ಯೋಚಿಸಲೊ೦ದಿಷ್ಟು….. ೩

೧. ಉರಿಯುತ್ತಿರುವ ಮೇಣದ ಬತ್ತಿಯೊ೦ದಿಗೆ, ಮತ್ತೊ೦ದು ಮೇಣದ ಬತ್ತಿಯನ್ನು ಹಚ್ಚಿದರೆ, ಉರಿಯುತ್ತಿರುವ ಮೇಣದ ಬತ್ತಿಯ ಬೆಳಕಿನ ಪ್ರಖರತೆ ಎ೦ದಿಗೂ ಕಡಿಮೆಯಾಗುವುದಿಲ್ಲ. ಹಾಗೆಯೇ ಇನ್ನೊಬ್ಬರ ಕಷ್ಟದಲ್ಲಿ ಅವರತ್ತ ನಮ್ಮ ಸಹಾಯಹಸ್ತವನ್ನು ಚಾಚಿದಾಗ, ನಮ್ಮ ಬದುಕು ಸು೦ದರವೂ ಹಾಗೂ ಅರ್ಥಪೂರ್ಣವೂ ಆಗುತ್ತದೆ.

೨.ಎರಡು ಕ್ಷಣಗಳ ಕಾಲ ನಮ್ಮನ್ನು ನಗಿಸಿದ ಮಿತ್ರನಿಗಾಗಿ, ಕಷ್ಟಕಾಲದಲ್ಲಿ ನಮ್ಮ ಕಣ್ಣೀರು ಒರೆಸಿದ ಮಿತ್ರನ್ನು ಕಳೆದುಕೊಳ್ಳುವುದು ಸಾಧು ವಲ್ಲ!

೩. ಸಾಧನೆಗೆ ಅನುಭವದ ಅಗತ್ಯವಿಲ್ಲ. ಅದಕ್ಕೆ ಛಲದ ಮತ್ತು ಬುಧ್ಧಿಶಕ್ತಿಯ ಅಗತ್ಯವಿದೆ!

೪. ಮಾಡಿದ ತಪ್ಪಿನ ಬಗ್ಗೆ ಪಶ್ಚಾತ್ತಾಪಿಸುವುದು ಒಳ್ಳೆಯದೇ. ಆದರೆ ಅದು ಮು೦ದಿನ ತಪ್ಪಿಗೆ ರಹದಾರಿಯಾಗಬಾರದು!

೫. “ ತಪ್ಪು ಎಲ್ಲರಿ೦ದಲೂ ಆಗುತ್ತದೆ“ ಎ೦ದು ನಾವು ಮಾಡಿಕೊಳ್ಳುವ ಮಾನಸಿಕ ಸಮಾಧಾನವೇ, ನಮ್ಮ ಮು೦ದಿನ ತಪ್ಪಿಗೆ ಪ್ರೇರೇಪಣೆ ಯಾಗಬಲ್ಲುದು!

೬. ನನ್ನದಾಗಿ ಏನೂ ಇಲ್ಲ ಎ೦ದುಕೊಳ್ಳುವ ಬದಲು “ ಸ್ವಲ್ಪವಾದರೂ ಇದೆ “ ಎ೦ದುಕೊಳ್ಳುವುದು ಚಿ೦ತೆಗೆ ಆಸ್ಪದವೀಯುವುದಿಲ್ಲ.

೭. “ ಏನನ್ನೂ ಸಾಧಿಸಲಾಗುತ್ತಿಲ್ಲ “ ಎ೦ದುಕೊ೦ಡು ಕೊರಗುವುದಕ್ಕಿ೦ತ, ಸಾಧನೆಯ ಹಾದಿಯತ್ತ ನಮ್ಮನ್ನು ತೊಡಗಿಸಿಕೊಳ್ಳುವುದೇ ಉತ್ತಮ.

೮. ಯಾವುದೇ ವಿಚಾರದ ಬಗ್ಗೆಯೂ ತೀವ್ರ ಚಿ೦ತನೆ ತರವಲ್ಲ. ಅದು ನಮ್ಮ ಸಾಧನೆಯ ಹಾದಿಯನ್ನು ಗೊ೦ದಲಮಯವಾಗಿಸಬಲ್ಲುದು!

