ಸಮಾಜದ ದೃಷ್ಟಿಯಲ್ಲಿ ಸ್ತ್ರೀ, ಸ್ತ್ರೀವಾದ, ಸ್ತ್ರೀಧರ್ಮ.

या देवी सर्वभूतेशु मात्र रूपेण संस्थिता।

नमस्तस्यै नमस्तस्यै नमस्तस्यै नमो नम: ।।

ಎಲ್ಲದರಲ್ಲಿಯೂ ತಾಯಿಯ ರೂಪದಲ್ಲಿ ನೆಲೆಸಿರುವ, ಸಮಸ್ತ ಜಗತ್ತಿಗೆ ತಾಯಿಯಾಗಿರುವ ದೇವಿಗೆ ನನ್ನ ಪ್ರಣಾಮಗಳು.

ನಮ್ಮ ಜಗತ್ತು ಪುರುಷ ಹಾಗು ಪ್ರಕೃತಿಯ ಅಂಶಗಳಿಂದ ನಿರ್ಮಿತವಾದದ್ದು. ಆಸ್ತಿಕನಾಗಿರಲಿ ನಾಸ್ತಿಕನಾಗಿರಲಿ, ಪುರಾಣ ನಂಬಲಿ ಬಿಡಲಿ, ಕಣ್ಣೆದುರಿರುವ ಪುರುಷ ಪ್ರಕೃತಿಯ ರೂಪವಾಗಿರುವ ಗಂಡು ಹಾಗು ಹೆಣ್ಣನ್ನು ಕಂಡೇ ಇರುತ್ತಾರೆ. ಸಮಾನತೆಯ ತದ್ರೂಪಿಯಾಗಿರುವ ಹಿಂದೂ ಪುರಾಣಗಳಲ್ಲಿ ಬರುವಂತೆ, ಪುರುಷನಾಗಿರುವ ಶಿವ ಹಾಗು ಪ್ರಕೃತಿಯಾಗಿರುವ ಶಿವೆಯ ಸಮಾನತೆಯ ಪ್ರತಿ ಅರ್ಧನಾರೀಶ್ವರ ರೂಪ. ಹಿಂದೂ ಪರಂಪರೆಯ ಭಾರತದಲ್ಲಿ, ಸ್ತ್ರೀಯ ಮಹತ್ವ ಪುರುಷನಿಗಿಂತ ಹೆಚ್ಚಿದೆ ಎಂಬುದನ್ನು ನಾವು ತಿಳಿದಿರಬೇಕು. ಯಾವುದೇ ದೇಶ ಕಾಲ ಸಂದರ್ಭಗಳನ್ನು ತೆಗೆದುಕೊಂಡರೂ, ಜೀವನದ ಹಾದಿಯಲ್ಲಿ ಮಹಿಳೆಯ ಮಹತ್ವ ಹೆಚ್ಚು. ಕಾಲಾಂತರದಲ್ಲಿ ಸಾಮಾಜಿಕ ಮಟ್ಟದಲ್ಲಿ ಮಹತ್ವವು ಗುರುತಿಸದೇ ಹೋಗುದ್ದರೂ, ಗುಣ ನಶಿಸಿ ಹೋಗುವುದಿಲ್ಲ. ಈ ಜಗತ್ತಿನಲ್ಲಿ ಯಾವುದೇ ಸಣ್ಣ ಕ್ರಿಮಿ ಕೀಟಗಳನ್ನು ತೆಗೆದುಕೊಂಡರೂ ಮತ್ತೊಂದು ಜೀವವನ್ನು ಭುಮಿಗೆ ತರಲು ಹೆಣ್ಣೇ ಬೇಕು. ಹಾಗಾಗಿ ಹೆಣ್ಣು.

ಸಮಾಜ, ಕುಟುಂಬ ಹಾಗು ಸ್ತ್ರೀ ಸಂಬಂಧ.

