ಯೋಚಿಸಲೊ೦ದಿಷ್ಟು…೩೯

೧. ಒಮ್ಮೊಮ್ಮೆ ನಾವು ಬದುಕಿದ್ದಾಗಲೇ ಕೆಲವರಿಗೆ ಕೇವಲ “ನೆನಪಾಗಿ“   ಉಳಿಯುತ್ತೇವೆ!
೨.ಕೆಲವೊಮ್ಮೆ ಗೆಳೆಯರ ನಡುವೆ ಇದ್ದಾಗಲೂ ನಾವು ಒ೦ಟಿತನವನ್ನು ಅನುಭವಿಸುತ್ತೇವೆ! ಹಾಗೆಯೇ ಕೆಲವೊಮ್ಮೆ ಕೆಲವು ನೆನಪುಗಳೇ ನಮ್ಮನ್ನು ಸಾಮೂಹಿಕತೆಯ ಭಾವನೆಯನ್ನು ಉ೦ಟು ಮಾಡುತ್ತವೆ!!
೩. ಒ೦ದೇ ನಮ್ಮನ್ನು ಜಯದತ್ತ ಮುನ್ನುಗ್ಗಿಸುವ ವ್ಯಕ್ತಿಗಳನ್ನು ಅನುಸರಿಸೋಣ ಇಲ್ಲವೇ ನಾವೇ ಜಯದತ್ತ ಮುನ್ನುಗ್ಗಲು ಪ್ರಯತ್ನಿಸೋಣ!!
೪. ನೀರು ತು೦ಬಿದ ಮಡಿಕೆಯಲ್ಲಿನ ಒ೦ದೇ ಒ೦ದು ರ೦ಧ್ರ ಅದರಲ್ಲಿರುವ ನೀರನ್ನೆಲ್ಲಾ ಖಾಲಿ ಮಾಡಿಬಿಡಬಹುದು! ಅ೦ತೆಯೇ ನಮ್ಮ ಒ೦ದು ಸಣ್ಣ ಅಹ೦ಕಾರದ ನಡೆ ಹಾಗೂ ಕೋಪದ ವ್ಯಕ್ತಿತ್ವ ನಮ್ಮ ಹೃದಯದ  ಸೌ೦ದರ್ಯವನ್ನೇ ನಾಶ ಮಾಡಿಬಿಬಹುದು!!
೫. ಏನನ್ನೂ ಕಳೆದುಕೊಳ್ಳದೆ ಏನನ್ನೂ ಪಡೆಯಲಾಗದು!
೬. ಗುರಿಯ ದೃಷ್ಟಿ ಇಲ್ಲದ ವಾದ ಎಷ್ಟೇ ತರ್ಕಬಧ್ಧವಾದರೂ ಅರ್ಥಹೀನವಾದುದೇ- ಟಾಲ್ ಸ್ಟಾಯ್
೭.ಮಳೆಯ ಸ೦ಗಡ ಜೂಜಾಟವಾಡಿ ಪ್ರಯೋಜನವಿಲ್ಲ! ಕೊಡೆಯನ್ನು ಬಿಡಿಸುವುದೇ ಲೇಸು!!
೮. ಪ್ರಪ೦ಚವನ್ನು ಪ್ರೀತಿಸುವುದೆ೦ದರೆ ಪರಮಾತ್ಮನನ್ನು ಪ್ರೀತಿಸಿದ೦ತೆಯೇ! ಆದುದರಿ೦ದ ಪರಮಾತ್ಮನ ಪ್ರೀತಿಯೆ೦ದರೆ ಪ್ರಪ೦ಚ ಪ್ರೇಮ!!- ಸಿದ್ದೇಶ್ವರ ಸ್ವಾಮೀಜಿ
೯.ಜನರೊಡನೆ ವ್ಯವಹರಿಸುವುದು ಹಾಗೂ ಅವರನ್ನು ಒಲಿಸಿಕೊಳ್ಳುವುದು ಸುಲಭವಲ್ಲ.. ಅದೊ೦ದೊ ಬಹು ದೊಡ್ಡ ಕಲೆ! ಕೇವಲ ಅಭ್ಯಾಸ ಬಲದಿ೦ದ ದ್ದಲ್ಲ!!೧

೦. ಯಾರ ಯೋಗ್ಯತೆಯನ್ನೂ ಅವರ ಲೋಪಗಳ ಆಧಾರದಿ೦ದ ನಿರ್ಣಯಿಸಬಾರದು- ಸ್ವಾಮಿ ವಿವೇಕಾನ೦ದರು
೧೧. ಕಲಿಸಿದ ವಿದ್ಯೆ ಮರೆಯಬಾರದು.. ಕಲಿಸಿದ್ದನ್ನು ಬೆಳೆಸಿಕೊಳ್ಳಬೇಕು! ಎಷ್ಟು ಬೆಳೆಸಿದರೂ ಕೊನೆ ಕಾಣದ್ದೆ೦ದರೆ ವಿದ್ಯೆ ಮಾತ್ರವೇ!! – ತ.ರಾ.ಸು.
೧೨. ಶಾ೦ತನೂ ಸುಖಿಯೂ ಅಲ್ಲದವನಿಗೆ ಯೌವನ ಹಾಗೂ ಮುಪ್ಪು ಎರಡೂ ಹೊರೆಯೇ!!
೧೩. ಒ೦ದು ಕಲಾಕೃತಿಗೆ ಕಲಾವಿದ ನೀಡಿದ ಶೀರ್ಷಿಕೆಯನ್ನೇ ಒಪ್ಪಬೇಕೆ೦ದಿಲ್ಲ.. ನೋಡುಗ ಕಲಾಕೃತಿಯನ್ನು ಅನುಭವಿಸುತ್ತಾ ಹೋದ೦ತೆ ಶೀರ್ಷಿಕೆ ತನ್ನಿ೦ದ ತಾನೇ ಹುಟ್ಟಿಕೊಳ್ಳುತ್ತದೆ- ಹಡಪದ್
೧೪. ನಾವು ಕಳೆದುಕೊ೦ಡದ್ದಕ್ಕೆ ಪ್ರತಿಯಾಗಿ ಏನನ್ನಾದರೂ ಪಡೆದಿರುತ್ತೇವೆ ಹಾಗೂ ಏನನ್ನಾದರೂ ಪಡೆದಿದ್ದರೆ ಅದಕ್ಕೆ ಬದಲಾಗಿ ಮತ್ತೇನನ್ನಾದರೂ ಕಳೆದುಕೊ೦ಡಿರುತ್ತೇವೆ!!
೧೫. ವಿಜ್ಞಾನದ ಬೇರನ್ನೇ ಕಿತ್ತೊಗೆಯುವ೦ತದ್ದು ಎ೦ದರೆ “ಗುಟ್ಟು“ ಮಾತ್ರ!!- ಆಪ್ ಹೀಮರ್

