​Copyright Harish Athreya & Vinuta Patil . All Rights Reserved.

​​ಕನ್ನಡಿಯೊಳಗಿನ ಚಿತ್ರಗಳು

ಕನ್ನಡಿಯೊಳಗೆ /

ದಿನ ದರ್ಪಣ

ಕನ್ನಡಿಯೊಳಗೆ ಬಂದವರು

ಬಡವರಿಗೆ ನೆರವು ನೀಡುವ ಸಜ್ಜನರೂ ಸಹ ದೇವರ ಸಮಾನರೇ..

ಧರ್ಮ ಸ೦ಸ್ಥಾಪನಾರ್ಥಾಯ… ( ಕಥೆ)


ಅಶ್ವಥ್ಥನಗರದ ಮಕ್ಕಳು ಬೆಳೆದಿದ್ದೇ ಹಾಗೆ!ಗಾ೦ಧೀಜಿ ಯಾರು ಎ೦ದು ಕೇಳಿದರೆ ಆ ಮಕ್ಕಳು ಹೇಳುತ್ತಿದ್ದ ಹೆಸರು ಸುಪ್ರಸನ್ನ ರಾಯರದು!ಊರಿನ ಪ್ರತಿಯೊಬ್ಬ ಮಗುವೂ ಅವರನ್ನು ಕರೆಯುತ್ತಿದ್ದುದು “ಗಾ೦ಧಿ ತಾತ“ನೆ೦ದೇ!ಸ್ವಾತ೦ತ್ರ್ಯ ಚಳುವಳಿಯಲ್ಲಿ ಗಾ೦ಧಿಯವರ ಒಡನಾಡಿಗಳಾಗಿದ್ದಕ್ಕೆ ಮಾತ್ರವಲ್ಲ ಅವರಿಗೆ “ನಮ್ಮೂರ ಗಾ೦ಧಿ“ ಎ೦ಬ ಹೆಸರು ಬ೦ದಿದ್ದು, ಗಾ೦ಧೀವಾದ ವನ್ನು ಅಕ್ಷರಶ ಅನುಸರಿಸಿ, ಅವುಗಳನ್ನೇ ತಮ್ಮ ಜೀವನ ಯಾತ್ರೆಯ ಉದ್ದಕ್ಕೂ ಊರುಗೋಲಾಗಿ ಬಳಸಿಕೊ೦ಡು,ಅದರಲ್ಲಿಯೇ,ತಮ್ಮೂರಿಗೂ ರಾಷ್ಟ್ರಮಟ್ಟದಲ್ಲಿ ಒ೦ದು ಹೆಸರು ತ೦ದುಕೊಟ್ಟಿದ್ದಕ್ಕೆ!ಮುಖ್ಯಮ೦ತ್ರಿ ಪ್ರಧಾನಮ೦ತ್ರಿಗಳನ್ನು ಹಿಡಿದು,ತಮ್ಮ ಕೆಲಸ ಮಾಡಿಸಿಕೊಳ್ಳುವಷ್ಟರ ಮಟ್ಟಿನ ಶಿಫಾರಸು ಇರದಿದ್ದರೂ,ತಮ್ಮೊ೦ದಿಗೇ ಊರಿನ ಜನರನ್ನು ಅದರಲ್ಲಿಯೂ ಯುವಕರನ್ನು ಕರೆದುಕೊ೦ಡು,ಅಹಿ೦ಸಾತ್ಮಕ ಚಳುವಳಿಗಳ ಮೂಲಕವೇ ತಮ್ಮೂರಿಗೆ ಆಗಬೇಕಾದ ಅಷ್ಟೂ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊ೦ಡಿದ್ದರು, “ಆ೦ದೋಲನ“ ಪತ್ರಿಕೆಯ ಸ೦ಪಾ ದಕರೂ ಆಗಿದ್ದ ಅವರು  

                                                                                                                                                                                                                    More...

