​Copyright Harish Athreya & Vinuta Patil . All Rights Reserved.

ಕನ್ನಡಿಯೊಳಗೆ /

ದಿನ ದರ್ಪಣ

                         ಪರ್ಜನ್ಯ ಹೋಮದಿ೦ದಲೇ ಮಳೆಯೇ? ಅಥವಾ …

ದೇವರೇ ಹಾಗೆ! ನಾವು ಅವನನ್ನು ದೂರ ತಳ್ಳಿದಷ್ಟೂ  ಹೊಸ ಹೊಸ ಸಾಕ್ಷಿಗಳಿ೦ದ “ನನ್ನ ಅವಶ್ಯಕತೆ ನಿನ್ನ ಜೀವನಕ್ಕಿದೆ ನೋಡು“ ಎನ್ನುತ್ತಾ ನಮ್ಮ ಜೀವನದಲ್ಲಿ ಕಾಲಿಟ್ಟೇ ಇಡುತ್ತಾನೆ! ಅವನೊ೦ದಿಗೆ ಬದುಕುವುದು ನಮಗೆ ಅಭ್ಯಾಸವಾಗಿ ಹೋಗಿದೆ. ಭಾರೀ ಕಷ್ಟದಲ್ಲಿದ್ದಾಗ ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ “ ದೇವರೇ, ಈ ದಿನ ನಾದ್ರೂ ಚೆನ್ನಾಗಿರಲಯ್ಯ“ ಅ೦ತ ಬೇಡಿಕೊಳ್ಳುತ್ತಲೂ, ಭಾರೀ ಸುಖದಲ್ಲಿದ್ದಾಗ “ದೇವರೇ ನಿನ್ನೆ ಇದ್ದಹಾಗೆ ಇವತ್ತೂ, ನಾಳೆನೂ, ಮು೦ದೆನೂ ಇರುವ ಹಾಗೆ ಅನುಗ್ರಹಿಸಯ್ಯ“ ಅ೦ತ ಬೇಡಿಕೊಳ್ಳುವುದು  ನಮ್ಮ ಅಭ್ಯಾಸ ವಾಗಿ ಹೋಗಿದೆ. ನಾನು ಒ೦ಥರಾ ಆಸ್ತಿಕನೂ ಹೌದು- ಮತ್ತೊ೦ದು ವಿಧದಲ್ಲಿ ನಾಸ್ತಿಕನೂ ಹೌದು! ಎಲ್ಲವುದನ್ನೂ ಅವನ ತಲೇ ಮೇಲೇ ಹಾಕೋದೂ ಇಲ್ಲ, ಎಲ್ಲದರದ್ದೂ ಅವನಿಗೇ ಕ್ರೆಡಿಟ್ ಕೋಡೋದಿಲ್ಲ! ಆ ಥರಹದವನು ನಾನು!

ಪ್ರತಿವರ್ಷ ನಮ್ಮ ಹೊರನಾಡಿನಲ್ಲಿ ಏಪ್ರಿಲ್ ಹೊತ್ತಿನಲ್ಲೆಲ್ಲಾ ಮಳೆಯ ಆಗಮನವಾಗುತ್ತದೆ. ಸಾಮಾನ್ಯವಾಗಿ ನವರಾತ್ರಿ ಮುಗಿದು ದೀಪಾವಳಿಯ ಸಮಯದಲ್ಲಿ

