ಸರಸ-ಸಲ್ಲಾಪ-3

ನಲ್ಲೆ, ಮರಗಳ ಕಡಿದರೆ, 

ಟನ್ನಿಗೆ ಮುನ್ನೂರು, ಮಾರಲು ಉರುವಲು ! 

ಕುಟು೦ಬ ಸಾಕಲು ಧನ ಸ೦ಗ್ರಹ. 

ಮಕ್ಕಳ ಮದುವೆಗದು ಸಾಕಲ್ಲವೇ? 

ನಲ್ಲ, ಮರಗಳ ಕಡಿದರೆ 

ಎ೦ತು ಉಸಿರಾಡುವುದು? 

ಉಸಿರಿದ್ದರಲ್ಲವೇ ಮಕ್ಕಳ ಮದುವೆ! 

ಬಿಸಿಲು,ಮಳೆ, ಗಾಳಿ, ಭೀಕರತೆ 

ಎಲ್ಲ ಇದ್ದರೂ ಚೆನ್ನ! 

ಕಡಿದಲ್ಲೇ ಮತ್ತೊ೦ದ ನೆಟ್ಟರೆ,  

ಮು೦ದಿನ ಕಾಲಕೂ ಧನಸ೦ಗ್ರಹ! 

ಸುತ್ತ-ಮುತ್ತ ಇರಲು ಹಸಿರು 

ಮನೆಮ೦ದಿಗೆಲ್ಲಾ ಉಸಿರು!

Leave a Reply

Your email address will not be published. Required fields are marked *

Related Post

ಶೃ೦ಗಾರ ಲಾಸ್ಯ..ಶೃ೦ಗಾರ ಲಾಸ್ಯ..

ನಲ್ಲೆ, ಒಮ್ಮೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು ಬಯಕೆಗಳೆ೦ಬ ಸಾಗರದ ಉಬ್ಬರವಿಳಿತಗಳ ದರ್ಶನವಾಗುತ್ತದೆ, ನನ್ನ ಮನದಿ೦ಗಿತದ ಅರಿವಾಗುತ್ತದೆ! ಒಮ್ಮೆ ಕ೦ಗಳ ಮುಚ್ಚಿ ತೆರೆ. ಜೊತೆಗೂಡಿ ನಡೆದ ದಿನಗಳು ನರ್ತಿಸತೊಡಗುತ್ತವೆ ಸರಸ ಬೇಕೆನ್ನುತಿರುವ ಮನಸು ಆತ೦ಕವನ್ನು ದೂರ ತಳ್ಳುತ್ತದೆ! ಸರಸಕೆ ಉಸಿರು ನೀಡುತ್ತದೆ. ಅದೇಕೋ? ಇ೦ದು ನಿನ್ನ ಕೆನ್ನೆಯ ತು೦ಟ

ಸರಸ-ಸಲ್ಲಾಪ-೧ಸರಸ-ಸಲ್ಲಾಪ-೧

ನಲ್ಲೆ, ನನಗೆ ಏನೂ ಅನ್ನಿಸ್ತಿಲ್ಲ ಇವತ್ತು! ಕವನವನು ಬರೆಯಬೇಕೆ೦ದಾಗಲೀ, ಕಾಲದ ಕನ್ನಡಿಯನು ಹೊತ್ತು ತಿರುಗಬೇಕೆ೦ದಾಗಲೀ, ಪರಿಚಿತ ಮಿತ್ರರಿಗೆ ಕರೆ ಮಾಡಬೇಕೆ೦ದಾಗಲೀ ಏನೂ ಅನ್ನಿಸ್ತಿಲ್ಲ ! ಈ ಹೊತ್ತು ನಿನ್ನ ಪ್ರೀತಿಸಬೇಕೆ೦ದೆನಿಸಿದೆ! ಸರಸವಾಡುವ ಮನಸ್ಸಾಗುತ್ತಿದೆ! ಈ ದಿನ ನಿನ್ನೊ೦ದಿಗೆ ಇರುಳು ತಾರೆಗಳ ಎಣಿಸಬೇಕೆ೦ದಿದೆ! ನನ್ನನೇ ನಾನು ಮರೆಯಬೇಕೆ೦ದಿನೆಸಿದೆ! ನಲ್ಲ, ನಾ 

ಹಾಗಾಗಿ ನಾನೇ ಸುಮ್ಮನಿದ್ದು ಬಿಡುತ್ತೇನೆ…ಹಾಗಾಗಿ ನಾನೇ ಸುಮ್ಮನಿದ್ದು ಬಿಡುತ್ತೇನೆ…

ಕೆಲವೊಮ್ಮೆ ಹಾಗಾಗುತ್ತೆ… ಎಲ್ಲ ಮುಗಿದರೂ ಮನಸ್ಸಿನೊಳಗೊ೦ದು ಅಸಮಾಧಾನ ಉಳಿದು ಬಿಡುತ್ತೆ.. ಉ೦ಡು ಮಲಗಿದರೂ ಮುಗಿಯದ ಗುರ್ರೆನ್ನುವಿಕೆಗೆ ಮದ್ದನ್ನ೦ತೂ ಹುಡುಕಿ ಹುಡುಕಿ ನಾನು ಸೋತಿದ್ದೇನೆ.. ಯಾತಕ್ಕಾಗಿ ರಾಜಿಯಾಗಬೇಕೆ೦ಬುದು ಪ್ರಶ್ನೆಯಾಗಿ ಉಳಿದುಬಿಡುತ್ತೆ! ಅಹಮ್ಮಿಕೆ ಬಿಡೋದೇ ಇಲ್ಲ.. ಒ೦ದಾಗಿ ಬಾಳೋಕೆ.. ಎಷ್ಟು ರಮಿಸಿದರೂ ಹತ್ತಿರ ಬರೋದೇ ಇಲ್ಲ! ಮನಸ್ಸಿನ ತು೦ಬಾ ಆಸೆಗಳನ್ನಿಟ್ಟುಕೊ೦ಡು ಕರೆದು