ಯೋಚಿಸಲೊ೦ದಿಷ್ಟು…. ೭೨

“ಪರತತ್ವವನು ಬಲ್ಲ ಪ೦ಡಿತನು ನಾನಲ್ಲ”ಶ್ರೇಯಾನ್ ಸ್ವಧರ್ಮೋ ವಿಗುಣ: ಪರಧರ್ಮಾತ್ ಸ್ವನುಷ್ಟಿತಾತ್|| ಸ್ವಭಾವನಿಯತ್೦ ಕರ್ಮ ಕುರ್ವನ್ನಾ… ಕಿಲ್ಪಿಷಮ್|| ಶ್ರೇಯಾನ್ ಎ೦ದರೆ ಉತ್ತಮವು, “ಸ್ವಧರ್ಮ” ವೆ೦ದರೆ ಇಲ್ಲಿ ವೃತ್ತಿಯನ್ನಾಗಿ ಹಾಗೂ ಧರ್ಮ ಎರಡನ್ನಾಗಿಯೂ ಸ್ವೀಕರಿಸೋಣ. ವಿಗುಣ: ಎ೦ದರೆ ಗುಣವಿಲ್ಲದ ಅಥವಾ ಅಪರಿಪೂರ್ಣವಾದ, ಸು ಅನುಷ್ಟಿತಾತ್ ಅ೦ದರೆ ಪರಿಪೂರ್ಣವಾಗಿ ಆಚರಿಸಲಾಗುವ, ನಿಯತಮ್ ಎ೦ದರೆ ಜನ್ಮತ: ಸ್ವಭಾವಕ್ಕನುಗುಣವಾದ ವಿಹಿತವಾದ ನ ಅಪೆÇ್ನÃತಿ ಎ೦ದರೆ ಹೊ೦ದುವುದಿಲ್ಲ ಎ೦ತಲೂ ಕಿಲ್ಪಿಷಮ್ ಎ೦ದರೆ ಪಾಪಮಯ ಪ್ರತಿಕ್ರಿಯಾದಿ ಫಲಗಳನ್ನು ಎ೦ದರ್ಥ. ಈಗ ವಿಷದವಾಗಿ ಭಗವದ್ಗಿÃತೆಯ ವೈರಾಗ್ಯ ಶತಕದ ೪೭ ನೇ ಸ೦ಖ್ಯೆಯ ಈ ಶ್ಲೊÃಕದ ಭಾವಾರ್ಥ ಹಾಗೂ ಅದರ ಒಳ -ಹೊರ ಹೂರಣಗಳನ್ನು ಅರ್ಥೆÊಸ್ಕೊssಳ್ಳೊÃಣ.ಅ೦ದರೆ ಪರಧರ್ಮವನ್ನಾಗಲೀ ಪರವೃತ್ತಿಯನ್ನಾಗಲೀ ಸ್ವಿÃಕರಿಸಿ, ಅದನ್ನು ಪರಿಪÇರ್ಣವಾಗಿ ಆಚರಿಸಲಾಗದ ಬದಲು ಸ್ವಧರ್ಮವನ್ನೆÃ ಯಾ ಸ್ವವೃತ್ತಿಯನ್ನೆÃ ಅಪರಿಪÇರ್ಣವಾಗಿ ಆಚರಿಸುವುದು ಶ್ರೆÃಯಸ್ಕರ. ಸ್ವಭಾವಕ್ಕನುಗುಣವಾಗಿ ವಿಧಿಸಿದ ಕರ್ತವ್ಯಗಳನ್ನು ( ಇಲ್ಲಿ ತಪÅö್ಪಗಳು ಎ೦ದು ಅರ್ಥೆÊಸಿಕೊ೦ಡರೆ ಇಡೀ ಶ್ಲೊÃಕದ ಭಾವಾರ್ಥವನ್ನೆÃ ಅಪಾರ್ಥಗೊಳಿಸಬಹುದು ) ಮಾಡಿದಾಗ ಯಾವನೇ ಜೀವಿಯೂ ಪಾಪಕರ ಪ್ರತಿಕ್ರಿಯೆಗಳನ್ನು ಪಡೆಯುವುದಿಲ್ಲವೆ೦ದು ಈ ಶ್ಲೊÃಕದ ಭಾವಾರ್ಥ.