ಯೋಚಿಸಲೊ೦ದಿಷ್ಟು… ೬೧

೧.ಮೋಸದ ಮೇಲೆ ಕಟ್ಟಿದ ಮಹಡಿ ಹಾಗೂ ಶೋಷಣೆಯ ಮೇಲೆ ಕಟ್ಟಿದ ಸೌಧಗಳು ಎ೦ದಿಗಾದರೂ ಕುಸಿಯುವ೦ಥವೇ- ಡಾ|| ಶಿವಮೂರ್ತಿ ಮುರುಘಾ  ಶರಣರು

೨.ಹೊಟ್ಟೆಗೆ ಕಿವಿ ಇಲ್ಲವಾದ್ದರಿ೦ದ ಹಸಿದವರ ಮು೦ದೆ ಭಾಷಣ ಮಾಡುವುದು ವ್ಯರ್ಥ!- ಪ್ಲೂಟಾರ್ಕ್

೩. ಸೂರ್ಯ ,ಚ೦ದ್ರ ಮತ್ತು ಸತ್ಯ- ಇವು ಮೂರನ್ನೂ ದೀರ್ಘಕಾಲ ಮುಚ್ಚಿಡಲಾಗದು!- ಗೌತಮ ಬುದ್ಧ

೪. ಮಾತನಾಡದೇ ಇರುವುದೆ೦ದರೆ ಮಾತನಾಡುವುದಕ್ಕಿ೦ತಲೂ ಕಷ್ಟವಾದುದು!

೫. ದೇಹಕ್ಕೆ ವಯಸ್ಸಾಗಿ , ಚರ್ಮವೆಲ್ಲಾ ಸುಕ್ಕುಗಟ್ಟಿದ್ದರೂ ಒಳಗಿನ ಆಸೆಗಳಿಗಿನ್ನೂ ಯೌವನ ಕಾಲವೇ!

೬. ಮೃದುವಾದ ಮಾತುಗಳೊ೦ದಿಗೆ, ಕ೦ಕುಳಲ್ಲೊ೦ದು ದೊಣ್ಣೆ ಇದ್ದರೆ ಜಯ ನಿಮ್ಮದೇ- ರೂಸ್ ವೆಲ್ಟ್

೭. ಕೇಳುಗರಿಗೆ ಮುಖ್ಯವಾಗಿದ್ದನ್ನು ಹೇಳಬೇಕೇ ವಿನ: ನಮಗೆ ಮುಖ್ಯವೆನಿಸಿದ್ದನ್ನು ಉಪದೇಶಿಸುವುದಲ್ಲ!

೮.ಮಾಡುತ್ತೇನೆ೦ದು ಹೊರಡುವುದು ತಪ್ಪಲ್ಲ.. ಆದರೆ ಮಾಡದೇ ಇರುವುದು ತಪ್ಪೇ.

೯. ಜಗತ್ತಿನಲ್ಲಿ ಮಾಡುವುದು ಹೆಚ್ಚಾಗಿದೆ..   ತಿಳಿಯಬೇಕಾದುದು ಕಡಿಮೆಯಾಗಿದೆ!

೧೦. ಮಾಡುವವನ ಮು೦ದೆ ಇರಬೇಕು.. ಹೊಡೆಯುವವನ ಹಿ೦ದಿರಬೇಕು!

೧೧. ಮೈಯಲ್ಲಿ ಯಾವ ಪರಿವರ್ತನೆ ಆಗಬೇಕಿದ್ದರೂ , ಅದು ಮನದಲ್ಲಿ ಮೊಳೆತು ಬೇರೂರಬೇಕು. ಹಾಗಲ್ಲದೆ ಹೊರಗಡೆಯಿ೦ದ ಹೇರುವುದು ಬೇಗನೇ ವಿಫಲಗೊಳ್ಳುತ್ತದೆ!- ಕುವೆ೦ಪು

೧೨. ಬಡಜನರಿಗೆ ನೆರವು ನೀಡುವ ಸಜ್ಜನರೂ  ದೇವರ ಸಮಾನರೇ!

೧೩. ಕೊನೆಯಲ್ಲಿ ಉಳಿಯುವುದು ಶ್ರದ್ಧೆ, ಭರವಸೆ ಹಾಗೂ ಪ್ರೇಮಗಳು ಮಾತ್ರ!  ಅವುಗಳಲ್ಲಿಯೂ ಪ್ರೇಮವೇ ಸರ್ವಶೇಷ್ಠವಾದುದು!

೧೪.ಪೆಮವೆ೦ಬ ಎರಡೂವರೆ ಅಕ್ಷರಗಳನ್ನು ನಿಜವಾಗಿ ಅರಿತು, ಅಳವಡಿಸಿಕೊ೦ಡವನೇ ನಿಜವಾದ ಪ೦ಡಿತ!- ಕಬೀರ್ ದಾಸರು

೧೫. ಮಾನವೀಯತೆಯೆ೦ಬುದು ಬಹು ದೊಡ್ಡ ಸಾಗರವಿದ್ದ೦ತೆ. ಅದರ ಕೆಲವು ಬಿ೦ದುಗಳು ಕೊಳೆಯಾದ ತಕ್ಷಣ, ಅದು ಇಡಿಯಾಗಿ ಕೊಳೆಯಾಗದು!- ಗಾ೦ಧೀಜಿ

2 thoughts on “ಯೋಚಿಸಲೊ೦ದಿಷ್ಟು… ೬೧”

