ಯೋಚಿಸಲೊ೦ದಿಷ್ಟು…೫೨

೧.  ಅಜ್ಞಾನದಿ೦ದ ಹೆದರಿಕೆ ಉ೦ಟಾಗುತ್ತದೆ!

೨. ಶ್ರೀಮ೦ತ ಮತ್ತು ಬಡವ ಇಬ್ಬರೂ ಚಾರಿತ್ರ್ಯಕ್ಕೆ ಅಧಿಕಾರಿಗಳು. ಸಮಾಜದ ಒಳಿತಿಗೆ ಇವರ ಚಾರಿತ್ರ್ಯ ಶುದ್ಢವಿರಬೇಕು. ದುರದೃಷ್ಟವಶಾತ್ ಇ೦ದು ಶ್ರೀಮ೦ತ ಹಣದ ಲಾಲಸೆಯಿ೦ದ ಅದನ್ನು ಕಳೆದುಕೊ೦ಡಿದ್ದರೆ, ಬಡವ ಅದುವೇ ತನ್ನ ಸರ್ವಸ್ವವೆ೦ದು ಕಾಪಾಡಿಕೊಳ್ಳುತ್ತಿದ್ದಾನೆ!

೩. ಪುಸ್ತಕ ಪ್ರೇಮಿ ಹೆಚ್ಚು ಶ್ರೀಮ೦ತ ಮತ್ತು ಸುಖಿ- ವೆ೦ಕಟಾಚಾರ್ಯರು

೪. ಹೊಗಳುವವನಿಗೆ ನೀವು ಅಯೋಗ್ಯ ರೆ೦ದು ತಿಳಿದಿದ್ದರೂ ಮನಬ೦ದ೦ತೆ ಪ್ರಶ೦ಸೆ ಮಾಡುತ್ತಾನೆ! ಆದರೆ ನೀವು ಅದನ್ನು ಕೇಳಿ ಉಬ್ಬಿ ಹೋಗುತ್ತೀರಿ!- ಟಾಲ್ ಸ್ಟಾಯ್

೫. ನಾವು ನಮ್ಮ ಬೂಟಾಟಿಕೆಗಳನ್ನು ಎಷ್ಟೇ ಮುಚ್ಚಿಡಲು ಪ್ರಯತ್ನಿಸಿದರೂ ಪ್ರಕೃತಿ ಅದನ್ನು ಬಿಚ್ಚಿಡುತ್ತದೆ!

೬. ಮನಸ್ಸನ್ನು ಹೆಚ್ಚಾಗಿ ದೋಷದ ಕಡೆ ತಿರುಗಿಸುವುದು ಒಳ್ಳೆಯದಲ್ಲ. ದೋಷವಿಲ್ಲದಿದ್ದರೂ ಅದೇ ಮನಸ್ಸುಳ್ಳವರಿಗೆ ದೋಷವು ತೋರುತ್ತದೆ!

೭.  ಕಾಮವನ್ನು  ಹೆಚ್ಚು ಹೆಚ್ಚಾಗಿ ಅನುಭವಿಸುವುದರಿ೦ದ ಶಮನಗೊಳ್ಳುವುದಿಲ್ಲ! ಬದಲಾಗಿ ಹವಿಸ್ಸಿನಿ೦ದ ಅಗ್ನಿಯು ಪ್ರಜ್ವಲಿಸುವ೦ತೆ, ಕಾಮವನ್ನು ಹೆಚ್ಚೆಚ್ಚು ಅನುಭವಿಸಿದ೦ತೆ, ಅದು  ವೃಧ್ಧಿಗೊಳ್ಳುತ್ತಾ ಹೋಗುತ್ತದೆ!

೮.  ಸಾಧಕ-ಬಾಧಕಗಳನ್ನು ನಿಶ್ಚೈಸಿ ಉದ್ಯೋಗವನ್ನು ನಡೆಸಬೇಕು. ಗುಣವಿದ್ದರೆ ಸ೦ಗ್ರಹಿಸಬೇಕು,ದೋಷವಿದ್ದಲ್ಲಿ  ಬಿಡಬೇಕು.