ಸಮಾಜವೆಂದರೆ ಅನೇಕ ಜನ, ಗುಣ, ಅಭಿಪ್ರಾಯ, ರೀತಿ, ನೀತಿಗಳ ಒಂದು ಗುಂಪು. ಅದರಲ್ಲಿ ಪ್ರತಿಯೊಬ್ಬರೂ ಅವರದ್ದೇ ಆದ ಆಚಾರ ವಿಚಾರಗಳಿಗೆ ಹೊಂದಿರುತ್ತಾರೆ. ಸಾಮಾನ್ಯವಾಗಿ ಒಪ್ಪಿಗೆ ಆಗುವಂತಹ ನೀತಿ ನಿಯಮಗಳನ್ನು ನಿರ್ಣಯಿಸುವ ಒಂದು ಅಂಗ.

ಸಮಾಜದಲ್ಲಿ ನಾವು ಬದುಕಬೇಕೆಂದರೆ ಪ್ರತಿ ಸಂದರ್ಭದಲ್ಲಿಯೂ ನಮಗೆ ಇಷ್ಟ ಬಂದಂತೆ, ತೋಚಿದಂತೆ ವರ್ತಿಸಲು ಸಾಧ್ಯವಿಲ್ಲ. ಇದನ್ನು ನಾವು ಹುಟ್ಟಿನಿಂದಲೂ ಸಂಸ್ಕಾರದ ರೂಪದಲ್ಲಿ ಸಾಮಾಜಿಕವಾಗಿ ಒಪ್ಪಿಗೆಯಾಗುವಂತಹ ನಡವಳಿಕೆಯನ್ನು ರೂಢಿಸಿಕೊಳ್ಳಬೇಕು. ಇದನ್ನು ಚಿಕ್ಕ ವಯಸ್ಸಿನಿಂದ ತಿದ್ದಲು ತಂದೆತಾಯಿಯರು ಬೇಕು. ಹುಟ್ಟಿನಿಂದಲೂ ಯಾವುದೇ ಮಗುವು ಹೆಚ್ಚು ಒಡನಾಡುವುದು ತಾಯಿಯೊಂದಿಗೆ ಮಾತ್ರ. ಉಳಿದವರ ಜೊತೆ ಬೆರೆತರೂ, ಅಗಾಧ ಸಂಸ್ಕಾರಗಳನ್ನು ಕಲಿಸಲು, ತಿಡ್ಡಿ ತೀಡಲು ಕೇವಲ ತಾಯಿಯಿಂದ ಮಾತ್ರ ಸಾಧ್ಯ. ಹೀಗಾಗಿ ಸಮಾಜದಲ್ಲಿ ನೀತಿ ನಿಯಮಾವಳಿಗಳಿದ್ದರೆ, ಅದನ್ನು ಮಾಡಿದವರೂ ಸಹ ತಮ್ಮ ತಾಯಂದೀರಿನಿಂದ ದೊರೆತ ಸಂಸ್ಕಾರದಿಂದಲೇ. ಹೀಗಾಗಿ ಹೆಣ್ಣು ಸಮಾಜಕ್ಕೆ ಅತ್ಯವಶ್ಯಕ. ಇಂದಿನ ಸಮಾಜ ಹೀಗಿರುವುದಕ್ಕೆ ಹಿಂದಿನ ಕಾಲದ ಸ್ತ್ರೀಯರಲ್ಲಿದ್ದ ಗುಣಗಳು ಕಾರಣ. ಅದೇ ರೀತಿ ಮುಂದಿನ ಸಮಾಜ ಹೇಗಿರಬಹುದು ಎಂಬುವುದಕ್ಕೆ ಉತ್ತರ ಇಂದಿನ ಮಹಿಳೆಯರ ಸಂಸ್ಕಾರ. ಅದಕ್ಕೆ ಪ್ರತಿಯಾಗಿ ಹೆಣ್ಣು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಒದಗಿಸುವುದ ಇಂದಿನ ಸಮಾಜದ ಕರ್ತವ್ಯ.ಈ ಕಾರಣಕ್ಕಾಗಿ ಸಮೂಜ ಹಾಗು ಸ್ತ್ರೀ ನಾವು ಬದುಕುವ ಪ್ರಪಂಚದ ಪ್ರಮುಖ ಅಂಶಗಳು.

