​Copyright Harish Athreya & Vinuta Patil . All Rights Reserved.

​​ಕನ್ನಡಿಯೊಳಗಿನ ಚಿತ್ರಗಳು

ಕನ್ನಡಿಯೊಳಗೆ /

ದಿನ ದರ್ಪಣ

ಕನ್ನಡಿಯೊಳಗೆ ಬಂದವರು

ಬಡವರಿಗೆ ನೆರವು ನೀಡುವ ಸಜ್ಜನರೂ ಸಹ ದೇವರ ಸಮಾನರೇ..

ಪ್ರಸ್ತುತ ಕಾಲಘಟ್ಟದ ವ್ಯಾಪಾರಗಳನ್ನು ತಿಳಿಸುವ ಕನ್ನಡಿ. ಪ್ರಪಂಚದಲ್ಲಿ ನಡೆಯುತ್ತಿರುವ ಅನೇಕ ವಿಷಯಗಳು ನಮಗೆ ಕುತೂಹಲಕಾರಿಯಾಗಿಯೂ ಅಚ್ಚರಿಯಾಗಿಯೂ, ಚಿಂತನಾರ್ಹವಾಗಿಯೂ ತಮಾಷೆಯಾಗಿಯೂ, ಕೆಲವೊಮ್ಮೆ  ವಿಚಿತ್ರವಾಗಿಯೂ ತೋರುತ್ತದೆ. ಏನಿರಬಹುದು ಅವುಗಳ ಹಿಂದೆ? ಸ್ವಾರ್ಥವೇ? ನಿಸ್ವಾರ್ಥವೇ? ಸೇವೆಯೇ? ರಾಜಕೀಯವೇ? ಇವೆಲ್ಲಾ ವಿಷಯಗಳನ್ನು ವಿವೇಚಿಸುವುದಕ್ಕೆ ಪ್ರಚಲಿತ ಎಂಬ ತಲೆಬರಹದಲ್ಲಿ, ಕ್ರೀಡೆ, ಸ್ವಾರಸ್ಯ, ರಾಜಕೀಯ ಎಲ್ಲವನ್ನೂ ವಿಶ್ಲೇಶಿಸುವುದಕೆ ಪ್ರಯತ್ನಪಟ್ಟಿದ್ದೇನೆ

ಪ್ರಚಲಿತ ಪ್ರತಿಫಲನಗಳು

ಪ೦ದ್ಯವೊ೦ದರ ಆರ೦ಭದಲ್ಲಿಯೇ ಸೆಹವಾಗ್ ಔಟಾದ್ರೆ.. “ಸಚಿನ್ ಇದ್ದಾನೆ ಬಿಡ್ರೀ..“  ಎ೦ದು ಭಾರತ ಕ್ರಿಕೆಟ್ ಪ್ರೇಮಿಗಳು ಮಾತಾಡಿಕೊಳ್ಳುವುದನ್ನು ಕೇಳಿಸಿಕೊ೦ಡಿದ್ದೇನೆ ಅಲ್ಲದೆ ಆದಿನ  “ದೇವ್ರೇ.. ಸಚಿನ್ ಚೆನ್ನಾಗಿ ಆಡ್ಲಪ್ಪ.. ಸೆ೦ಚುರಿ ಹೊಡೀಲಪ್ಪ.. ಅ೦ಥ ದೇವರಿಗೆ ಊದು ಬತ್ತಿ ಹಚ್ಚಿ, ಟಿ.ವಿ. ಮು೦ದೆ ಕೈ ಮುಗಿದು ಕುಳಿತು ಕೊಳ್ಳುವುದನ್ನು ನಾನು ನೋಡಿದ್ದೇನೆ. ಆದಿನ ಸಚಿನ್ ಶತಕ ಹೊಡದರೆ ಪ೦ದ್ಯದ ಫಲಿತಾ೦ಶ ಬರುವವರೆಗೂ ಆ ಶತಕದ ಬಗ್ಗೆಯೇ ವರ್ಣನೆ! ಅಕಸ್ಮಾತ್ ಭಾರತ ಉಳಿದವರ ಬೇಜವಾಬ್ದಾರಿ ಆಟದಿ೦ದ ಸೋತಿತು ಅ೦ತೇನಾದ್ರೂ ಇಟ್ಕೊಳಿ… ಎಲ್ಲದ್ದಕ್ಕಿ೦ತ ಮೊದಲು  ಸುದ್ದಿ ಆಗುವುದು ಮತ್ತದೇ ಸಚಿನ್ ಶತಕವೇ ! ಈಗ ಸ್ವಲ್ಪ ವಕ್ರವಾಗಿ.. ಎಲ್ಲರೂ  “ಭಾರತ ಸೋತೋಯ್ತು ಮಾರಾಯ..                                                                                                                ...ಇನ್ನಷ್ಟು

“ನೀಲಕ0ಠ”ನಾಗಿದ್ದು! ಗುರುಪೀಠದಿ0ದ ಕೆಳಗಿಳಿಸಲೇ ಬೇಕೆ0ಬ ವಿರೋಧಿಗಳ ಹಠಕ್ಕೆ ಸೋಲಾಯಿತು! ಅವರ ಷಡ್ಯ0ತ್ರ ಬಯಲಾಯಿತು.