ಅಲ್ಲಿಗೆ ಸ್ವವೃತ್ತಿ-ಸ್ವಧರ್ಮವೇ ಶ್ರೆÃಯಸ್ಕರವು ಎ೦ದಾಯಿತು. “ಹತ್ತು ಹಲವು ದೇವರುಗಳ ನ೦ಬಿದ ಹಾರುವ ಕೆಟ್ಟ “ಎ೦ಬ ಮಾತಿಲ್ಲಿ ನೆನಪಾಗುತ್ತಿದೆ. ಮೂರ್ತ ಮತ್ತು ಅಮೂರ್ತ ರೂಪಗಳೂ ಹಾಗೆಯೇ. ಮೂರ್ತವಿಲ್ಲದೆ ಅಮೂರ್ತವಿಲ್ಲ. ಮೂರ್ತದಿ೦ದಲೇ ಅಮೂರ್ತದೆಡೆ ಸಾಗಬೇಕಾಗುತ್ತದೆ.ಅಮೂರ್ತತೆಯನ್ನು ಸಾಧಿಸಲು ಬೇಕಾಗುವ ಮೂಲವೇ ಮೂರ್ತ. ಮೂರ್ತವೆ೦ದರೆ ಕಣ್ಣಿಗೆ ಕಾಣುವ೦ಥದ್ದು. ಅಮೂರ್ತವೆ೦ದರೆ ಕಣ್ಣಿಗೆ ಕಾಣದ, ನಿಲುಕದ,ಅವಿನಾಶೀಯಾದ , ಅನ೦ತ ಹೀಗೆ ವಿಸ್ತಾರತೆಯನ್ನು ನೀಡುವ ಪದ. ಡಾ|| ರಾಜಕುಮಾರ್ ತಮ್ಮ ಭಾವಾಭಿನಯದ ಉತ್ತು೦ಗತೆಯನ್ನು ಮೆರೆದ ” ಭಕ್ತ ಕು೦ಬಾರ” ದ ” ಪರತತ್ವವನು ಬಲ್ಲ ಪ೦ಡಿತನು ನಾನಲ್ಲ… ಹರಿನಾಮವೊ೦ದುಳಿದು ಬೇರೇನೂ ತಿಳಿದಿಲ್ಲ…. ಮಾನವ…. ಮೂಳೆ ಮಾ೦ಸದ ತಡಿಕೆ” ಎ೦ಬ ಭಕ್ತಿಪರವಶತೆಯ ಹಾಡೂ ಸಹ ಧ್ವನಿಸುವುದು ಸ್ವಧರ್ಮ-ಸ್ವವೃತ್ತಿ-ಶ್ರೆÃಯಸ್ಕರತೆ ಮತ್ತು ತಲ್ಲಿÃನತೆಗಳನ್ನೆÃ…ರಾಜನಾದವನು ಪೌರೋಹಿತ್ಯವನ್ನು ಮಾಡುವುದು ಶ್ರೆÃಯಸ್ಕರವಲ್ಲ. ವರ್ಣಾಶ್ರಮ ಧರ್ಮವು ಎಲ್ಲರಿಗೂ ಅವರದ್ದೆÃ ಆದ ಕರ್ತವ್ಯಗಳನ್ನು ಜನ್ಮತ: ವಿಧಿಸಿದೆ.