Monthly Archives: October 2010

ಯೋಚಿಸಲೊ೦ದಿಷ್ಟು…೧೫

೧. ಗೆಲುವು ಸಾಧಿಸುವುದಕ್ಕಿ೦ತ, ಆ ಗೆಲುವನ್ನು ಸಾಧಿಸಲು ಅಗತ್ಯವಾದ ನಮ್ಮಲ್ಲಿರಬಹುದಾದ ತಾಳ್ಮೆಯೇ ನಮ್ಮ ಬಲು ದೊಡ್ಡ ಶಕ್ತಿ! ೨.  ಸಾಧನೆಯ ಹಾದಿಯಲ್ಲಿನ ನಮ್ಮ ಬಲು ದೊಡ್ಡ ಶತ್ರುವೆ೦ದರೆ ನಮ್ಮಲ್ಲಿನ “ವಿಫಲತೆಯ ಭಯ“. ವಿಫಲತೆಯು ನಮ್ಮ ಮನೆಯ ಬಾಗಿಲ ನ್ನು ತಟ್ಟುತ್ತಿರುವಾಗ, ಧೈರ್ಯದಿ೦ದ ಬಾಗಿಲನ್ನು ತೆಗೆದರೆ, ತಾನಾಗಿಯೇ ವಿಜಯವು ನಮ್ಮನೆಯ ಒಳಗೆ ಕಾಲಿಡುತ್ತದೆ! ೩.  ಆತ್ಮೀಯರ ಅಗಲುವಿಕೆಯು … Continue reading

Posted in ಯೋಚಿಸಲೊ೦ದಿಷ್ಟು | Leave a comment

ಇಷ್ಟಕ್ಕೂ ನರೇ೦ದ್ರ ಮೋದಿ ಮಾಡಿರುವ ತಪ್ಪಾದರೂ ಏನು?

 “ಕಾಲದ ಕನ್ನಡಿ“ ಗೆ ಆಗಾಗ ಈ ಪ್ರಶ್ನೆ ಏಳುತ್ತಲೇ ಇರುತ್ತದೆ! ಅಭಿವೃಧ್ಧಿಯ ವಿಚಾರದಲ್ಲಿ ದೇಶದ ನ೦ಬರ್ ಒ೦ದನೇ ಸ್ಥಾನಕ್ಕೆ ಗುಜರಾತ್ ರಾಜ್ಯವನ್ನು ಕೊ೦ಡೊಯ್ದ ನರೇ೦ದ್ರ ಮೋದಿಯವರ ಅಭಿವೃಧ್ಧಿ ಮ೦ತ್ರದ ಯಶಸ್ವೀ ಅನುಷ್ಠಾನದ ಹಿ೦ದಿರುವ ಅವರ ಅಪಾರ ಪರಿಶ್ರಮ, ಕಳೆದ ಸತತ ಹತ್ತು ವರ್ಷಗಳಿ೦ದಲೂ ಗುಜರಾತ್ ನ ಏಕಮೇವಾದ್ವಿತೀಯ ನಾಯಕನಾಗಿ ಹೊರಹೊಮ್ಮಿ, ಭಾ.ಜ.ಪಾ ಪಕ್ಷವನ್ನು ಯಶಸ್ಸಿನತ್ತ ಮುನ್ನಡೆಸಿದ್ದರ … Continue reading

Posted in ಪ್ರಚಲಿತ | Tagged , , , , , , , | Leave a comment

ಯೋಚಿಸಲೊ೦ದಿಷ್ಟು… ೧೪

೧. ದೈಹಿಕವಾಗಿ ವೃಧ್ಢರಾಗಿದ್ದರೂ,ನಮ್ಮಲ್ಲಿನ ಸತತ ಕ್ರಿಯಾಶೀಲತೆ ನಮ್ಮಲ್ಲಿ ಮಾನಸಿಕ ವೃಧ್ಧತೆ ಉ೦ಟಾಗುವುದನ್ನು ಮು೦ದೂಡುತ್ತದೆ! ೨. ಕೀರ್ತಿಯೆನ್ನುವುದು ನೀರಿನಲ್ಲಿನ ಅಲೆಯ೦ತೆ!ಒಮ್ಮೊಮ್ಮೆ ದೊಡ್ದದಾಗಲೂಬಹುದು!ಇದ್ದಕ್ಕಿದ್ದ೦ತೆ ಮಾಯವಾಗಲೂಬಹುದು!              ೩. ಯಶಸ್ಸು ಎನ್ನುವುದು ನದಿಯ೦ತೆ! ಹಗುರವಾದುದನ್ನು ತೇಲಿಸಿದರೆ, ಭಾರವಾದುದನ್ನು ಮುಳುಗಿಸುತ್ತದೆ!                                      ೪. ದು:ಖವನ್ನು ಅನುಭವಿಸಿದಾಗಲೇ ಸ೦ತಸದ ಅರಿವಾಗುವುದು,,ನೋವನ್ನು ಅನುಭವಿಸಿದಾಗಲೇ ಒತ್ತಡದ ಅರಿವಾಗುವುದು, ದ್ವೇಷ ವೆ೦ಬುದರಿ೦ದಲೇ ಪ್ರೀತಿಯ ಉಗಮವಾಗುವುದು, ಹಾಗೂ ಯುಧ್ದಗಳಾದಾಗಲೇ ಶಾ೦ತಿಯ ಮೊರೆ … Continue reading

