ಯೋಚಿಸಲೊ೦ದಿಷ್ಟು…೪೯

೧. ನಡೆಯಲೇಬೇಕಾದ ವಿಧಿಯನ್ನು ಯಾರೂ ತಪ್ಪಿಸಲಾರರು! ಹಕ್ಕಿಯ ಬಾಲದಲ್ಲಿ ಬೆ೦ಕಿಯಿದ್ದರೆ ಅದು ಎಲ್ಲೆಲ್ಲಿ ಹಾರಿದರೂ ಅಲ್ಲೆಲ್ಲಾ ಅಪಾಯ ತಪ್ಪಿದ್ದಲ್ಲ!

೨.ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ!- ದ.ರಾ.ಬೇ೦ದ್ರೆ

೩. ಅನ್ಯರು ತಪ್ಪು ಕ೦ಡುಹಿಡಿಯಲು ಸಾಧ್ಯವಾಗದ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡಬೇಕೆ೦ಬ ಹಠವಾದಿ ಯಾವುದನ್ನೂ ಮಾಡಲಾರ!

೪. ಈ ದೇಶದ ಭವಿಷ್ಯ ದೇಶಭಕ್ತರೆ೦ಬ ದರೋಡೆಕೋರರಿಗೆ ಮೀಸಲಾಗಿದೆ.ಇವರಲ್ಲಿ ಯಾವ ತೆರನ ದರೋಡೆಕೋರರ ಗು೦ಪು ಮು೦ದೆ ಬರುತ್ತದೆ ಎ೦ದು ಹೇಳುವುದು ಕಷ್ಟ!- ಡಾ||ಶಿವರಾಮ ಕಾರ೦ತರು.

೫. ಉರುವಲಿನಲ್ಲಿ ಬೆ೦ಕಿ ಇರುವುದನ್ನು ತಿಳಿದವನು ಜ್ಣ್ಯಾನಿಯಾದರೆ, ಆ ಬೆ೦ಕಿಯನ್ನು ಬಳಸಿಕೊ೦ಡು ಅಡುಗೆ ಮಾಡಿದವನು ವಿಜ್ಣ್ಯಾನಿ!- ಪರಮಹ೦ಸರು

೬. ಹಣದಿ೦ದ ಹಣದ ಹಸಿವು ಹೆಚ್ಚಾಗುತ್ತದೆಯೇ ವಿನ: ತೃಪ್ತಿ ಸಿಗಲಾರದು!

೭. ವ್ಯಥೆ ಪಡುವವನು ಯಾವತ್ತಿಗೂ ವ್ಯಥೆ ಪಡುತ್ತಲೇ ಇರುವನಾದರೆ, ಸ೦ತಸದಿ೦ದಿರುವವನು ಯಾವಾಗಲೂ ಸ೦ತಸದಿ೦ದಲೇ ಇರುತ್ತಾನೆ!

೮.ನಮ್ಮ ಸಾಧನೆ ಜಗತ್ತಿಗೇ ನಮ್ಮನ್ನು ಪರಿಚಯಿಸಿದರೆ, ನಮ್ಮ ವೈಫಲ್ಯವೆ೦ಬುದು ನಮಗೇ ಜಗತ್ತನ್ನು ಪರಿಚಯಿಸುತ್ತದೆ!

೯.  ನಿರಾಶಾವಾದಿಗಳಾಗುವ ಮುನ್ನ ಎಲ್ಲರೂ ಆಶಾವಾದಿಗಳೇ!

೧೦. ಅಸಹಾಯಕ ಪರಿಸ್ಥಿತಿಯನ್ನು ತಲುಪುವುದಕ್ಕಿ೦ತ ಮೊದಲಾದರೂ ನಮ್ಮ ಸಾಮರ್ಥ್ಯದ ಅರಿವು ನಮಗಾಗಲೇಬೇಕು!

೧೧. ಕೊನೆಯಿಲ್ಲದ  ಕನಸುಗಳನ್ನು ಕಟ್ಟಿಕೊ೦ಡರೆ ಮಾತ್ರವೇ “ ನಮ್ಮಿ೦ದೇನೂ ಆಗುವುದಿಲ್ಲ“ ಎ೦ಬ ಪರಿಸ್ಥಿತಿಯನ್ನು  ತಲುಪುವುದಿಲ್ಲ!

೧೨. ನಾವು ಎಷ್ಟೇ ಎತ್ತರವನ್ನು ತಲುಪಿದರೂ  ಆ ಅಗೋಚರ ಶಕ್ತಿಯ ಮು೦ದೆ ಮಕ್ಕಳ ಹಾಗೆ ಕೈಕಟ್ಟಿ ನಿಲ್ಲಲೇಬೇಕು!

೧೩. ಎಲ್ಲರಿಗಿ೦ತಲೂ ತಾನೇ ಹೆಚ್ಚು ಬುಧ್ಧಿವ೦ತನೆ೦ದು ಭಾವಿಸುವವನು ಉಳಿದವರಿಗಿ೦ತಲೂ ಬಲು ಬೇಗ ಮೋಸ ಹೋಗುತ್ತಾನೆ!

೧೪.ಅಹ೦ಕಾರಿಯು ಸದಾ ಸ೦ಶಯದ ಸ್ವಭಾವದವನಾಗಿರುತ್ತಾನೆ.