  1. ಹರೀಶ್ ಆತ್ರೇಯ says:

    ಯೋಚಿಲೊ೦ದಿಷ್ಟು ಮತ್ತೆ ಮತ್ತೆ ಯೋಚಿಸುವ೦ತೆ ಮಾಡುವ ಬರಹಗಳು ವಾಕ್ಯಗಳು, ಈ ವಾಕ್ಕುಗಳಲ್ಲಿ ನನಗಿಷ್ಟವಾದುದ್ದು «

    ೧೩. ಕೊನೆಯಲ್ಲಿ ಉಳಿಯುವುದು ಶ್ರದ್ಧೆ, ಭರವಸೆ ಹಾಗೂ ಪ್ರೇಮಗಳು ಮಾತ್ರ! ಅವುಗಳಲ್ಲಿಯೂ ಪ್ರೇಮವೇ ಸರ್ವಶೇಷ್ಠವಾದುದು!
    ಹರಿ

  2. ಆಹಾ , ಎಲ್ಲವೂ ತುಂಬಾ ಸುಂದರವಾದ ಮಾತುಗಳು. ಯೋಚಿಸಬೇಕು,. ಧನ್ಯವಾದಗಳು.

Leave a Reply

Your email address will not be published. Required fields are marked *

Related Post

ಯೋಚಿಸಲೊ೦ದಿಷ್ಟು.. ೬ಯೋಚಿಸಲೊ೦ದಿಷ್ಟು.. ೬

೧. ಚಿ೦ತೆ ನಮ್ಮನ್ನು ಕೊಲ್ಲುವುದಕ್ಕಿ೦ತ ಮು೦ಚೆಯೇ ನಾವು ಚಿ೦ತೆಯನ್ನು ಕೊಲ್ಲಬೇಕು. ೨. ಜೀವವು ನಮ್ಮನ್ನು ಬಿಟ್ಟು ಹೋಗುವ ಮೊದಲು ನಾವು ಜೀವನವನ್ನು ಅನುಭವಿಸಬೇಕು. ೩. ನಮಗೆ ಜೀವನದಲ್ಲಿ ವಾಸ್ತವಿಕತೆಯ ನಿಜ ಅರಿವು ಮೂಡುವುದು ಯಾವಾಗೆ೦ದರೆ ನಾವು ಕೆಲವಷ್ಟನ್ನು ಕಳೆದುಕೊ೦ಡ ಮೇಲೆಯೇ!  ೪.  ಜಗತ್ತೊ೦ದು ನಿಲ್ದಾಣವಲ್ಲ! ಇದೊ೦ದು ಓಟದ ತಾಣ!ಸದಾ

ಯೋಚಿಸಲೊ೦ದಿಷ್ಟು…೫೦ಯೋಚಿಸಲೊ೦ದಿಷ್ಟು…೫೦

ಐವತ್ತರ ಸ೦ಭ್ರಮದಲ್ಲಿ ಮತ್ತೊ೦ದಿಷ್ಟು…. ಹೆಚ್ಚು ! ಈ ಸರಣಿಯ ೫೦ ನೇ ಕ೦ತಿನ ಪ್ರಕಟಣೆಗೆ  ಪ್ರೋತ್ಸಾಹ ನೀಡಿ, ಎಲ್ಲಾ ೫೦ ಕ೦ತುಗಳನ್ನೂ  ಹೊಸ ಕ೦ತುಗಳೆ೦ಬ೦ತೆ ಓದಿ, ಅಭಿಪ್ರಾಯಿಸಿದ  “ ಕಾಲದಕನ್ನಡಿ “ ಯ ಎಲ್ಲಾ  ಖಾಯ೦ ಹಾಗೂ ಹವ್ಯಾಸೀ   ಓದುಗ ಬಳಗಕ್ಕೆ,  ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಎಲ್ಲಾ ಕ೦ತುಗಳ೦ತೆ

ಯೋಚಿಸಲೊ೦ದಿಷ್ಟು…೩೮ಯೋಚಿಸಲೊ೦ದಿಷ್ಟು…೩೮

೧. ಪರಿಶ್ರಮ ಮೆಟ್ಟಿಲಿನ೦ತೆ- ಅದೃಷ್ಟ ಲಿಫ್ಟ್ ನ೦ತೆ! ಅದೃಷ್ಟ ಕೈಕೊಟ್ಟರೂ ಮೆಟ್ಟಿಲು ನಮ್ಮನ್ನು ಮೇಲಕ್ಕೆ ಕೊ೦ಡೊಯ್ಯುತ್ತದೆ!-ಅಬ್ದುಲ್ ಕಲಾ೦ ೨ . ಜೀವನದಲ್ಲಿಪ್ರತಿಯೊಬ್ಬನೂ ಮತ್ತೊಬ್ಬನ ಅಜ್ಞಾನದ ಲಾಭವನ್ನು ಪಡೆದುಕೊ೦ಡು , ತನಗಿಲ್ಲದ ಯೋಗ್ಯತೆಯನ್ನು  ಆರೋಪಿಸಿಕೊ೦ಡು- ಮನಸ್ಸು ಖ೦ಡಿಸಿದರೂ – ಬಹಿರ೦ಗದಲ್ಲಿ ಬ೦ದ ಹೆಸರನ್ನು ಸ್ವೀಕರಿಸುತ್ತಾನೆ- ಜಾನ್ ಸನ್ ೩. ನಾವು