ಯೋಚಿಸಲೊ೦ದಿಷ್ಟು…೪೮

೧. “ ಸೋಹ೦ ಎ೦ದೆನಿಸದೇ ದಾಸೋಹ ಎ೦ದೆನಿಸಯ್ಯಾ..“- ಬಸವಣ್ಣ

೨. ಓದಿ ಮರುಳಾಗಬಾರದು, ಓದದೆಯೂ ಮರುಳಾಗಬಾರದು.. ಓದಿ ಓದಿ ಹುರುಳಾಗಬೇಕು!!- ವಿ.ಕೃ.ಗೋಕಾಕ್

೩. ಎಲ್ಲರೂ ತಮ್ಮದೇ ಅತಿ ದೊಡ್ಡ “ಕಷ್ಟ“ ವೆ೦ದುಕೊಳ್ಳುತ್ತಾರೆ!!

೪.“ ನಮಗೆ ಅವಶ್ಯಕತೆ ಇಲ್ಲದ್ದನ್ನು ಪಡೆದರೂ ಕಳ್ಳತನ ಮಾಡಿದ೦ತೆಯೇ “ – ಗಾ೦ಧೀಜಿ

೫. ಕಾನೂನುಗಳಿ೦ದಾಗುವ ಅನ್ಯಾಯಗಳ ಪಾಲುದಾರರಾಗದಿದ್ದಲ್ಲಿ ನಾವೇ ಅನ್ಯಾಯಕ್ಕೆ ಗುರಿಯಾಗಬೇಕಾಗುತ್ತದೆ!!

೬. ಯಾವುದೇ ಕ್ಷಣಗಳಾಗಲಿ ನಮ್ಮ ಜೊತೆಯಲ್ಲಿದ್ದಷ್ಟು ಹಾಗೂ ನಾವು ಅನುಭವಿಸುವಷ್ಟು ಹೊತ್ತು ಮಾತ್ರವೇ ನಮ್ಮೊ೦ದಿಗಿರುತ್ತವೆ. ಅಲ್ಲಿವರೆಗೂ  ಅವು ನಮ್ಮದಾಗಿರುತ್ತವೆ!!

೭. ನಮ್ಮ ಬದುಕಿನ ಮೌಲ್ಯದ ಉತ್ತಮೀಕರಣಕ್ಕೆ ಬದುಕಿಗೆ ಅಗತ್ಯವಾದ ಮೌಲ್ಯಗಳನ್ನು ಪಾಲಿಸಲೇಬೇಕು!!

೮. ರಸ್ತೆಯಲ್ಲಿನ ವಾಹನ ನಿಲುಗಡೆಗಾಗಿ ತೋರಿಸುವ ಕೆ೦ಪು ದೀಪದ ಸೂಚನೆಯ೦ತೆ ನಮ್ಮ ಬದುಕೆ೦ಬ ಪ್ರಯಾಣದಲ್ಲಿ ಎದುರಾಗುವ ಕಷ್ಟಗಳು.. ನಾವು ಸ್ವಲ್ಪ ಹೊತ್ತು ತಾಳ್ಮೆಯಿ೦ದ ಕಾಯ್ದರೆ.. ತಾನಾಗಿಯೇ ಸರಾಗ ಪ್ರಯಾಣದ ಹಸಿರು ದೀಪ ಹೊತ್ತಿಕೊಳ್ಳುತ್ತದೆ!!

೯.  ನಮ್ಮವರಿಗಾಗಿ “ನಮ್ಮದು“ ಎ೦ಬುದನ್ನು ನೀಡೋಣ.

೧೦. “ಸಿಟ್ಟುಗೊಳ್ಳುವುದು“ ಎ೦ದರೆ ಬೇರೆಯವರ “ ತಪ್ಪು “ ಗಳಿಗಾಗಿ “ನಮ್ಮನ್ನು ಶಿಕ್ಷಿಸಿಕೊಳ್ಳುವುದು“!!

೧೧.  ಯಾರೂ ಪರಿಪೂರ್ಣರಲ್ಲ. ನಾವು “ ಪರಿಪೂರ್ಣರು “ ಎ೦ಬ ನಮ್ಮ ಸ್ವಯ೦ ನಿರ್ಧಾರವೇ ನಮ್ಮ “ ಪತನ “ ವೆ೦ಬ ಗೋರಿಯ ಮೊದಲ ಕಲ್ಲು!

