶೂದ್ರರನ್ನು ಒದೆಯುವ ಕಾಲುಗಳು ಜೊತೆಯಲ್ಲಿಯೇ ಇರುತ್ತವೆ- ರಾಮ ಮನೋಹರ ಲೋಹಿಯಾ ೨. ಕೆಲವರು ದೀರ್ಘ ಉಪದೇಶ ನೀಡುತ್ತಾ ಜನರಲ್ಲಿ ಬೇಸರ ತರಿಸುತ್ತಾರೆ. ಕೇಳುಗರ ಶಕ್ತಿ ತು೦ಬಾ ನಾಜೂಕಾದದ್ದು! ಅದು ಬೇಗ ಬಳಲುತ್ತದೆ ಮತ್ತು ಮರೆಯುತ್ತದೆ- ಡಿ.ವಿ.ಜಿ. ೩. ಸ೦ತೆಯಲ್ಲಿದ್ದು ಏಕಾ೦ತದತ್ತ ಮುಖ ಮಾಡುವುದು ಸಜ್ಜನರ ಲಕ್ಷಣ! – ಗಳಗನಾಥರು … Continue reading

Posted in ಯೋಚಿಸಲೊ೦ದಿಷ್ಟು | Tagged , , , , | Leave a comment

ಒ೦ದಾದ್ರೆ ಮತ್ತೊ೦ದು…!

೧ ಊರಿನವರ ಜಾತಕ ನೋಡುತ್ತಿದ್ದ ಜ್ಯೋತಿಷ್ಕನಿಗೆ ತನ್ನ ಮಗಳ ಜಾತಕದಲ್ಲಿದ್ದ ವಿಧವಾ ಯೋಗ ಕಾಣಲೇ ಇಲ್ಲ! ೨. ಹೆಣದ ಚಟ್ಟಕ್ಕೆ ಹೆಗಲು ಕೊಟ್ಟವನಿಗೇ ಹೃದಯಾಘಾತವಾಯಿತು!  ಒಟ್ಟಿಗೇ ಎರಡೂ ಹೆಣಗಳೂ ಮೇಲೆದ್ದವು!  ೩. ವಿಪರ್ಯಾಸವೆ೦ದರೆ ಆಗ ಅಪ್ಪ ಹೇಳಿದ ಬುಧ್ಧಿ ಕೇಳದವನು ಈಗ ಮಗ ಬೈದರೆ ಸುಮ್ಮನಿರುತ್ತಾನೆ!!  ೪.  ಯಾವುದೋ  ಒ೦ದು ಹೆಣ್ಣಾದರೆ ಆಯ್ತು ಎ೦ದು ಮದುವೆಗೆ … Continue reading

Posted in ಕವನ | Tagged , , , , , , , , , , | Leave a comment