ಯೋಚಿಸಲೊ೦ದಿಷ್ಟು…೫೧

೧.ಆತ್ಮಗೌರವವನ್ನು ಮೊದಲು ರಕ್ಷಿಸಿಕೊಳ್ಳಬೇಕು.ಆತ್ಮದ ಹತ್ಯೆಯಿ೦ದ ಸಿಗಬಹುದಾದ ಯಾವುದೇ ಸ೦ತಸವು ತೃಣಕ್ಕೆ ಸಮಾನವಾದುದು.

೨.ಪರಿಸ್ಠಿತಿಗಳ ಸುಳಿವಲ್ಲಿ ಸಿಲುಕಿರುವ ಮನುಷ್ಯ ಪರಿಸ್ಠಿತಿಗಳನ್ನು ಬಿಡುವುದರಿ೦ದ ಬಚಾವಾಗಬಲ್ಲ- ಅರಿಸ್ಟಾಟಲ್.

೩.ಈ ಜಗತ್ತಿನಲ್ಲಿ ದುರ್ಬಲ ಹಾಗೂ ದರಿದ್ರನಾಗುವುದೆ೦ದರೆ ದೊಡ್ಡ ಪಾಪ!

೪. ಕಣ್ಣೀರು ಒರೆಸುವವನಿಗಿ೦ತಲೂ ಕಣ್ಣೀರು ಹಾಕದ೦ತೆ ನೋಡಿಕೊಳ್ಳುವವರೇ ಉತ್ತಮರು.

೫. ಕೋಪವೆ೦ಬುದು ಅತ್ಯ೦ತ ಪ್ರಬಲವಾದ ಆಮ್ಲ! ಅದು ಬೀಳುವ ಜಾಗ ಸುಡುವುದಕ್ಕಿ೦ತಲೂ ಇರುವ ಜಾಗವೇ ಹೆಚ್ಚು ಸುಡುತ್ತದೆ!

೬. ಮನಸ್ಸಿನಲ್ಲಿ ಭಾವನೆಗಳಿಗೆ  ಸ್ಠಾನವಿದ್ದರೆ ಸ್ನೇಹ ಅರಳುತ್ತದೆ!

೭. ವ್ಯಕ್ತಿ ಎಷ್ಟು ಎತ್ತರಕ್ಕೆ ಏರಿದ್ದಾನೆ ಎ೦ಬುದು ಮುಖ್ಯವಲ್ಲ! ಬದಲಿಗೆ ಆತ ಕೆಳಕ್ಕೆ ಬಿದ್ದಾಗ ಆತ ಹೇಗೆ ಪುಟಿದು ಏಳಬಲ್ಲ ಎ೦ಬುದರ ಮೇಲೆ ಆತನ ಯಶಸ್ಸನ್ನು ಅಳೆಯಲಾಗುತ್ತದೆ!- ವಿನ್ ಸ್ಟನ್ ಚರ್ಚಿಲ್

೮. ಬ್ರಾಹ್ಮಣನಾದರೂ- ಶ್ರೇಷ್ಠ ಕಲಾವಿದನಾದರೂ ಮನಬ೦ದ೦ತೆ ನಡೆಯುವವನಾಗಿದ್ದಲ್ಲಿ ನಿತ್ಯವೂ ಸಾಕಷ್ಟು ಬಾರಿ ಸಮುದ್ರದಲ್ಲಿ ಮುಳುಗಿದರೂ ಸಾಕಷ್ಟು ಚಿತ್ತ ಶುಧ್ಢಿಯನ್ನು ಹೊ೦ದುವುದಿಲ್ಲ!- ಮಹಾಭಾರತ

೯. ಎಲ್ಲರ ಉನ್ನತಿಯಲ್ಲಿ ತನ್ನ ಉನ್ನತಿಯನ್ನು ಕಾಣಬೇಕು!

೧೦. ಮನುಷ್ಯನಾದವನು ಗಣ್ಯನೆ೦ದೆನಿಸಿಕೊಳ್ಳಬೇಕಾದರೆ ಅವನೊಬ್ಬ ಶ್ರೇಷ್ಠ ಚಿ೦ತಕನಾಗಿರಬೇಕು- ಪೆರಿಯಾರ್

೧೧. ಗಡ್ಡ ಬಿಟ್ಟವರೆಲ್ಲಾ ದಾರ್ಶನಿಕರಲ್ಲ!

೧೨. ನಗುವು ಸಾವನ್ನು ಮು೦ದೂಡುತ್ತದೆ!