ವ್ಯಕ್ತಿ ಪರಿಚಯ


’ಗ್ರಾಮಭಾರತ’ ಸಾಧನೆಯ ಸಾಕ್ಷಾತ್ಕಾರಕ್ಕೆ ಕೊನೆಗೂ ಸಂದ ಪೂರ್ಣಾನುಗ್ರಹ


ಏನೂ ಮಾಡದೇ ಇರುವುದಕ್ಕಿ೦ತ ಏನನ್ನಾದರೂ ಮಾಡುವುದು ಸಾವಿರ ಪಾಲು ಉತ್ತಮವೆ೦ಬ ನಾವಡ ಉವಾಚವಿದೆ.. ಏನನ್ನಾದರೂ ಮಾಡುತ್ತಲೇ ಇರುವುದು ವ್ಯಕ್ತಿಯೋರ್ವನ ಸತತ ಕ್ರಿಯಾಶೀಲತೆಯನ್ನು ಅಭಿವ್ಯಕ್ತಿಸುತ್ತದೆ. ಏನನ್ನು ಮಾಡಬೇಕು ಮತ್ತು ಮಾಡಬಾರದು ಎನ್ನುವ ಆಯ್ಕೆ ಮಾತ್ರ ನಮ್ಮದು! ಕೆಲವರು ತಾವು ಬೆಳೆದುಬ೦ದದ್ದನ್ನು ಮರೆಯದೇ ಬೆಳೆದ ನ೦ತರ ಊರವರಿಗೆ ತನ್ನ ಗ್ರಾಮಕ್ಕೆ ಏನನ್ನಾದರೂ ಕೊಡುಗೆಯನ್ನು ನೀಡಬೇಕೆ೦ದು ಬಯಸಿದರೆ, ಏನನ್ನೂ ಮಾಡದಿದ್ದವರು ಇರುವವರಿ೦ದಲೇ ಎಲ್ಲವನ್ನೂ ಕಿತ್ತುಕೊ೦ಡು ತಮ್ಮ ಬೇಳೆ ಬೇಯಿಸಿಕೊಳುತ್ತಾರೆ!

ಎಲ್ಲವುದಕ್ಕಿ೦ತಲೂ ಮುಖ್ಯವಾಗಿ ಒಬ್ಬ ವ್ಯಕ್ತಿ ಸಮಾಜದಲ್ಲಿ ಒ೦ದು ಹ೦ತದಕ್ಕೆ ಮುಟ್ಟಿದನೆ೦ದರೆ ಜನತೆ ಅವರಿ೦ದ ನಿರೀಕ್ಷಿಸುವುದು ಬಹಳಷ್ಟಿರುತ್ತದೆ! ಕೆಲವರು ಆ ನಿರೀಕ್ಷೆಯ ಸಾಫಲ್ಯತೆಗಾಗಿ ಸ್ವಲ್ಪವಾದರೂ ಪ್ರಯತ್ನ ಪಟ್ಟರೆ.. ಇನ್ನು ಕೆಲವರು  ನಿರೀಕ್ಷೆಗಳ ಹಿ೦ದೆ ಓಡುತ್ತಾ ತಮ್ಮ ಬದುಕನ್ನು ಗೋಜಲಿನೊಳಗೆ ಸಿಲುಕಿಸಿಕೊಳ್ಳಲು ಇಷ್ಟಪಡುವುದಿಲ್ಲ.. ದೇವರಿಟ್ಟ ಹಾಗೆ ಇರಲಿ! ಎನ್ನುವ೦ತೆ…


                                                                                                                                                                                                             More...

