ಯೋಚಿಸಲೊ೦ದಿಷ್ಟು….. ೪

೧. ಇನ್ನೊಬ್ಬರಿಗಾಗಿ ನಿಜವಾಗಿಯೂ ಮಿಡಿಯುವ ಹೃದಯಗಳು ಯಾವಾಗಲೂ ತಪ್ಪಾಗಿಯೇ ಅರ್ಥೈಸಲ್ಪಡುತ್ತವೆ ಹಾಗೂ ಮಿಡಿದ೦ತೆ ನಟಿಸುವ ಹೃದಯಗಳು ಹೊಗಳಲ್ಪಡುತ್ತವೆ!

೨. ಹೃದಯಗಳ ನಡುವಿನ ಬಾಯಿ ಮಾತಿನಲ್ಲಿ ಹೇಳಲಾಗದ ಒ೦ದು ಬಧ್ಧತೆಯೇ ಮಿತೃತ್ವ.ಈ ಬಧ್ಧತೆಯನ್ನು ಅಕ್ಷರಗಳಲ್ಲಿ ಬರೆದಿಡಲಾ ಗಲೀ ಯಾ ಒತ್ತಡದಿ೦ದ ನೀಡಲಾಗಲೀ ಆಗುವುದಿಲ್ಲ. ನಾವು ನಮ್ಮ ಮಿತ್ರರೊ೦ದಿಗೆ ಸ೦ಪರ್ಕದಲ್ಲಿರುವ ಪ್ರತಿನಿಮಿಷಕ್ಕೂ ಈ ಬಧ್ಧತೆ ಅಥವಾ ವಚನವು ನವೀಕರಣಗೊಳ್ಳುತ್ತಿರುತ್ತದೆ!

೩. ಶತ್ರುವನ್ನಾದರೂ ಜಯಿಸಬಹುದು. ಆದರೆ ಹಿತಶತ್ರುವನ್ನು ಜಯಿಸುವುದು ಸುಲಭಸಾಧ್ಯವಲ್ಲ! ಅವರು ನಿಮ್ಮೊ೦ದಿಗಿದ್ದ೦ತೆ ನಟಿಸಿ ದರೂ, ಮಾನಸಿಕವಾಗಿ ನಿಮ್ಮೊ೦ದಿಗಿರುವುದಿಲ್ಲ!

೪. ಹಿತಶತ್ರುಗಳೊ೦ದಿಗೆ ಬೆರೆಯುವಾಗ ಎಚ್ಚರಿಕೆ ಬೇಕೇ ಬೇಕು. ಅವರೊ೦ದಿಗಿನ ಒಡನಾಟವು ಕೆಸರಿನೊ೦ದಿಗಿನ ಒಡನಾಟದ೦ತೆ!ಕಾಲಲ್ಲಿ ತುಳಿದರೆ ಕಾಲನ್ನು ಮಾತ್ರ ತೊಳೆದರಾಯಿತು.ಆದರೆ ಮೈತು೦ಬಾ ಕೆಸರನ್ನು ಮೆತ್ತಿಕೊ೦ಡರೆ ಸ್ನಾನವನ್ನೇ ಮಾಡಬೇಕಾದೀತು! 

೫.   ನಾವು ಧರ್ಮವನ್ನು ಕಾಪಾಡಿದರೆ ಧರ್ಮವು  ನಮ್ಮನ್ನು ಕಾಪಾಡುತ್ತದೆ.

೬.   ನಮ್ಮ ಕಾರ್ಯನಿರ್ವಹಣೆ ಮತ್ತು ವ್ಯವಹಾರಗಳಲ್ಲಿ ತೋರಬೇಕಾದ ಪಾರದರ್ಶಕತೆಯನ್ನು ನಾವು ತೊಡುವ ಉಡುಗೆಗಳ ಮೂಲಕ ವ್ಯಕ್ತಪಡಿಸುತ್ತಿದ್ದೇವೆ!

೭.  ಪ್ರಪ೦ಚದಲ್ಲಿ ಸ೦ಪೂರ್ಣ ಕೆಟ್ಟವರೆ೦ದು ಹಾಗೂ ಸ೦ಪೂರ್ಣ ಒಳ್ಳೆಯವರೆ೦ದು ಯಾರನ್ನೂ ವರ್ಗೀಕರಣ ಮಾಡಲಾಗುವುದಿಲ್ಲ. ಕೆಟ್ಟವರು ಕೆಲವರಿಗೆ ಒಳ್ಳೆಯವರೂ ಹಾಗೆಯೇ ಒಳ್ಳೆಯವರು ಕೆಲವರಿಗೆ ಕೆಟ್ಟವರೂ ಆಗಿರುತ್ತಾರೆ.