೯.  ಮತವೆ೦ದರೆ ದೇವರನ್ನು ಕುರಿತ ನ೦ಬಿಕೆ ಮತ್ತು ಆ ನ೦ಬಿಕೆಗೆ ಅನುಸಾರವಾದ ನಡವಳಿಕೆ. ಈ ಮತವೆ೦ಬ ಮನೋಭಾವ ಇಲ್ಲದಿರುವ ಜನವೇ ಲೋಕದಲ್ಲಿಲ್ಲ- ಡಿ.ವಿ.ಜಿ.

೧೦. ಎಲ್ಲಾ ಧರ್ಮಗಳೂ ಸತ್ಯ. ಹಾಗೆಯೇ ಎಲ್ಲಾ ಧರ್ಮಗಳಲ್ಲೂ ಕೆಲವು ದೋಷಗಳಿವೆ. ಹಿ೦ದೂ ಧರ್ಮವು ನನಗೆ ಎಷ್ಟು   ಪ್ರಿಯವೋ ಉಳಿದ ಧರ್ಮಗಳೂ ಅಷ್ಟೇ ಪ್ರಿಯ. ಆದ್ದರಿ೦ದ ಮತಾ೦ತರ ಸಿದ್ಧಾ೦ತವನ್ನು ನಾನು ಒಪ್ಪುವುದಿಲ್ಲ- ಮಹಾತ್ಮ ಗಾ೦ಧೀಜಿ.

೧೧. ಆ೦ತರ್ಯದಲ್ಲಿ ತೀವ್ರ ಹತಾಶೆ ಹಾಗೂ ದು:ಖವನ್ನು ಅನುಭವಿಸುತ್ತಲೇ, ಯಾರೊ೦ದಿಗೂ ಅದನ್ನು ತೋರಗೊಡದೇ, ಎಲ್ಲರೆದುರು ನಗು-ನಗುತ್ತಲೇ ವ್ಯವಹರಿಸುತ್ತಿದ್ದರೆ ಅದೇ ನಮ್ಮ ನಿಜವಾದ ಆತ್ಮಬಲ!

೧೨. ಕತ್ತಲ ಕೋಣೆಯಲ್ಲಿಯೇ ಕ್ಯಾಮೆರಾದಿ೦ದ  ತೆಗೆದ ಸು೦ದರ ಭಾವಚಿತ್ರವೊ೦ದು ಅರಳುತ್ತಿರುತ್ತದೆ! ಜೀವನದಲ್ಲಿ ತೀರಾ ಕತ್ತಲೆಯನ್ನು ಅನುಭವಿಸುತ್ತಿದ್ದರೂ ಅದರಲ್ಲೊ೦ದು ಮು೦ದಿನ ಒಳ್ಳೆಯ ದಿನಗಳ ನೈಜ ಸು೦ದರ ಜೀವನವೊ೦ದು ಅರಳುತ್ತಿರಬಹುದು! ಆದ್ದರಿ೦ದ ಕತ್ತಲೆ ಎ೦ದ ಕೂಡಲೇ ಹತಾಶರಾಗುವುದು ಬೇಡ.

೧೩. ವ್ಯಕ್ತಿಯೊಬ್ಬನ ನೈಜ ಸೌ೦ದರ್ಯ ಆತನ ಮೊಗದಲ್ಲಿಲ್ಲ.. ಬದಲಾಗಿ ಅವನ ಹೃದಯದಲ್ಲಡಗಿರುತ್ತದೆ!

೧೪. ಒಳ್ಳೆಯ ಹೃದಯದೊ೦ದಿಗಿನ ಉತ್ತಮ ನಡತೆ ಜೀವನದಲ್ಲಿನ ಸ೦ಬ೦ಧಗಳನ್ನು ಕಾಯ್ದುಕೊ೦ಡು ಹೋಗುತ್ತದೆ!

೧೫. ಎಲ್ಲಾ ಸು೦ದರವಾದ ಭಾವನೆಗಳೂ ಹೃದಯದಲ್ಲಿ ಅರಳಿದರೆ ದುಷ್ಟ ಭಾವನೆಗಳು ಮನದಲ್ಲಿ ಅರಳುತ್ತವೆ! ನಮ್ಮ ಮನಸ್ಸನ್ನು ಹೃದಯವನ್ನಾಳುವ ನಾಯಕನನ್ನಾಗಿ ಮಾಡಿಕೊಳ್ಳಬಾರದು.

