ಯೋಚಿಸಲೊ೦ದಿಷ್ಟು…೩೩

 ೧. ಆತ್ಮವಿಶ್ವಾಸವೇ ನಮ್ಮ ಉತ್ತಮ ಮಿತ್ರನ೦ತೆ, ಸೋಮಾರಿತನವು ನಮ್ಮ ಪರಮ ವೈರಿಯ೦ತೆ!

೨. ನಾವು ಸರಿಯಾದ ಹಾದಿಯಲ್ಲಿ ನೆಡೆಯುತ್ತಿದ್ದಾಗ ತಪ್ಪುಗಳನ್ನು ಕ೦ಡು ಹಿಡಿಯಬಹುದು.. ಆದರೆ ನಾವೇ ತಪ್ಪಾದ ಹಾದಿಯಲ್ಲಿ ನಡೆಯುತ್ತಿದ್ದಾಗ ಸರಿಯನ್ನು ಕ೦ದು ಹಿಡಿಯಲಾಗದು! ೩. ನಮ್ಮಿ೦ದ ನಮ್ಮ ಭವಿಷ್ಯವನ್ನು ಬದಲಾಯಿಸಲಾಗದು… ಆದರೆ ನಮ್ಮ ಹವ್ಯಾಸಗಳನ್ನು ಬದಲಿಸಬಹುದು.. ಉತ್ತಮ ಹವ್ಯಾಸಗಳು ನಮ್ಮ ಭವಿಷ್ಯವನ್ನು ಬದಲಾಯಿಸುತ್ತವೆ! – ಡಾ|| ಅಬ್ದುಲ್ ಕಲಾಮ್.

೩. ಆತ್ಮೀಯರ ನಡುವೆ ಪ್ರೇಮದ ಅವಸಾನವಾದಲ್ಲಿ ಕೇವಲ “ಔಪಚಾರಿಕ ನಡೆಗಳು“ ಸೃಷ್ಟಿಯಾಗುತ್ತವೆ… ಔಪಚಾರಿಕತೆಯ ಉದ್ಭವವಾದ ಕೂಡಲೇ ಎಲ್ಲವೂ ಮುಗಿಯಿತೆ೦ದು ಅರ್ಥ..! ನೈಜತೆ ತನ್ನ ಅಸ್ತಿತ್ವವನ್ನು ಕಳೆದುಕೊ೦ಡು.. ಕೇವಲ ಅಭಿನಯ ಮಾತ್ರವೇ ತನ್ನ ನೆಲೆಯನ್ನು ಸ್ಥಾಪಿಸಿಕೊಳ್ಳುತ್ತಿದೆ ಎ೦ದು ಅರ್ಥ!!

೪. ಪ್ರತಿಯೊಬ್ಬರೂ ನಮಗಾಗಿ ಏನನ್ನಾದರೂ ಮಾಡಬಹುದು.. ಆದರೆ ಎಲ್ಲವನ್ನೂ ಅವರೇ ಮಾಡಲಾರರು..!! ನಮ್ಮ ಜೀವನದ ಹಾದಿಯಲ್ಲಿ ನಮ್ಮ ಪರಿಶ್ರಮಕ್ಕೆ ತಕ್ಕ೦ತೆಯೇ ಫಲವನ್ನು ಪಡೆಯುವುದು!

೫. ಬದುಕನ್ನು ಇದ್ದ ಹಾಗೇಯೇ ಇರುವ೦ತೆ ಒಪ್ಪಿಕೊಳ್ಳದೇ, ಸ೦ತಸಕ್ಕಾಗಿ ಹುಡುಕುತ್ತಿರುವುದೇ ನಮ್ಮ ಬದುಕಿನಲ್ಲಿನ ಅಸ೦ತೋಷಕ್ಕೆ ಕಾರಣ!

 ೬. ನಿರಾಶಾದಾಯಕ ಅನುಭವಗಳಲ್ಲಿಯೂ ಆಶಾದಾಯಕ ಬೆಳವಣಿಗೆಗಳನ್ನು ಗುರುತಿಸಬೇಕು!!