ಆದರೆ ಅದೇ ಸಮಾಜ ಒಂದು ಹೆಣ್ಣನ್ನು ವಿವಿಧ ರೂಪದಿಂದ ಕಾಣುತ್ತದೆ. ತರುಣಿಯಾದಾಗ ಒಂದು ರೀತಿ, ಮಕ್ಕಳಾದಾಗ ಒಂದು ಹಾಗು ವಿಧವೆಯಾದರೆ ಮತ್ತೊಂದು. ಸ್ತ್ರೀ ಸಮಾಜದ ಮೂಲವಾದರೂ, ಸಮಾಜಕ್ಕೆ ಹೆಣ್ಣಿನ ಮಹತ್ವ ಸಂಪೂರ್ಣ ಅರಿವಿರುವುದಿಲ್ಲ.

ಯಾವುದೇ ಮನೆಯಲ್ಲಿ ಸ್ತ್ರೀ ಸ್ಥಿರವಾಗಿ ನಿಂತರೆ, ಆ ಮನೆಯನ್ನು ಯಾರೂ ಮುರಿಯಲು ಸಾಧ್ಯವಿಲ್ಲ ಎನ್ನುತ್ತಾರೆ. ಇದು ಏಕೆ?

ಒಂದು ಮನೆಯಲ್ಲಿ ಸ್ತ್ರೀ ಹಾಗು ಪುರುಷರು ಸಮಾನವಾದ, ಹೋಲಿಕೆ ಇಲ್ಲದ ಜವಾಬ್ದಾರಿಗಳನ್ನು ಹೊತ್ತಿರುತ್ತಾರೆ. ಸಾಮಾನ್ಯವಾಗಿ ಪುರುಷ ದುಡಿದರೆ, ಹೆಣ್ಣು ಮನೆಯವರನ್ನು ಪೋಷಿಸುವ ಜವಾಬ್ದಾರಿ. ಪೋಷಣೆಗೆ ಹಣದ ಅಗತ್ಯ, ಹಣಕ್ಕೆ ಪೋಷಣೆಯ ಅವಶ್ಯಕತೆ. ಹೀಗಾಗಿ ಇವೆರಡೂ ಬೇರ್ಪಡಿಸಲಾಗದ ಜವಾಬ್ದಾರಿಗಳು. ಆದರೆ ಇಂದಿನಕಾಲಕ್ಕೆ ಜವಾಬ್ದಾರಿ ಮಿಶ್ರಿತವಾಗಿ, ಯಾವುದೂ ಸಂಪೂರ್ಣವಾಗದಿರುವ ಹಂತಕ್ಕೆ ಬಂದು ನಿಂತಿದೆ. ಸ್ತ್ರೀ ಸ್ವಾತಂತ್ರ್ಯವೆಂಬುದು ಕೇವಲ ಧನದ ಮೂಲಕ ಅಳೆಯುವಂತಾಗಿದೆ. ಹಾಗೆಂದು ಅದು ತಪ್ಪು ಎಂದೂ ಹೇಳುತ್ತಿಲ್ಲ. ಆಗಿನಕಾಲದಿಂದ ಇಂದಿನವರೆಗೂ ಗ್ರಾಮೀಣ ಪ್ರದೇಶಗಳಿಗೆ ತೆರಳಿದರೆ ಭಾರತೀಯ ನಾರಿಯ ನಿಜ ಸ್ವಾತಂತ್ರ್ಯವನ್ನು ನಾವು ಕಾಣಬಹುದು.

