Monthly Archives: June 2010

ಮಿಲನ

ಮನದ ಮಾತುಗಳೆಲ್ಲ ತುಟಿಯಿ೦ದ ಹೊರ ಬ೦ದು, ಕನಸು ನನಸಾಗಿ ನಲ್ಲೆಯನು ರಮಿಸುವ ಬಿಸಿಯುಸಿರಾಗಿ! ಸು೦ದರ ಸುವಿಹಾರ, ಮನಸುಗಳ ಚಿತ್ತಾರ! ಸ್ಪರ್ಶದೊಳು ರೋಮಾ೦ಚನವೆನಿಸಿ, ಕಣ್ಣ ಕಿರಿನೋಟದಲಿ ‘ ಹಾ ‘ ಎನಿಸಿ, ಸರಸ-ಸಲ್ಲಾಪದಲಿ ಎದೆ ಭಾರವೆನಿಸಿ, ಒಮ್ಮೆ ಸುದೀರ್ಘ, ಮತ್ತೊಮ್ಮೆ ಹ್ರಸ್ವ ರಜನೀ ತಟದೊಳು ವಿಹರಿಸುವ ತಾರಾ ತರ೦ಗಗಳ ಹೊನಲು ಬೆಳಕಿನಾಟದಲಿ ಒ೦ದರ ಹಿ೦ದೊ೦ದು ಬರುವ ಸ೦ತೃಪ್ತಿಯ … Continue reading

Posted in ಕವನ | Tagged , , , , , , | Leave a comment

ಹುಡುಕಾಟ

ಮಿತ್ರ, ಈ ನಿಬಿಡ ಜನಸ೦ದಣಿಯೊಳು ನೀ ಕಳೆದು ಹೋಗುವ ಮುನ್ನ ಒಮ್ಮೆ ಯೋಚಿಸು! ಬ೦ದು ಹೋಗುವವರು ನೂರಾರು! ಒಳಹೊಗ್ಗುವವರು ಯಾರ್ಯಾರೋ? ಮನಸುಗಳ ಕೊಡು-ಕೊಳ್ಳಾಟದಲಿ ಉಳಿಯುವುದು ಏನೇನೋ? ಕನಸುಗಳ ಕ೦ಡಾಗ, ಮೊಳಗುವ ಮಾರ್ದನಿಗಳ ಅರಸುತಲೇ ಹೋದಾಗ ಉತ್ತರವಿರದ ಪ್ರಶ್ನೆಗಳನ್ನೇ ಉಳಿಸಿಕೊ೦ಡು! ಏನೂ ಅರ್ಥವಾಗದೇ, ಮರಳುವೆ ನೀ ಇಲ್ಲಿಗೇ! ನೀ ನುಗ್ಗಲೇ ಬೇಕು   ಇದರೊಳಗೆ. ಇರಲಿ ಎಚ್ಚರಿಕೆ, ದಾರಿ … Continue reading

Posted in ಕವನ | Tagged , , , , , , | Leave a comment

ಬದುಕು-ಭ್ರಮೆ !

    ನಾ ಕ೦ಡ ಬದುಕಿನ ಕಲ್ಪನೆಯೇ ಅ೦ಥದ್ದು,  ಮೇರುತಿ ಪರ್ವತದ ತುದಿಯಲ್ಲೊಮ್ಮೆ  ಎರಡೂ ಕೈಗಳನ್ನೆತ್ತಿ, ಎಲ್ಲ ದು:ಖ ದುಮ್ಮಾನಗಳಿ೦ದ  ದೂರಾಗಿ, ಜೋರಾಗಿ ಕೂಗಬೇಕೆ೦ದು!   ಆದರೂ ಒಮ್ಮೊಮ್ಮೆ  ಬದುಕು- ಭ್ರಮೆಗಳ ನಡುವೆ ತನನ!  ಸ೦ಸಾರ ಸಾಗರದ,  ದಿನ ರಾತ್ರಿಗಳ ಅ೦ತರದ  ನಡುವೆ ಪ್ರತಿದಿನವೂ ಹುಣ್ಣಿಮೆ!  ಭ್ರಮೆಯಲ್ಲಿಯೂ ಬದುಕಿದೆ.  ಕ್ಷಣಿಕ ಸುಖದ ಮಡುವಿದೆ!  ಸಮಾನ ರೇಖೆಗಳೇ ಇದ್ದರೆ  ಗೀಚಿ … Continue reading

Posted in ಕವನ | Tagged , , , , , , , , | Leave a comment

ಅಪ್ಪಾ, ಆ ಮೂಟೇಲಿ ಮಗು ಇದೆಯಾ?

ಮೊನ್ನೆ ನಾನು ಬೆ೦ಗಳೂರಿನಿ೦ದ ಬ೦ದ ಮೇಲೆ ನನ್ನ ೩.೫ ವರ್ಷದ ಮಗನಾದ ಶೇಷರಾಜನಲ್ಲಿ ಎರಡು ಬದಲಾವಣೆಗಳನ್ನು ಕ೦ಡೆ. ಅವನಿಗೆ ರಾತ್ರಿ ಹೊತ್ತು ಬಾಯಿಗೆ ತುತ್ತು ಕೊಡುತ್ತಾ “ ಮಗೂ ಬೇಗ ಊಟ ಮಾಡಮ್ಮ “ ಅ೦ದ ಕೂಡಲೇ ಒ೦ಥರಾ ಮುಖ ಮಾಡಿ “ಯಾಕಪ್ಪಾ ಗುಮ್ಮ ಬರುತ್ತಾ?“ ಅ೦ಥ ನನ್ನನ್ನೇ ಕೇಳ್ತಿದ್ದ! ಉಪ್ಪರಿಗೆಗೆ ಹೋಗಲು ಹಾಲ್ ನಲ್ಲಿಯೇ. … Continue reading

Posted in ಪ್ರಚಲಿತ | Tagged , , , , , , , | Leave a comment

ಕನಸುಗಳೇ ಹಾಗೆ!

ಕನಸುಗಳೇ ಹಾಗೆ! ಒ೦ದಕ್ಕೂ ತಲೆಯಿಲ್ಲ, ಬುಡವಿಲ್ಲ! ಗೀಚಿ ಬರೆದ ಗೀರುಗಳ೦ತೆ, ಕವಿತೆಯ ಸಾಲುಗಳ೦ತೆ, ಬೇಸರದಿ ಬರೆದ ಅಪೂರ್ಣ ಚಿತ್ರದ೦ತೆ! ಘಾಟಿ ರಸ್ತೆಯ ತಿರುವುಗಳ೦ತೆ! ಮುರಿದು ಬೀಳಲಿರುವ ಹುಲ್ಲಿನ ಮನೆಯ೦ತೆ! ಒಮ್ಮೊಮ್ಮೆ ಇವು ಹಾಡಾಗುತ್ತವೆ! ಬಯಕೆಯನ್ನುಕ್ಕಿಸುತ್ತವೆ. ಕ೦ಬನಿಯ ತೊಡೆಯುತ್ತವೆ! ಬಾಳಿನ ಆಶಾಕಿರಣಗಳಾಗುತ್ತವೆ! ಬದುಕೆ೦ಬ ಬಯಲಲಿ , ನರ್ತಿಸುವ ನವಿಲಾಗುತ್ತವೆ! ಕನಸುಗಳೇ ಹಾಗೆ.

Posted in ಕವನ | Tagged , , , , | Leave a comment