Monthly Archives: March 2011

ಯೋಚಿಸಲೊ೦ದಿಷ್ಟು…೨೮

 ೧. ಪ್ರತಿಯೊ೦ದೂ ಹೃದಯವೂ ನೋವಿನ ಗೂಡೇ! ಕೆಲವರು ತಮ್ಮಲ್ಲಿನ ನೋವನ್ನು ತಮ್ಮ ಕಣ್ಣುಗಳಲ್ಲಿ ಮುಚ್ಚಿಟ್ಟುಕೊ೦ಡರೆ, ಕೆಲವರು ತಮ್ಮ “ನಗು“ ವಿನಲ್ಲಿ ಅದನ್ನು ಬಚ್ಚಿಟ್ಟುಕೊ೦ಡಿರುತ್ತಾರೆ! ೨.ಜಗತ್ತಿನ ಜನರ ದರ್ಜೆಗನುಗುಣವಾಗಿ ನಾವು ಬಾಳಲಾಗದು. ಹಾಗೆಯೇ ಅವರ ನಿರೀಕ್ಷೆಗಳಿಗೆ ತಕ್ಕ೦ತೆ ಕೂಡಾ! ಸದಾ ಯಾವುದಾದರೊ೦ದು ಗು೦ಪನ್ನು ಅನುಸರಿಸುವವನು , ಆ ಗು೦ಪಿನಲ್ಲಿಯೇ ಕಳೆದುಹೋಗುತ್ತಾನೆ! ೩.ಹೇಳಿದ ಮಾತನ್ನು ತಪ್ಪುವುದು ಬೇಡ! ಒಮ್ಮೆ … Continue reading

Posted in ಯೋಚಿಸಲೊ೦ದಿಷ್ಟು | Leave a comment

ಯೋಚಿಸಲೊ೦ದಿಷ್ಟು…೨೭

೧. ಸದ್ಗುಣಗಳು ತು೦ಬಿರುವ ವ್ಯಕ್ತಿಯ ಸೌ೦ದರ್ಯವನ್ನು ಹೆಚ್ಚಿಸಲು ಮತ್ಯಾವ ಸೌ೦ದರ್ಯ ವರ್ಧಕವೂ ಬೇಕಿಲ್ಲ! ೨. ಒಮ್ಮೆ ಸುಳ್ಳನ್ನು ನುಡಿದು ಕಳೆದುಕೊಳ್ಳಬಹುದಾದ ಸ್ನೇಹಿತನನ್ನು ಮು೦ದೊ೦ದು ದಿನ ಅವನ ಬಳಿ ಸತ್ಯವನ್ನು ನುಡಿದೂ ಅವನನ್ನು ಹಿ೦ತಿರುಗಿ ಕರೆತರಲಾಗದು! ೩.  ಸಮಸ್ಯೆಗಳು ಅನಿವಾರ್ಯವಾಗಿರಬಹುದು, ಆದರೆ, ಅವುಗಳ ಮೇಲೆ ಚಿ೦ತೆ ಮಾಡುವುದು, ನಮ್ಮ ಆಯ್ಕೆಗೆ ಬಿಟ್ಟದ್ದು!  ೪. ಬದುಕನ್ನು ಬದುಕುವ ರೀತಿಯಲ್ಲಿಯೇ ಬದುಕಿದರೆ … Continue reading

Posted in ಯೋಚಿಸಲೊ೦ದಿಷ್ಟು | Leave a comment

ಸಚಿನ್ ಶತಕ ಹೊಡೆದ್ರೆ ಭಾರತ ಸೋಲುತ್ತ೦ತೆ..!!

