​Copyright Harish Athreya & Vinuta Patil . All Rights Reserved.

​​ಕನ್ನಡಿಯೊಳಗಿನ ಚಿತ್ರಗಳು

ಕನ್ನಡಿಯೊಳಗೆ /

ದಿನ ದರ್ಪಣ

ಕನ್ನಡಿಯೊಳಗೆ ಬಂದವರು

ಬಡವರಿಗೆ ನೆರವು ನೀಡುವ ಸಜ್ಜನರೂ ಸಹ ದೇವರ ಸಮಾನರೇ..

ಭಾರತ, ಅತ್ಯುನ್ನತ ಸಂಸ್ಕೃತಿಯ ದೇಶ. ಬೇರೆ ದೇಶಗಳಿಗಿಂತ ಭಿನ್ನವಾದ ಕಲೆ, ಶಿಕ್ಷಣ, ಸಂಸ್ಕೃತಿ, ಸಾಹಿತ್ಯ, ದರ್ಶನ, ತತ್ವಗಳನ್ನು ಹೊಂದಿರುವ ಪರಿಪೂರ್ಣ ದೇಶ. ಕೆಲವಾರು ತೊಡಕುಗಳು ಇಲ್ಲದಿಲ್ಲ. ಪ್ರಸಕ್ತ ಸನ್ನಿವೇಶದಲ್ಲಿ ಶಿಕ್ಷಣ ವ್ಯವಸ್ಥೆ, ಸಾಮಾಜಿಕ ಪಿಡುಗುಗಳು, ರಾಜಕಾರಣಿಗಳ ವ್ಯಕ್ತಿತ್ವಗಳು, ಭಾರತದ ಇತಿಹಾಸಕ್ಕೆ ಸಂಬಂಧಪಟ್ಟ ವಿಷಯಗಳು ಎಲ್ಲವೂ ಮೌಲಿಕವೂ ಮತ್ತು ಚಿಂತನಾರ್ಹವೂ ಆಗಿವೆ. ಅಷ್ಟೇ ಅಲ್ಲದೆ ಭಾರತದ ದರ್ಶನವನ್ನು ವಿಶ್ವದೆದುರಿಗೆ ತೋರಿಸುತ್ತವೆ.

ದರ್ಪಣದ ಪ್ರತಿಫಲನಗಳು

ಅವಿದ್ಯಾವ೦ತ ತ೦ದೆ-ತಾಯಿಗಳ ಮಕ್ಕಳ ಗತಿ ಏನು?


ಈ ವರ್ಷ ಪರೀಕ್ಷೆ ಬರೆದಿರುವ ೭ ನೇ ತರಗತಿಯ ಮಕ್ಕಳ ಅ೦ಗ್ಲ ಪುಸ್ತಕದಲ್ಲಿ ೩೮ ನೇ ಪುಟದಲ್ಲಿ ಹೀಗೆ ಇದೆ.

Pick out the silent letters in the following:

೧. Christmas

೨. Important

 ೩. Colour

 ೪. December

 ೫. Appear

ನಿಶ್ಯಬ್ಧವಾಗಿರುವ ಪದಗಳೆ೦ದರೆ ಆ ಪದಗಳನ್ನು ಉಚ್ಛರಿಸುವಾಗ ಆ ಅಕ್ಷರಗಳ ಅರಿವು ನಮಗಾಗುವುದಿಲ್ಲ ಅಲ್ಲವೇ? ಮೊದಲನೇ ಪದವಾದ ಕ್ರಿಸ್ಮಸ್ ನಲ್ಲಿ `ಟಿ` ಅಕ್ಷರವನ್ನು ಉಚ್ಛರಿಸುವುದಿಲ್ಲ. ಆದ್ದರಿ೦ದ ಅದೊ೦ದು ಸರಿ.  ಆದರೆ ಉಳಿದ ೪ ಪದಗಳಾದ  ಇ೦ಪಾರ್ಟೆ೦ಟ್,ಕಲರ್,ಡಿಸೆ೦ಬರ್ ಹಾಗೂ ಅಪೀಯರ್ ಗಳಲ್ಲಿ ನಿಶ್ಯಬ್ಢವಾಗಿರುವ ಅಕ್ಷರಗಳಿವೆಯೇ? ನನ್ನ ಪತ್ನಿಯ ಬಳಿ ಮನೆ ಪಾಠಕ್ಕೆ ಬರುವ ಮಕ್ಕಳ ಈ ವರ್ಷದ ಏಳನೇ ತರಗತಿಯ ವಾರ್ಷಿಕ ಪರೀಕ್ಷೆಯ ಆ೦ಗ್ಲ ಪ್ರಶ್ನೆ ಪತ್ರಿಕೆಯಲ್ಲಿ“  `Airport` ಅನ್ನುವ ಪದದಲ್ಲಿ ನಿಶ್ಯಬ್ಢವಾಗಿರುವ ಅಕ್ಷರವನ್ನು ಬರೆಯಿರಿ“ ಎನ್ನುವ ಪ್ರಶ್ನೆ ಇತ್ತು? ಮಕ್ಕಳು ಏನು ಬರೆದಿಯಾರು? ಟೀಚರ್ ಹೇಳೋ ಪ್ರಕಾರ ಆ ಪದದಲ್ಲಿ r ಅನ್ನುವುದು ನಿಶ್ಯಬ್ಧ ಸೂಚಕ ಅ೦ತೆ. ಮೊದಲನೇ  r  ಆದ್ರೆ ಅದು` ` ಏಪೋರ್ಟ್“, ಎರಡನೇ r ಆದ್ರೆ “ಏರ್ಪೋಟ್“. ಹೇಗಿದೆ ಪದಗಳ ವಿಶ್ಲೇಷಣೆ? 

ಇದಕ್ಕೆ ನಮ್ಮೂರಿನ ಶಾಲೆಯಲ್ಲಿ ಶಿಕ್ಷಕರು ಈ ರೀತಿ ಮಕ್ಕಳಿಗೆ ಹೇಳಿಕೊಟ್ಟಿದ್ದಾರೆ.

...​ಇನ್ನಷ್ಟು