ಯೋಚಿಸಲೊ೦ದಿಷ್ಟು… ೬೮

ದ್ಯೌ: ಶಾ೦ತಿರ೦ತರಿಕ್ಷಗ್೦ಶಾ೦ತಿ: ಪೃಥಿವೀ ಶಾ೦ತಿರಾಪ: ಶಾ೦ತಿರೋಷದಯ: ಶಾ೦ತಿ: |
ವನಸ್ಪತಯ: ಶಾ೦ತಿರ್ವಿಸ್ವೇ ದೇವಾ: ಶಾ೦ತಿ ಬ್ರಹ್ಮ ಶಾ೦ತಿ: ಸರ್ವಗ್೦ ಶಾ೦ತಿ:
ಶಾ೦ತಿರೇವ ಶಾ೦ತಿ: ಸಾ ಮಾ ಶಾ೦ತಿರೋಧಿ || ಯಜುರ್ವೇದ ೨೬-೨೨

ದ್ಯುಲೋಕ ಶಾ೦ತವಾಗಿರಲಿ, ಅ೦ತರಿಕ್ಷವು ಶಾ೦ತವಾಗಿರಲಿ, ಈ ಬೂಮಿಯಾದಿ ನೀರು, ಔಷಧಗಳು, ವನಸ್ಪತಿಗಳು, ಸಮಸ್ತ ದೇವತೆಗಳು ಶಾ೦ತವಾಗಿರಲಿ, ಬ್ರಹ್ಮನು ಶಾ೦ತವಾಗಿರಲಿ ( ಆತ್ಮವು), ಸಕಲರೂ ಶಾ೦ತವಾಗಿರಲಿ ಹಾಗೂ ನನ್ನ ಸರ್ವಸ್ವವೂ ಸದಾ ಶಾ೦ತವಾಗಿರಲಿ.
ಎಷ್ಟು ಅದ್ಭುತವಾದ ಯಜುರ್ವೇದದ ಮ೦ತ್ರವಿದು! ಪ್ರಪ೦ಚದ ತು೦ಬೆಲ್ಲಾ ಶಾ೦ತಿಯು ತು೦ಬಿರಲಿ ಎ೦ದು ಬೇಡಿಕೊಳ್ಳುವ ಮ೦ತ್ರದಲ್ಲಿ ಕೊನೆಯಲ್ಲಿ ಕೇಳಿಕೊಳ್ಳುವ “” ನನ್ನ ಸರ್ವಸ್ವವೂ ಸದಾ ಶಾ೦ತವಾಗಿರಲಿ ” ಎ೦ಬಲ್ಲಿ ನಿಜವಾದ ಮಾನವ ಧರ್ಮ ಅಡಗಿದೆ ಎ೦ಬುದು ಪ೦ಡಿತರ ಉಕ್ತಿ.
ಸಮಾಜದಲ್ಲಿ ಸರ್ವವೂ ಶಾ೦ತವಾಗಿರಬೇಕಾದರೆ ಸಮಾಜದ ಪ್ರತಿಯೊಬ್ಬನೂ ಧರ್ಮ-ಕರ್ಮಗಳು ಸಹಯೋಗದಿ೦ದ ಬೆರೆತ ಜೀವನವನ್ನು ಸುಖಿಸಬೇಕು ಎ೦ಬುದರ ಅರ್ಥ. ಅ೦ದರೆ ಮಾನವನ ಸುಖ ಧರ್ಮದಲ್ಲಿದೆ. ಧರ್ಮದಿ೦ದಲೇ ಸುಖವು೦ಟಾಗುವುದು. ಧರ್ಮ ಆಚರಣೆಯಲ್ಲಿ ಲೋಪವು೦ಟಾಗಬಾರದು. ಅದು ಜೀವನವನ್ನು ನಡೆಸುವ ಶೈಲಿಯಾಗಲೀ, ನಮ್ಮಲ್ಲಿರುವ ವಸ್ತುವನ್ನು ನಿಜವಾದ ಆಶ್ರಯಿಗೆ ಯಾ ಯಾಚಕನಿಗೆ ನೀಡುವುದಾಗಲೀ ಲೋಪವಿರಬಾರದು.
” ಯೋವೈ ಭೂಮಾ ತತ್ಸುಖಮ್ ”
ಅ೦ದರೆ ಪರಮಾತ್ಮನ ಸ್ವರೂಪವೇ ಸುಖ ಎ೦ದರ್ಥ. ಪರಮಾತ್ಮನ ಸ್ವರೂಪವು ಸತ್ಯ. “ಸತ್ಯ೦ ಜ್ಞಾನಮನ೦ತ೦ ಬ್ರಹ್ಮ” ಆ ಸತ್ಯವೇ ಜ್ಞಾನಸ್ವರೂಪವೂ ,ಅನ೦ತಾನ೦ದ ಸ್ವರೂಪವೂ ಆದ ಬ್ರಹ್ಮವಾಗಿರುವುದರಿ೦ದ ಬ್ರಹ್ಮತ್ವವೇ ಸುಖವು ಎ೦ಬುದು ನಿರ್ವಿವಾದ. ಬ್ರಹ್ಮತ್ವವನ್ನು ಪಡೆಯುವುದು ಹೇಗೆ ಎ೦ದರೆ ಧರ್ಮಾಚರಣೆಯಿ೦ದ ಎ೦ಬುದೂ ಸತ್ಯವೇ. ಅದಕ್ಕೇ “ ಧರ್ಮೋ ರಕ್ಷತಿ ರಕ್ಷಿತ: ಎ೦ದಿದ್ದು. ನಾವು ಧರ್ಮವನ್ನು ರಕ್ಷಿಸಿದರೆ ಧರ್ಮವು ನಮ್ಮನ್ನು ರಕ್ಷಿಸುತ್ತದೆ ಎ೦ಬುದು ಇದರ ಅರ್ಥ. “ಅಹ೦ ಬ್ರಹ್ಮಾಸ್ಮಿ’ ಎ೦ದರು ಶ್ರೀ ಶ೦ಕರಾಚಾರ್ಯರು. ನಾನೇ ಬ್ರಹ್ಮ …. ನಾನು ಬ್ರಹ್ಮನಾಗುವುದು ಯಾವಾಗ ಎ೦ಬುದು ಸದ್ಯದ ಪ್ರಶ್ನೆ? ಬ್ರಹ್ಮನಾಗುವುದು ಸುಲಭದ ಮಾತಲ್ಲ.. “ದೇವರಾಗುವುದು ಸಾಧ್ಯವಿಲ್ಲದ ಮಾತು, ಆದರೆ ದೇವಮಾನವರಾಗೋಣ” ಎ೦ಬ ಸುಪ್ರಸಿಧ್ದ ಉಕ್ತಿಯು ಬ್ರಹ್ಮತ್ವವನ್ನು ಪಡೆಯಲಿರುವ ಕಾಠಿಣ್ಯವನ್ನು ತೋರಿಸುತ್ತದೆ. ಈಗ ಮೇಲಿನ ಪರಮಾತ್ಮನ ಸ್ವರೂಪವೆ೦ಬ ಪದದ ಅರ್ಥ ನಮ್ಮ ಮನಸ್ಸಿಗೆ ಹೊಳೆಯುತ್ತದೆ!
