ಯೋಚಿಸಲೊ೦ದಿಷ್ಟು…೪೨

೧. ನಾಳಿನ ಬಗ್ಗೆ ಕನಸು ಕಾಣದೇ ಯಾವುದೇ ಗುರಿಯನ್ನೂ ಸಾಧಿಸಲು ನಾವು ಸಮರ್ಥರಾಗುವುದಿಲ್ಲ! ಡಾ|| ಡಿ.ವೀರೇ೦ದ್ರ ಹೆಗ್ಗಡೆ

೨. ಎಲ್ಲರೂ ಬದುಕುವ ಕಲ್ಪನೆಯೇ ಧರ್ಮ! – ಡಾ|| ಡಿ.ವೀರೇ೦ದ್ರ ಹೆಗ್ಗಡೆ

೩. ನಮ್ಮ ಜೊತೆಯಲ್ಲಿ ಇರುವುದು ನಾವು ಗಳಿಸಿದ ಜ್ಞಾನ ಮಾತ್ರ!!

೪.ಒಳ್ಳೆಯ ಹೃದಯವ೦ತಿಕೆ ಇರುವವರನ್ನು ಸುಲಭವಾಗಿ ಎದುರಿಸುವುದು ಕಷ್ಟ!

೫. ನೀರಿನಿ೦ದ ಬೆ೦ಕಿಯನ್ನು ಆರಿಸಿದ೦ತೆ ಜ್ಞಾನದಿ೦ದ ದು:ಖವನ್ನು ಶಮನಗೊಳಿಸಬೇಕು.ದು:ಖದ ಶಮನದಿ೦ದ ದೇಹವು ಸ್ವಸ್ಠವಾಗುತ್ತದೆ- ಮಹಾಭಾರತ

೬. ತನ್ನವರನ್ನು ಪ್ರೀತಿಸುವುದು ಸ್ವಜಾತಿ ಕೋಮು ಪಕ್ಷಪಾತವಲ್ಲ! ಆದರೆ ಅವರ ಅನ್ಯಾಯ ಕಾರ್ಯಗಳಲ್ಲಿಯೂ ನೆರವಾಗುವುದು ಮಾತ್ರ ಕೋಮು ಪಕ್ಷಪಾತ- ಮಹಮದ್ ಪೈಗ೦ಬರ್.

೭. ಮನಸ್ಸನ್ನು ಗೆಲ್ಲದವನು ಮೂರು ಲೋಕಗಳು ತನ್ನದಾದರೂ ಸುಖಿಯಾಗಿರಲಾರ!!

೮. ಅದೃಷ್ಟದ ಕೊಡುಗೆಗಳನ್ನು ಪಡೆಯುವುದು ಅದನ್ನಿಟ್ಟುಕೊಳ್ಳುವುದಕ್ಕಿ೦ತಲೂ ಸುಲಭವಾದುದು- ಸೈರಸ್

೯. ದುರದೃಷ್ಟವನ್ನೆದುರಿಸಲು ಬೇಕಾದ ಧೈರ್ಯಕ್ಕಿ೦ತಲೂ ಹೆಚ್ಚಿನ ಸ್ಥೈರ್ಯ ಅದೃಷ್ಟದ ಪ್ರಯೋಜನವನ್ನು ಪಡೆಯಲು ಬೇಕು!!

೧೦. ಅದೃಷ್ಟ ಹಾಗೂ ದುರಾದೃಷ್ಟಗಳೆರಡೂ ಪಯಣಿಸುವುದು ಒ೦ದೇ ವಾಹನದಲ್ಲಿ ಪ್ರಯಾಣಿಸುತ್ತವೆ!!- ರಶ್ಯನ್ ಗಾದೆ

೧೧. ಮಣಬ೦ಗಾರಕ್ಕಿ೦ತ ಒ೦ದು ತೊಲ ಅದೃಷ್ಟವೇ ಲೇಸು! – ಯಹೂದಿ ಗಾದೆ

೧೨. ಅದೃಷ್ಟ ಸದಾಕಾಲ ನಮ್ಮ ಜೊತೆಗಿರುವುದಿಲ್ಲ. ಹೀಗೆ ಬ೦ದು ಹಾಗೇ ಹೋಗುತ್ತದೆ!!

೧೩. ಅಹ೦ಕಾರ ರಹಿತನು ಯಾವ ಧರ್ಮಗ್ರ೦ಥವನ್ನೂ ಓದದೆ, ಯಾವ ಮ೦ದಿರವನ್ನೂ ಪ್ರವೇಶಿಸದೆ ಮೋಕ್ಷವನ್ನು ಪಡೆಯಬಹುದು- ಸ್ವಾಮಿ ವಿವೇಕಾನ೦ದ.

೧೪. ಒ೦ದು ಚಕ್ರದ ರಥವು ಹೇಗೆ ಚಲಿಸುವುದಿಲ್ಲವೋ ಹಾಗೆಯೇ ಸಶಕ್ತ, ಸೂಕ್ತ, ಹಾಗೂ ಪ್ರಾಮಾಣೀಕ ಪ್ರಯತ್ನಗಳಿಲ್ಲದೆ ಯಾವುದೇ ಗುರಿಯನ್ನು ಸಾಧಿಸಲಾಗದು!!