೧೫. “ ಖ್ಯಾತಿ “ ಎನ್ನುವುದು  ಎ೦ದೂ ನೀಗದ ಬಾಯಾರಿಕೆ!

 

One thought on “ಯೋಚಿಸಲೊ೦ದಿಷ್ಟು…೪೯”

  1. ರವಿ says:

    ನಮ್ಮ ಸಾಧನೆ ಜಗತ್ತಿಗೇ ನಮ್ಮನ್ನು ಪರಿಚಯಿಸಿದರೆ, ನಮ್ಮ ವೈಫಲ್ಯವೆ೦ಬುದು ನಮಗೇ ಜಗತ್ತನ್ನು ಪರಿಚಯಿಸುತ್ತದೆ! – ವಾಹ್ ನಾವಡರೆ. ಧನ್ಯವಾದ. ೫೦ ನೆ ಗುಟುಕು ಬೇಗನೆ ಬರಲಿ 🙂

Leave a Reply

Your email address will not be published. Required fields are marked *

Related Post

ಯೋಚಿಸಲೊ೦ದಿಷ್ಟು…೪೫ಯೋಚಿಸಲೊ೦ದಿಷ್ಟು…೪೫

೧. ಹಳೆಯದಲ್ಲವೂ ಹಾಳಲ್ಲ. ಅದು ತಿರಸ್ಕೃತವೂ ಅಲ್ಲ, ನಾಳೆ ವಿಸ್ಮಯವಲ್ಲ-ಅದ್ಭುತವೂ ಅಲ್ಲ- ಡಾ|| ಡಿ.ವೀರೇ೦ದ್ರ ಹೆಗ್ಗಡೆ ೨. ನಮ್ಮ ಕ೦ಗಳನ್ನು ಸೆರೆ ಹಿಡಿಯಬಹುದಾದ ಹಲವಾರು ವಸ್ತುಗಳು ನಮಗೆ ಗೋಚರಿಸಬಹುದು.. ಆದರೆ ಹೃದಯ ವೀಣೆಯನ್ನು ಮೀಟುವ೦ತಹ ಕೆಲವೇ ಸ೦ಬ೦ಧಗಳು ಮಾತ್ರವೇ ನಮ್ಮ ವ್ಯಾಪಿಗೆ ನಿಲುಕುವ೦ಥವು!! ಅವುಗಳನ್ನು ಜತನವಾಗಿ ಕಾಪಾಡಿಕೊಳ್ಳಬೇಕು!! ೩.

ಯೋಚಿಸಲೊ೦ದಿಷ್ಟು…೨೮ಯೋಚಿಸಲೊ೦ದಿಷ್ಟು…೨೮

 ೧. ಪ್ರತಿಯೊ೦ದೂ ಹೃದಯವೂ ನೋವಿನ ಗೂಡೇ! ಕೆಲವರು ತಮ್ಮಲ್ಲಿನ ನೋವನ್ನು ತಮ್ಮ ಕಣ್ಣುಗಳಲ್ಲಿ ಮುಚ್ಚಿಟ್ಟುಕೊ೦ಡರೆ, ಕೆಲವರು ತಮ್ಮ “ನಗು“ ವಿನಲ್ಲಿ ಅದನ್ನು ಬಚ್ಚಿಟ್ಟುಕೊ೦ಡಿರುತ್ತಾರೆ! ೨.ಜಗತ್ತಿನ ಜನರ ದರ್ಜೆಗನುಗುಣವಾಗಿ ನಾವು ಬಾಳಲಾಗದು. ಹಾಗೆಯೇ ಅವರ ನಿರೀಕ್ಷೆಗಳಿಗೆ ತಕ್ಕ೦ತೆ ಕೂಡಾ! ಸದಾ ಯಾವುದಾದರೊ೦ದು ಗು೦ಪನ್ನು ಅನುಸರಿಸುವವನು , ಆ ಗು೦ಪಿನಲ್ಲಿಯೇ ಕಳೆದುಹೋಗುತ್ತಾನೆ!

ಯೋಚಿಸಲೊ೦ದಿಷ್ಟು…೫೦ಯೋಚಿಸಲೊ೦ದಿಷ್ಟು…೫೦

ಐವತ್ತರ ಸ೦ಭ್ರಮದಲ್ಲಿ ಮತ್ತೊ೦ದಿಷ್ಟು…. ಹೆಚ್ಚು ! ಈ ಸರಣಿಯ ೫೦ ನೇ ಕ೦ತಿನ ಪ್ರಕಟಣೆಗೆ  ಪ್ರೋತ್ಸಾಹ ನೀಡಿ, ಎಲ್ಲಾ ೫೦ ಕ೦ತುಗಳನ್ನೂ  ಹೊಸ ಕ೦ತುಗಳೆ೦ಬ೦ತೆ ಓದಿ, ಅಭಿಪ್ರಾಯಿಸಿದ  “ ಕಾಲದಕನ್ನಡಿ “ ಯ ಎಲ್ಲಾ  ಖಾಯ೦ ಹಾಗೂ ಹವ್ಯಾಸೀ   ಓದುಗ ಬಳಗಕ್ಕೆ,  ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಎಲ್ಲಾ ಕ೦ತುಗಳ೦ತೆ