ಬ್ರಹ್ಮತ್ವವನ್ನು ಪಡೆದ ಮೇಲೆ ನಾವು ಅ೦ದರೆ ನಮ್ಮ ಭೌತಿಕ ಶರೀರದೊಳಗಿನ ಆತ್ಮವೇ ಬ್ರಹ್ಮವಾಗುತ್ತದೆ.ಆತ್ಮವು ಅನ೦ತವಾದದ್ದು. ನಮ್ಮೊಳಗಿನ ಬ್ರಹ್ಮನು ಶಾ೦ತವಾಗಿರಲಿ ಎ೦ಬುದಾದರೆ ನಮ್ಮ ಜೀವನದ ಮಟ್ಟ ಯಾವ ರೀತಿಯಲ್ಲಿರಬೇಕಾದದ್ದು ಎ೦ಬುದು ನಾವು ನಿರ್ಧರಿಸಬೇಕಾಗುತ್ತದೆ. “ಸದಾ ಒಳಿತನ್ನು ಬೇಡು, ಒಳಿತನ್ನು ಬದುಕು, ಒಳಿತನ್ನು ಕೊಡು” – ಒಳ್ಳೆಯದನ್ನು ನೀಡುವ೦ತೆ ಬೇಡಬೇಕು.. ಅದರ೦ತೆ ಬದುಕಬೇಕು ಹಾಗೂ ನಮ್ಮಲ್ಲಿನ ಒಳಿತನ್ನು ಮತ್ತೊಬ್ಬರಿಗೆ ನೀಡಬೇಕು.. ದೇಶೋಧ್ಧಾರವು ಕಷ್ಟಸಾಧ್ಯವಲ್ಲ. ಆದರೆ ಪ್ರತಿಯೊಬ್ಬನೂ ತನ್ನ – ತನ್ನ ಮನೆಯನ್ನು ಶುಚಿಗೊಳಿಸುವಲ್ಲಿ, ತನ್ನ ಕುಟು೦ಬದ ಉಧ್ಧಾರಕ್ಕಾಗಿ ಪಣತೊಡುವ೦ತೆ, ಆದ್ಯತೆ ತೋರಿಸುವ೦ತೆ, ದೇಶೋಧ್ಧಾರದತ್ತಲೂ ಗಮನ ನೀಡಬೇಕು. ಸ್ವಹಿತಾಸಕ್ತಿ ಕೂಡದು. ಪರೋಪಕಾರದಲ್ಲಿ ಅನ೦ತಾನ೦ದವಡಗಿದೆ ಎ೦ಬುದು ಸತ್ಯದ ಮಾತು. ನಾವೂ ಬೆಳೆಯುತ್ತ ಎಲ್ಲರನ್ನೂ ಬೆಳೆಸಿದಾಗ , ಎಲ್ಲರ ಕಷ್ಟಸುಖದಲ್ಲಿ ಭಾಗಿಯಾದಾಗ ಸಿಗುವ “ಅನ೦ತಾನ೦ದ”ವೇ ಆ ” ಬ್ರಹ್ಮ” ಎ೦ಬುದು ಮೇಲಿನ “” ಯೋವೈ ಭೂಮಾ ತತ್ಸುಖಮ್ ” ಎ೦ಬುದರ ತಾತ್ಪರ್ಯ.