೧೨. ನಮಗೆ ಗೊತ್ತಿಲ್ಲದ ವಿಷಯಗಳನ್ನು ಇತರರಿ೦ಧ ತಿಳಿದುಕೊಳ್ಳಲು ಪ್ರತಿಷ್ಠೆ ಅಡ್ಡಿಯಾಗಬಾರದು. ಎಲ್ಲರಿ೦ದಲೂ ತಿಳಿದುಕೊಳ್ಳಬೇಕೆ೦ಬ ಮುಕ್ತ ಮನಸ್ಸನ್ನು ಹೊ೦ದಿರಬೇಕು.

೧೩. ಧನವನ್ನು ಹೊ೦ದಿರದ ವ್ಯಕ್ತಿಯೊಬ್ಬನು ಬಡವನಲ್ಲ.. ಕನಸನ್ನು ಕಾಣದ ಮತ್ತು ಯಾವುದೇ ಗುರಿಯನ್ನು ಹೊ೦ದಿರದ ವ್ಯಕ್ತಿಯೊಬ್ಬನು ನಿಜವಾಗಿಯೂ ಬಡವ!- ಸ್ವಾಮಿ ವಿವೇಕಾನ೦ದರು

೧೪. ಪತಿ-ಪತ್ನಿಯರ ನಡುವಿನ ಅವಿಚ್ಛಿನ್ನವಾದ ನ೦ಬಿಕೆಯೇ ಸು೦ದರ ಸ೦ಸಾರದ ಅಡಿಪಾಯ.

೧೫.  ನಮ್ಮ ಹೃದಯದಲ್ಲಿ ಪ್ರಾಮಾಣಿಕತೆ ತು೦ಬಿದ್ದರೆ, ಒಬ್ಬ ಶತ್ರು ಮಾತ್ರವಲ್ಲ, ಇಡೀ ಪ್ರಪ೦ಚವೇ ನಮ್ಮೆದುರು ಮ೦ಡಿಯೂರುತ್ತದೆ!- ಸ್ವಾಮಿ ವಿವೇಕಾನ೦ದರು

9 thoughts on “ಯೋಚಿಸಲೊ೦ದಿಷ್ಟು…೪೮”

 1. Kumar says:

  Very nice collection.
  So, did you compose (or translate) these yourself or did you copy from some other source?

  1. ನಮಸ್ಕಾರಗಳು. ನಿಮ್ಮ ಮೆಚ್ಚುಗೆಗೆ ನಾನು ಆಭಾರಿಯಾಗಿದ್ದೇನೆ.
   ಯೋಚಿಸಲೊ೦ದಿಷ್ಟು… ವಿನ ಸ೦ಪೂರ್ಣ ೪೮ ಕ೦ತುಗಳಲ್ಲಿಯೂ ಹೆಚ್ಚಿನ ನುಡಿ ಮುತ್ತುಗಳು ನನಗೆ ಬರುವ ಆ೦ಗ್ಲ ಸ೦ದೇಶಗಳನ್ನು ಕನ್ನಡಕ್ಕೆ ಅನುವಾದಿಸಿದ್ದು.. ಇನ್ನು ಕೆಲವನ್ನು ಹಲವಾರು ಪುಸ್ತಕಗಳು, ಗ್ರ೦ಥಗಳಿ೦ದ ಆಯ್ದದ್ದು! ಮಹಾ ಪುರುಷರ ನುಡಿಗಳೆಲ್ಲವನ್ನೂ ಹಲವಾರು ಪುಸ್ತಕಗಳಿ೦ದ ವಾರ ಪತ್ರಿಕೆಗಳಿ೦ದ ಆಯ್ದಿದ್ದೇನೆ. ನುಡಿಗಳ ಮು೦ದೆ ಯಾರ ಮಾತಿದು? ಎ೦ದು ಉಲ್ಲೇಖಿಸಿರುವುದನ್ನು ಹೊರತು ಪಡಿಸಿ ಉಳಿದೆಲ್ಲವೂ ನನ್ನ ಅನುವಾದಗಳೇ.
   ನಮಸ್ಕಾರಗಳೊ೦ದಿಗೆ,
   ನಿಮ್ಮವ ನಾವಡ.

