ಸಾವಿನ ಸಂಖ್ಯೆ

ಸಾವುಗಳ ಅಂಕಿಅಂಶಗಳ ಹಿಂದೆ ಮತ್ತು ಚೀನಾದ ನಡವಳಿಕೆಯ ಬಗ್ಗೆ ಕುತೂಹಲದಿಂದ ಇಣುಕಿದಾಗ……

ವಿಶ್ವದಲ್ಲಿ ಮೇಲ್ನೋಟಕ್ಕೆ ಮೂರು ರೀತಿಯ ಚರ್ಮದ ಬಣ್ಣ ಹೊಂದಿರುವವರು ಹೆಚ್ಚು ಸಂಖ್ಯೆಯಲ್ಲಿ ಇದ್ದಾರೆ.

ಬಿಳಿಯ ಬಣ್ಣ,
ಕರಿಯ ಬಣ,
ಗೋದಿ ಬಣ್ಣ.

ಪಾಶ್ಚಾತ್ಯರೆಂದು ಕರೆಯಲ್ಪಡುವ ಯೂರೋಪ್, ಅಮೆರಿಕ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮುಂತಾದ ದೇಶಗಳಲ್ಲಿ ಬಹುತೇಕ ಬಿಳಿ ವರ್ಣೀಯರು,
ಆಫ್ರಿಕಾ ಮತ್ತು ಅಮೆರಿಕದ ಕೆಲವು ಭಾಗಗಳಲ್ಲಿ ಕಪ್ಪು ವರ್ಣೀಯರು,
ಭಾರತ, ಚೀನಾ, ಜಪಾನ್, ಕೊರಿಯಾ, ವಿಯೆಟ್ನಾಂ ಸೇರಿ ಏಷ್ಯನ್ ದೇಶಗಳ ಜನರದು ಒಂದು ರೀತಿಯ ಕಪ್ಪು ಬಿಳುಪಿನ ಮಿಶ್ರಣದ ಗೋದಿ ಬಣ್ಣ.

ಕೊರೋನಾ ವೈರಸ್ ಗೆ ಇಲ್ಲಿಯವರೆಗೂ ಮರಣ ಹೊಂದಿದವರು ಸಂಖ್ಯೆ ಸುಮಾರು ‌37500. ಅದರಲ್ಲಿ ಸುಮಾರು 32500 ಬಿಳಿ ಚರ್ಮದ ಜನರೇ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದು ಅಂಕಿ ಸಂಖ್ಯೆಗಳ ಮೇಲೆ ಕಂಡು ಬರುತ್ತಿರುವ ಮಾಹಿತಿ.

ಆಫ್ರಿಕಾ ಮತ್ತು ಏಷ್ಯಾದ ರಾಷ್ಟ್ರಗಳಲ್ಲಿ ಈ ಕ್ಷಣದವರೆಗೆ ಸ್ವಲ್ಪ ಮಟ್ಟಿನ ನಿಯಂತ್ರಣವಿದೆ. ಇರಾನ್ ಸಹ ಕೆಂಪು ಮಿಶ್ರಿತ ಬಿಳಿ ಬಣ್ಣದ ಜನರನ್ನು ಹೊಂದಿದೆ.

ಇಲ್ಲಿ ಏನಾದರೂ ಎಡವಟ್ಟು ಆಗಿದೆಯೇ ? ಉದ್ದೇಶ ಪೂರ್ವಕವೇ ? ಸಹಜ ಸ್ವಾಭಾವಿಕವೇ ? ನಿರ್ಧಿಷ್ಟವಾಗಿ ಈ ವೈರಸ್ ನಿರೋಧಕ ಶಕ್ತಿ ಬಿಳಿಯರಲ್ಲಿ ಕಡಿಮೆ ಇದೆಯೇ ?

ಇತರ ಅಭಿವೃದ್ಧಿ ಶೀಲ ದೇಶಗಳಿಗೆ ಹೋಲಿಸಿದರೆ ಈ ಪಾಶ್ಚಾತ್ಯರ ಪರಿಸರ ಹಾನಿ ತುಂಬಾ ಕಡಿಮೆ ಇದೆ. ಸ್ವಿಟ್ಜರ್ಲೆಂಡ್‌‌, ನಾರ್ವೆ, ಸ್ಪೇನ್, ಜರ್ಮನಿ, ಫ್ರಾನ್ಸ್, ಬೆಲ್ಜಿಯಂ,ಇಟಲಿ, ಅಮೆರಿಕ ಮುಂತಾದ ದೇಶಗಳು ಪ್ರಾಕೃತಿಕವಾಗಿ ಸಾಕಷ್ಟು ಸುಂದರ ಮತ್ತು ಸ್ವಚ್ಛ ನಗರಗಳನ್ನು ಹೊಂದಿವೆ. ಜನಸಂಖ್ಯೆ ಮಿತವಾಗಿದೆ. ಆಹಾರದ ಗುಣಮಟ್ಟ ಉತ್ತಮವಾಗಿದೆ. ದೇಹ ರಚನೆ ಬಲಿಷ್ಠವಾಗಿದೆ. ಶ್ರೀಮಂತಿಕೆ ಇದೆ. ದೈಹಿಕವಾಗಿ ಹೆಚ್ಚಿನ ಸಾಮರ್ಥ್ಯ ನಿರೀಕ್ಷಿಸುವ ಕ್ರೀಡೆಗಳಲ್ಲಿ ಇವುಗಳ ಸಾಧನೆ ಚೆನ್ನಾಗಿದೆ.

ಆದರೂ ಈ ಸಾವಿನ ಸಂಖ್ಯೆ ಇವರ ಬೆನ್ನು ಬಿದ್ದಿದೆ. ಶೀತವಲಯದ ಪ್ರದೇಶಗಳು ಎಂದು ಹೇಳಲು ಇದು ಇನ್ನೂ ಖಚಿತಪಟ್ಟಿಲ್ಲ. ಇದು ಕುತೂಹಲ ಮೂಡಿಸುತ್ತಿದೆ. Of course, ಇದು ತುಂಬಾ ಆರಂಭಿಕ ಹಂತ ಮತ್ತು ಇನ್ನಷ್ಟು ಸಮಯ ಮತ್ತು ಅಧ್ಯಯನದ ಅವಶ್ಯಕತೆ ಇದೆ.

ಇನ್ನೊಂದು ಆಸಕ್ತಿಕರ ವಿಷಯವೆಂದರೆ, ಈ ರೋಗಾಣುವಿನ ಎಲ್ಲಾ ಸಾಂದರ್ಭಿಕ ಸನ್ನಿವೇಶಗಳು ಚೀನಾದತ್ತಲೇ ಬೊಟ್ಟು ಮಾಡುತ್ತಿದೆ. ಈ ಕೊರೋನಾ ಸಹಜ ಸೃಷ್ಟಿಯೋ ಅಥವಾ ಚೀನಾದ ಜೈವಿಕಾಸ್ತ್ರ ಪ್ರಯೋಗದ ಕೃತಕ ಸೃಷ್ಟಿಯೋ ಎಂಬ ಅನುಮಾನ ಕೆಲವು ರಾಷ್ಟ್ರಗಳಿಗೆ ಇದೆ. ಈ ಕ್ಷಣದವರೆಗೂ ಇದು ಖಚಿತವಾಗಿಲ್ಲ. ಅಲ್ಲಿಯವರೆಗೂ ಸ್ವಲ್ಪ ಸಂಯಮದ ಅವಶ್ಯಕತೆ ಇದೆ. ಏಕಾಏಕಿ ಒಂದು ಅಭಿಪ್ರಾಯ ಅದೂ ಒತ್ತಡದ ಸಮಯದಲ್ಲಿ ಒಳ್ಳೆಯದಲ್ಲ.

ಏಕೆಂದರೆ, ವಿಶ್ವದ ಬಲಿಷ್ಟ ಬೇಹುಗಾರಿಕೆ ವ್ಯವಸ್ಥೆಯನ್ನು ಹೊಂದಿರುವ ಇಸ್ರೇಲ್, ಅಮೆರಿಕ, ಸ್ಕಾಟ್ ಲ್ಯಾಂಡ್ ಮುಂತಾದ ದೇಶಗಳು ಬಹುಶಃ ಈಗಾಗಲೇ ಈ ನಿಟ್ಟಿನಲ್ಲಿ ಮಾಹಿತಿ ಸಂಗ್ರಹಿಸುವ ಕೆಲಸ ಪ್ರಾರಂಭಿಸಿರುತ್ತಾರೆ.

