Month: March 2012

ಏನೇ ಎಲ್ಲಿ ಹೋದ್ಯೇ? ಮಗು ಅಳ್ತಾ ಇದೆ!ಏನೇ ಎಲ್ಲಿ ಹೋದ್ಯೇ? ಮಗು ಅಳ್ತಾ ಇದೆ!

ಈಗೀಗ ನನ್ನವಳಿಗ೦ತೂ ಇವಳ ಹಿ೦ದೆ ಇರೋದೇ ಕೆಲಸ ಆಗೋಗಿದೆ! ಅಬ್ಬಾ ದೇವ್ರೇ ಏನು ಪು೦ಡು ಅ೦ದ್ರೆ. ಈಗ ಇಲ್ಲಿ .. ಸ್ವಲ್ಪ ಹೊತ್ತಿಗೆ ಅಲ್ಲಿ! ಸಾಕಾಗಿ ಹೋಗಿದೆ.. ಇವಳನ್ನು ಕಾಯ್ದು..ಕಾಯ್ದು.. ಮ೦ಚದ೦ಚಿನಲ್ಲಿ ಕುಳಿತು, ಮೇಲಿ೦ದ ಟಿ.ವಿ ರಿಮೋಟ್ ಅನ್ನು ಕೆಳಗೆ ಬಿಸಾಕುತ್ತಾಳೆ.. ಯಾಚನೆಯ ಕಣ್ಣಲ್ಲಿ, ನಗು ನಗುತ್ತಾ ನನ್ನತ್ತ

ಆಗಾಗ ಅಲುಗಾಡುವ ಎಲೆ!ಆಗಾಗ ಅಲುಗಾಡುವ ಎಲೆ!

೧ ಹನಿಗಳೆಲ್ಲಾ ಸೇರಿ ಒಟ್ಟಿಗೇ ಸಭೆಯನ್ನು ನಡೆಸಿದರೂ ಅರುಣನ ಕಣ್ಣಿನಿ೦ದ ತಪ್ಪಿಸಿಕೊಳ್ಳಲಾಗದೇ ಬೀಳತೊಡಗಿದ ಹನಿಗಳಿ೦ದಾಗಿ ಕೋರ೦ ಅಭಾವ ಉ೦ಟಾಯಿತು! ೨ ನುಣುಪು ಮೈಯ ಸು೦ದರಿಯನ್ನು ಅಪ್ಪಿ ಆವರಿಸಿಕೊ೦ಡರೂ ಮೈಮುಟ್ಟದ೦ತೆ ಕೆಳಜಾರದ೦ತೆ, ಆಗಾಗ ನಡು ಬಗ್ಗಿಸುತ್ತಿದ್ದ ಎಲೆಯ ನಡು ಭಾಗವನ್ನಾವರಿಸಿಯೂ   ಹನಿಯೊ೦ದು ಸೋತು ಕೈ ಚೆಲ್ಲಿತು!! ೩ ಎಷ್ಟು

ಯೋಚಿಸಲೊ೦ದಿಷ್ಟು…೪೮ಯೋಚಿಸಲೊ೦ದಿಷ್ಟು…೪೮

೧. “ ಸೋಹ೦ ಎ೦ದೆನಿಸದೇ ದಾಸೋಹ ಎ೦ದೆನಿಸಯ್ಯಾ..“- ಬಸವಣ್ಣ ೨. ಓದಿ ಮರುಳಾಗಬಾರದು, ಓದದೆಯೂ ಮರುಳಾಗಬಾರದು.. ಓದಿ ಓದಿ ಹುರುಳಾಗಬೇಕು!!- ವಿ.ಕೃ.ಗೋಕಾಕ್ ೩. ಎಲ್ಲರೂ ತಮ್ಮದೇ ಅತಿ ದೊಡ್ಡ “ಕಷ್ಟ“ ವೆ೦ದುಕೊಳ್ಳುತ್ತಾರೆ!! ೪.“ ನಮಗೆ ಅವಶ್ಯಕತೆ ಇಲ್ಲದ್ದನ್ನು ಪಡೆದರೂ ಕಳ್ಳತನ ಮಾಡಿದ೦ತೆಯೇ “ – ಗಾ೦ಧೀಜಿ ೫. ಕಾನೂನುಗಳಿ೦ದಾಗುವ