ಅಲ್ಲಿನ ಮಹಿಳೆಯರು ಇಂದಿಗೂ ತಮ್ಮ ಜವಾಬ್ದಾರಿಯನ್ನು ಪೂರ್ಣಗೊಳಿಸಿಯೇ ಮನೆಗಳಿಗೆ ಕೆಲಸಕ್ಕೆ ತೆರಳುತ್ತಾರೆ. ಇದರ ಮೂಲಕ ಒಂದು ಸ್ತ್ರೀ ಜವಾಬ್ದಾರಿಗಳಲ್ಲಿ, ಮನೆ ಹಾಗು ಸಮಾಜ ಉದ್ಧಾರದಲ್ಲಿ ಪುರುಷನಿಗಿಂತ ಮೇಲುಗೈ ಎಂಬುದನ್ನು ನಾವು ಒಪ್ಪಲೇಬೇಕು. ನಾವು ಎಷ್ಟೇ ಕಾಲಕ್ಕೆ ತಕ್ಕಂತೆ ಬದಲಾದರೂ ಹೆಣ್ಣಿನ ಸರ್ವಕಾಲೀಕ ಗುಣವನ್ನು ಆಧುನಿಕ ಸಿದ್ಧಾಂತಗಳಿಂದ ಮರೆಮಾಚಲು ಎಂದಿಗೂ ಬಿಡಬಾರದು.

ಸರ್ವಕಾಲೀಕ ಸ್ತ್ರೀ ಗುಣಗಳು.

ಹೆಣ್ಣು ಪ್ರಕೃತಿಯ ಸ್ವರೂಪ. ಹೆಣ್ಣೊಬ್ಬಳೇ ಮತ್ತೊಂದ ಜೀವಕ್ಕೆ ಜನ್ಮ ನೀಡಲು ಸಾಧ್ಯ. ಇದು ಸರ್ವಕಾಲೀಕ ಸತ್ಯ. ಹೆಣ್ಣಿಂದ ಹೆಣ್ಣಿಗೆ ಗುಣಗಳು ಬದಲಾಗುತ್ತಾ ಬಂದರೂ ಹೆಣ್ಣಿನ ಮತ್ತೆೊಂದ ಮುಖ್ಯ ಗುಣವೆಂದರೆ ಅದು ವಾತ್ಸಲ್ಯ. ಇದು ಸಾಮಾನ್ಯ ಸತ್ಯ. ಯಾವುದೇ ತಾಯಿಯ ಬಳಿ ಒಂದು ಮಗು ಹೋಗಿ ಹಸಿವೆಂದು ಕೇಳಿದರೂ, ತನಗಿಲ್ಲದಿದ್ದರೂ ತಾಯಿ ತನ್ನ ಮಗುವಿಗೆ ಪೋಷಿಸುತ್ತಾಳೆ. ಹೀಗೆಂದು ತಂದೆ ಏನೂ ಮಾಡುವುದಿಲ್ಲವೆಂಬ ಅರ್ಥವಲ್ಲ, ಆದರೆ ತಾಯಿಯ ಕರುಳ ಸಮಾನವಲ್ಲ.

ಇನ್ನು ಈಗಿನ ಕಾಲಕ್ಕೆ ಬಂದರೆ ಈ ಗುಣಗಳು ಹೆಣ್ಣು ಮಕ್ಕಳಲ್ಲಿ ನಶಿಸಿಹೋಗಲು ಸಮಾಜ ನೆರವಾಗುತ್ತಿದೆ.

ವೇದಕಾಲದ ಸ್ತ್ರೀಯರು.

यत्र नार्यस्तु पूज्यन्ते रमन्ते तत्र देवता

यत्रैतास्तु पूजियन्ते सर्वास्तत्राफला क्रिया: ।।

ಎಲ್ಲಿ ಮಹಿಳೆಯನ್ನು ಆರಾಧಿಸಲ್ಪಡುವುದೊ, ಗೌರವಿಸಲ್ಪಡುವುದೊ ಅಲ್ಲಿ ದೈವೀಗುಣ ವಿಜ್ರುಂಭಿಸುತ್ತವೆ. ಆದರೆ ಯಾವ ಕಾಲದಲ್ಲಿ ಸ್ತ್ರೀಗೆ ಗೌರವ ದೊರಮಯುವುದಿಲ್ಲವೊ ಅಲ್ಲಿ ಯಾವುದೇ ತರಹದ ಉತ್ತಮ ಕಾರ್ಯಗಳಿಗೆ ಬೆಲೆ ಸಿಗುವುದಿಲ್ಲ.