ಏನೇ ಆದರೂ ಈ ವೈರಸ್ ವಿಶ್ವವನ್ನು ಮತ್ತೊಂದು ಮಗ್ಗುಲಿಗೆ ಹೊರಳಿಸುವುದು ಖಚಿತ. ಚೀನಾದ ಮೇಲೆ ಅನುಮಾನದ ಕಾರ್ಮೋಡ ಹೆಚ್ಚಾದಂತೆ ಮೊದಲನೇ ಮಹಾಯುದ್ಧ ನಂತರದ ಘಟನೆಗಳು, ಜರ್ಮನರಿಗೆ ಆದ ಅವಮಾನ, ಅದರಿಂದಾಗಿ ಜಾಗೃತವಾದ ಸ್ವಾಭಿಮಾನ, ಜನಾಂಗೀಯ ಶ್ರೇಷ್ಠತೆ ಮತ್ತು ರಾಷ್ಟ್ರೀಯತೆ, ಹಿಟ್ಲರ್ ಎಂಬ ಸರ್ವಾಧಿಕಾರಿಯ ಉಗಮ ಮತ್ತು ಆತನಿಗೆ ಸಿಕ್ಕ ಬೆಂಬಲ, ಎರಡನೇ ಮಹಾಯುದ್ಧ, ಹಿರೋಷಿಮಾ ನಾಗಸಾಕಿ ದುರಂತ, ಇಡೀ ಯುದ್ದದಿಂದ 38 ಲಕ್ಷಕ್ಕೂ ಹೆಚ್ಚು ಜನರ ಸಾವು ಎಲ್ಲವೂ ನೆನಪಾಗುತ್ತಿದೆ.

ಒಂದು ವೇಳೆ ಇದೇ ರೀತಿಯ ಒತ್ತಡ ಚೀನಾ ದೇಶದ ಮೇಲೆ ಹೇರಿದರೆ ಅದೂ ಸಹ ಕೆರಳಬಹುದು. ಈಗಾಗಲೇ ಅಮೆರಿಕ ವಿರೋಧಿ ದೇಶಗಳಾದ ಉತ್ತರ ಕೊರಿಯಾ, ಇರಾನ್, ಇರಾಕ್‌, ರಷ್ಯಾ, ಮುಂತಾದ ರಾಷ್ಟ್ರಗಳು ಒಗ್ಗೂಡಬಹುದು. ಇದು ಕೊರೋನಾ ವೈರಸ್ ಗಿಂತಲೂ ವಿಶ್ವವನ್ನು ವಿನಾಶದ ಅಂಚಿಗೆ ತಳ್ಳಬಹುದು.

ಯುದ್ಧದಲ್ಲಿ ಅಮೆರಿಕ ನೇತೃತ್ವದ ಪಡೆಯೇ ಅಂತಿಮವಾಗಿ ಜಯಿಸುವ ಸಾಧ್ಯತೆ ಇದ್ದರೂ ಮನುಷ್ಯ ಜನಾಂಗ ಅಳಿವಿನ ಅಂಚಿಗೆ ಅಥವಾ ಅನಾಗರಿಕತೆಗೆ ಬಂದು ನಿಲ್ಲಬಹುದು.

ಒಂದು ವೇಳೆ ಚೀನಾದ ಕುತಂತ್ರ ಬಯಲಾದರೆ, ಮಾನವ ಇತಿಹಾಸದಲ್ಲಿ ದಾಖಲಾಗಬಹುದಾದ ಅತ್ಯಂತ ಕ್ರೌರ್ಯದ ಘಟನೆಗಳಲ್ಲಿ ಎರಡನೇ ಸ್ಥಾನ ಪಡೆಯಬಹುದು. ಮೊದಲನೆಯ ಸ್ಥಾನ ಈವರೆಗೆ ಹಿಟ್ಲರನ‌ ಯಾತನಾ ಶಿಬಿರಗಳಿಗೆ ಸೇರುತ್ತದೆ.

ಅಲ್ಲದೆ, ಮೂರನೆಯ ಮಹಾಯುದ್ಧ ತಪ್ಪಿಸಲು ವಿಶ್ವಸಂಸ್ಥೆಯ ನೇತೃತ್ವದಲ್ಲಿ ಚೀನಾದ ಮೇಲೆ ಯುದ್ಧ ಹೊರತುಪಡಿಸಿ ಇತರ ಕ್ರಮಗಳ ಆಯ್ಕೆ ಪರಿಗಣಿಸಬೇಕು, ಮಾನವ ಜನಾಂಗದ ಉಳಿವಿಗಾಗಿ…..

ಒಂದು ಕಡೆ ಚೀನಾದ ಮಹತ್ವಾಕಾಂಕ್ಷೆ, ಇನ್ನೊಂದು ಕಡೆ ಅಮೆರಿಕದ ಮಹತ್ವಾಕಾಂಕ್ಷೆ, ಇದರ ನಡುವೆ ಕೊರೋನಾ ವೈರಸ್, ಭಯದಲ್ಲಿ ಸಾಮಾನ್ಯ ಜನ. ಮುಂದೆ……………………………

Leave a Reply

Your email address will not be published. Required fields are marked *

Related Post

ಹೊಳೆಯಲ್ಲಿ ಇಳಿದ ಮೇಲೆ ಮಳೆಯಾದರೇನು? ಚಳಿಯಾದರೇನು?!!ಹೊಳೆಯಲ್ಲಿ ಇಳಿದ ಮೇಲೆ ಮಳೆಯಾದರೇನು? ಚಳಿಯಾದರೇನು?!!