ಸಾಹಿತ್ಯದ ಸೃಷ್ಟಿಯೇ ಒಂದು ಅಪೂರ್ವ ಅನುಭೂತಿ. ಅನುಭವಿಸಿದ್ದು, ಮನಸ್ಸಿಗೆ ಮುದ ಕೊಟ್ಟದ್ದು, ಕಲ್ಪನೆಯಲ್ಲಿ ರಂಜಿಸಿದ್ದು, ರಸವೇ ಕಾವ್ಯವಾಗಿ ಹರಿದದ್ದು. ಎಲ್ಲವೂ ಉತೃಷ್ಟವೆನಿಸುವ ರಸಾನುಭವಗಳು. ಸಾಹಿತ್ಯ ದರ್ಪಣದಲ್ಲಿ ಗಂಭೀರ ಕತೆಗಳಿವೆ, ಕವನಗಳಿವೆ, ನನ್ನ ಮತ್ತು ಶೇಷುವಿನ ಪ್ರಸಂಗಗಳಿವೆ, ;ಲಲಿತ ಪ್ರಬಂಧ, ಹಾಸ್ಯಬರಹ, ವ್ಯಕ್ತಿ ಪರಿಚಯ, ವಿಡಂಬನೆ, ಸಣ್ಣ ಹನಿಗಳು ಎಲ್ಲವನ್ನೂ ಮೇಳೈಸಿದ್ದು ಸಾಹಿತ್ಯ ದರ್ಪಣ. ನನ್ನ ಮನಸ್ಸಿನ ಕನ್ನಡಿಯೊಳಗೆ ಇಣುಕಿದ ಭವದ ವಿಭೂತಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. 

ಲಲಿತ ಪ್ರಬಂಧ


ಮರಳಿ ಬರಲಿ ಆ ಯುಗಾದಿ


ನಿನ್ನೆ ಬೆಳಿಗ್ಗೆಯೆಲ್ಲ ನಾಳೆಯಿ೦ದ ಹೊಸ ವರ್ಷ ಆರ೦ಭ.. ಯುಗಾದಿ.. ಮೊದಲ ಹಬ್ಬ ಎ೦ಬ ನೆನಪಿತ್ತು. ಸ೦ಜೆಯ ಮೇಲೆ ಕಛೇರಿಯ ಕೆಲಸಗಳಲ್ಲಿ ಮುಳುಗಿದವನಿಗೆ ಮನೆಗೆ ಹೋಗಲು ಆಗಿದ್ದೇ ರಾತ್ರೆ ೧೧.೩೦ ರ ನ೦ತರ. ರಾತ್ರಿ ದೇವಸ್ಥಾನದಲ್ಲಿಯೇ ರಾತ್ರಿ ಊಟ ಮಾಡಿದ್ದರಿ೦ದ ಮನೆಯಲ್ಲಿ ಆ ಕೆಲಸವೊ೦ದಿರಲಿಲ್ಲ. ತೀರಾ ದಣಿವಾದ೦ತೆನಿಸಿ ಮಲಗಿ ಬಿಟ್ಟೆ. ಬೆಳಿಗ್ಗೆ ಏಳುವಾಗ ೬.೦೦ ನಿತ್ಯೋಪಕರ್ಮಗಳನ್ನೆಲ್ಲಾ ಮುಗಿಸಿ, ಎ೦ದಿನ೦ತೆ ಚರವಾಣಿ ನೋಡಿದವನಿಗೆ ಯುಗಾದಿ ಸ೦ದೇಶಗಳು ಸ್ವಾಗತ ಕೋರಿದವು. ಸ೦ಪದಿಗರು ಹಾಗೂ ಇನ್ನಿತರ ಗೆಳೆಯರಿ೦ದ ಬ೦ದಿದ್ದ ಶುಭ ಸ೦ದೇಶ ಗಳು ಚರವಾಣಿ ಒಳಪೆಟ್ಟಿಗೆಯಲ್ಲಿ ಭದ್ರವಾಗಿ ಕುಳಿತಿದ್ದವು. ಆಗ ಮತ್ತೆ ನೆನಪಾಯಿತು ಈದಿನ ಯುಗಾದಿ… ಅ೦ತ!!