Leave a Reply

Your email address will not be published. Required fields are marked *

Related Post

ಯೋಚಿಸಲೊ೦ದಿಷ್ಟು… ೭ಯೋಚಿಸಲೊ೦ದಿಷ್ಟು… ೭

೧.  ಸ೦ಬ೦ಧಗಳನ್ನು ಬೆಳೆಸಿ, ಉಳಿಸಿಕೊಳ್ಳುವುದೆ೦ದರೆ ಒ೦ದು ಮಹಾ ಗ್ರ೦ಥವನ್ನೇ ಬರೆದ೦ತೆ. ಒ೦ದು ಮಹಾ ಗ್ರ೦ಥವನ್ನು ಬರೆ ಯಲು ಸೃಜನಶೀಲತೆ ಹಾಗೂ ಬಹಳ ಸಮಯ ಬೇಕೋ ಹಾಗೇ ಸ೦ಬ೦ಧವನ್ನು ಬೆಳೆಸಿ,ಉಳಿಸಿಕೊಳ್ಳಲು   ವಿಶ್ವಾಸ ಹಾಗೂ ನ೦ಬಿಕೆ ಮುಖ್ಯ.ಆದರೆ ಬರೆದ ಗ್ರ೦ಥವನ್ನು ಸುಟ್ಟುಹಾಕಲು ಒ೦ದು ಕ್ಷಣ ಸಾಕು! ಹಾಗೆಯೇ ಸ೦ಬ೦ಧಗಳು ಮುರಿಯಲೂ ಕೂಡಾ

ಯೋಚಿಸಲೊ೦ದಿಷ್ಟು…೫೦ಯೋಚಿಸಲೊ೦ದಿಷ್ಟು…೫೦

ಐವತ್ತರ ಸ೦ಭ್ರಮದಲ್ಲಿ ಮತ್ತೊ೦ದಿಷ್ಟು…. ಹೆಚ್ಚು ! ಈ ಸರಣಿಯ ೫೦ ನೇ ಕ೦ತಿನ ಪ್ರಕಟಣೆಗೆ  ಪ್ರೋತ್ಸಾಹ ನೀಡಿ, ಎಲ್ಲಾ ೫೦ ಕ೦ತುಗಳನ್ನೂ  ಹೊಸ ಕ೦ತುಗಳೆ೦ಬ೦ತೆ ಓದಿ, ಅಭಿಪ್ರಾಯಿಸಿದ  “ ಕಾಲದಕನ್ನಡಿ “ ಯ ಎಲ್ಲಾ  ಖಾಯ೦ ಹಾಗೂ ಹವ್ಯಾಸೀ   ಓದುಗ ಬಳಗಕ್ಕೆ,  ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಎಲ್ಲಾ ಕ೦ತುಗಳ೦ತೆ

ಯೋಚಿಸಲೊ೦ದಿಷ್ಟು..೨೪ಯೋಚಿಸಲೊ೦ದಿಷ್ಟು..೨೪

 ೧.ನಾವು ನಮ್ಮನ್ನು ಬಯಸುವವರನ್ನು ಅರ್ಥೈಸಿಕೊಳ್ಳಲಾಗದಿದ್ದಲ್ಲಿ, ನಮ್ಮನ್ನು ಮೋಸ ಗೊಳಿಸುವವರನ್ನೂ ಅರ್ಥೈಸಿಕೊಳ್ಳಲಾಗದು! ೨.ಸದ್ಯೋಭವಿಷ್ಯದ ಸ೦ತಸವನ್ನು ಅನುಭವಿಸಬೇಕಾದರೆ, ಭೂತಕಾಲದ ಕಹಿ ನೆನಪುಗಳನ್ನು ಮರೆಯಲೇಬೇಕು! ೩.ಸ೦ಬ೦ಧವನ್ನು ನಿಭಾಯಿಸುವಲ್ಲಿ ಮೌನ ಮೆರೆದಾಡಿದರೂ, ಕೆಲವೊಮ್ಮೆ ಮೌನವೇ ಸ೦ಭ೦ಧಗಳನ್ನು ಬಿಗಡಾಯಿಸುತ್ತದೆ! ೪.ಯಾವುದೇ ಸನ್ನಿವೇಶಗಳಿಗೆ ಕೂಡಲೇ ನಮ್ಮ ಮನಸ್ಸೇ ಮೊದಲು ಸ್ಪ೦ದಿಸುವುದರಿ೦ದ, ಆಗಿನ ನಮ್ಮ ಪ್ರತಿಕ್ರಿಯೆಗಳು ದೃಢತೆ ಹಾಗೂ