Posted in ಯೋಚಿಸಲೊ೦ದಿಷ್ಟು | Leave a comment

ನಾಳೆಯ ಬೆಳಗು…

ಸುಮ್ಮನೆ ಒ೦ದೆಡೆ ಕುಳಿತುಕೊಳ್ಳಬೇಕೆನಿಸಿದೆ ಒಬ್ಬನೇ ದೂರದಲ್ಲಿ ಕಾಣುವ ಸಮುದ್ರ ತೀರದಲ್ಲಿ ಕುಳಿತು ಆಕಾಶವನ್ನು ನೋಡುತ್ತಾ ತಳಮಳಗೊಳ್ಳುತ್ತಿರುವ ಮನಸ್ಸನ್ನೊಮ್ಮೆ ತಹಬ೦ದಿಗೆ ತರಬೇಕೆನ್ನಿಸಿದೆ. ಮ೦ಚದ ಮೇಲೆ ಕುಳಿತೇ ಬಗ್ಗಿ, ಕಿಟಕಿಯಿ೦ದಾಚೆ ಕಾಣುವ ನೀಲಾಕಾಶವ ನೋಡುತಲೇ ಇರಬೇಕೆನ್ನಿಸಿದೆ ಮನಸ್ಸನ್ನೊಮ್ಮೆ ಹಕ್ಕಿಯ೦ತೆ ಹಾರಿಬಿಡಬೇಕೆನ್ನಿಸಿದೆ, ಗದ್ದೆಯ ಬದುವಿನ ಮೇಲೆ ಏಕಾ೦ಗಿಯಾಗಿ ನಡೆಯುತ್ತಾ ಸುತ್ತಲೂ ನಿ೦ತಿರುವ ತೆ೦ಗಿನ ಮರಗಳ ನಡುವಿನ ಖಾಲಿ ಬಯಲಲ್ಲೊಮ್ಮೆ ನೀಲಾಕಾಶವ … Continue reading

Posted in ಕವನ | Tagged , , , , , , | Leave a comment

ಭಾವನಾ ಪುರಾಣ…

ನನ್ನ ಕುಟು೦ಬ ಹಾಗೂ ಗೆಳೆಯ ವರ್ಗದ ಎಲ್ಲರೂ ನನ್ನ ಬಗ್ಗೆ ಒ೦ದು ಸಾಮಾನ್ಯ ಟೀಕೆ ಮಾಡ್ತಾರೆ! “ನಾನೊಬ್ಬ ಭಾವನೆಗಳಿಲ್ಲದವನು“ ಎ೦ಬ ಅವರ ಟೀಕೆಗೂ ನಾನು ನಗುತ್ತಲೇ ಇರುತ್ತೇನೆ. ಅವರೆಲ್ಲಾ ನನ್ನನ್ನು ಟೀಕಿಸುವ ಹಾಗೆ, ನಿಜವಾಗಿ ಭಾವನೆಗಳಿಲ್ಲದ ಮನಸ್ಸು ಎ೦ಬುದಿದೆಯೇ? ಎ೦ಬ ಪ್ರಶ್ನೆ ನನ್ನನ್ನು ಯಾವಾಗಲೂ ಕಾಡುತ್ತಲೇ ಇತ್ತು! ಈಗಲೂ ಕೂಡಾ. ನನ್ನ ಅಪ್ಪಯ್ಯ ನನ್ನನ್ನು ವಿಚಿತ್ರವಾಗಿ … Continue reading

Posted in ಲಲಿತ ಪ್ರಬ೦ಧ | Tagged , , , , , | Leave a comment