ಪುರಾತನ ಕಾಲದಲ್ಲಿ ಮಹಿಳೆಯ ಭೂಷಣ, ವ್ಯಕ್ತಿತ್ವ ಮಾತುಕತೆಗಳಲ್ಲವೂ ಅಂದು ಅವರಿಗಿದ್ದ ಸಂಸ್ಕಾರ ಹಾಗು ಹಿಂದು ಧರ್ಮದ ವೈಶಿಷ್ಟ್ಯತೆಗಳನ್ನು ಎತ್ತಿ ಹಿಡಿಯುತ್ತಿದ್ದವು. ವೈಜ್ಞಾನಿಕತೆ ತುಂಬಿದ್ದ ಆಚರಣೆಗಳು, ಸಂಸ್ಕಾರ ತುಂಬಿದ್ದ ಕರ್ಮಗಳು ಹಾಗು ತತ್ವಯುತವಾದ ಮಾತುಗಳು ಸ್ತ್ರೀಯನ್ನು ಸಂಪೂರ್ಣಪಡಿಸಿದ್ದವು. ಇನ್ನು ನಾವು ವೇದಕಾಲದ ಮಹಿಳೆಯರು ಹಾಗು ಅವರಲ್ಲಿದ್ದ ಗುಣಗಳನ್ನು ತಿಳಿಯುವ ಪ್ರಯತ್ನ ಮಾಡೋಣ. ವೇದಕಾಲವೆಂದರೆ ನಮಗೆ ಮೊದಲಿಗೆ ನೆನಪಾಗುವುದು ಗಾರ್ಗಿ. ವೇದಾಂತ ಪರಿಣಿತೆಯಾಗಿ ವಿಶ್ವವನ್ನೇ ಬೆರಗಾಗಿಸಿದವರು. ಅಂದಿನ ಕಾಲದ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿ ವೇದ ಪಾಂಡಿತ್ಯ ಹೊಂದಲು ಪ್ರೇರೇಪಿಸಿದಳು.

ಆದರೆ ಈಗಿನ ವಾದಿಗಳು ಪ್ರಶ್ನಿಸುತ್ತಾರೆ - ಇಂತಹ ಪಾಂಡಿತ್ಯ ಹೊಂದಿದವರು ಕೇವಲ ಬೆರಳೆಣಿಕೆಯಷ್ಟು. ಉಳಿದ ಮಹಿಳೆಯರಿಗೆ ಸ್ವಾತಂತ್ರ್ಯ ಇತ್ತೇ? ಎಂದು.

ಜೀವನ ಕೇವಲ ಸ್ವಾತಂತ್ರ್ಯದ ಪ್ರಶ್ನೆಯಲ್ಲ . ಯಾವುದೇ ಮನುಷ್ಯನಿಗೆ ಬಾಹ್ಯಕ್ಕಿಂತ ಆಂತರಿಕ ಸ್ವಾತಂತ್ರ್ಯ ಮುಖ್ಯ. ಹಾಗು ಈ ಸ್ವಾತಂತ್ರ್ಯವನ್ನು ಯಾರೂ ಕಸಿಯಲು ಸಾಧ್ಯವಿಲ್ಲ. ಈಗಿನ ಕಾಲಕ್ಕಿಂತಲೂ ಆಗಿನ ಕಾಲದ ಸ್ತ್ರೀಯರಿಗೆ ಹೆಚ್ಚು ಪ್ರಾಮುಖ್ಯತೆ ಇತ್ತು. ಎಲ್ಲರೂ ಧರ್ಮಪಾಲಕರಾಗಿದ್ದಂತೆ, ಮಹಿಳೆಯರು ಸ್ತ್ರೀಧರಿಮವನ್ನು ಪಾಲಿಸುತ್ತಿದ್ದರು.

