Monthly Archives: July 2010

ಯೋಚಿಸಲೊ೦ದಿಷ್ಟು.. ೫

೧.  ಎರಡು ಆಪ್ತ ಹೃದಯಗಳ ನಡುವೆ ಸ೦ಬಾಷಣೆ ಸದಾ ನಡೆದೇ ಇರುತ್ತದೆ.ಅವು ಪದಗಳ ಅಲ೦ಕಾರವನ್ನು ಕಾಯುವುದಿಲ್ಲ. ೨.  ಜೀವನದಲ್ಲಿ ಅತಿ ವೇಗದ ಬೆಳವಣಿಗೆಯೆ೦ದರೆ ಅಡಿಪಾಯವಿಲ್ಲದೇ ಮನೆ ಕಟ್ಟಿದ ಹಾಗೆ. ಯಾವಾಗ ಪೂರ್ವಸ್ಥಿತಿಗೆ ಮರಳು ತ್ತೇವೆ ಎನ್ನುವುದಕ್ಕೆ ಖಾತ್ರಿಯಿರುವುದಿಲ್ಲ! ೩.  ಜೀವನದಲ್ಲಿ ಕೆಲವೊಮ್ಮೆ ಏನನ್ನೂ ನಿರ್ಧರಿಸದಿರುವುದೂ ಒ೦ದು ಒಳ್ಳೆಯ ನಿರ್ಧಾರವಾಗಿ ಪರಿಣಮಿಸುವುದು೦ಟು!ಆದರೆ ಒಮ್ಮೊಮ್ಮೆ ಅದು ದುಬಾರಿಯಾಗಿ ಪರಿಣಮಿಸಬಹುದು! … Continue reading

Posted in ಯೋಚಿಸಲೊ೦ದಿಷ್ಟು | Leave a comment

ಪರ್ಜನ್ಯ ಹೋಮದಿ೦ದಲೇ ಮಳೆಯೇ? ಅಥವಾ …

ದೇವರೇ ಹಾಗೆ! ನಾವು ಅವನನ್ನು ದೂರ ತಳ್ಳಿದಷ್ಟೂ  ಹೊಸ ಹೊಸ ಸಾಕ್ಷಿಗಳಿ೦ದ “ನನ್ನ ಅವಶ್ಯಕತೆ ನಿನ್ನ ಜೀವನಕ್ಕಿದೆ ನೋಡು“ ಎನ್ನುತ್ತಾ ನಮ್ಮ ಜೀವನದಲ್ಲಿ ಕಾಲಿಟ್ಟೇ ಇಡುತ್ತಾನೆ! ಅವನೊ೦ದಿಗೆ ಬದುಕುವುದು ನಮಗೆ ಅಭ್ಯಾಸವಾಗಿ ಹೋಗಿದೆ. ಭಾರೀ ಕಷ್ಟದಲ್ಲಿದ್ದಾಗ ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ “ ದೇವರೇ, ಈ ದಿನ ನಾದ್ರೂ ಚೆನ್ನಾಗಿರಲಯ್ಯ“ ಅ೦ತ ಬೇಡಿಕೊಳ್ಳುತ್ತಲೂ, ಭಾರೀ ಸುಖದಲ್ಲಿದ್ದಾಗ … Continue reading

Posted in ಜಿಜ್ಞಾಸೆ | Tagged , , , | Leave a comment

ಸುಮ್ನೇ ತಮಾಷೆಗೆ..

೧  ನಲ್ಲನೆ೦ದ-ಮೊದಲ ನೋಟಕ್ಕೆ ನಿನ್ನ ಮೇಲೆ ಪ್ರೀತಿಯಾಯ್ತು ನ೦ಗೂ ಅಷ್ಟೇ! ಅ೦ದಳು ಅವಳು ಮಳೆಯಲೊಮ್ಮೆ ಛಳಿಯಿ೦ದ ಎಡವಟ್ಟಾದ ಮೇಲೆ ಆಸಾಮಿ ನಾಪತ್ತೆ! ತಮಾಷೆಗೆ ಪ್ರೀತಿ ಮಾಡೋದು ಅ೦ದ್ರೆ ಹೀಗೇನೆ… ೨ ಸ೦ಜೆ ಮಳೆಗೆ ರುಚಿಯಾಗಿ ತಿನ್ನೋಣ ಅ೦ತ ಚಟ್ಟ೦ಬೊಡೆ ಮಾಡ್ತಿದ್ದ ಅಮ್ಮನ ಸೀರೆಯ ಸೆರಗು ಎಳೆದ ಅಪ್ಪ! ಸಿಟ್ಟು ಬ೦ದು ಅಮ್ಮ ಕೂಗಾಡಿದಳು. ತಮಾಷೆ ಮಾಡಿ … Continue reading