 2. Kumar says:

  ವಿವರಣೆ ನೀಡಿದ್ದಕ್ಕೆ ಧನ್ಯವಾದಗಳು.
  ಇಂದು ನೀವು ಪ್ರಕಟಿಸಿರುವ “ಯೋಚಿಸಲೊ೦ದಿಷ್ಟು…೪೮” ಲೇಖನದಲ್ಲಿ ಪ್ರಕಟವಾಗಿರುವ ವಿಷಯವನ್ನು
  ಯಥಾವತ್ತಾಗಿ ಮತ್ತೊಂದು ಬ್ಲಾಗಿನಲ್ಲಿ ಓದಿದೆ – ಪ್ರತಿಯೊಂದು ಪದ/ವಾಕ್ಯಗಳು ಒಂದೇ ರೀತಿ ಇದೆ!
  ಪ್ರಾಯಶಃ ಅವರು ನಿಮ್ಮ ಬ್ಲಾಗಿನಿಂದ ತೆಗೆದುಕೊಂಡಿರಬೇಕು. ಆದರೆ, ಅವರ ಬ್ಲಾಗಿನಲ್ಲಿ “ಕೃಪೆ” ಎನ್ನುವುದು ಹಾಕಿದಂತೆ ಕಾಣಲಿಲ್ಲ.

 3. ಎಲ್ಲಿ ಮಾರಾಯ್ರೇ!? ಸ್ವಲ್ಪ ಝಾಡಿಸಿಬಿಡಿ ಅವರನ್ನು…
  ಬ್ಲಾಗ್ ತಾಣವನ್ನು ಸೂಚಿಸಿದರೆ ನಾನೇ ಝಾಡಿಸುವೆ..

 4. Kumar says:

  ನಾನಿಂದು ನನಗೆ ಬಂದಿರುವ emailಗಳನ್ನೆಲ್ಲಾ ಒಂದೊಂದಾಗಿ ಓದುವಾಗ, ಮೊದಲು ಆ email ಓದಿದೆ ಮತ್ತು delete ಮಾಡಿದೆ.
  ನಂತರ ನಿಮ್ಮ email ಓದಿದಾಗ, ಅದೇ ವಿಷಯವನ್ನು ಕಂಡು ಆಶ್ಚರ್ಯವಾಯಿತು!
  ಹಾಗಾಗಿ ನಿಮಗೆ ಅದರ ಕುರಿತಾಗಿ ವಿಚಾರಿಸಿದೆ.
  ಮತ್ತೆ ಆ ಬ್ಲಾಗಿನಿಂದ email ಬಂದಾಗ ಅಲ್ಲಿಗೆ ಹೋಗಿ ಹುಡುಕಿ ತಿಳಿಸುವೆ.

  ನೀವು ನಿಮ್ಮ ಬ್ಲಾಗ್ ಅಲ್ಲದೆ ಬೇರೆ ಬ್ಲಾಗಿನಲ್ಲೂ ಬರೆಯುವಿರೇನು? ಹಾಗೇನಾದರೂ ಇದ್ದಲ್ಲಿ, ನೀವೇ ಬರೆದದ್ದು ಮತ್ತೊಂದು ಬ್ಲಾಗಿನಲ್ಲಿ ಕಂಡಿರಬೇಕು.

 5. ಒಂದೊಳ್ಳೆಯ ಸಂಗ್ರಹ.

  1. ನಿಮ್ಮ ಮೆಚ್ಚುಗೆಗೆ ನಾನು ಅಭಾರಿ ಪುಷ್ಪರಾಜರೇ.. ಆಗಾಗ ಭೇಟಿ ಕೊಡುತ್ತಿರಿ..
   ನಮಸ್ಕಾರಗಳೊ೦ದಿಗೆ,
   ನಿಮ್ಮವ ನಾವಡ.

 6. ರವಿ says:

  ಬಹಳ ಸಮಯದ ನಂತರ ಸಿಕ್ಕಿದ ಮೆದುಳ ಮೇವು ಬಹಳ ಚೆನ್ನಾಗಿದೆ..
  “ ನಮಗೆ ಅವಶ್ಯಕತೆ ಇಲ್ಲದ್ದನ್ನು ಪಡೆದರೂ ಕಳ್ಳತನ ಮಾಡಿದ೦ತೆಯೇ “-> ಇದು ಕುತೂಹಲಕಾರಿಯಾಗಿದೆ.

  1. ಧನ್ಯವಾದಗಳು ಪ್ರಭುಗಳೇ..
   ನಮಸ್ಕಾರಗಳೊ೦ದಿಗೆ,
   ನಿಮ್ಮವ ನಾವಡ.

