ಯೋಚಿಸಲೊ೦ದಿಷ್ಟು… ೬೫

೧. ಅ೦ಧಶ್ರಧ್ಧೆ ಒಳ್ಳೆಯದಲ್ಲ.. ವೈಚಾರಿಕ ಮತಿ ಇರಬೇಕು. ತಪ್ಪು ಮಾಡಿದವರು ಹಿರಿಯರಾಗಲೀ- ಗುರುಗಳಾಗಲೀ, ಅವರನ್ನು ಖ೦ಡಿಸುವ ಛಲವಿರಬೇಕು. ಇದೆಲ್ಲಕ್ಕಿ೦ತಲೂ ಮುಖ್ಯವಾದುದು ನಾವು ಮೊದಲು ಸತ್ಯದ ಹಾದಿಯಲ್ಲಿ ನಡೆಯುತ್ತಿರಬೇಕು!

೨. ಸತ್ಯವನ್ನು ಸ್ವೀಕರಿಸಿ, ಸತ್ಯದ ಹಾದಿಯಲ್ಲಿ ನಡೆಯುವಷ್ಟೂ ದಿನವೂ ನಮ್ಮ ಪ್ರಾಮಾಣಿಕ ನಡೆಗೆ ಕು೦ದು೦ಟಾಗದು!

೩. ಜೀವನದಲ್ಲಿ ರಾಜಿ ಮಾಡಿಕೊಳ್ಳಲೇ ಬೇಕಾಗುತ್ತದೆ. ಆದರೆ ಸುಳ್ಳಿನೊ೦ದಿಗಲ್ಲ!

೪. ಸತ್ಯವನ್ನು ಬಚ್ಚಿಟ್ಟುಕೊಳ್ಳಲಾಗದು. ಯಾವತ್ತಿಗಾದರೂ ಅದು ಹೊರಬರಲೇ ಬೇಕು!

೫. ಜೀವನದಲ್ಲಿ ನಾವು ಎದುರಿಸಬಹುದಾದ ಪರಿಸ್ಠಿತಿಗಳಿಗೆ ನಮ್ಮ ಕಾಣಿಕೆಯೂ ಇರುತ್ತದೆ!

೬. ಮಕ್ಕಳ ಕುತೂಹಲವನ್ನು ಕೆಲವೊಮ್ಮೆ ತಣಿಸಲೇಬೇಕು! ಅವರ ಪ್ರಶ್ನೆಗಳಿಗೆ ಉತ್ತರಿಸಲೇ ಬೇಕು! ಹಾರಿಕೆಯ ಉತ್ತರ ಸಮಾಧಾನವನ್ನು ನೀಡದಿದ್ದಲ್ಲಿ, ಸರಿಯಾದ ಉತ್ತರವನ್ನು ಕ೦ಡುಕೊಳ್ಳುವ ಮತ್ತೊ೦ದು ಕುತೂಹಲದೊಳಗೆ ಅವರು ಬೀಳಬಹುದು!

೭. ಸಾಮಾನ್ಯವಾಗಿ ಪ್ರತಿಯೊ೦ದರತ್ತವೂ ನಾವು ಪೂರ್ವಾಗ್ರಹ ಮನಸ್ಸಿನ೦ದಲೇ ಗಮನ ಹರಿಸುತ್ತೇವೆ! ಪರಿಸ್ಠಿತಿಯ ಉಗಮದ ಮೂಲಕ್ಕೆ ನಮ್ಮಲ್ಲಿ ಸಿಧ್ಧ ಉತ್ತರವೊ೦ದು ತಯಾರಾಗಿರುತ್ತದೆ!

೮. ಇದ್ದುದರೊಳಗೆ ಸುಖವನ್ನು ಕಾಣುವ ಮನಸ್ಸೆ೦ಬುದು ಎ೦ಥಹಾ ಪರಿಸ್ಥಿತಿಯನ್ನಾದರೂ ಎದುರಿಸಲು ಮನಸ್ಸಿನೊಡೆಯನನ್ನು ಪ್ರೇರೇಪಿಸುತ್ತದೆ!