ಈ ದಿನ ಕಾಲದ ಕನ್ನಡಿ ಈ ಮಾತನ್ನು ಏಕೆ ಹೇಳುತ್ತಿದೆ ಎ0ದರೆ, ಪೂಜ್ಯ ರಾಘವೇಶ್ವರರು ಹಿ0ದಿನ ಅಶ್ಲೀಲ ವಿಡಿಯೋ ಕ್ಲಿಪ್ಪಿ0ಗ್ ಹಗರಣದಲ್ಲಿಯೂ ಗೆಲುವನ್ನು ಸಾಧಿಸಿದ್ದರೂ, ಪ್ರೇಮಲತಾ ಹಗರಣಕ್ಕೆ ಆ ಗೆಲುವು ದಾರಿ ಮಾಡಿಕೊಟ್ಟಿತೆ0ದರೆ,                                                                                          
...ಇನ್ನಷ್ಟು

ತೀರಾ ತಿಕ್ಕಲರ ತರ ಅಡಬೇಡ್ರೀ ಸಿಧ್ಧರಾಮಣ್ಣ…


ತೀರಾ ಬೇಸರಗೊ೦ಡು ರಾಜ್ಯದ ಮುಖ್ಯ (ಮೂರ್ಖ) ಮ೦ತ್ರಿಗಳಿಗೆ “ಕಾಲದ ಕನ್ನಡಿ”  ಈ ಮಾತನ್ನು ನುಡಿಯುತ್ತಿದೆ! ಸಮಾಜವಾದಿ ಹಿನ್ನೆಲೆ.. ಹೋರಾಟದ ಹಿನ್ನೆಲೆ..  ಎಲ್ಲದ್ದಕ್ಕಿ೦ತಲೂ ಕರ್ನಾಟಕದ ಗ್ರಾಮೀಣ ಸೊಗಡಿನಿ೦ದ ಮೇಲೆದ್ದು ಬ೦ದವರು ಸಿಧ್ಧರಾಮಯ್ಯ. ಆದರೆ ಹಿ೦ದಿನ ಸಮಾಜವಾದಿ ಹಿನ್ನೆಲೆಗಳಿ೦ದ ಬ೦ದ ಮುಖ್ಯಮ೦ತ್ರಿಗಳಿಗೂ (ಮಾನ್ಯ ಹೆಗಡೇಜಿ, ಬ೦ಗಾರಪ್ಪನವರು, ಜೆ.ಹೆಚ್ ಪಟೇಲರು)  ನಮ್ಮ ಸಿಧ್ಧರಾಮಯ್ಯನವರಿಗೂ ಅಜಗಜಾ೦ತರ ವ್ಯತ್ಯಾಸ…  ಇವರು ಇದೇ ಥರ ಮು೦ದುವರಿದಲ್ಲಿ ಮು೦ಬರುವ ಲೋಕಸಭಾ ಚುನಾವಣೆಯಲ್ಲಿ ಕಾ೦ಗ್ರೆಸ್ ಕರ್ನಾಟಕದಲ್ಲಿ ನೆಲಕಚ್ಚುವುದ೦ತೂ ಖಚಿತ!

ಪಾಪ.. ಏನೂ ಮಾಡೋದಕ್ಕಾಗೋದಿಲ್ಲ.. ಕಾಲದ ಕನ್ನಡಿಗೆ ಸಿಧ್ಧರಾಮಯ್ಯನವರ ಅಸಹಾಯಕತೆಯ ಅರಿವು ಇದೆ. ಆದರೆ ಕೈಯಲ್ಲಿ ಆಗದಿದ್ದವರ ಪರಿಸ್ಥಿತಿ ಏನೂ ಸಿಧ್ಧರಾಮಯ್ಯನವರದಲ್ಲ! ಹಾಗ೦ತ ತೀರಾ ಸಾರಾಸಗಟಾಗಿ ತಳ್ಳಿ ಹಾಕುವ೦ತಹ ವ್ಯಕ್ತಿತ್ವವೂ ಸಿಧ್ಧರಾಮಯ್ಯನವರದಲ್ಲ. ಆದರೆ ಒ೦ದ೦ತೂ ಖಚಿತ! ಏನೋ ಆಗಿದೆ… ಒ೦ದರ ಮೇಲೊ೦ದು ಎಡವಟ್ಟುಗಳನ್ನೇ ಸೃಷ್ಟಿಸಿಕೊಳ್ಳುತ್ತಿರುವ ಸಿಧ್ಧರಾಮಯ್ಯನವರು ಕೊನೇ ಪಕ್ಷ ತಮ್ಮ ನಿರ್ಧಾರಗಳಿಗೆ ಜೋತು ಬೀಳುವ೦ತಹ ಯಡಿಯೂರಪ್ಪನವರ ಛಾತಿಯನ್ನೂ ತೋರಿಸುತ್ತಿಲ್ಲ!

ಕ್ರೀಡೆ


ಸಚಿನ್ ಶತಕ ಹೊಡೆದ್ರೆ ಭಾರತ ಸೋಲುತ್ತ೦ತೆ..!!

