Month: May 2020

ದಾನಿಯಲ್ ಖಾರ್ಮ್ಸ್ ನ ಮೂರು ಕತೆಗಳ ಭಾವಾನುವಾದದಾನಿಯಲ್ ಖಾರ್ಮ್ಸ್ ನ ಮೂರು ಕತೆಗಳ ಭಾವಾನುವಾದ

ರಷಿಯಾದ ಕತೆಗಾರ ದಾನಿಯಲ್ ಖಾರ್ಮ್ಸ್ ನ ‘ ಟುಡೇ ಐ ರೋಟ್ ನಥಿ೦ಗ್ ‘ ಎನ್ನುವ ಕಥಾ ಸಂಕಲನದ  ಮೂರು ಕತೆಗಳನ್ನು ಕನ್ನಡಕ್ಕೆ ಭಾವಾನುವಾದ ಮಾಡುವುದೇನು ಒಂದು ದಿನ ಝೂಂಡ ಗುರುಗಳು ಏನನ್ನೂ ಮಾಡಲಿಲ್ಲ. ಗುರುಗಳನ್ನು ನೋಡಲು ಯಾವುದೇ ಶಿಸ್ಯರು ಬರಲಿಲ್ಲ . ಗುರುಗಳು ಸಹ ಶಿಸ್ಯರನ್ನು ನೋಡಲು ಹೋಗಲಿಲ್ಲ .

ಭವದ ಬೆಳಕಿನ ಭಗವದ್ಗೀತೆ – ೧ಭವದ ಬೆಳಕಿನ ಭಗವದ್ಗೀತೆ – ೧

ಲೇಖಕರ ಪರಿಚಯ ಶ್ರೀಮತಿ ಹೆಚ್ ಕೆ ಪ್ರಭಾರವರು ಸಂಸ್ಕೃತ ಕೋವಿದರು. ಅಭಿನಯದಲ್ಲಿ ಆಸಕ್ತಿ ಮತ್ತು ಸಾಹಿತ್ಯದ ಅಧ್ಯಯನದಲ್ಲಿ ನಿರತ ನಿರಂತರ ಓದುಗರು. ಬಿ ಎಸಿ ಪದವಿ ಮುಗಿಸಿದ ಪ್ರಭಾರವರಿಗೆ ಸಧ್ಯ ಅರವತ್ತೆರಡರ ಪ್ರಾಯ. ಮೂಲ ಹಾಸನದ ಹುಲುಗುಂಡಿ ಗ್ರಾಮದವರು, ತಂದೆ ಕೃಷ್ಣ ಅಯ್ಯಂಗಾರ್ ವೃತ್ತಿಯಲ್ಲಿ ಅಧ್ಯಾಪಕರಾಗಿದ್ದವರು. ತಾಯಿ ಸುಶೀಲಮ್ಮ.

“ಬೆಂಕಿ-ಪ್ರತಾಪಿ”“ಬೆಂಕಿ-ಪ್ರತಾಪಿ”

ಹಳೆಯ ಘಟನೆ.ನಮಗೆ ಈ ನಾಟಕ, ನಾಟಕ ಸ್ಪರ್ಧೆ ಎಲ್ಲವೂ ಹೊಸತು. ನಮ್ಮ ಪ್ರಾಧ್ಯಾಪಕರು ನಮಗೆ ಆಸಕ್ತಿ ಇದ್ದಲ್ಲಿ, ದಯಮಾಡಿ ನಾಟಕದ ತಾಲಿಮಿನ ಕೊಠಡಿಗೆ ಬನ್ನಿ ಎಂದು ಕಾಲೇಜಿನಲ್ಲಿ ಪ್ರಕಟಣೆ ಹೊರಡಿಸಿದ್ದರು. ನಾವು ಕೂಡ ಕುತೂಹಲದಿಂದ ಹೋದೆವು, ನಮ್ಮೊಂದಿಗೆ ನಮ್ಮ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಸೇರಿದ್ದರು. ಕಿರಿಯರಲ್ಲಿ ಕುತೂಹಲ, ಹಿರಿಯ

ದಗ್ಧ ಭಾಗ ೩ದಗ್ಧ ಭಾಗ ೩

೧ಮಾತುಕತೆ ಮುಗಿದಿರುತ್ತೆ. ನನ್ನನ್ನ ಎಲ್ಲಿಡಬೇಕು ಅನ್ನೋ ನಿರ್ಧಾರವಾಗಿರಬಹುದು. ಅಥವಾ ಇಬ್ಬರೂ ಕೈತೊಳ್ಕೊಂಡು ಇನ್ಯಾರನ್ನೋ ನೇಮಿಸೋದು ಅಂತ ನಿರ್ಧಾರ ಮಾಡಿರಬಹುದು. ಮಕ್ಕಳು ನಮ್ಮವರು, ಅವರಂದರೆ ನಮಗೆ ಹೆಚ್ಚು ನೋವಾಗಲ್ಲ. ಆದರೆ ಸೊಸೆ ಯಾವತ್ತಿಗೂ ಸೊಸೆನೇ… ಅವಳನ್ನ ಎಷ್ಟೇ ಭಾವಿಸಿಕೊಂಡರೂ ಮಗಳಾಗಲ್ಲ. ಮಗಳು ಅಮ್ಮನನ್ನ ’ಸುಮ್ನಿರಮ್ಮ ಸಾಕು’ ಅಂದ್ರೆ ಹೆಚ್ಚು ಅನ್ಸೊಲ್ಲ.

