​Copyright Harish Athreya & Vinuta Patil . All Rights Reserved.

ಬಡವರಿಗೆ ನೆರವು ನೀಡುವ ಸಜ್ಜನರೂ ಸಹ ದೇವರ ಸಮಾನರೇ..

​​ಕನ್ನಡಿಯೊಳಗಿನ ಚಿತ್ರಗಳು

ಕನ್ನಡಿಯೊಳಗೆ /

ದಿನ ದರ್ಪಣ

ಕನ್ನಡಿಯೊಳಗೆ ಬಂದವರು

ಮೌನ ಭಾವಗಳ ಮೆರವಣಿಗೆ



ಸುಮ್ಮನಿರಲು ಹೇಳಿದಾಗ
ಬಾಯೆಲ್ಲಾ ಮಾತು
ಮಾತನಾಡಬೇಕಾದಾಗಲೆಲ್ಲ ಮೌನ!
ಮನಸಿನ ಮೂಲೆಯಲ್ಲಿ ಕೇಳುತ್ತಿದೆ
ಅವರಿವರು ಹೇಳಿದ್ದಕ್ಕೆಲ್ಲಾ ಏಕೆ ತಲೆಯಾಡಿಸಬೇಕು
ಸುಮ್ಮನಿರಬಾರದೆ, ನಿನ್ನತನವ ಮೆರೆಸಬಾರದೆ?

ಸುಮ್ಮನಿರು ನಿನಗೇನು? ಇಲ್ಲ
ನಾನು ನನ್ನತನವನ್ನೇನೂ ಬಿಡುತ್ತಿಲ್ಲ
ನನ್ನೊಳಗಿನ ಮೌನದ ಚಿಪ್ಪಿನಿಂದ ಹೊರಬರುತ್ತಿಲ್ಲ
ಆದರೂ ಒಂದು ಮಾತಾಡುವೆ, ಎರಡು ಬೇಡ 
ಒಮ್ಮೆ ಅವಕಾಶ ಕೊಡು ಒಳಗಿದ್ದುದ್ದೆಲ್ಲವನು,
ಕಕ್ಕಿಬಿಡುತ್ತೇನೆ, ಕೇಳಿಸಿಕೊಳ್ಳುವ ಕೃಪೆಮಾಡು

ಇಲ್ಲಿ ಕೂಡು, ಇದ್ದುದೆಲ್ಲವನ್ನೂ ಹೇಳಿಬಿಡುತ್ತೇನೆ
ಮುಖವಾಡವನ್ನೇ ಧರಿಸಿ ಕುಣಿ ಕುಣಿದು 
ಕೊನೆಗೊಮ್ಮೆ ಸುಸ್ತಾದಾಗಲಾದರೂ 
ಸಹಜ ಅಸಹಜತೆಗಳ ನಡುವಣ ಅಂತರದಲಿ 
ಮುಳುಗಿ ಮಿಂದೆದ್ದಾಗ ಅನಿಸಬಹುದು. 
ಇದು ಅವರಿವರ ಮಾತಲ್ಲ, ನಿನ್ನದೇ ಮಾತು!