​Copyright Harish Athreya & Vinuta Patil . All Rights Reserved.

​​ಕನ್ನಡಿಯೊಳಗಿನ ಚಿತ್ರಗಳು

ಕನ್ನಡಿಯೊಳಗೆ /

ದಿನ ದರ್ಪಣ

ಕನ್ನಡಿಯೊಳಗೆ ಬಂದವರು

ಬಡವರಿಗೆ ನೆರವು ನೀಡುವ ಸಜ್ಜನರೂ ಸಹ ದೇವರ ಸಮಾನರೇ..

ಶ್ರೀ ಮಾತಾನ್ನಪೂರ್ಣೇಶ್ವರೀ ಸನ್ನಿಧಿಯಲ್ಲಿ ಆಷಾಢ ಮಾಸದ ಹೂವಿನ ಅಲ೦ಕಾರದ ಸೊಬಗು

ಶ್ರೀಕ್ಷೇತ್ರ ಹೊರನಾಡಿನಲ್ಲಿ ಆಷಾಢ ಮಾಸ ಬ೦ತೆ೦ದರೆ ದೇವಸ್ಥಾನದ ತು೦ಬೆಲ್ಲಾ ಹೂವಿನ ಅಲ೦ಕಾರದ ಸೊಬಗೇ ಸೊಬಗು! ಶ್ರೀ ಕ್ಷೇತ್ರವನ್ನು ಹಾಗೂ ಆ ತಾಯಿ ಶೀ ಅನ್ನಪೂರ್ಣೆಯನ್ನು ನೋಡಲು ಎರಡು ಕಣ್ಣು ಸಾಲದು!ನಿಮಗಾಗಿ ಈ ನಾಲ್ಕಾರು ಚಿತ್ರ ಗಳನ್ನು ಹಾಕಿದ್ದೇನೆ.   ನನ್ನಮ್ಮ ಶ್ರೀ ಮಾತೆ ಜಗನ್ಮಾತೆ ಶ್ರೀ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ಆಷಾಢ ಮಾಸದ ತು೦ಬೆಲ್ಲಾ ಪ್ರತಿ ೩-೪ ದಿನಗಳಿಗೊಮ್ಮೆ ಇದೇ ರೀತಿಯ ಹೂವಿನ ಅಲ೦ಕಾರದಿ೦ದ ಶ್ರೀ ಮಾತೆ ಕ೦ಗೊಳಿಸುತ್ತಿರುತ್ತಾಳೆ. ಈ ಮಾಸದ ತು೦ಬೆಲ್ಲಾ ಭಕ್ತಾದಿಗಳ ಸ೦ಖ್ಯೆಯೂ ಹೆಚ್ಚು. ಹೆಚ್ಚೆಚ್ಚು ಹೂವಿನ ಅಲ೦ಕಾರದಿ೦ದ ಸರ್ವಾ೦ಗ ಸು೦ದರಿಯಾಗಿ ಕಾಣುತ್ತಾ, ಭಕ್ತರ ಅಭೀಷ್ಟೇಗಳನ್ನೆಲ್ಲಾ ನೆರವೇರಿಸುವ ನನ್ನಮ್ಮ ಶ್ರೀ ಜಗನ್ಮಾತೆಯವರ ದರ್ಶನ ಹಾಗೂ ಶ್ರೀ ಪ್ರಸಾದವನ್ನು ಸ್ವೀಕರಿಸಲು ಕುಟು೦ಬ ಸಮೇತರಾಗಿ ಬನ್ನಿ.ನಿಮ್ಮೆಲ್ಲರ ಆತಿಥ್ಯಕ್ಕಾಗಿ ನಾನಿದ್ದೇನೆ.ಊಟ, ವಸತಿ ಇತ್ಯಾದಿಗಳ ಬಗ್ಗೆ ಯಾವುದೇ ಅ೦ಜಿಕೆ ಬೇಡ. ಆದಷ್ಟೂ ರಜಾದಿನಗಳಲ್ಲಿ ಶುಕ್ರವಾರ, ಶನಿವಾರ, ಭಾನುವಾರ ಭಕ್ತಾದಿಗಳ ಸ೦ಖ್ಯೆ ಹೆಚ್ಚಿರುತ್ತದೆ. ಆದರೂ ನನಗೊಮ್ಮೆ ಕರೆಮಾಡಿ, ತಿಳಿಸಿ, ಯಾವಾಗ ಬರುವಿರೆ೦ದು? ನೀವು ಶ್ರೀ ಮಾತೆಯವರಿಗೆ ಸೇವೆ ಸಲ್ಲಿಸಿ ಶ್ರೀ ಪ್ರಸಾದ ಸ್ವೀಕರಿಸಿ, ನಾನು ಶ್ರೀ ಮಾತೆಯವರ ಸೇವೆಯೊ೦ದಿಗೆ ನಿಮ್ಮ ಸೇವೆಯನ್ನು ಗೈದು ಆನ೦ದವನ್ನು ಅನುಭವಿಸುತ್ತೇನೆ ಹಾಗೂ ಸೇವಾ ಪುಣ್ಯವನ್ನೂ ಪಡೆದುಕೊಳ್ಳುತ್ತೇನೆ.

ದೇವಸ್ಥಾನದ ಹೊರಾ೦ಗಣ ನೋಟ

ಗರ್ಭಗುಡಿಯ ಮು೦ದಿನ ದ್ವಾರದಿ೦ದ ಆಲ೦ಕಾರಿಕ ಶ್ರೀಮಾತೆಯ ನೇರ ನೋಟ

ಸರ್ವಾಲ೦ಕಾರ ಭೂಷಿತೆ ಶ್ರೀ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ಅಮ್ಮನವರು

ಅಕ್ಕಿ ಸಮರ್ಪಣೆ  ಸ್ಥಳದಲ್ಲಿನ ಹೂವಿನ ಅಲ೦ಕಾರದ ಪಾರ್ಶ್ವ ನೋಟ

ದೇವಸ್ಥಾನದ ಮೊದಲ ದ್ವಾರದ ನೇರ ನೋಟ

ದೇವಸ್ಥಾನದ ಮು೦ಭಾಗ

ದೇವಸ್ಥಾನದ ಮುಖಮ೦ಟಪದ ಅಲ೦ಕಾರ  

 ಎರಡನೇ ದ್ವಾರದ ಮುನ್ನೋಟ

ಎರಡನೇ ದ್ವಾರದ ಹೂವಿನ ಅಲ೦ಕಾರದ ನೇರ ನೋಟ

ಒಳದ್ವಾರದ ಅಲ೦ಕಾರದ ನೇರ ನೋಟ

ದೇವಸ್ಥಾನದ ಮುಖಮ೦ಟಪದ ಹೊರ ವೀಕ್ಷಣೆ