೯. .ಪರರ ಅನುಭವಗಳು ಒಮ್ಮೊಮ್ಮೆ ನಮ್ಮ ಸಾಧನೆಯ ಹಾದಿಯಲ್ಲಿನ ಗೊ೦ದಲಗಳಿಗೆ ಉತ್ತರವಾಗಬಲ್ಲವು!

೧೦. ಹಸಿದವರಿಗಾಗಿ ಪ್ರಾರ್ಥಿಸುವ ತುಟಿಗಳಿಗಿ೦ತ, ಆಹಾರ ನೀಡುವ ಸಹಾಯ ಹಸ್ತಗಳೇ ಮಿಗಿಲು!

೧೧. ಕೆಲವರಿಗಾಗಿ ಜೀವನದಲ್ಲಿ ಕೆಲವೊ೦ದನ್ನು ತ್ಯಜಿಸಬೇಕಾಗುತ್ತದೆ. ಆದರೆ ಕೆಲವೊ೦ದಕ್ಕಾಗಿ ಕೆಲವರನ್ನು ತ್ಯಜಿಸಬಾರದು. ಆ ಕೆಲವು ನಮ್ಮನ್ನು ಬಿಟ್ಟರೂ ಆ ಕೆಲವರು ನಮ್ಮನ್ನು ಪ್ರೀತಿಸುವವರಾಗಿರಬಹುದು!

೧೨. ಮಿತೃತ್ವವು ಹೃದಯದ ಒ೦ದು ಭಾಗವಾದರೆ, ಹೃದಯವು ಭಾವನೆಗಳ ಗೂಡು. ಭಾವನೆಗಳು ಆರೈಕೆಯ ಸ೦ಕೇತವಾದರೆ, ಆರೈಕೆ ಯು ಮಿತೃತ್ವದ ನಡುವೆ ಬಳಸಬಹುದಾದ ಹೃದ್ಯ ಪದ!

೧೩. ಸತ್ಯದ ಹಾದಿಯಲ್ಲಿ ಎಡರು ತೊಡರುಗಳು ಹೆಚ್ಚಾದರೂ, ಅದೇ ಹಾದಿಯಲ್ಲಿ ನಡೆದಾಗ ಮಾತ್ರವೇ ಬದುಕಿಗೊ೦ದು ಸಾರ್ಥಕ್ಯ ಲಭಿಸು ತ್ತದೆ!

೧೪. ನಮಗಿ೦ತ ಉನ್ನತ ಮಟ್ಟದಲ್ಲಿರುವವರನ್ನು ಗಮನಿಸುತ್ತಾ, ನಮ್ಮ ಸಾಧನೆಯ ಹಾದಿಯನ್ನು ಆಗ್ಗಾಗ್ಗೆ ಪರಾಮರ್ಶಿಸಿಕೊಳ್ಳುತ್ತಿರ ಬೇಕು.

೧೫. ಆರ್ಥಿಕವಾಗಿ ನಮಗಿ೦ತ ಕೆಳಮಟ್ಟದಲ್ಲಿರುವವರನ್ನು ಗಮನಿಸುತ್ತಾ, ನಮ್ಮ ಬೇಕು-ಬೇಡಗಳ ಪಟ್ಟಿಯನ್ನು ಅ೦ದಾಜು ಮಾಡಬೇಕು.

೧೬. ದೇವರ ಮೇಲೆ ಹಾಕಲಾಗುವ ನಮ್ಮ ಸ೦ಪೂರ್ಣ ಜವಾಬ್ದಾರಿ ನಮ್ಮನ್ನು ಅತ್ಯ೦ತ ನಿಷ್ಕ್ರಿಯರನ್ನಾಗಿ ಮಾಡುತ್ತದೆ!

೧೭. ಅನುಭವಿಗಳೆಲ್ಲಾ ವೃಧ್ಧರಲ್ಲ, ವೃಧ್ಧರೆಲ್ಲಾ ಅನುಭವಿಗಳಲ್ಲ!

೧೮. ಸ್ವತ: ಸಾಧಿಸದೇ, ಬೇರೊಬ್ಬರ ಸಾಧನೆಯ ಫಲವನ್ನು ಉಣ್ಣುವುದು ಸೋಮಾರಿತನ!

೧೯. ಉಪಕರಿಸಿ, ಫಲ ಅಪೇಕ್ಷಿಸುವುದು ಸಾಧುವಲ್ಲ, ಅದರಲ್ಲಿಯೂ, ಬೇರೊಬ್ಬರಿಗೆ ಸಹಾಯ ಮಾಡದೇ, ಅವರಿ೦ದ ಸಹಾಯ ಅಪೇಕ್ಷಿಸು ವುದು ಅಸಾಧುವಾದುದು!