೯. ವಿಧಿ ಲಿಖಿತ ತಪ್ಪಿಸಲಾಗದು! ಕಷ್ಟಗಳನ್ನೆದುರಿಸಲಾಗದೇ ದೇವರಲ್ಲಿ ಮೊರೆ ಹೋಗುವವರು ದೇವಸ್ಥಾನಗಳಿಗೆ- ದೇವರ ಹು೦ಡಿಗಳಿಗೆ ಹಣ ಹಾಕುವ ಬದಲು ಬೇರೇನನ್ನೂ ಮಾಡರು! ಕಷ್ಟದಿ೦ದ ಹೊರ ಬರುವ ಚಿ೦ತನೆಯನ್ನಾಗಲೀ ಉಪಾಯವನ್ನಾಗಲೀ ಮಾಡುವ ಗೋಜಿಗೇ ಹೋಗರು!

೧೦. ವಿಧಿ ಎನ್ನುವುಧು ದೇವರ ಉತ್ಸವ ಮೂರ್ತಿಯನ್ನೂ ಕಾಡದೇ ಇರದು!

೧೧. ಸತ್ಯದ ಹಾದಿಯಲ್ಲಿ ನಡೆಯುವವರ ಮು೦ದೆ ನಡೆಯಲಾಗದಷ್ಟು ಮುಳ್ಳಿನ ಹಾದಿ ಚಾಚಿಕೊ೦ಡಿರುತ್ತದೆ!

೧೨. ಪ್ರಾಮಾಣಿಕತೆಯೆ೦ಬುದು ಬದುಕನ್ನು ಬೆಳಗುವ ಸಾಧನವಾಗಿರುವ೦ತೆಯೇ ಕೆಲವೊಮ್ಮೆ ಬದುಕನ್ನು ಆರಿಸುವ ಬೆ೦ಕಿಯಾಗಲೂ ಬಹುದು! ೧೩.ಸ೦ಸಾರದಲ್ಲಿ ಸಾಮರಸ್ಯವಿದ್ದರಷ್ಟೇ ಸಾಲದು! ಪರಸ್ಪರ ನ೦ಬಿಕೆ ಹಾಗೂ ಗೌರವಗಳಿರಬೇಕು.

೧೪. ಕೆಟ್ಟ ಯೋಚನೆಗಳನ್ನು ಮಾಡುವವನು ಹಾಗೂ ಮತ್ತೊಬ್ಬರ ಬದುಕಿನಲ್ಲಿನ ಬೆ೦ಕಿಯಲ್ಲಿ ತನ್ನ ಆಹಾರವನ್ನು ಬೇಯಿಸಿಕೊಳ್ಳವವನು, ತನ್ನವರಿಗೂ ಒಳಿತನ್ನು ಬಯಸನು!

೧೫.ಸತ್ಯದ ಹಾದಿಯಲ್ಲಿ ಆರ೦ಭದಲ್ಲಿ ಬೀಸುವ ತ೦ಗಾಳಿ ಕ್ರಮೇಣವಾಗಿ ಬಿರುಗಾಳಿಯಾಗಬಹುದು! ಎದೆಯೊಡ್ಡಿ ನಿಲ್ಲುವ ಹಾಗೂ ಗೆಲ್ಲುವ ಛಲವಿರಬೇಕಷ್ಟೇ!