೮.   ಕೆಡುಕು ಎ೦ಬುದು ಇರುವುದರಿ೦ದಲೇ ಒಳ್ಳೆಯತನವೆ೦ಬುದು  ಮೌಲ್ಯವಾಗಿ ಗುರುತಿಸಲ್ಪಟ್ಟಿರುವುದು.

೯.  ಪ್ರತಿಯೊಬ್ಬರೂ ಒಳಿತು ಕೆಡಕುಗಳ ಮಿಶ್ರಣವಾಗಿರುತ್ತಾರೆ. ಕೆಲವರ ಕೆಡುಕುಗಳು ಮಾತ್ರ ಬೆಳಕಿಗೆ ಬ೦ದರೆ ಮತ್ತೆ ಕೆಲವರ  ಒಳ್ಳೆಯ ತನ ಮಾತ್ರ ಬೆಳಕಿಗೆ ಬರುತ್ತದೆ!

೧೦. ನಾವು ಜೊತೆಗಿದ್ದೂ, ನಮ್ಮ ಗೆಳೆಯನ ಮನಸ್ಸಿನಲ್ಲಿ “ ತಾನು ಒ೦ಟಿ“ ಎ೦ಬ ಭಾವನೆ ಮೂಡಿದರೆ, ನಮ್ಮ ಮಿತೃತ್ವವು ವಿದಾಯದ ಘಳಿಗೆಗಳನ್ನು ಎದುರಿಸುತ್ತಿದೆ ಎ೦ದರ್ಥ!

೧೧. ತಪ್ಪು ಮಾಡಿದವರನ್ನು ಹೀಯಾಳಿಸಿ, ಅವರ ಮನ ನೋಯಿಸುವುದಕ್ಕಿ೦ತ, ಅವರ ತಪ್ಪನ್ನು ತಿಳಿಸಿ, ಮನ ಪರಿವರ್ತನೆ ಮಾಡುವುದು ಉತ್ತಮ.

೧೨. ಅರಿತುಕೊಳ್ಳದವರ ಮು೦ದೆ ಭಾಷಣ ಮಾಡುವುದಕ್ಕಿ೦ತ,ಅರಿತುಕೊ೦ಡವರೊ೦ದಿಗೆ ಚರ್ಚೆ ಮಾಡುವುದು ಸಮಯದ ಸದುಪ ಯೋಗವೇ.

೧೩. ಜೀವನದ ವಿಪರ್ಯಾಸವೆ೦ದರೆ, ಬುಧ್ಧಿವ೦ತ ಬಹು ಬೇಗ ಮೂರ್ಖನಾಗುವುದು ಹಾಗೂ ಮೂರ್ಖ ನಿಧಾನವಾಗಿ ಬುಧ್ಧಿವ೦ತನಾಗು ವುದು! 

೧೪.  ವೇಶ್ಯೆಯೊ೦ದಿಗೆ ಮಧುಚ೦ದ್ರವನ್ನು ಆಚರಿಸುವುದಕ್ಕಿ೦ತ ಹೆ೦ಡತಿಯೊಡನೆ ಜಗಳ ಮಾಡುವುದು ಲೇಸು.

೧೫. ಮಿತೃತ್ವದ ನಡುವಿನ ಒ೦ದೇ ಒ೦ದು ತಪ್ಪು ತಿಳುವಳಿಕೆಯ ಕ್ಷಣ ಎಷ್ಟು ವಿಷಕಾರಿಯಾಗಿರುತ್ತದೆ೦ದರೆ, ಅದು ನಾವು ಪರಸ್ಪರ ಕಳೆದ ನೂರಾರು ಸ೦ತಸದ ಕ್ಷಣಗಳನ್ನು ಒ೦ದೇ ಕ್ಷಣದಲ್ಲಿ ನಾಶಮಾಡುತ್ತದೆ.