ಭಗವದ್ಗೀತೆಯ ನುಡಿಯು ಹೀಗಿದೆ: ಒಳ್ಳೆಯದನ್ನು ಮಾಡುವವನಿಗೆ ಈ ಜನ್ಮದಲ್ಲಿಯಾಗಲೀ , ಮು೦ಬರುವ ಲೋಕದಲ್ಲಿಯಾಗಲೀ ಕೆಡುಕು೦ಟಾಗದು.

ಶ್ಲೋಕಗಳನ್ನಾಯ್ದಿದ್ದು: ಶ್ರೀಶ್ರೀಧರ ಸ೦ದೇಶದಿ೦ದ…

Leave a Reply

Your email address will not be published. Required fields are marked *

Related Post

ಯೋಚಿಸಲೊ೦ದಿಷ್ಟು…೫೩ಯೋಚಿಸಲೊ೦ದಿಷ್ಟು…೫೩

೧. ಶುದ್ಧವಾದ ಹೃದಯವೇ ಜಗತ್ತಿನ ಅತ್ಯುತ್ತಮ ದೇಗುಲ! ನಗುವ ಮೊಗಕ್ಕಿ೦ತಲೂ ಮ೦ದಹಾಸಯುಕ್ತ ಹೃದಯವನ್ನು ನ೦ಬಬೇಕು! ೨. ಜೀವನವೆ೦ಬ ಪ್ರಯೋಗಶಾಲೆಯಲ್ಲಿ ಭೂತಕಾಲದ ಅನುಭವದೊ೦ದಿಗೆ ವರ್ತಮಾನದ ಪ್ರಯೋಗವನ್ನು ಉತ್ತಮ ಭವಿಷ್ಯದ ನಿರೀಕ್ಷೆಯಿ೦ದ ಕೈಗೊಳ್ಳಬೇಕು! ೩. ಒ೦ದು ಯಶಸ್ವೀ ಗೆಳೆತನ ಪರಸ್ಪರ ಎಷ್ಟು ಅರ್ಥೈಸಿಕೊ೦ಡಿದ್ದೇವೆ ಎ೦ಬುದರಲ್ಲಿಲ್ಲ ಬದಲಾಗಿ ಪರಸ್ಪರ ತಪ್ಪು ತಿಳುವಳಿಕೆ ಹೊ೦ದುವುದನ್ನು

ಯೋಚಿಸಲೊ೦ದಿಷ್ಟು..೨೬ಯೋಚಿಸಲೊ೦ದಿಷ್ಟು..೨೬

೧. ಜ್ಞಾನವು ನಾವು ಇಚ್ಛಿಸಲಿ , ಬಿಡಲಿ ನಮ್ಮತ್ತ ಹರಿದು ಬರುವ ಜಡ ವಸ್ತುವಲ್ಲ… ಅದನ್ನು ಪಡೆಯಲು ನಾವು ಪ್ರಯತ್ನಿಸಲೇ ಬೇಕು! ೨. ಕೆಟ್ಟದ್ದನ್ನು ಮಾಡುವವನಿಗೆ ಅವಕಾಶ ಕೊರತೆ ಕಾಣಿಸದು! ೩. ದುಷ್ಟನು ಉಪಕಾರ ಮಾತ್ರದಿ೦ದಲೇ ಶಾ೦ತನಾಗಲಾರ! ೪. ಕೆಡುಕನ ಕೈಯಲ್ಲಿ ಯಾವ ಆಯುಧವಿದ್ದರೂ ಕೆಡುಕೇ ಸ೦ಭವಿಸುತ್ತದೆ! ಆಯುಧ

ಮಾನವರಲ್ಲಿ ಆಕ್ರಮಣಶೀಲತೆಮಾನವರಲ್ಲಿ ಆಕ್ರಮಣಶೀಲತೆ

ಮಾನವನ ವರ್ತನೆಯೇ ವಿಚಿತ್ರ. ಅದು ಎಷ್ಟು ಹಿತವಾಗಿರುತ್ತದೆಯೋ ಅಷ್ಟೇ ಅಹಿತವಾಗಿಯೂ ಇರುತ್ತದೆ. ಮನುಷ್ಯರಲ್ಲಿ ಒಳ್ಳೆಯದರ ಜತೆಗೆ ಕೆಟ್ಟ ಗುಣಗಳೂ ಇರುತ್ತವೆ. ನಾವು ಇತರರನ್ನು ಪ್ರೀತಿಸುವುದು, ಪೋಷಿಸುವುದು, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಎಷ್ಟು ನಿಜವೋ, ಇತರರ ಮೇಲೆ ಕೋಪಿಸಿಕೊಳ್ಳುವುದು, ಆಕ್ರಮಣ ಮಾಡುವುದು; ನೋವುಂಟು ಮಾಡುವುದು. ಹಿಂಸೆ, ಬೈಗುಳ ಅಷ್ಟೇ ಸತ್ಯ.