೧೩. ಎಲ್ಲರ ಬಾಯಲ್ಲಿಯೂ ಅದೇ ಮಾತು ಬರುತ್ತಿದೆ ಎನ್ನುವುದು ಸುಳ್ಳಿನ ಮತ್ತೊ೦ದು ಮುಖ!

೧೪. ಹಣದ ಮೇಲೆ ನ೦ಬಿಕೆಯನ್ನಿಡುವ ಬದಲಾಗಿ ನ೦ಬಿಕೆಯ ಮೇಲೆ  ಹಣವನ್ನಿಡಬೇಕು!

೧೫. ಎಲ್ಲರೂ ಕೂಗಾಡಬಲ್ಲರು. ಆದರೆ ಮಾತನಾಡುವ ಕಲೆ ಮಾತ್ರ ಕೆಲವರಿಗೆ ಮಾತ್ರ ಸಿದ್ಧಿಸಿರುತ್ತದೆ!

೧೫. ಕ್ರೋಧ ಬರದ೦ತೆ ತಪಸ್ಸನ್ನೂ, ಹೊಟ್ಟೆಕಿಚ್ಚು  ಪಡದೆ ಧರ್ಮವನ್ನು, ಅಪಮಾನಗಳಿಗೆ ಜಗ್ಗದ೦ತೆ ವಿದ್ಯೆಯನ್ನೂ ಸ೦ರಕ್ಷಿಸಿಕೊ೦ಡು ತಪ್ಪುದಾರಿ ತುಳಿಯದ೦ತೆ ಆತ್ಮವನ್ನೂ ಕಾಪಾಡಿಕೊಳ್ಳಬೇಕು.

Leave a Reply

Your email address will not be published. Required fields are marked *

Related Post

ಯೋಚಿಸಲೊ೦ದಿಷ್ಟು…೪೨ಯೋಚಿಸಲೊ೦ದಿಷ್ಟು…೪೨

೧. ನಾಳಿನ ಬಗ್ಗೆ ಕನಸು ಕಾಣದೇ ಯಾವುದೇ ಗುರಿಯನ್ನೂ ಸಾಧಿಸಲು ನಾವು ಸಮರ್ಥರಾಗುವುದಿಲ್ಲ! ಡಾ|| ಡಿ.ವೀರೇ೦ದ್ರ ಹೆಗ್ಗಡೆ ೨. ಎಲ್ಲರೂ ಬದುಕುವ ಕಲ್ಪನೆಯೇ ಧರ್ಮ! – ಡಾ|| ಡಿ.ವೀರೇ೦ದ್ರ ಹೆಗ್ಗಡೆ ೩. ನಮ್ಮ ಜೊತೆಯಲ್ಲಿ ಇರುವುದು ನಾವು ಗಳಿಸಿದ ಜ್ಞಾನ ಮಾತ್ರ!! ೪.ಒಳ್ಳೆಯ ಹೃದಯವ೦ತಿಕೆ ಇರುವವರನ್ನು ಸುಲಭವಾಗಿ ಎದುರಿಸುವುದು

ಯೋಚಿಸಲೊ೦ದಿಷ್ಟು…೫೪ಯೋಚಿಸಲೊ೦ದಿಷ್ಟು…೫೪

೧. ನಾವು ದೇವರನ್ನು ನ೦ಬುವುದಕ್ಕಿ೦ತಲೂ ಹೆಚ್ಚಾಗಿ ಪುರೋಹಿತರನ್ನು ನ೦ಬುತ್ತೇವೆ! ೨. ಹಣ- ಅ೦ತಸ್ತುಗಳ ಹಿ೦ದೆ ಹೊರಟು ನಮ್ಮವರನ್ನು ಕಳೆದುಕೊಳ್ಳುತ್ತಿದ್ದೇವೆ! ಮಾನವ ಸ೦ಬ೦ಧಗಳ ನಡುವೆ ಈ ದಿನಗಳಲ್ಲಿ ಅರ್ಥವಿಲ್ಲದ೦ತಾಗಿದೆ. ೩.  ಪರಸ್ಪರ ಪರಿಧಿಯನ್ನು ದಾಟದಿರುವುದು ಎಲ್ಲಾ ಸ೦ಬ೦ಧಗಳಲ್ಲಿಯೂ ಅತ್ಯವಶ್ಯ. ೪.  ಅಮೇಜಾನ್ ಕಣಿವೆಯಲ್ಲಿನ ಅರಣ್ಯದ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಪ್ರಯತ್ನ