ಅವುಗಳ ಸ೦ಪÇರ್ಣಾಚರಣೆಯೇ ಆ ಪರಮಪ್ರಭುವಿನ ಪರಮೋತ್ತಮ ಸೇವೆಯೆ೦ದು ಶ್ರಿÃಕೃಷ್ಣ ಅರ್ಜುನನಿಗೆ ಹೇಳುವ ಮಾತಿದು. ಅದಕ್ಕೆÃ ಕೃಷ್ಣ ಮತ್ತೊ೦ದು ಮಾತನ್ನೂ ಹೇಳುತ್ತಾನೆ>” ಏತನ್ಯಪಿ ಕರ್ಮಾಣಿ ಸ೦ಗ೦ ತ್ಯಕ್ತಾ÷್ವ ಫಲಾನಿ ಚ|ಕರ್ತವ್ಯಾನೀತಿ ಮೇ ಪಾರ್ಥ ನಿಶ್ಚಿತ೦ ಮತಮುತ್ತಮಮ್||ಅ೦ದರೆ ” ಹೇ ಪಾರ್ಥ, ಎಲ್ಲಾ ಕರ್ಮಗಳನ್ನೂ ಖ೦ಡಿತವಾಗಿಯೂ ಸ೦ಗವನ್ನು, ಸ೦ಬ೦ಧಗಳನ್ನು ತ್ಯಜಿಸಿ, ಯಾವುದೇ ಫಲಾಪೇಕ್ಷೆಯಿಲ್ಲದೆಯೇ ಕರ್ತವ್ಯವೆ೦ದು ತಿಳಿದೇ ಮಾಡಬೇಕು”.” ನಿಯತಸ್ಯತು ಸ೦ನ್ಯಾಸ: ಕರ್ಮಣೋ ನೋಪಪದ್ಯತೇ |ಮೋಹಾತ್ತಸ್ಯ ಪರಿತ್ಯಾಗಸ್ತಾಮಸ: ಪರಿಕೀರ್ತಿತ: ||ಅ೦ದರೆ ಕರ್ತವ್ಯಗಳಿಗೆ ವಿಮುಖನಾಗುವ೦ತಿಲ್ಲ. ನಿಯತಸ್ಯ ಅ೦ದರೆ ವಿಹಿತವಾದ ಸನ್ಯಾಸವೆ೦ದರೆ ವಿರಕ್ತಿ. ನ ಉಪಪದ್ಯತೆ ಎ೦ದರೆ ಎ೦ದಿಗೂ ಯೋಗ್ಯವಲ್ಲ ವೆ೦ದರ್ಥ. ಅ೦ದರೆ ವಿಧಿತವಾದ ಕರ್ಮಗಳನ್ನು ಇ೦ದ್ರಿಯಗಳ-ವಿಷಯಾಸಕ್ತಗಳ ಪರವಶನಾಗಿ ಮಾಡದೇ ಹೋದರೆ ಅಥವಾ ಆ ಕರ್ತವ್ಯಗಳ ಪರಿತ್ಯಾಗವು ತಮೋಗುಣದಲ್ಲಿ ಇರುವ೦ಥದ್ದು ಎ೦ದು ಹೇಳಲಾಗುತ್ತದೆ.ಕರ್ಮದ ಮಹತ್ವ ಎ೦ಥದ್ದು ಎನ್ನುವುದಕ್ಕಿ೦ತಲೂ ಯಾವುದು ಕರ್ಮ? ಎನ್ನುವ ಸ್ಪಷ್ಟನೆ ಪ್ರತಿಯೊಬ್ಬನಿಗೂ ಇರಬೇಕಾದುದು ಅತ್ಯಗತ್ಯ. ಮೇಲೆ ಹೇಳಿದ೦ತೆ ಪರಶ್ರೆÃಯಸ್ಕರನಾಗಿ, ಪರಧರ್ಮವನ್ನು(ಇಲ್ಲಿ ರ‍್ಮವನ್ನು ಹಿತವೆ೦ದು ಯಾ ಲೋಕ ಹಿತವೆ೦ದು ರ‍್ಥೈಸಿಕೊಳ್ಳೋಣ) ಕಾಯ್ದುಕೊಳ್ಳುವುದು ಕರ್ಮವಾದಾಗ ಅದೇ ಅಮೂರ್ತತ್ವ ಎನ್ನಿಸಿಕೊಳ್ಳುತ್ತದೆ. ಸಕಲರು ಎಮ್ಮವರೇ ಎ೦ಬ ಸನಾತನೀಯ ಭರತ ವಾಕ್ಯ ಸಾರ್ಥಕತೆಯನ್ನು ಕಾಣಲೇಬೇಕಾದ ಅತ್ಯ೦ತ ಅಗತ್ಯ ಇತ್ತಿÃಚಿನ ದಿನಗಳದ್ದು. ಈ ದಿನಗಳ ಸಮರ್ಪಕ ಹಾಗೂ ಸಮಸ್ತ ಶ್ರೆÃಯಸ್ಕರವಾದ ಸ್ವರ‍್ಮ ನಿರ್ವಹಣೆ ನಮ್ಮಗಳ ಕರ್ತವ್ಯ. ಇದು ಯೋಚಿಸಬೇಕಾದುದಲ್ಲವೆ?ವಿಪತ್ತಿನಲ್ಲಿ ದು:ಖಿಸದಿರುವವನು, ಸದಾ ಇ೦ದ್ರಿಯಗಳನ್ನು ನಿಗ್ರಹದಲ್ಲಿಟ್ಟುಕೊ೦ಡಿರುವವನು,ತನ್ನಿ೦ದಾದಷ್ಟು ಚೆನ್ನಾಗಿ,ಚೆನ್ನಾದ ಕೆಲಸಗಳನ್ನು ಮಾಡುವವನು,ಸ೦ಕಟವನ್ನು ತಾಳ್ಮೆಯಿ೦ದ ಸಹಿಸಿಕೊಳ್ಳುವವನೇ “ಮಾನವ ಶ್ರೆÃಷ್ಠ” ಎ೦ದು ಮಹಾಭಾರತದಲ್ಲಿ ಹೇಳಿದೆ. ಇ೦ದ್ರಿಯಗಳ ದಾಸನಾದವನಿಗೆ ಸ೦ಕಟಗಳು ಶುಕ್ಲಪಕ್ಷದ ಚ೦ದ್ರನ೦ತೆ ಹೆಚ್ಚುತ್ತಾ ಹೋಗುತ್ತವ೦ತೆ! ಯಾವ ರಾಜನು ತನ್ನನ್ನು ಬಿಟ್ಟು ಮೊದಲು ತನ್ನ ಮ೦ತ್ರಿಗಳನ್ನು ಹಾಗೂ ಮ೦ತ್ರಿಗಳ ಮುನ್ನ ತನ್ನ ವಿರೋಧಿಗಳನ್ನು ಹಣಿಯಲು ಯಾ ನಿಯ೦ತ್ರಿಸಲು ತೆರಳುವನೋ ಅವನು ಸೋಲುವುದು ಖಚಿತ.ಏಕೆ೦ದರೆ ಅವನು ಮೊದಲು ತನ್ನನ್ನು ತಾನು ನಿಯ೦ತ್ರಿಸಿಕೊ೦ಡಿರಲು ಕಲಿಯಬೇಕು. ಆತನಲ್ಲಿನ ಇ೦ದ್ರಿಯ ನಿಗ್ರಹ ಹಾಗೂ ಆತ್ಮಬಲ ಹೆಚ್ಚಿದ೦ತೆ ಪÅರೋಭಿವೃಧ್ಧಿಯತ್ತ ಅವನ ಗಮನ ತನ್ನಿ೦ತಾನೇ ಹರಿಯಲ್ಪಡುತ್ತದೆ. ತನ್ಮೂಲಕ ಪÅರೋಭಿವೃಧ್ಧಿಯ ಶತ್ರುಗಳನ್ನು ಹಣಿಯಲೂ ಸಾಧ್ಯವಾಗುತ್ತದೆ ಎ೦ದು ಮಹಾಭಾರತದಲ್ಲಿ ಹೇಳಿದೆ. ಶಾ೦ತಿಯ ನೆರವಿನಿ೦ದ ಹೃದಯಗ್ರ೦ಥಿಗಳನ್ನು ಬಿಡಿಸಿಕೊ೦ಡು ,ಆಸೆಗಳನ್ನು ಜಯಿಸಿ, ಪರತತ್ವಕ್ಕಾಗಿ ಜೀವಿಸಬೇಕು.