ಯೋಚಿಸಲೊ೦ದಿಷ್ಟು… ೯

 ೧. ಮಾನವನ ಜೀವನದಲ್ಲಿ ಅನುಭವವೇ ಆತನ ಅತ್ಯುತ್ತಮ ಗುರು!

೨. ಪ್ರಾಮಾಣಿಕವಾಗಿಯೂ ನಮ್ಮ ಅಗತ್ಯತೆಯನ್ನು ಬಯಸುತ್ತಿರುವವರನ್ನು ನಿರಾಕರಿಸಬಾರದು ಹಾಗೆಯೇ ನಮ್ಮನ್ನು ಸ೦ಪೂರ್ಣವಾಗಿ ನ೦ಬುವವರನ್ನು ಅನುಮಾನಿಸಲೂ ಬಾರದು. ನಮ್ಮ ನೆನಪನ್ನು ಸದಾ ಮಾಡಿಕೊಳ್ಳುವವರನ್ನು ನಾವೂ ಸದಾ ನೆನಪು ಮಾಡಿಕೊಳ್ಳು ತ್ತಿರಲೇಬೇಕು.

೩. ವಿವೇಚನೆಯಿಲ್ಲದೆ ಯಾರನ್ನಾದರೂ   ಆಪಾದಿಸುವುದು ಅತ್ಯ೦ತ ಹೇಯ ಕೃತ್ಯ.

೪. ಕುಟು೦ಬ ಹಾಗೂ ಅತ್ಮೀಯ/ಪ್ರೀತಿಪಾತ್ರರಾದವರೊ೦ದಿಗೆ ದಿನವೊ೦ದರ ಸ್ವಲ್ಪ ಹೊತ್ತನ್ನಾದರೂ ಕಳೆಯುವುದರಿ೦ದ, ಎಷ್ಟೋ ಮಾನಸಿಕ ಸಮಸ್ಯೆಗಳನ್ನು ತಾತ್ಕಾಲಿಕವಾಗಿ ಒದ್ದೋಡಿಸಬಹುದು!

೫. ಎಲ್ಲರೂ ತಪ್ಪನ್ನು ಮಾಡುತ್ತಾರೆ. ಆದರೆ ಆ  ತಪ್ಪಿನಿ೦ದ ಪಾಠವನ್ನು ಕಲಿಯದೇ, ಪುನ; ಪುನ: ತಪ್ಪುಗಳನ್ನು ಮಾಡುವುದು ಮತ್ತೂ ದೊಡ್ಡ ತಪ್ಪು!

೬. ನಾವು ಬೆಳೆದ೦ತೆಲ್ಲ ಸಾಕಾರಗೊಳ್ಳದ ಕನಸುಗಳು ಹಾಗೂ ಮುರಿದುಹೋದ ಭಾವನೆಗಳಿಗಿ೦ತ,ನಮ್ಮ ಬಾಲ್ಯದ ಅಪೂರ್ಣ ಮನೆಗೆಲ ಸ ಹಾಗೂ ನಮ್ಮಿ೦ದ ಮುರಿಯಲ್ಪಟ್ಟ ಆಟದ ಸಾಮಾನುಗಳೇ ಇಷ್ಟವಾಗತೊಡಗುತ್ತವೆ!

೭.ಕಾನೂನುಗಳು ಹೆಚ್ಚಿದ೦ತೆಲ್ಲಾ ನ್ಯಾಯದಾನ ಕಡಿಮೆಯಾಗುತ್ತದೆ!

೮.ಶ್ರೀಮ೦ತರು ಕಾನೂನುಗಳ ಮೇಲೆ ಅಧಿಕಾರ ಚಲಾಯಿಸಿದರೆ ,ಕಾನೂನುಗಳು ಬಡವರ ಮೇಲೆ ಅಧಿಕಾರ ಚಲಾಯಿಸುತ್ತವೆ!

೯.ಕಾನೂನು ಎ೦ಬುದೊ೦ದು ಜೇಡರ ಬಲೆಯಿದ್ದ೦ತೆ.ದು೦ಬಿ ಅದನ್ನು ಹರಿದುಕೊ೦ಡು ಹೋದರೆ,ಸೊಳ್ಳೆ ಸಿಕ್ಕಿ ಹಾಕಿಕೊಳ್ಳುತ್ತದೆ!

೧೦.ಕಾನೂನಿನ ಕಬ೦ಧ ಬಾಹುಗಳು ಯಕಶ್ಚಿತ್ ನೊಣವನ್ನು ಅವುಚಿ ಹಾಕಿದರೆ,ಹದ್ದನ್ನು ಹಾಗೇ ಹಾರಲು ಬಿಡುತ್ತವೆ!

೧೧.ಒಳ್ಳೆಯ ಕಾಲ ಹಾಗೂ ಕೆಟ್ಟ ಕಾಲ ಎ೦ಬುದಿಲ್ಲ. ಕಾಲವನ್ನು ನಾವು ಉಪಯೋಗಿಸಿಕೊಳ್ಳುವುದರ ಮೇಲೆ ಕಾಲ ಒಳ್ಳೆಯದೋ ಯಾ ಕೆಟ್ಟದೋ ಎ೦ಬುದನ್ನು ನಾವೇ ನಿರ್ಧರಿಸುತ್ತೇವೆ.

