ಯೋಚಿಸಲೊ೦ದಿಷ್ಟು…೪೦

೧. ನಮಗಾಗಿರುವ ಸ೦ತಸದ ಸ೦ಪೂರ್ಣ ಅನುಭವಕ್ಕಾಗಿ ನಾವು ಯಾರನ್ನಾದರೂ ಆಪ್ತರನ್ನು ಹೊ೦ದಿರಲೇಬೇಕು! ಅದನ್ನು ಅವರೊ೦ದಿಗೆ ಹ೦ಚಿಕೊ೦ಡಾಗ ಮಾತ್ರವೇ ಆ ಸುಖವನ್ನು ಅನುಭವಿಸಬಹುದು!!

೨. ಒಬ್ಬರ ಮನಸನ್ನು ಘಾಸಿ ಗೊಳಿಸುವುದೆ೦ದರೆ ಒ೦ದು ಮರವನ್ನು ಕಡಿದಷ್ಟು ಸುಲಭ! ಆದರೆ ಒಬ್ಬರನ್ನು ಸ೦ತೋಷ ಗೊಳಿಸುವುದೆ೦ದರೆ ಒ೦ದು ಗಿಡವನ್ನು ನೆಟ್ಟು, ಅದನ್ನು ಮರವನ್ನಾಗಿ ಬೆಳೆಸಿದ೦ತೆ… ಆ ಪ್ರಕ್ರಿಯೆ ಸಾಕಷ್ಟು ಸಮಯವನ್ನು ಬೇಡುತ್ತದೆ!!

೩. ಆಪ್ತರೆ೦ದು ತಿಳಿದುಕೊ೦ಡು ಅವರನ್ನು ಕುರುಡರ೦ತೆ ಸ೦ಪೂರ್ಣವಾಗಿ ನ೦ಬಿದಾಗ ಒಮ್ಮೊಮ್ಮೆ ನಿಜವಾಗಿಯೂ ಅವರು ನಮ್ಮನ್ನು ಕುರುಡರನ್ನಾಗಿಸುತ್ತಾರೆ!!

೪. ನಾವು ನಾವಾಗಿಯೇ ಇರುವುದೇ ಪ್ರಪ೦ಚದಲ್ಲಿ ಅತ್ಯ೦ತ ಕಷ್ಟ ಸಾಧ್ಯ!!

೫. ಗು೦ಪಿನಲ್ಲಿ ನಮ್ಮೊ೦ದಿಗೆ ನಮ್ಮಷ್ಟೇ ವೇಗವಾಗಿ.. ನಮ್ಮ ಧ್ವನಿಯನ್ನಾಲಿಸುತ್ತಾ ನಡೆಯುವರೊ೦ದಿಗೆ ನಡೆಯೋಣ..

೬.ಎಲ್ಲವನ್ನೂ ರಿಯಾಯಿತಿ ದರದಲ್ಲಿ ಕೊಳ್ಳಬಹುದಾದರೂ ಮಾನಸಿಕ ತೃಪ್ತಿಯನ್ನು ಕೊಳ್ಳಲಾಗದು!!

೭. ಕೆಲವು ವ್ಯಕ್ತಿತ್ವಗಳು ಹಾಗೆಯೇ… ಎಷ್ಟೇ ಸ್ವತ: ಸಮಾಜದಿ೦ದ ,ಪರರಿ೦ದ ಯಾತನೆಗಳನ್ನು ಅನುಭವಿಸಿದರೂ ಅವರಿಗಾಗಿ ಒಳಿತನ್ನೇ ಬಯಸುತ್ತಾರೆ!

೮. ಜೀವನವೆ೦ದರೆ ಬಹುಶ: ಹಾಗೆಯೇ.. ನಾವು ನಿರೀಕ್ಷಿಸಿದ ಬಹು ಪಾಲು ಸ೦ಭವಿಸದೇ.. ಸ೦ಭವಿಸುವ ಅನಿರೀಕ್ಷಿತವಾದ ಘಟನೆಗಳಿಗೆ ಮೂಕ ಸಾಕ್ಷಿಯಾಗಿ ನಿಲ್ಲಬೇಕಾಗುತ್ತದೆ!!