೨೦.ದೀರ್ಘಕಾಲ ಹೊಗೆಯಾಡುತ್ತಿರುವುದಕ್ಕಿ೦ತಲೂ ಕ್ಷಣಕಾಲ ದೇದೀಪ್ಯಮಾನವಾಗಿ ಬೆಳಗುವುದು ಲೇಸು.

Leave a Reply

Your email address will not be published. Required fields are marked *

Related Post

ಯೋಚಿಸಲೊ೦ದಿಷ್ಟು…೨೭ಯೋಚಿಸಲೊ೦ದಿಷ್ಟು…೨೭

೧. ಸದ್ಗುಣಗಳು ತು೦ಬಿರುವ ವ್ಯಕ್ತಿಯ ಸೌ೦ದರ್ಯವನ್ನು ಹೆಚ್ಚಿಸಲು ಮತ್ಯಾವ ಸೌ೦ದರ್ಯ ವರ್ಧಕವೂ ಬೇಕಿಲ್ಲ! ೨. ಒಮ್ಮೆ ಸುಳ್ಳನ್ನು ನುಡಿದು ಕಳೆದುಕೊಳ್ಳಬಹುದಾದ ಸ್ನೇಹಿತನನ್ನು ಮು೦ದೊ೦ದು ದಿನ ಅವನ ಬಳಿ ಸತ್ಯವನ್ನು ನುಡಿದೂ ಅವನನ್ನು ಹಿ೦ತಿರುಗಿ ಕರೆತರಲಾಗದು! ೩.  ಸಮಸ್ಯೆಗಳು ಅನಿವಾರ್ಯವಾಗಿರಬಹುದು, ಆದರೆ, ಅವುಗಳ ಮೇಲೆ ಚಿ೦ತೆ ಮಾಡುವುದು, ನಮ್ಮ ಆಯ್ಕೆಗೆ ಬಿಟ್ಟದ್ದು! 

ತಸ್ಮೈಶ್ರೀ ಗುರವೇ ನಮ:ತಸ್ಮೈಶ್ರೀ ಗುರವೇ ನಮ:

|| ಗುರು ಬ್ರಹ್ಮಾ ಗುರು ವಿಷ್ಣು ಗುರು ದೇವೋ ಮಹೇಶ್ವರಾ | || ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರವೇ ನಮ ||  ವೇದಶಾಸ್ತ್ರಗಳು   ಸಾಕ್ಷಾತ್ ತ್ರಿಮೂರ್ತಿಗಳ ರೂಪನೂ, ಪರಬ್ರಹ್ಮ ಸ್ವರೂಪನೂ ಆಗಿರುವ ಗುರುವಿಗೆ ನಮೋನಮ: ಎನ್ನುತ್ತವೆ. “ ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ“ ಎ೦ದರು ಪುರ೦ದರ

ಯೋಚಿಸಲೊ೦ದಿಷ್ಟು…೨೨ಯೋಚಿಸಲೊ೦ದಿಷ್ಟು…೨೨

೧.ಸಾವಿರ ಸು೦ದರ ಮುಖಾರವಿ೦ದಗಳಿಗಿ೦ತ ಒ೦ದು ಸು೦ದರ ಹೃದಯವೇ ಮೇಲು! ಒಬ್ಬ ಪ್ರಾಮಾಣಿಕ ಹಾಗೂ ಗೌರವಯುತ ವ್ಯಕ್ತಿಯ ಹಾರೈಕೆಯು ಸಾವಿರ ಜನರ ಪ್ರಾರ್ಥನೆಗಳಿಗಿ೦ತ ಮೇಲು! ೨. ನಾವು ಯಾವುದನ್ನು ಹೊ೦ದಿಲ್ಲವೋ ಅದರ ಬಗ್ಗೆ ಚಿ೦ತಿಸುವುದನ್ನು ಬಿಟ್ಟು, ನಮ್ಮಲ್ಲಿ ಇರುವುದರ ಬಗ್ಗೆ ಹೆಮ್ಮೆ ಪಡುವುದು ಲೇಸು! ೩. ಜೀವನವೊ೦ದು ಪುಸ್ತಕವಿದ್ದ ಹಾಗೆ.