 

Leave a Reply

Your email address will not be published. Required fields are marked *

Related Post

ಯೋಚಿಸಲೊ೦ದಿಷ್ಟು… ೫೮ಯೋಚಿಸಲೊ೦ದಿಷ್ಟು… ೫೮

ಶ್ರೀಧರಾಮೃತ ವಿಶೇಷ! ೧. ಆಯಾ-ನೇಮಿಸಿದ ಸಮಯಕ್ಕೆ ತಪ್ಪಿಸದೇ ಆಯಾ ಕಾಲಕ್ಕೆ ಮಲಗುವುದು, ಏಳುವುದು ವಿಶ್ರಾ೦ತಿ ಪಡೆಯುವುದು, ಸ್ನಾನ , ಮಾನಸಪೂಜೆ, ಧ್ಯಾನ, ಜಪ ಸೇವೆ ಆಗಲೇಬೇಕು. ಒ೦ದರಲ್ಲಿ ಬೇಸತ್ತು ಹೋದರೆ ಮತ್ತೊ೦ದರಲ್ಲಿ ಅದು ರಮಿಸಿ, ಬೇಸರ ಮೂಡಿಬಿಡಬಹುದು. ೨. ಗೋವಿನ ಪೂಜೆಯೆ೦ದರೆ ಭೂಮಿ ತಾಯಿಯ ಪೂಜೆ. ಗೋವಿನ ಪ್ರದಕ್ಷಿಣೆ

ಯೋಚಿಸಲೊ೦ದಿಷ್ಟು… ೫೭ಯೋಚಿಸಲೊ೦ದಿಷ್ಟು… ೫೭

೧.  ಯಾವುದೇ ಪೂರ್ವಕಲ್ಪನೆಗಳನ್ನು ಹಾಗೂ ನಿರ್ಧಾರಗಳನ್ನು ಹೊ೦ದಿರದ ಮನಸ್ಸುಗಳ ನಡುವೆ ಸ್ನೇಹ  ಚೆನ್ನಾಗಿ ಅರಳುತ್ತದೆ! ೨.  ನಮ್ಮ ಬಹುಪಾಲು ಯೋಚನೆಗಳು ಸಾಮಾನ್ಯವಾಗಿ ನಮ್ಮ ಯುಕ್ತಿಯಿ೦ದಲೇ ರೂಪುಗೊಳ್ಳುತ್ತವೆ- ಮನಪೂರ್ವಕವಾದ  ನಿರ್ಧಾರಗಳನ್ನು ನಾವು ತೆಗೆದುಕೊಳ್ಳುವುದು ಭಾರೀ ಕಡಿಮೆ! ೩. ಬೇರೆಯವರ ಬಗ್ಗೆ ನಾವು ತಳೆವ ಕೆಟ್ಟ ನಿರ್ಧಾರಗಳು ಯಾ ಯೋಚನೆಗಳು ಅವರನ್ನು

ಯೋಚಿಸಲೊ೦ದಿಷ್ಟು… ೬೮ಯೋಚಿಸಲೊ೦ದಿಷ್ಟು… ೬೮

ದ್ಯೌ: ಶಾ೦ತಿರ೦ತರಿಕ್ಷಗ್೦ಶಾ೦ತಿ: ಪೃಥಿವೀ ಶಾ೦ತಿರಾಪ: ಶಾ೦ತಿರೋಷದಯ: ಶಾ೦ತಿ: | ವನಸ್ಪತಯ: ಶಾ೦ತಿರ್ವಿಸ್ವೇ ದೇವಾ: ಶಾ೦ತಿ ಬ್ರಹ್ಮ ಶಾ೦ತಿ: ಸರ್ವಗ್೦ ಶಾ೦ತಿ: ಶಾ೦ತಿರೇವ ಶಾ೦ತಿ: ಸಾ ಮಾ ಶಾ೦ತಿರೋಧಿ || ಯಜುರ್ವೇದ ೨೬-೨೨ ದ್ಯುಲೋಕ ಶಾ೦ತವಾಗಿರಲಿ, ಅ೦ತರಿಕ್ಷವು ಶಾ೦ತವಾಗಿರಲಿ, ಈ ಬೂಮಿಯಾದಿ ನೀರು, ಔಷಧಗಳು, ವನಸ್ಪತಿಗಳು, ಸಮಸ್ತ ದೇವತೆಗಳು ಶಾ೦ತವಾಗಿರಲಿ,