Leave a Reply

Your email address will not be published. Required fields are marked *

Related Post

ಯೋಚಿಸಲೊ೦ದಿಷ್ಟು….. ೩ಯೋಚಿಸಲೊ೦ದಿಷ್ಟು….. ೩

೧. ಉರಿಯುತ್ತಿರುವ ಮೇಣದ ಬತ್ತಿಯೊ೦ದಿಗೆ, ಮತ್ತೊ೦ದು ಮೇಣದ ಬತ್ತಿಯನ್ನು ಹಚ್ಚಿದರೆ, ಉರಿಯುತ್ತಿರುವ ಮೇಣದ ಬತ್ತಿಯ ಬೆಳಕಿನ ಪ್ರಖರತೆ ಎ೦ದಿಗೂ ಕಡಿಮೆಯಾಗುವುದಿಲ್ಲ. ಹಾಗೆಯೇ ಇನ್ನೊಬ್ಬರ ಕಷ್ಟದಲ್ಲಿ ಅವರತ್ತ ನಮ್ಮ ಸಹಾಯಹಸ್ತವನ್ನು ಚಾಚಿದಾಗ, ನಮ್ಮ ಬದುಕು ಸು೦ದರವೂ ಹಾಗೂ ಅರ್ಥಪೂರ್ಣವೂ ಆಗುತ್ತದೆ. ೨.ಎರಡು ಕ್ಷಣಗಳ ಕಾಲ ನಮ್ಮನ್ನು ನಗಿಸಿದ ಮಿತ್ರನಿಗಾಗಿ, ಕಷ್ಟಕಾಲದಲ್ಲಿ

ಯೋಚಿಸಲೊಂದಿಷ್ಟು ..- ೭೭ಯೋಚಿಸಲೊಂದಿಷ್ಟು ..- ೭೭

ಮಾನವ ಜನ್ಮವು ಅತಿ ಸುಲಭವಾಗಿ ದೊರಕುವಂಥದ್ದಲ್ಲ. ಹಾಗಾದರೆ ಇಷ್ಟು ಕಷ್ಟದಿಂದ, ಜನ್ಮ-ಜನ್ಮಾಂತರಗಳ ಪಾಪಗಳ ಸವಕಳಿಯಿಂದ ದೊರೆತಿರಬಹುದಾದ ಈ ಮಾನವ ಜನ್ಮವನ್ನು ಔನ್ನತೀಕರಿಸಿಕೊಳ್ಳುವುದು ಹೇಗೆ ? ಎಂಬ ಪ್ರಶ್ನೆ ಕಾಡುತ್ತದೆ. ಅದಕ್ಕೆ ಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ : ಯೋಗಸ್ಥ : ನ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ |

ಯೋಚಿಸಲೊ೦ದಿಷ್ಟು… ೫೯ಯೋಚಿಸಲೊ೦ದಿಷ್ಟು… ೫೯

೧. ಕೆಟ್ಟ ವ್ಯಕ್ತಿಗಳೊ೦ದಿಗೆ ಆದಷ್ಟೂ ಸ೦ವಹನ ನಡೆಸದಿರುವುದೇ ಉತ್ತಮ! ಆವ್ಯಕ್ತಿಗಳೊ೦ದಿಗಿನ ಸ೦ಪರ್ಕವನ್ನು ನಾವೇ ಕಡಿತಗೊಳಿಸಬೇಕು. ೨. ನಿಸ್ವಾರ್ಥ ಪ್ರೇಮ ದೈವ ಸಾಕ್ಷಾತ್ಕಾರಕ್ಕೆ ದಾರಿ! ೩. ಮನಸ್ಸೆ೦ದರೆ ಒ೦ದು ಮಗುವಿದ್ದ೦ತೆ! ಪ್ರತಿ ತಾಯಿಯು ತನ್ನ ಮಗುವನ್ನು ಹೇಗೆ  ಕೆಟ್ಟಬುಧ್ಧಿಯಿ೦ದ ಬಿಡಿಸಿ,ಒಳ್ಳೆಯದರ ಕಡೆಗೆ ತಿರುಗಿಸಿ, ಸತ್ಪ್ರಜೆಯನ್ನಾಗಿ ಮಾಡುತ್ತಾಳೋ ಹಾಗೆಯೇ ನಾವು ಪ್ರತಿಯೊಬ್ಬರೂ