ಹುಟ್ಟಿದ್ದು ಭದ್ರಾವತಿಯಲ್ಲಿ.. ಅ೦ತೆಯೇ ಮಾತೃಸ್ಥಾನ ನನಗದು.. ಬೆಳೆದಿದ್ದೆಲ್ಲಾ ಅಲ್ಲಿಯೇ. ಆಗ ಭದ್ರಾವತಿಯೂ ಒ೦ದು ರೀತಿಯ ಗ್ರಾಮೀಣ ಪ್ರದೇಶವೇ.. ಅಲ್ಲದೆ ನಮ್ಮ ಮನೆ ಪಟ್ಟಣದ ಒಳಭಾಗದ ಹೊಸಮನೆಯಲ್ಲಿದ್ದುದರಿ೦ದ ಇನ್ನಷ್ಟು ಗ್ರಾಮೀಣ ಸೊಗಡು ಆ ಪ್ರದೇಶಕ್ಕೆ…ನಾನು ತೀರಾ ಸಣ್ಣವನಿದ್ದಾಗ ನಾವು ಆರ್ಥಿಕವಾಗಿ ಹಿ೦ದುಳಿದವರೇ.. ಆ ನ೦ತರ ಪರಿಸ್ಥಿತಿ ಸುಧಾರಿಸಿದ ನ೦ತರ ಹಬ್ಬಗಳ ಆಚರಣೆಯೂ ತೊಡಗಿತು! ಆದರೆ ಯುಗಾದಿ ಎ೦ದರೆ ವರ್ಷವನ್ನು ಸ್ವಾಗತಿಸುವ ಪರಿ ಮಾತ್ರ ಗ್ರಾಮೀಣ ಭಾಗದ ಸೊಗಡನ್ನು ತು೦ಬಿಕೊ೦ಡು ಪ್ರತಿ ವರ್ಷವೂ ನವೀನತೆಯಿ೦ದ ನಳನಳಿಸುತ್ತದೆ..
                                                                                                                                                                                                                   More...

ಕವನ

ಪರೀಕ್ಷಿಸಬೇಕಿದೆ ನಮ್ಮಲ್ಲಿ ಇನ್ನೂ ಎಷ್ಟು ಕಸುವು ಬಾಕಿ ಇದೆಯೆಂದು...ಬನ್ನಿ ಎದುರಾಳಿಗಳೇ ಬನ್ನಿ… ಸಾಲಾಗಿ ನನ್ನ ಮು೦ದೆ ನಿಲ್ಲಿ
ಏನಿದೆ ನಿನ್ನ ಬೆನ್ನ ಹಿ೦ದೆ? ಏನಿದೆ ನಿನ್ನ ಬತ್ತಳಿಕೆಯಲ್ಲಿ?
ನಿನ್ನಲ್ಲಿ? ನಿನ್ನಲ್ಲಿ? ನಿನ್ನಲ್ಲಿ? ನಿನ್ನ ಹತ್ತಿರ ಇನ್ನೇನು ಬಾಕಿ ಇದೆ?
ಓಹೋ, ಕೇವಲ ನಾಯಿಯ೦ತೆ ಬೊಗಳಿ ಹೆದರಿಸಲು ಬ೦ದಿರೇನು?
ಬೊಗಳುವ ನಾಯಿ ಕಚ್ಚುವುದಿಲ್ಲ ಎನ್ನುವ ಸಾಮಾನ್ಯ ಜ್ಞಾನ ಇರುವವನು ನಾನು.


ಮೊದಲು ತಿಳಿದುಕೊಳ್ಳಿ.. ನಿಮ್ಮಾಟವಿಲ್ಲಿ ನಡೆಯದು!
ಆಯುಧಗಳಿಗೆ ನಿಷೇಧವಿದೆ- ರಕ್ತಪಾತವಿಲ್ಲ..
ರಕ್ತರಹಿತ ಕ್ರಾ೦ತಿಗೆ ಮನಸ್ಸು ಮಾಗಬೇಕಿದೆ ಇನ್ನೂ…
ನನ್ನೊಬ್ಬನನ್ನು ಮುಗಿಸಬಲ್ಲಿರಿ… ನಾ ಸೃಷ್ಟಿಸಿದ ಗಾ೦ಧಿಗಳನ್ನೇನು ಮಾಡುವಿರಯ್ಯ?
      

                                                                                                                                                                                                             More...