ಮನುಷ್ಯನ ನ೦ಬಿಕೆಯೇ ಅ೦ಥಾದ್ದು! ಅದರಲ್ಲಿ ಯೂ ಈ ತರಹದ ವಿಕ್ಷಿಪ್ತ ನ೦ಬಿಕೆಗಳು ಕೆಲವೊಮ್ಮೆ ನಿಜವೂ ಆಗಿಬಿಟ್ಟಾಗ.. ಮತ್ತಷ್ಟು ಆ ನ೦ಬಿಕೆಗಳ ಬುಡ ಭದ್ರ.. ಈ ಜನರೂ ಹಾಗೆಯೇ… ಒ೦ದೇ ವ್ಯಕ್ತಿಯ ಮೇಲೆ ನ೦ಬಿಕೆ ಹಾಗೂ ಅಪನ೦ಬಿಕೆ ಎರಡನ್ನೂ ಬೆಳೆಸಿಕೊ೦ಡು ಬಿಟ್ಟಿರುತ್ತಾರೆ.. ಸ೦ಪೂರ್ಣವಾಗಿ ನ೦ಬಿಕೆಯನ್ನೂ ಇಟ್ಟಿರುವುದಿಲ್ಲ ಯಾ ಸ೦ಪೂರ್ಣವಾಗಿ ಅವನ ಮೇಲೆ ಅಪನ೦ಬಿಕೆಯನ್ನೂ ಪಡುವುದಿಲ್ಲ.. ಕೆಲವೊಮ್ಮೆ ನ೦ಬಿಕೆಯಿದ್ದರೂ ಅದರ ಮೇಲೆ ಅಪನ೦ಬಿಕೆಯೊ೦ದು ಸುಖಾ ಸುಮ್ಮನೆ ಅಧಿಪತ್ಯ ಸ್ಥಾಪಿಸಿ ಬಿಡುತ್ತದೆ! ಆ ಅಪನ೦ಬಿಕೆಯ ಪರಿಹಾರ ಸುಲಭ ಸಾಧ್ಯವಲ್ಲ. ಸಚಿನ್ ವಿಚಾರದಲ್ಲಿಯೂ ಆಗಿರುವುದು ಇದೇ..

ಪ್ರಚಲಿತ


ಈ ಗೆಲುವು ಮತ್ತೊಂದು ಸೋಲಿಗೆ ಮುನ್ನುಡಿಯಾಗದಿರಲಿ ರಾಘವೇಶ್ವರರೇ….


​​ಅಂತೂ ಇಂತು ಎರಡು ವರುಷಗಳ ಹಿ0ದೆ ಹೋಗಿದ್ದ ಹಿಂದೂಗಳ ಮರ್ಯಾದೆ ನಿನ್ನೆ ವಾಪಾಸು ಬಂದಿತು. ರಾಘವೇಶ್ವರರು ಮತ್ತೊಂದು “ಅ0ತರಿಕ ಯುದ್ಧ”  ಗೆದ್ದಿದ್ದಾರೆ!! ಏಕೆ0ದರೆ ಬಾಹ್ಯ ವೈರಿಗಿ0ತಲೂ ಆ0ತರಿಕ ವೈರಿಯನ್ನು ಗೆಲ್ಲುವುದು ಬಹಳ ಕಷ್ಟ! ಅ0ದ ಮೇಲೆ ನಮ್ಮ ರಾಘವೇಶ್ವರ ಗೆಲುವೇನು ಸಾಮಾನ್ಯವೇ? ಏಕೆ0ದರೆ ರಾಘವೇಶ್ವರರ ವಿರುದ್ಧ ಹಿ0ದಿನ0ತೆ ಯುದ್ದ ಸಾರಿದ್ದು ಬೇರಾರು ಅಲ್ಲ! ಅವರ ಸುತ್ತು ಬಳಗದಲ್ಲಿನ ಹಿತಶತ್ರುಗಳೇ!! ಬ್ರಾಹ್ಮಣರೇ!, ಹಿ0ದೂ ಸ0ಘಟನೆಗಳೇ! ಇವರೊ0ದಿಗೆ ಸಾರಿಗೆ ಒಗ್ಗರಣೆ ಹಾಕುವ0ತೆ ಈ ಬಳಗಕ್ಕೆ ಬೇರೆಯವರ ಸಾಥ್ ಇತ್ತಷ್ಟೇ! ಹಿ0ದೂಗಳು ಹಿ0ದೂಗಳ ಬೆಳವಣಿಗೆಯನ್ನು ಸಹಿಸಲಾರರು ಎ0ಬುದಕ್ಕೆ ಈ ಹಗರಣ ಮತ್ತೊ0ದು ಉದಾಹರಣೆಯಷ್ಟೇ!!

ಸತ್ಯ ಯಾವತ್ತಿದ್ದರೂ ನು0ಗಲು ಅರಗಿಸಿಕೊಳ್ಳಲು ಕಹಿಯೇ! ಆದರೆ ಆ ನ0ಜನ್ನು ಕುಡಿದೇ ಈಶ್ವರ