ನಾವು ಮತ್ತು ನಮ್ಮ ಧರ್ಮಧರ್ಮ ಎಂದ ಕೂಡಲೆ ಥಟ್ಟನೆ ಗೋಚರವಾಗುವ ಕೆಲವು ಲಕ್ಷಣಗಳು ಇವು: ಪ್ರತಿಯೊಂದು ಧರ್ಮದ ಹಿಂದೆ ಅದನ್ನು ಸ್ಥಾಪಿಸಿದ ಅಥವಾ ಪ್ರವರ್ತನಗೊಳಿಸಿದ ಒಬ್ಬ ವ್ಯಕ್ತಿ, ಆತ ಪ್ರವಾದಿಯೋ, ಸಂತನೋ, ಆಚಾರ್ಯನೋ, ಅವತಾರಪುರುಷನೋ ಇದ್ದಾನೆ. ಹಿಂದೂ ಧರ್ಮಕ್ಕೆ ಸಂಬಂಧಪಟ್ಟಂತೆ ಹೇಳುವುದಾದರೆ, ಅದು ಇತರ ಧರ್ಮಗಳಂತೆ ಯಾವ ಒಬ್ಬ ನಿರ್ದಿಷ್ಟವಾದ ವ್ಯಕ್ತಿಯಿಂದಲೂ ಸ್ಥಾಪಿತವಾದುದಲ್ಲ. ಅದು ಅನೇಕ ತತ್ವಜ್ಞಾನಿಗಳು ಪ್ರತಿಪಾದಿಸಿದ ಹಲವು ಪರ್ಯಾಯ ಚಿಂತನೆಗಳ ಒಂದು ಸ್ರೋತ ಅಥವಾ ಪ್ರವಾಹ ಎಂದು ಹೇಳಬಹುದು. ಎರಡನೆಯ ಲಕ್ಷಣವೆಂದರೆ, ಒಂದು ಧರ್ಮದ ಮೂಲದಲ್ಲಿ ಇರುವ ಈ ವ್ಯಕ್ತಿ ಅಥವಾ ಶಕ್ತಿ ಪ್ರತಿಪಾದಿಸಿದ ಆಧ್ಯಾತ್ಮಿಕ ಧಾರ್ಮಿಕ, ಸಾಮಾಜಿಕ ಸ್ವರೂಪದ ಮಾರ್ಗದರ್ಶಕ ತತ್ವಜ್ಞಾನ ಅಥವಾ ಬೋಧನೆಗಳನ್ನು ಒಳಗೊಂಡ ಗ್ರಂಥಗಳಿರುತ್ತವೆ. ನಿದರ್ಶನಕ್ಕೆ ಹೇಳುವುದಾದರೆ, ಕ್ರೈಸ್ತರಿಗೆ ಬೈಬಲ್, ಮುಸ್ಲಿಮರಿಗೆ ಖುರಾನ್, ಹಿಂದೂಗಳಿಗೆ ಭಗವದ್ಗೀತೆ, ಬೌದ್ಧರಿಗೆ ತ್ರಿಪಿಟಕಗಳು, ವೀರಶೈವರಿಗೆ ವಚನಗಳು- ಸಿದ್ಧಾಂತ ಶಿಖಾಮಣಿ ಇವುಗಳನ್ನು ಹೆಸರಿಸಬಹುದು. ಮೂರನೆಯದು ಈ ಗ್ರಂಥಗಳನ್ನು ಕುರಿತು ಕಾಲದಿಂದ ಕಾಲಕ್ಕೆ ವ್ಯಾಖ್ಯಾನ ಬರೆದ ಆಚಾರ್ಯರಿದ್ದಾರೆ ಮತ್ತು ಬೋಧಕರಿದ್ದಾರೆ.

,...ಇನ್ನಷ್ಟು

​​ಕನ್ನಡಿಯೊಳಗಿನ ಚಿತ್ರಗಳು

ಕನ್ನಡಿಯೊಳಗೆ ಬಂದವರು

ಬಡವರಿಗೆ ನೆರವು ನೀಡುವ ಸಜ್ಜನರೂ ಸಹ ದೇವರ ಸಮಾನರೇ..

ಅಧ್ಯಾತ್ಮ ಎಂದರೇನು? ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತ ಹೋದಂತೆ ತೋಚಿದ್ದು ಅಥವಾ ಮನಸ್ಸಿಗೆ ಬಂದದ್ದು ಅ ಕ್ಷಣದ ಕಾರ್ಯವನ್ನು ನಿರ್ವಂಚನೆಯಿಂದ ಮಾಡುವ, ನಿಸ್ವಾರ್ಥದಿಂದ ಮಾಡುವ ಮತ್ತು ಎಲ್ಲರೊಳಿತಿಗಾಗಿ ಮಾಡುವುದು ಎಂದು. ಮಾತೆ ಅನ್ನಪೂರ್ಣೆಯ ಆಶೀರ್ವಾದದಿಂದ ಇಂದು ಇಷ್ಟೆಲ್ಲಾ ಆಗಿರುವುದು ಸತ್ಯ. ಹುಡುಕಾಟ ನಿರಂತರ. ವಿದ್ಯೆ ಅವಿದ್ಯೆ, ಧರ್ಮ ಅದರ್ಮ ಎಲ್ಲವನ್ನೂ ತಿಳಿದು ನೋಡುವ ಕುತೂಹಲವೇ ನನ್ನನ್ನು ಕನ್ನಡಿಯಲ್ಲಿ ನಿಂತು ನೋಡುವಂತೆ ಮಾಡಿದೆ. 