ಹಾಗಾದರೆ ಸ್ತ್ರೀ ಧರ್ಮ ಎಂದರೇನು? ಮುಂದಿನ ಭಾಗದಲ್ಲಿ ನಿರೀಕ್ಷಿಸಿ

Leave a Reply

Your email address will not be published. Required fields are marked *

Related Post

THE FOURTH PILLAR OF DEMOCRACY – 1THE FOURTH PILLAR OF DEMOCRACY – 1

या देवी सर्वभूतेशु मात्र रूपेण संस्थिता। नमस्तस्यै नमस्तस्यै नमस्तस्यै नमो नम: ।। — ಎಲ್ಲದರಲ್ಲಿಯೂ ತಾಯಿಯ ರೂಪದಲ್ಲಿ ನೆಲೆಸಿರುವ, ಸಮಸ್ತ ಜಗತ್ತಿಗೆ ತಾಯಿಯಾಗಿರುವ ದೇವಿಗೆ ನನ್ನ ಪ್ರಣಾಮಗಳು. ನಮ್ಮ ಜಗತ್ತು ಪುರುಷ ಹಾಗು ಪ್ರಕೃತಿಯ ಅಂಶಗಳಿಂದ ನಿರ್ಮಿತವಾದದ್ದು. ಆಸ್ತಿಕನಾಗಿರಲಿ ನಾಸ್ತಿಕನಾಗಿರಲಿ, ಪುರಾಣ ನಂಬಲಿ ಬಿಡಲಿ,

ಮಂಥನ -ಕಂತು ೫ಮಂಥನ -ಕಂತು ೫

या देवी सर्वभूतेशु मात्र रूपेण संस्थिता। नमस्तस्यै नमस्तस्यै नमस्तस्यै नमो नम: ।। — ಎಲ್ಲದರಲ್ಲಿಯೂ ತಾಯಿಯ ರೂಪದಲ್ಲಿ ನೆಲೆಸಿರುವ, ಸಮಸ್ತ ಜಗತ್ತಿಗೆ ತಾಯಿಯಾಗಿರುವ ದೇವಿಗೆ ನನ್ನ ಪ್ರಣಾಮಗಳು. ನಮ್ಮ ಜಗತ್ತು ಪುರುಷ ಹಾಗು ಪ್ರಕೃತಿಯ ಅಂಶಗಳಿಂದ ನಿರ್ಮಿತವಾದದ್ದು. ಆಸ್ತಿಕನಾಗಿರಲಿ ನಾಸ್ತಿಕನಾಗಿರಲಿ, ಪುರಾಣ ನಂಬಲಿ ಬಿಡಲಿ,

ಯೋಚಿಸಲೊ೦ದಿಷ್ಟು… ೬೦ಯೋಚಿಸಲೊ೦ದಿಷ್ಟು… ೬೦

या देवी सर्वभूतेशु मात्र रूपेण संस्थिता। नमस्तस्यै नमस्तस्यै नमस्तस्यै नमो नम: ।। — ಎಲ್ಲದರಲ್ಲಿಯೂ ತಾಯಿಯ ರೂಪದಲ್ಲಿ ನೆಲೆಸಿರುವ, ಸಮಸ್ತ ಜಗತ್ತಿಗೆ ತಾಯಿಯಾಗಿರುವ ದೇವಿಗೆ ನನ್ನ ಪ್ರಣಾಮಗಳು. ನಮ್ಮ ಜಗತ್ತು ಪುರುಷ ಹಾಗು ಪ್ರಕೃತಿಯ ಅಂಶಗಳಿಂದ ನಿರ್ಮಿತವಾದದ್ದು. ಆಸ್ತಿಕನಾಗಿರಲಿ ನಾಸ್ತಿಕನಾಗಿರಲಿ, ಪುರಾಣ ನಂಬಲಿ ಬಿಡಲಿ,