೧೫. ನಿಮ್ಮನ್ನು ಪ್ರೀತಿಸುವವರನ್ನು ನೀವು ಪ್ರೀತಿಸಿದಾಗ ಜೀವನದ ಮೇಲೆ ತನ್ನಿ೦ದ ತಾನೇ ಪ್ರೀತಿ ಹುಟ್ಟಿಕೊಳ್ಳುತ್ತದೆ!!

Leave a Reply

Your email address will not be published. Required fields are marked *

Related Post

ಯೋಚಿಸಲೊ೦ದಿಷ್ಟು… ೫೭ಯೋಚಿಸಲೊ೦ದಿಷ್ಟು… ೫೭

೧.  ಯಾವುದೇ ಪೂರ್ವಕಲ್ಪನೆಗಳನ್ನು ಹಾಗೂ ನಿರ್ಧಾರಗಳನ್ನು ಹೊ೦ದಿರದ ಮನಸ್ಸುಗಳ ನಡುವೆ ಸ್ನೇಹ  ಚೆನ್ನಾಗಿ ಅರಳುತ್ತದೆ! ೨.  ನಮ್ಮ ಬಹುಪಾಲು ಯೋಚನೆಗಳು ಸಾಮಾನ್ಯವಾಗಿ ನಮ್ಮ ಯುಕ್ತಿಯಿ೦ದಲೇ ರೂಪುಗೊಳ್ಳುತ್ತವೆ- ಮನಪೂರ್ವಕವಾದ  ನಿರ್ಧಾರಗಳನ್ನು ನಾವು ತೆಗೆದುಕೊಳ್ಳುವುದು ಭಾರೀ ಕಡಿಮೆ! ೩. ಬೇರೆಯವರ ಬಗ್ಗೆ ನಾವು ತಳೆವ ಕೆಟ್ಟ ನಿರ್ಧಾರಗಳು ಯಾ ಯೋಚನೆಗಳು ಅವರನ್ನು

ಯೋಚಿಸಲೊ೦ದಿಷ್ಟು… ೧೪ಯೋಚಿಸಲೊ೦ದಿಷ್ಟು… ೧೪

೧. ದೈಹಿಕವಾಗಿ ವೃಧ್ಢರಾಗಿದ್ದರೂ,ನಮ್ಮಲ್ಲಿನ ಸತತ ಕ್ರಿಯಾಶೀಲತೆ ನಮ್ಮಲ್ಲಿ ಮಾನಸಿಕ ವೃಧ್ಧತೆ ಉ೦ಟಾಗುವುದನ್ನು ಮು೦ದೂಡುತ್ತದೆ! ೨. ಕೀರ್ತಿಯೆನ್ನುವುದು ನೀರಿನಲ್ಲಿನ ಅಲೆಯ೦ತೆ!ಒಮ್ಮೊಮ್ಮೆ ದೊಡ್ದದಾಗಲೂಬಹುದು!ಇದ್ದಕ್ಕಿದ್ದ೦ತೆ ಮಾಯವಾಗಲೂಬಹುದು!              ೩. ಯಶಸ್ಸು ಎನ್ನುವುದು ನದಿಯ೦ತೆ! ಹಗುರವಾದುದನ್ನು ತೇಲಿಸಿದರೆ, ಭಾರವಾದುದನ್ನು ಮುಳುಗಿಸುತ್ತದೆ!                                      ೪. ದು:ಖವನ್ನು ಅನುಭವಿಸಿದಾಗಲೇ ಸ೦ತಸದ ಅರಿವಾಗುವುದು,,ನೋವನ್ನು ಅನುಭವಿಸಿದಾಗಲೇ ಒತ್ತಡದ ಅರಿವಾಗುವುದು, ದ್ವೇಷ ವೆ೦ಬುದರಿ೦ದಲೇ ಪ್ರೀತಿಯ

ಯೋಚಿಸಲೊ೦ದಿಷ್ಟು…೩೨ಯೋಚಿಸಲೊ೦ದಿಷ್ಟು…೩೨

೧. ಬಹಳ ಬಲಿಷ್ಟವಾದ ಹಾಗೂ ಸಕಾರಾತ್ಮಕ ಮನೋಭಾವನೆಯು ಹೆಚ್ಚೆಚ್ಚು “ಪವಾಡ“ಗಳನ್ನು ಸೃಷ್ಟಿಸುತ್ತಾ ಹೋಗುತ್ತದೆ! ೨. ನಮ್ಮನ್ನು ಮೊದಲು ನಾವು ಪ್ರೀತಿಸಲು ಕಲಿಯಬೇಕು.. ಸ್ವ ಅಪನ೦ಬಿಕೆಗಿ೦ತಲೂ ನಾವು ನಡೆಯಬೇಕಾದ ಹಾದಿಯನ್ನು ಹಾಗೂ ನಮ್ಮ ಮಾನಸಿಕ ಭಾವನೆಗಳನ್ನು ಆಗಾಗ ವಿಮರ್ಶೆ ಮಾಡಿಕೊಳ್ಳುತ್ತಲೇ ಇರಬೇಕು. ೩.ದೇವರು ನಮ್ಮ ಹೃದಯ ಮತ್ತು ನಾಲಿಗೆಗಳು ಮೃದುವಾಗಿರಲೆ೦ದೇ ಅವುಗಳಿಗೆ