​ಆಧ್ಯಾತ್ಮದ ಅಂಗಳದಲ್ಲಿ ಕ್ಷೇತ್ರ ಪರಿಚಯ, ಕಾಮಧೇನು ಮತ್ತು ಜಿಜ್ಞಾಸೆಗಳೆಂಬ ವಿಧಗಳನ್ನು ಮಾಡಿಕೊಂಡಿದ್ದೇನೆ. ಮನಸ್ಸಿನಲ್ಲಿ ಮಂಥನ ಮಾಡಿ ಮೂಡಿದ ನವನೀತವನ್ನು ನಿಮ್ಮೆದುರಿಗೆ ಇಡಲಿದ್ದೇನೆ. 

 ಒ೦ದೆರಡು ಮಳೆ ಬ೦ದರೆ ಆ ವರ್ಷದ ಮಳೆಗಾಲ ಖತ೦,ನವೆ೦ಬರ್ ನ೦ತರ ಶಿವರಾತ್ರಿಯವರೆಗೂ ಛಳಿಯೋ ಛಳಿ, ಮತ್ತೆ ಪ್ರತಿವರ್ಷ ಅಕ್ಷಯತದಿಗೆಯ೦ದು ಮಳೆಯ ಆಗಮನ!ನಮಗೆ ಅಕ್ಷಯ ತದಿಗೆ ಬ೦ತೆ೦ದರೆ ಮಳೆಗಾಲ ಆರ೦ಭವಾದ೦ತೆಯೇ. ಅಕ್ಷಯತದಿಗೆಯ೦ದು ಎ೦ದಿನ೦ತೆ ಮಳೆ ಬಿದ್ದು ಆನ೦ತರ  ಜೂನ್ ವರೆಗೂ ೧೦-೧೫ ದಿನ ಮಳೆ ಬರುತ್ತಿತ್ತು.  ಇದು ಇಲ್ಲಿಯವರೆವಿಗೂ ಅನೂಚಾನವಾಗಿ ನಡೆದು ಬ೦ದ ಪ್ರಕ್ರಿಯೆ! ಈ ಮಧ್ಯೆ ೨೦೦೬ ನೇ ಇಸವಿ, ೨೦೦೮ ನೇ ಇಸವಿ ಹಾಗೂ ಪ್ರಸಕ್ತ ವರ್ಷ ಮಾತ್ರವೇ ಮಳೆ ದಿಕ್ಕುತಪ್ಪಿರುವುದು. ಆದರೆ                                                                                    ...ಇನ್ನಷ್ಟು

ಹೊರನಾಡಿನ ಶರನ್ನವರಾತ್ರಿ ಉತ್ಸವ

ಅನ್ನಪೂರ್ಣೆಯ ಕೃಪೆಯೊಂದಿಗೆ ಆಷಾಡ ಮಾಸದಲ್ಲಿ ನಡೆಯುವ ವಿವಿಧ ಅಲಂಕಾರಗಳನ್ನು ಇಡುವ ಈ ಸಂಚಿಕೆಯ ಮೊದನೆ ಅಧ್ಯಾಯವಾಗಿ ಹೂವಿನ ಅಲಂಕಾರ. 

ಭಕ್ತರಿಗೆ ಸದಾ ಅಭಯವನ್ನು ಕೊಡುವ ಜೀವನಿಗೆ ಜೀವವನ್ನು ಕೊಡುವ ಅನ್ನಮಯಕೋಶವೆಂಬ ವಿಭಾಗವನ್ನು ತಣಿಸುವ ಸ್ಥಳ ಹೊರನಾಡಿನ ಅನ್ನಪೂರ್ಣೆಯ ಸನ್ನಿಧಾನ. ಇದೋ ಇಲ್ಲಿಗೆ ಆ ಅಲಂಕಾರ ಕೆಲವು ಚಿತ್ರಗಳು...

...ಇನ್ನಷ್ಟು