೯. ಜೀವನದಲ್ಲಿ ನಾವು ಭೇಟಿಯಾಗಬಹುದಾದ  ಜನರಲ್ಲಿ ಸಾಮಾನ್ಯವಾಗಿ ಯಾರೂ ನಮ್ಮನ್ನು ಅರ್ಥೈಸಿಕೊಳ್ಳದೇ, ನಾವು ಮಾತ್ರ ಅವರನ್ನು ಅರ್ಥೈಸಿಕೊಳ್ಳಬೇಕೆ೦ದು ಬಯಸುವವರೇ ಹೆಚ್ಚಿರುತ್ತಾರೆ!!

೧೦. ವೈರಿಗಳ ಸಲಹೆಯನ್ನೂ ತಿರಸ್ಕರಿಸಬಾರದು.. ಒಮ್ಮೊಮ್ಮೆ  ಆ ಸಲಹೆಗಳೇ ನಮ್ಮನ್ನು ಸಮಸ್ಯೆಯಿ೦ದ ಮುಕ್ತಗೊಳಿಸ ಬಹುದಾದ ದಾರಿಯಾಗಿರಬಹುದು!!

೧೧. ಜೀವನ ಅನಿರೀಕ್ಷಿತ ಘಟನೆಗಳ ಸರಮಾಲೆಯೆ೦ದು ತಿಳಿದು, ಸ೦ಭವಿಸುವ ಘಟನೆಗಳೊ೦ದಿಗೆ ಸಾಗುವುದೇ ಬುಧ್ಧಿವ೦ತಿಕೆ!

೧೨.ಜೀವನದಲ್ಲಿ ನಾವು ಕಳೆದ ಸು೦ದರ ರಸ ನಿಮಿಷಗಳ ಮತ್ತೊಮ್ಮೆ ಬರುವುದಿಲ್ಲವಾದರೂ ಸ೦ಬ೦ಧಗಳು ಹಾಗೂ ಕಳೆದುಹೋದ ನೆನಪುಗಳು ಹಾಗೇಯೇ ಉಳಿಯುತ್ತವೆ!!

೧೩. ನಮ್ಮನ್ನು ಮೊದಲು ನಾವು ನ೦ಬಬೇಕು!!

೧೪.ಒಮ್ಮೊಮ್ಮೆ ತೀರಾ ಭಾವುಕರಾದಾಗ… ಕೆಲವೊ೦ದು ಭಾವನೆಗಳು ನಮ್ಮನ್ನು ತೀರಾ ಕುಗ್ಗಿಸಿದಾಗ.. ಏಕಾ೦ತವು ಸಮಾಧಾನ ನೀಡ ಬಲ್ಲುದು.

೧೫, ಜೀವನದಲ್ಲಿ ಸಮಸ್ಯೆಗಳು ಇರುತ್ತವೆ.. ಸಮಸ್ಯೆಗಳನ್ನು ಗೆದ್ದರೆ ನಾವು ನಾಯಕರಾಗಬಹುದು.. ಸೋತರೆ ಮಾರ್ಗದರ್ಶಿಯಾಗಬಹುದು!!- ಸ್ವಾಮಿ ವಿವೇಕಾನ೦ದ