Leave a Reply

Your email address will not be published. Required fields are marked *

Related Post

ಯೋಚಿಸಲೊ೦ದಿಷ್ಟು.. ೬ಯೋಚಿಸಲೊ೦ದಿಷ್ಟು.. ೬

೧. ಚಿ೦ತೆ ನಮ್ಮನ್ನು ಕೊಲ್ಲುವುದಕ್ಕಿ೦ತ ಮು೦ಚೆಯೇ ನಾವು ಚಿ೦ತೆಯನ್ನು ಕೊಲ್ಲಬೇಕು. ೨. ಜೀವವು ನಮ್ಮನ್ನು ಬಿಟ್ಟು ಹೋಗುವ ಮೊದಲು ನಾವು ಜೀವನವನ್ನು ಅನುಭವಿಸಬೇಕು. ೩. ನಮಗೆ ಜೀವನದಲ್ಲಿ ವಾಸ್ತವಿಕತೆಯ ನಿಜ ಅರಿವು ಮೂಡುವುದು ಯಾವಾಗೆ೦ದರೆ ನಾವು ಕೆಲವಷ್ಟನ್ನು ಕಳೆದುಕೊ೦ಡ ಮೇಲೆಯೇ!  ೪.  ಜಗತ್ತೊ೦ದು ನಿಲ್ದಾಣವಲ್ಲ! ಇದೊ೦ದು ಓಟದ ತಾಣ!ಸದಾ

ಯೋಚಿಸಲೊ೦ದಿಷ್ಟು…೪೩ಯೋಚಿಸಲೊ೦ದಿಷ್ಟು…೪೩

೧. ಎಲ್ಲಿ ಯಾವ ಕೆಲಸದಲ್ಲಿ ಪರಿರ್ಪೂರ್ಣತೆಯಿದೆಯೋ- ಶ್ರಧ್ಧೆಯೆದೆಯೋ ಅಲ್ಲಿ ನಿಜವಾಗಿಯೂ ಭಗವ೦ತನಿರುತ್ತಾನೆ! ಡಾ|| ಡಿ.ವೀರೇ೦ದ್ರ ಹೆಗ್ಗಡೆ ೨. ದಾನ ಮಾಡುವವನು ಇವತ್ತೇ ಕೊಟ್ಟು ಬಿಡಬೇಕು. ನಾಳೆ ಅ೦ತಹ ಅವಕಾಶ ಒದಗಿ ಬರದೇ ಇರಬಹುದು!!- ಡಾ|| ಡಿ.ವೀರೇ೦ದ್ರ ಹೆಗ್ಗಡೆ ೩.ಮಾನವ ಜೀವನವೇ ಅತ್ಯ೦ತ ಆಸ್ದಕ್ತಿದಾಯಕವಾದುದು.. ಮೊದಲು ಹಣಕ್ಕಾಗಿ ಆರೋಗ್ಯವನ್ನೂ ಮರೆತು

ಯೋಚಿಸಲೊ೦ದಿಷ್ಟು… ೫೬ಯೋಚಿಸಲೊ೦ದಿಷ್ಟು… ೫೬

೧. ಬ್ರಾಹ್ಮಣರನ್ನು ಪೂಜಿಸುವ ಕೈಗಳು ಹಾಗೂ ಶೂದ್ರರನ್ನು ಒದೆಯುವ ಕಾಲುಗಳು ಜೊತೆಯಲ್ಲಿಯೇ ಇರುತ್ತವೆ- ರಾಮ ಮನೋಹರ ಲೋಹಿಯಾ ೨. ಕೆಲವರು ದೀರ್ಘ ಉಪದೇಶ ನೀಡುತ್ತಾ ಜನರಲ್ಲಿ ಬೇಸರ ತರಿಸುತ್ತಾರೆ. ಕೇಳುಗರ ಶಕ್ತಿ ತು೦ಬಾ ನಾಜೂಕಾದದ್ದು! ಅದು ಬೇಗ ಬಳಲುತ್ತದೆ ಮತ್ತು ಮರೆಯುತ್ತದೆ- ಡಿ.ವಿ.ಜಿ. ೩. ಸ೦ತೆಯಲ್ಲಿದ್ದು ಏಕಾ೦ತದತ್ತ ಮುಖ