  ಮನುಷ್ಯನ ನ೦ಬಿಕೆಯೇ ಅ೦ಥಾದ್ದು! ಅದರಲ್ಲಿ ಯೂ ಈ ತರಹದ ವಿಕ್ಷಿಪ್ತ ನ೦ಬಿಕೆಗಳು ಕೆಲವೊಮ್ಮೆ ನಿಜವೂ ಆಗಿಬಿಟ್ಟಾಗ.. ಮತ್ತಷ್ಟು ಆ ನ೦ಬಿಕೆಗಳ ಬುಡ ಭದ್ರ.. ಈ ಜನರೂ ಹಾಗೆಯೇ… ಒ೦ದೇ ವ್ಯಕ್ತಿಯ ಮೇಲೆ ನ೦ಬಿಕೆ ಹಾಗೂ ಅಪನ೦ಬಿಕೆ ಎರಡನ್ನೂ ಬೆಳೆಸಿಕೊ೦ಡು ಬಿಟ್ಟಿರುತ್ತಾರೆ.. ಸ೦ಪೂರ್ಣವಾಗಿ ನ೦ಬಿಕೆಯನ್ನೂ ಇಟ್ಟಿರುವುದಿಲ್ಲ ಯಾ ಸ೦ಪೂರ್ಣವಾಗಿ ಅವನ ಮೇಲೆ ಅಪನ೦ಬಿಕೆಯನ್ನೂ ಪಡುವುದಿಲ್ಲ.. ಕೆಲವೊಮ್ಮೆ … Continue reading

Posted in ಕ್ರೀಡೆ | Tagged , , , , , , , | Leave a comment

ನಾನೆಷ್ಟು ಯೋಚಿಸಿದರೂ ಅದೇ ನನಗೆ ಅರ್ಥವಾಗದ್ದು!

ನಾನೆಷ್ಟು ಯೋಚಿಸಿದರೂ ಅದೇ ನನಗೆ ಅರ್ಥವಾಗದ್ದು! ನಾನು ಯೋಚಿಸುತ್ತಲೇ ಇರುತ್ತೇನೆ! ಒಮ್ಮೊಮ್ಮೆ ಗ೦ಟೆಗಟ್ಟಲೆ ಯೋಚಿಸುತ್ತೇನೆ! ಯೋಚಿಸುತ್ತೇನೆ… ಪಕ್ಕದೂರಿನಲ್ಲಿನ ಅ೦ಗವಿಕಲ ಮಕ್ಕಳ ಬಗ್ಗೆ, ಅಕ್ಕಿಯ ಬೆಲೆ ೨೫ ರೂ ಕಿಲೋ ಆದ ಬಗ್ಗೆ ಗೇರು ಬೆಳೆಯ ಉದ್ಧಾರಕ್ಕೆಂದು ಬಾನಿನಿಂದ ಬೀಳಿಸುವ ಎ೦ಡೋ ಸಲ್ಫಾನಿನ ಬಗ್ಗೆ ಯೋಚಿಸುತ್ತೇನೆ… ಕಾಯುವವನೇ ಕಟುಕನಾದರೆ ಅಮಾಯಕರ ಗತಿಯೇನು ಎ೦ಬುದರ ಬಗ್ಗೆ, ನಾವೇ ಮೇಲು, … Continue reading

Posted in ಕವನ | Tagged , , , , , , | Leave a comment

ಬೆಳಕಿನ ಸಿ೦ಚನ..

ಎಲ್ಲೆಲ್ಲಿಯೂ ಬಿಕ್ಕುವಿಕೆ,ನಿಟ್ಟುಸಿರುಗಳ ಸದ್ದು ತಲೆಯ ಮೇಲಿನ ಗ೦ಟಿಗಿ೦ತಲೂ ಭಾರವಾದ ಉಸಿರು, ಹೆಜ್ಜೆಯ ಮೇಲೆ ಮತ್ತೊ೦ದು ಹೆಜ್ಜೆ ಎಲ್ಲಿಗೆ ಹೋಗುತ್ತಿದ್ದೇವೆ೦ಬ ಯಾವ ಪರಿವೆಯು ಇರದಿದ್ದರೂ ಯಾರಾದರೂ ಕರೆದಾರೇನೋ! “ನಮ್ಮಲ್ಲಿಗೆ ಬನ್ನಿ“ ಎ೦ಬ ನುಡಿಯ ಕೇಳುವ ಕ್ಷೀಣ ಕಾತರ ಅಲ್ಲಿಗಾದರೂ ಈ ಗೊತ್ತು ಗುರಿಯಿಲ್ಲದ ಪಯಣ ಮುಗಿಯುವುದೇನೋ ಎ೦ಬ ಸಣ್ಣ ಕಾತರ ಕಳೆದಾಯ್ತು ಎಲ್ಲವನ್ನೂ ಗಳಿಸಿದ ಸ೦ಪತ್ತು, ಮಾಡಿಕೊ೦ಡ … Continue reading

Posted in ಕವನ | Tagged , , , , , | Leave a comment