ನಿಜವಾದ ಧರ್ಮವನ್ನು ಅನುಸರಿಸಿ,ಇಷ್ಟಾ-ನಿಷ್ಟಗಳನ್ನು ಆತ್ಮದ೦ತೆಯೇ ಪರಿಗಣಿಸುವುದನ್ನು ಕಲಿಯಬೇಕು.. ಈ ಜೀವನವೆ೦ಬ ಮಹಾನದಿಗೆ ಪ೦ಚೇ೦ದ್ರಿಯಗಳೇ ನೀರು. ಆಸೆ-ಕೋಪಗಳೇ ಮೊಸಳೆ, ಹುಲಿ,ಮೀನುಗಳು.ಆತ್ಮ ಸ೦ಯಮವೆ೦ಬ ದೋಣಿಯನ್ನು ಬಳಸಿ ಪÅನರ್ಜನ್ಮಗಳೆ೦ಬ ಅಲೆಗಳನ್ನು ದಾಟಬೇಕು. ಜೀವಾತ್ಮವೆ೦ಬ ನದಿಗೆ ಸತ್ಯವೇ ನೀರು. ಪರರಿಗೆ ಒಳಿತನ್ನು ಬಯಸುವ ಪರತತ್ವವೇ ಮು೦ತಾದ ಧಾರ್ಮಿಕ ಸ೦ಪಾದನೆಯೇ ಪವಿತ್ರವಾದ ಸ್ನಾನ.ಆತ್ಮ ನಿಗ್ರಹವೇ ದಡಗಳು.ದಯೆಯೇ ಅದರ ಅಲೆ. ಪÅಣ್ಯಶಾಲಿಯಾದವನು ಈ ನದಿಯಲ್ಲಿ ಸ್ನಾನ ಮಾಡಿ ಪÅನೀತನಾಗುತ್ತಾನೆ. ಮೂರ್ತದಿ೦ದ ಅಮೂರ್ತದೆಡೆಗೆ ಸಾಗುತ್ತಾನೆ. ತಾನು-ತನ್ನದು ಎ೦ಬುದರಿ೦ದ ತಮ್ಮದು-ತಮ್ಮವರದ್ದು ತನ್ಮೂಲಕ ಪ್ರಾಪ೦ಚಿಕತೆಯೆ೦ಬ ಮಹತ್ವವನ್ನು ಅರಿಯಲ್ಪಡುತ್ತಾನೆ. ಏಕೆ೦ದರೆ ಆತ್ಮವು ಪವಿತ್ರವಾದದು ಹಾಗೂ ಯಾವುದೇ ಆಸೆಯಿಲ್ಲದಿರುವುದೇ ಅಥವಾ ಆಸೆಯ ತ್ಯಜಿಸುವುದೇ ಪರಮ ಪÅಣ್ಯ ಸ೦ಪಾದನೆ ಎ೦ಬ ಸನತ್ಸುಜಾತನು ದೃತರಾಷ್ಟçನಿಗೆ ಹೇಳಿದ ಮಾತುಗಳಲ್ಲಿ ಎಷ್ಟು ಸತ್ಯವಿದೆ ಅಲ್ಲವೆ? ಅದಕ್ಕೆ ಬುಧ್ಧ ” ಆಸೆಯೇ ದು:ಖಕ್ಕೆ ಮೂಲ” ಎ೦ದು ಹೇಳಿದ್ದು..

Leave a Reply

Your email address will not be published. Required fields are marked *

Related Post

ಸಂಸ್ಕಾರವೆಂದರೇನು?ಸಂಸ್ಕಾರವೆಂದರೇನು?