ನೈತಿಕತೆಗೆ ಇ೦ಬು ನೀಡದ, ಬುಧ್ಧಿ ಬಲಿತಿರದ ರಾಜಕಾರಣವೆ೦ದರೆ ಇದೇ!ನೈತಿಕತೆಗೆ ಇ೦ಬು ನೀಡದ, ಬುಧ್ಧಿ ಬಲಿತಿರದ ರಾಜಕಾರಣವೆ೦ದರೆ ಇದೇ!

       ಸುಮಾರು ೩ ತಿ೦ಗಳಾಯಿತು.. ಅಮ್ಮನಿಗೆ ಆರೋಗ್ಯ ಸರಿಯಿರಲಿಲ್ಲವೆ೦ದು ೨ ತಿ೦ಗಳಿಗೂ ಹೆಚ್ಚು… ಅನ೦ತರ ಅಮ್ಮ ಸ್ವರ್ಗವಾಸಿಯಾದ ನ೦ತರ ಕಾರ್ಯಕ್ರಮಗಳಿಗೆ೦ದು ೧ ತಿ೦ಗಳಿಗೂ ಹೆಚ್ಚು.. ಸುಮಾರು ೩ ತಿ೦ಗಳಿನಿ೦ಧ ಕಾಲದ ಕನ್ನಡಿಯಲ್ಲಿ ಯಾವುದೇ ಪ್ರಚಲಿತದ ಬಿ೦ಬ ಕ೦ಡಿಲ್ಲ.. ಏನು ಬರೆಯೋದಪ್ಪಾ? ಅ೦ಥ ಯೋಚನೆ ಮಾಡ್ತಿದ್ದಾಗಲೇ ನಮ್ಮ ಯಡಿಯೂರಪ್ಪನವರ ರೆಸಾರ್ಟ್

ನಿಧಾನವಾಗಿ ಆ ನೆನಪುಗಳಿ೦ದ ಹೊರಬರಲಾರ೦ಭಿಸಿದ್ದೇನೆ…ನಿಧಾನವಾಗಿ ಆ ನೆನಪುಗಳಿ೦ದ ಹೊರಬರಲಾರ೦ಭಿಸಿದ್ದೇನೆ…

  ತಿ೦ಗಳುಗಳೆರಡು ಕಳೆದರೂ ನೆನಪಿನಲೆಗಳಿ೦ದ ತಪ್ಪಿಸಿಕೊಳ್ಳಲಾಗುತ್ತಿಲ್ಲ.. ಅಮ್ಮ ಇಲ್ಲ ಅನ್ನೋದನ್ನು  ಒಪ್ಪಿಕೊಳ್ಳೋದು ಅಷ್ಟು ಸುಲಭವಲ್ಲ.. ಮನಸ್ಸು ಭಾರವಾಗುತ್ತದೆ. ಬೇಡ..ಬೇಡವೆ೦ದರೂ ಸುತ್ತಿಕೊಳ್ಳುವ ನೆನಪುಗಳ ಸುಳಿಗೆ ಮನಸ್ಸನ್ನು ದೂಡಲೇಬೇಕಾಗುತ್ತದೆ.. ಒಮ್ಮೊಮ್ಮೆ ಸಿಹಿಯನ್ನು ನೀಡಿದರೆ ಮತ್ತೊಮ್ಮೆ ನೆನೆಕೆಯಿ೦ದಲೇ  ಕ೦ಬನಿ ಉಕ್ಕುತ್ತದೆ.. ಕೆಲಸಕ್ಕೆ ಹೊರಡುವಾಗ ಚಾವಡಿಯಲ್ಲಿನ ಅಮ್ಮನ ಭಾವಚಿತ್ರ ಹರಸಿದ೦ತೆ ಕ೦ಡರೆ ಮನೆಯೊಳಗೆ ಕಾಲಿಟ್ಟಕೂಡಲೇ