ಕಲಾ ತಪಸ್ವಿ ಕೆ ವಿಶ್ವನಾಥರ ಸಿನಿಮಾಗಳೆಂಬ ಕಲಾಖಂಡಗಳು ಸಾಗರ ಸಂಗಮಂ – ಭಾಗ ೫ (ಕೊನೆಯ ಭಾಗ)ಕಲಾ ತಪಸ್ವಿ ಕೆ ವಿಶ್ವನಾಥರ ಸಿನಿಮಾಗಳೆಂಬ ಕಲಾಖಂಡಗಳು ಸಾಗರ ಸಂಗಮಂ – ಭಾಗ ೫ (ಕೊನೆಯ ಭಾಗ)

ಕಾಣುವ ಕನಸೆಲ್ಲಾ ನಿಜವಾಗುವಂತಿದ್ದರೆ ನಮ್ಮನ್ನು ಹಿಡಿಯುವವರಿಲ್ಲವಂತೆ. ಬಾಲುವಿನ ಕತೆಯೂ ಅದೆ. ತಾಯಿಯೆದುರಿಗೆ ನರ್ತಿಸಬೇಕು ಎನ್ನುವುದೊಂದು ಕನಸಾಗಿತ್ತು ಅದು ಕನಸಾಗೇ ಉಳಿದುಹೋಯ್ತು. ಮಾಧವಿಯನ್ನು ಮದುವೆಯಾಗಿ ಸಾಧನೆಯ ದಾರಿ ಹಿಡಿಯಬೇಕೆನ್ನುವುದೊಂದು ಕನಸಾಗಿತ್ತು ಅದೂ ಕನಸಾಗೇ ಉಳಿದುಹೋಯ್ತು. ಮಾಧವಿಯ ಗಂಡ ಸಿಕ್ಕು ಮಾಧವಿಗೆ ಬಾಲುವನ್ನೇ ಮದುವೆಯಾಗುವಂತೆ ಕೇಳುತ್ತಾನೆ. ಆದರೆ ಬಾಲು ಮಾಧವಿಯನ್ನು ಅವನಿಗೇ

ದಗ್ಧದಗ್ಧ

ಭಾಗ ೨ ೧ಭಾವ ಸುಮ್ಮನೆ ನಿಂತಿರುತ್ತಾರೆ, ಒಂದೂ ಮಾತನ್ನು ಮನಸ್ಸುಬಿಚ್ಚಿ ಹೇಳುವುದೇ ಇಲ್ಲ. ಅದೇನೋ ಗುಟ್ಟಿನಂತೆ. ನಮಗೋ ಬಡಬಡ ಮಾತಾಡುವುದೇ ಗೊತ್ತು. ಒಳಗೇ ಮಾತಿನ ಮಥನ ನಡೆಸಿ ನಂತರ ಅದನ್ನು ನಯಗಾರಿಕೆಯಲ್ಲಿ ಹೇಳುವುದು ನಮ್ಮಿಂದಾಗದು. ನಾನು ಎದ್ದು ಅಡುಗೆ ಮನೆಗೆ ಹೊರಡುತ್ತೇನೆ. ಇನ್ನೆಷ್ಟು ಹೊತ್ತು ಈ ಸ್ಮಶಾನ ಮೌನದ

ನೀಲ ಮೇಘ ಶ್ಯಾಮಲ ಶ್ಯಾಮಲನೀಲ ಮೇಘ ಶ್ಯಾಮಲ ಶ್ಯಾಮಲ

ಬದುಕಿನ ಪುಟಗಳಿಂದ – ಭಾಗ – ೧ ಎಲ್ಲದಕ್ಕಿಂತ ಮೊದಲು “ಬದುಕು” ಎಂದರೇನು ? ಬೇರೆ ಬೇರೆ ನಿಘಂಟುಗಳ ಪ್ರಕಾರ ಬದುಕು ಎಂದರೆ ಜೀವನ, ಬಾಳು, ಜೀವಿಸು, ಕಸುಬು, ಜೀವಿಸಿರು, ಬಾಳನ್ನು ಸಾಗಿಸು ಎಂದೆಲ್ಲಾ ಇದೆ. ಕನ್ನಡ ಸಾಹಿತ್ಯ ಪರಿಷತ್ ಪ್ರಕಟಿಸಿರುವ ನಿಘಂಟಿನಲ್ಲಿ ಮೇಲಿನ ಎಲ್ಲಾ ಅರ್ಥಗಳ ಜೊತೆಗೆ