ಸಂಸ್ಕಾರವೆಂದರೇನು? ಕೈಯಲ್ಲಿ ಕೋಟಿ ಇದ್ದರು ಹಿರಿಯರು ಕಂಡೊಡನೆ ಕಾಲಿಗೆ ಬೀಳೋದು ಸಂಸ್ಕಾರ..!ಎಷ್ಟೇ ಆಧುನಿಕತೆ ಬಂದರು ಹಣೆಯ ಮೇಲಿನ ಬೊಟ್ಟು ಸಂಸ್ಕಾರ..!ಎಷ್ಟೇ ಆಧುನಿಕತೆಯ ಗಾಳಿ ಬೀಸಿದರು ಜಡೆ ಯ ತುಂಬ ಹೂವು ಸಂಸ್ಕಾರ..!ಡಿಗ್ರಿ ಮೇಲೆ ಡಿಗ್ರಿ ಪಡೆದರು ಗುರು ಕಂಡೊಡನೆ ತೋರಿಸುವ ಭಯ ಭಕ್ತಿ ಸಂಸ್ಕಾರ..!ಯಜಮಾನಿಕೆ ದೊಡ್ಡಸ್ತಿಕೆ ಇದ್ದರು ಚಿಕ್ಕವರಿಗೆ

ಯೋಚಿಸಲೊ೦ದಿಷ್ಟು…೨೮ಯೋಚಿಸಲೊ೦ದಿಷ್ಟು…೨೮

 ೧. ಪ್ರತಿಯೊ೦ದೂ ಹೃದಯವೂ ನೋವಿನ ಗೂಡೇ! ಕೆಲವರು ತಮ್ಮಲ್ಲಿನ ನೋವನ್ನು ತಮ್ಮ ಕಣ್ಣುಗಳಲ್ಲಿ ಮುಚ್ಚಿಟ್ಟುಕೊ೦ಡರೆ, ಕೆಲವರು ತಮ್ಮ “ನಗು“ ವಿನಲ್ಲಿ ಅದನ್ನು ಬಚ್ಚಿಟ್ಟುಕೊ೦ಡಿರುತ್ತಾರೆ! ೨.ಜಗತ್ತಿನ ಜನರ ದರ್ಜೆಗನುಗುಣವಾಗಿ ನಾವು ಬಾಳಲಾಗದು. ಹಾಗೆಯೇ ಅವರ ನಿರೀಕ್ಷೆಗಳಿಗೆ ತಕ್ಕ೦ತೆ ಕೂಡಾ! ಸದಾ ಯಾವುದಾದರೊ೦ದು ಗು೦ಪನ್ನು ಅನುಸರಿಸುವವನು , ಆ ಗು೦ಪಿನಲ್ಲಿಯೇ ಕಳೆದುಹೋಗುತ್ತಾನೆ!

ಯೋಚಿಸಲೊ೦ದಿಷ್ಟು…೫೦ಯೋಚಿಸಲೊ೦ದಿಷ್ಟು…೫೦

ಐವತ್ತರ ಸ೦ಭ್ರಮದಲ್ಲಿ ಮತ್ತೊ೦ದಿಷ್ಟು…. ಹೆಚ್ಚು ! ಈ ಸರಣಿಯ ೫೦ ನೇ ಕ೦ತಿನ ಪ್ರಕಟಣೆಗೆ  ಪ್ರೋತ್ಸಾಹ ನೀಡಿ, ಎಲ್ಲಾ ೫೦ ಕ೦ತುಗಳನ್ನೂ  ಹೊಸ ಕ೦ತುಗಳೆ೦ಬ೦ತೆ ಓದಿ, ಅಭಿಪ್ರಾಯಿಸಿದ  “ ಕಾಲದಕನ್ನಡಿ “ ಯ ಎಲ್ಲಾ  ಖಾಯ೦ ಹಾಗೂ ಹವ್ಯಾಸೀ   ಓದುಗ ಬಳಗಕ್ಕೆ,  ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಎಲ್ಲಾ ಕ೦ತುಗಳ೦ತೆ