Posted in ಒಮ್ಮೆ ನಕ್ಕು ಬಿಡಿ!!! | Tagged , , , , | Leave a comment

ನಾನೊ೦ದು ತುಳಸೀದಳವಾಗಲೇ..?

 ಸ್ವರ ರಾಗಗಳ ಗ೦ಗಾ ಪ್ರವಾಹದಿ೦ದ, ಸ್ವರ್ಗೀಯ ಸಾಯುಜ್ಯ ಭಾವವು ತು೦ಬಿ, ಎ೦ತು ಪ್ರೇಮಿಸಲಿ ನಿನ್ನ   ನಾ ನಿನ್ನ ಪೂಜಿಸುವ ತುಳಸೀದಳವಾಗಲೇ?   ತಾವರೆ ಹೂವಿನ ಸಾವಿರ ದಳಗಳ೦ತೆ ಮನಸಿನ ತು೦ಬೆಲ್ಲಾ ನಿನ್ನ ಕಾಣುವ ಕಾತುರ ಕಾಣದ ವೇದನೆಯೇ ವೇದಾ೦ತವಾದಾಗ ಎಲ್ಲೆಲ್ಲೂ ನೀನೇ ಎ೦ಬ ಭಾವನೆಯು ಮನಸಿಗೊ೦ದು ಸಮಾಧಾನವಾದಾಗ ಕಟ್ಟು ಬಿಚ್ಚಿಕೊ೦ಡ ಕರುವು ತಾಯಿಯ ಬಳಿಗೆ ಹೋದ೦ತೆ, … Continue reading

Posted in ಕವನ | Tagged | Leave a comment

ಮತ್ತೇನೂ ಬೇಡ..

ಬರುವಾಗ ನಾವು ತ೦ದಿದ್ದೇನೂ ಇಲ್ಲ ಇಲ್ಲಿಗೆ ಹೋಗುವಾಗ ಒಯ್ಯುವುದೇನೂ ಇಲ್ಲ ಅಲ್ಲಿಗೆ ಆದರೂ ಬದುಕಲಿಕ್ಕಾಗಿ ಏನಾದರೂ ಬೇಕು ಅತಿಯಾಗಬಾರದು ಯಾವುದೂ! ಪ್ರೀತಿಯಿರಲಿ,ನ೦ಬಿಕೆಯಿರಲಿ, ನಾನು-ನನ್ನವರೆನ್ನದೆ ಎಲ್ಲರೂ ನನ್ನವರೆ೦ಬ ವಿಶ್ವಾಸವಿರಲಿ ಯಾರನ್ನೂ ಹೊತ್ತುಕೊಳ್ಳಲೂಬಾರದು ಇಳಿಸಲೂ ಬಾರದು! ಎಲ್ಲರೊಳೂ ಒ೦ದಾಗಿ ಸ್ವ೦ತಿಕೆಯ ಮೆರೆಯಬೇಕು, ಬದುಕಿನ ಬ೦ಡಿಯ ನೊಗವ ಸಮನಾಗಿ ಎಳೆದು, ಪರಸ್ಪರ ವಿಶ್ವಾಸದಲಿ ಒಟ್ಟಿಗೇ ಉ೦ಡೆದ್ದು ಕೈತೊಳೆಯಬೇಕು! ಸಮಪಾಲು-ಸಮಬಾಳು ಹ೦ಚಿ … Continue reading

Posted in ಕವನ | Tagged , , , , , | Leave a comment