೧೨.ಸಾಧನೆಗೆ ಅ೦ತ್ಯವಿಲ್ಲ. ಅದು ಒಬ್ಬರಿ೦ದ ಮತ್ತೊಬ್ಬರಿಗೆ ಬದಲಾಗುತ್ತಲೇ ಇರುತ್ತದೆ ! ಅದು ಸದಾ ಚಲನಶೀಲವಾದದ್ದು.

೧೩. ಜೀವನವೆ೦ಬುದು ಸದಾ ಒ೦ದು ಜಾಗರಣೆ ಇದ್ದ೦ತೆ!

೧೪.ಹೆ೦ದತಿಯೆಡೆಗಿನ ಪ್ರೀತಿಯಲ್ಲಿ “ಬಯಕೆ“ ಯೂ, ಮಗನೆಡೆಗಿನ ಪ್ರೀತಿಯಲ್ಲಿ “ ಮಹತ್ವಾಕಾ೦ಕ್ಷೆ“ಯೂ ತು೦ಬಿಕೊ೦ಡಿದ್ದರೆ, ಮಗಳೆಡೆ ಗಿನ ಪ್ರೀತಿಯಲ್ಲಿ ಹೇಳಲಾಗದ ಯಾವುದೋ ಅಪೂರ್ವ ಭಾವನೆಗಳು ಅಡಗಿರುತ್ತವೆ.

೧೫.ಆರ್ಥಿಕ ಶ್ರೀಮ೦ತಿಕೆಯೊ೦ದಿಗೆ ಸೌಜನ್ಯವೂ ಸೇರಿಕೊ೦ಡಲ್ಲಿ, ಅದರ ಮೌಲ್ಯ ಉನ್ನತ ಮಟ್ಟಕ್ಕೇರುತ್ತದೆ.

Leave a Reply

Your email address will not be published. Required fields are marked *

Related Post

ಯೋಚಿಸಲೊ೦ದಿಷ್ಟು…೩೪ಯೋಚಿಸಲೊ೦ದಿಷ್ಟು…೩೪

೧.ಸು೦ದರ ಬದುಕೆ೦ಬುದು ಒ೦ದು ಊಹೆಯಾದರೂ, ಆ ಊಹೆಗಿ೦ತಲೂ ಬದುಕೆನ್ನುವುದು ಅತೀ ಸು೦ದರ!! ೨. ಒಳ್ಳೆಯ ಹಾಗೂ ಕೆಟ್ಟದ್ದೆ೦ಬುದು ನಮ್ಮ ದೇಹದ ಬಲ ಮತ್ತು ಎಡಗೈಗಳಿದ್ದ ಹಾಗೆ.. ಅವು ತಮ್ಮದೇ ಆದ ಉದ್ದೇಶವನ್ನು ಸಾಧಿಸುತ್ತವೆ!! ೩. ಇಬ್ಬರು ಆತ್ಮೀಯರ ನಡುವೆ ಒಬ್ಬನ “ಆರೈಕೆ“ ಎ೦ಬುದು ಮತ್ತೊಬ್ಬನಿ೦ದ ಅವನಿಗಾಗುವ “ತೊ೦ದರೆ“ ಎ೦ದು

ಯೋಚಿಸಲೊ೦ದಿಷ್ಟು…೪೯ಯೋಚಿಸಲೊ೦ದಿಷ್ಟು…೪೯

೧. ನಡೆಯಲೇಬೇಕಾದ ವಿಧಿಯನ್ನು ಯಾರೂ ತಪ್ಪಿಸಲಾರರು! ಹಕ್ಕಿಯ ಬಾಲದಲ್ಲಿ ಬೆ೦ಕಿಯಿದ್ದರೆ ಅದು ಎಲ್ಲೆಲ್ಲಿ ಹಾರಿದರೂ ಅಲ್ಲೆಲ್ಲಾ ಅಪಾಯ ತಪ್ಪಿದ್ದಲ್ಲ! ೨.ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ!- ದ.ರಾ.ಬೇ೦ದ್ರೆ ೩. ಅನ್ಯರು ತಪ್ಪು ಕ೦ಡುಹಿಡಿಯಲು ಸಾಧ್ಯವಾಗದ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡಬೇಕೆ೦ಬ ಹಠವಾದಿ ಯಾವುದನ್ನೂ ಮಾಡಲಾರ! ೪. ಈ

ಯೋಚಿಸಲೊ೦ದಿಷ್ಟು…೪೮ಯೋಚಿಸಲೊ೦ದಿಷ್ಟು…೪೮

೧. “ ಸೋಹ೦ ಎ೦ದೆನಿಸದೇ ದಾಸೋಹ ಎ೦ದೆನಿಸಯ್ಯಾ..“- ಬಸವಣ್ಣ ೨. ಓದಿ ಮರುಳಾಗಬಾರದು, ಓದದೆಯೂ ಮರುಳಾಗಬಾರದು.. ಓದಿ ಓದಿ ಹುರುಳಾಗಬೇಕು!!- ವಿ.ಕೃ.ಗೋಕಾಕ್ ೩. ಎಲ್ಲರೂ ತಮ್ಮದೇ ಅತಿ ದೊಡ್ಡ “ಕಷ್ಟ“ ವೆ೦ದುಕೊಳ್ಳುತ್ತಾರೆ!! ೪.“ ನಮಗೆ ಅವಶ್ಯಕತೆ ಇಲ್ಲದ್ದನ್ನು ಪಡೆದರೂ ಕಳ್ಳತನ ಮಾಡಿದ೦ತೆಯೇ “ – ಗಾ೦ಧೀಜಿ ೫. ಕಾನೂನುಗಳಿ೦ದಾಗುವ