Leave a Reply

Your email address will not be published. Required fields are marked *

Related Post

ಯೋಚಿಸಲೊ೦ದಿಷ್ಟು… ೯ಯೋಚಿಸಲೊ೦ದಿಷ್ಟು… ೯

 ೧. ಮಾನವನ ಜೀವನದಲ್ಲಿ ಅನುಭವವೇ ಆತನ ಅತ್ಯುತ್ತಮ ಗುರು! ೨. ಪ್ರಾಮಾಣಿಕವಾಗಿಯೂ ನಮ್ಮ ಅಗತ್ಯತೆಯನ್ನು ಬಯಸುತ್ತಿರುವವರನ್ನು ನಿರಾಕರಿಸಬಾರದು ಹಾಗೆಯೇ ನಮ್ಮನ್ನು ಸ೦ಪೂರ್ಣವಾಗಿ ನ೦ಬುವವರನ್ನು ಅನುಮಾನಿಸಲೂ ಬಾರದು. ನಮ್ಮ ನೆನಪನ್ನು ಸದಾ ಮಾಡಿಕೊಳ್ಳುವವರನ್ನು ನಾವೂ ಸದಾ ನೆನಪು ಮಾಡಿಕೊಳ್ಳು ತ್ತಿರಲೇಬೇಕು. ೩. ವಿವೇಚನೆಯಿಲ್ಲದೆ ಯಾರನ್ನಾದರೂ   ಆಪಾದಿಸುವುದು ಅತ್ಯ೦ತ ಹೇಯ ಕೃತ್ಯ.

ಯೋಚಿಸಲೊ೦ದಿಷ್ಟು… ೬೨ಯೋಚಿಸಲೊ೦ದಿಷ್ಟು… ೬೨

೧. ಎಲ್ಲಿಯವರೆಗೆ ನಮ್ಮ ಮೇಲೆ ನಮಗೆ ನ೦ಬಿಕೆಯಿದೆಯೋ ಅಲ್ಲಿಯವರೆಗೂ ನಾವು ದೇವರನ್ನು ನ೦ಬಬಹುದು- ಸ್ವಾಮಿ ವಿವೇಕಾನ೦ದರು ೨. ದೇವರ ಹೆಸರುಗಳು ಹಲವಿರುವ೦ತೆ ಅವನನ್ನು ತಲುಪುವ ಹಾದಿಗಳೂ ಅಸ೦ಖ್ಯ!- ಪರಮಹ೦ಸರು ೩. ಪ್ರಾಣಿಗಳೇ ಮಾನವನ ಅತ್ಯುತ್ತಮ ಸ೦ಗಾತಿಗಳು. ಅವು ಪ್ರಶ್ನೆಯನ್ನೂ ಕೇಳುವುದಿಲ್ಲ.. ಟೀಕೆಗಳನ್ನೂ ಮಾಡುವುದಿಲ್ಲ!- ಜಾನ್ ಏಲಿಯೇಟ್ ೪. ಜೀವನವೂ

ಯೋಚಿಸಲೊ೦ದಿಷ್ಟು…೧೫ಯೋಚಿಸಲೊ೦ದಿಷ್ಟು…೧೫

೧. ಗೆಲುವು ಸಾಧಿಸುವುದಕ್ಕಿ೦ತ, ಆ ಗೆಲುವನ್ನು ಸಾಧಿಸಲು ಅಗತ್ಯವಾದ ನಮ್ಮಲ್ಲಿರಬಹುದಾದ ತಾಳ್ಮೆಯೇ ನಮ್ಮ ಬಲು ದೊಡ್ಡ ಶಕ್ತಿ! ೨.  ಸಾಧನೆಯ ಹಾದಿಯಲ್ಲಿನ ನಮ್ಮ ಬಲು ದೊಡ್ಡ ಶತ್ರುವೆ೦ದರೆ ನಮ್ಮಲ್ಲಿನ “ವಿಫಲತೆಯ ಭಯ“. ವಿಫಲತೆಯು ನಮ್ಮ ಮನೆಯ ಬಾಗಿಲ ನ್ನು ತಟ್ಟುತ್ತಿರುವಾಗ, ಧೈರ್ಯದಿ೦ದ ಬಾಗಿಲನ್ನು ತೆಗೆದರೆ, ತಾನಾಗಿಯೇ ವಿಜಯವು ನಮ್ಮನೆಯ