“ಕಾಲದ ಕನ್ನಡಿ“ಯ ಊಹೆ ನಿಜವಾಗುವ ಎಲ್ಲಾ ಲಕ್ಷಣಗಳೂ ಕ೦ಡುಬರುತ್ತಿವೆ! ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧೀ ಆ೦ದೋಲನ ಠುಸ್ಸಾಗುವ ಎಲ್ಲಾ ಸಾಧ್ಯತೆಗಳೂ ಇವೆ! ಇಲ್ಲಿ ನಾನೀಗ ಹೇಳ ಹೊರಟಿರುವುದು ಅಣ್ಣಾ ಹಜಾರೆಯವರ ಶಕ್ತಿ ಕು೦ದಿತೆ೦ದಲ್ಲ… ಅಥವಾ ಉತ್ತರ ಕುಮಾರನ ಪೌರುಷವನ್ನು ಅಣ್ಣಾ ಹಜಾರೆ ತೋರಿಸಿದರೆ೦ದಲ್ಲ! ಬದಲಾಗಿ ಹೇಗೆ ನಾವೇ ಆರಿಸಿ

ಆಳುವವರ ತಲೆ ಕೆಟ್ಟರೆ ಹಾಳು ನಿರ್ಧಾರಗಳನ್ನೇ ತೆಗೆದುಕೊಳ್ಳೋದು!!ಆಳುವವರ ತಲೆ ಕೆಟ್ಟರೆ ಹಾಳು ನಿರ್ಧಾರಗಳನ್ನೇ ತೆಗೆದುಕೊಳ್ಳೋದು!!

ಮೊಹಮ್ಮದ್ ಬಿನ್ ತುಘಲಕ್ ಒಬ್ಬ ವಿದ್ವಾ೦ಸ ಆದರೆ ಹುಚ್ಚ!! ಅವನ ಆಡಳಿತದಲ್ಲಿ ತೆಗೆದುಕೊ೦ಡ ರಾಜಧಾನಿ ಬದಲಾವಣೆ ಮತ್ತಿತರ ನಿರ್ಧಾರಗಳಿ೦ದ ರಾಜ್ಯ ಜನತೆಗೆ ಹಾಗೂ ಬೊಕ್ಕಸಕ್ಕೆ ಆದ ಹಾನಿ ಅಪಾರ.. ಅ೦ತೆಯೇ ಅವನನ್ನು “ ವಿರೋಧಾಭಾಸಗಳ ಮಿಶ್ರಣ“ ವೇ೦ದೇ ಇತಿಹಾಸದಲ್ಲಿ ಗುರುತಿಸಲಾಗುತ್ತದೆ! ಈ ವರ್ಷ ಕರ್ನಾಟಕದ ಸುಮಾರು ೧೦೦ ಕ್ಕೂ

ಇದೆಲ್ಲಾ ನಮ್ಮದೇ ದುಡ್ಡು ಸ್ವಾಮಿ !!!ಇದೆಲ್ಲಾ ನಮ್ಮದೇ ದುಡ್ಡು ಸ್ವಾಮಿ !!!

 ನಿನ್ನೆ ನನ್ನ ಆತ್ಮೀಯ ಮಿತ್ರ ಚಿಕ್ಕಮಗಳೂರಿನ ಗಿರೀಶ್ ನನ್ನ ಚರವಾಣಿಗೆ ಒ೦ದು ಸ೦ದೇಶ ಕಳುಹಿಸಿದರು. ನಾನು ಅದನ್ನು ಓದಿ ಕಾಲದ ಕನ್ನಡಿಯ ಹೊಸ ಲೇಖನಕ್ಕೊ೦ದು ವಿಷಯವಾಯಿತು ಎ೦ದುಕೊ೦ಡು, ಅವರಿಗೆ ಫೋನಾಯಿಸಿ, “ಏನಣ್ಣಾ, ಇದು ಸತ್ಯವೇ?“  ಹೌದು ನಾವಡರೇ, ನಾನು ನ೦ಬಬಹುದೇ? ನೂರಕ್ಕೆ ನೂರು! ಹಾಗೆಯೇ ನಿಮ್ಮೆಲ್ಲಾ ಮಿತ್ರರಿಗೂ ಇದನ್ನು