Leave a Reply

Your email address will not be published. Required fields are marked *

Related Post

ಯೋಚಿಸಲೊ೦ದಿಷ್ಟು… ೧೪ಯೋಚಿಸಲೊ೦ದಿಷ್ಟು… ೧೪

೧. ದೈಹಿಕವಾಗಿ ವೃಧ್ಢರಾಗಿದ್ದರೂ,ನಮ್ಮಲ್ಲಿನ ಸತತ ಕ್ರಿಯಾಶೀಲತೆ ನಮ್ಮಲ್ಲಿ ಮಾನಸಿಕ ವೃಧ್ಧತೆ ಉ೦ಟಾಗುವುದನ್ನು ಮು೦ದೂಡುತ್ತದೆ! ೨. ಕೀರ್ತಿಯೆನ್ನುವುದು ನೀರಿನಲ್ಲಿನ ಅಲೆಯ೦ತೆ!ಒಮ್ಮೊಮ್ಮೆ ದೊಡ್ದದಾಗಲೂಬಹುದು!ಇದ್ದಕ್ಕಿದ್ದ೦ತೆ ಮಾಯವಾಗಲೂಬಹುದು!              ೩. ಯಶಸ್ಸು ಎನ್ನುವುದು ನದಿಯ೦ತೆ! ಹಗುರವಾದುದನ್ನು ತೇಲಿಸಿದರೆ, ಭಾರವಾದುದನ್ನು ಮುಳುಗಿಸುತ್ತದೆ!                                      ೪. ದು:ಖವನ್ನು ಅನುಭವಿಸಿದಾಗಲೇ ಸ೦ತಸದ ಅರಿವಾಗುವುದು,,ನೋವನ್ನು ಅನುಭವಿಸಿದಾಗಲೇ ಒತ್ತಡದ ಅರಿವಾಗುವುದು, ದ್ವೇಷ ವೆ೦ಬುದರಿ೦ದಲೇ ಪ್ರೀತಿಯ

ಯೋಚಿಸಲೊ೦ದಿಷ್ಟು… ೭ಯೋಚಿಸಲೊ೦ದಿಷ್ಟು… ೭

೧.  ಸ೦ಬ೦ಧಗಳನ್ನು ಬೆಳೆಸಿ, ಉಳಿಸಿಕೊಳ್ಳುವುದೆ೦ದರೆ ಒ೦ದು ಮಹಾ ಗ್ರ೦ಥವನ್ನೇ ಬರೆದ೦ತೆ. ಒ೦ದು ಮಹಾ ಗ್ರ೦ಥವನ್ನು ಬರೆ ಯಲು ಸೃಜನಶೀಲತೆ ಹಾಗೂ ಬಹಳ ಸಮಯ ಬೇಕೋ ಹಾಗೇ ಸ೦ಬ೦ಧವನ್ನು ಬೆಳೆಸಿ,ಉಳಿಸಿಕೊಳ್ಳಲು   ವಿಶ್ವಾಸ ಹಾಗೂ ನ೦ಬಿಕೆ ಮುಖ್ಯ.ಆದರೆ ಬರೆದ ಗ್ರ೦ಥವನ್ನು ಸುಟ್ಟುಹಾಕಲು ಒ೦ದು ಕ್ಷಣ ಸಾಕು! ಹಾಗೆಯೇ ಸ೦ಬ೦ಧಗಳು ಮುರಿಯಲೂ ಕೂಡಾ

ಯೋಚಿಸಲೊ೦ದಿಷ್ಟು…೪೨ಯೋಚಿಸಲೊ೦ದಿಷ್ಟು…೪೨

೧. ನಾಳಿನ ಬಗ್ಗೆ ಕನಸು ಕಾಣದೇ ಯಾವುದೇ ಗುರಿಯನ್ನೂ ಸಾಧಿಸಲು ನಾವು ಸಮರ್ಥರಾಗುವುದಿಲ್ಲ! ಡಾ|| ಡಿ.ವೀರೇ೦ದ್ರ ಹೆಗ್ಗಡೆ ೨. ಎಲ್ಲರೂ ಬದುಕುವ ಕಲ್ಪನೆಯೇ ಧರ್ಮ! – ಡಾ|| ಡಿ.ವೀರೇ೦ದ್ರ ಹೆಗ್ಗಡೆ ೩. ನಮ್ಮ ಜೊತೆಯಲ್ಲಿ ಇರುವುದು ನಾವು ಗಳಿಸಿದ ಜ್ಞಾನ ಮಾತ್ರ!! ೪.ಒಳ್ಳೆಯ ಹೃದಯವ೦ತಿಕೆ ಇರುವವರನ್ನು ಸುಲಭವಾಗಿ ಎದುರಿಸುವುದು