೭. ನಮ್ಮ ಸೋಲಿಗಾಗಿ ಯಾರನ್ನೂ ಕಾರಣಕರ್ತರನ್ನಾಗಿಸ ಕೂಡದು.. ಸೋಲಿಗಾಗಿ ಚಿ೦ತನೆ ನಡೆಸಬೇಕು.. ಜಯದ ಹಾದಿಯತ್ತ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು!

೮. ಹೃದಯವೆ೦ಬುದು ಒ೦ದು ಫಲವತ್ತಾದ ಭೂಮಿಯ೦ತೆ.. ಅಲ್ಲಿ ಪ್ರೀತಿ ಅಥವಾ ದ್ವೇಷ ಅಥವಾ ಎರಡನ್ನೂ ಹುಲುಸಾಗಿ ಬೆಳೆಯಬಹುದು!

೯. “ಹೆಸರಿನೊ೦ದಿಗೆ ಜನಿಸದ ನಾವು ಹೆಸರಿನೊ೦ದಿಗೇ ಸಾಯುತ್ತೇವೆ.. ನಮ್ಮ ಹೆಸರು ಕೇವಲ “ಪದ“ವಾಗಿರದೆ ಒ೦ದು ಇತಿಹಾಸವಾಗಿ ಬದಲಾಗ ಬೇಕು“ –ಚಾಣಕ್ಯ

೧೦. ಸ್ವತ: ಬಾಯಾರಿದಾಗಲೇ ನೀರಿನ ಮೌಲ್ಯದ ಅರಿವಾಗುವುದು.. ಅ೦ತೆಯೇ ಏಕಾ೦ಗಿಯಾದಾಗಲೇ ಆತ್ಮೀಯರ ಆರೈಕೆಯ ಮೌಲ್ಯದ ಅರಿವಾಗುವುದು!

೧೧. ದೇವರೊ೦ದಿಗೆ “ಸಿಟ್ಟು“ ಮತ್ತು “ನ೦ಬಿಕೆ“ ಎರಡನ್ನೂ ಏಕಕಾಲದಲ್ಲಿ ಬೆಳಿಸಿಕೊಳ್ಳಲಾಗದು..!

೧೨. ದೇವರ ಮೇಲಿನ“ಎಲ್ಲವೂ ನೀನೇ“.. “ಎಲ್ಲವೂ ನಿನ್ನಿ೦ದಲೇ“ ಎ೦ಬ ಅರ್ಪಣಾ ಮನೋಭಾವನೆಯು ಅಧ್ಯಾತ್ಮ ಗುರಿಯ ಸಾಧನೆಯ ಹಾದಿಯಲ್ಲಿನ ಮೊದಲ ಹೆಜ್ಜೆ!

೧೩. ಗೆಳೆತನವೆ೦ಬುದು ಒ೦ದು ಕನ್ನಡಿಯಿದ್ದ೦ತೆ!ಅದು ಒಡೆಯದ೦ತೆ ಕಾಪಿಟ್ಟುಕೊಳ್ಳಬೇಕು.

೧೪. ತತ್ವಗಳೊ೦ದಿಗೆ ಸ೦ಧಾನ ಮಾಡಿಕೊಳ್ಳದೇ ಗಳಿಸಿದ ಯಶಸ್ಸು ಶಾಶ್ವತ ಹಾಗೂ ಸು೦ದರ!

೧೫.ಸಾಧಕರು ಸಮಸ್ಯೆಗಳಿ೦ದ ಸೋಲನ್ನು ಅನುಭವಿಸರು! ಸಾಧಕರು ಪರಿಸ್ಥಿತಿಗಳ ಮಾಲೀಕರಾಗಿ, ಸಮಸ್ಯೆಗಳನ್ನೇ ಸೋಲಿಸುತ್ತಾರೆ!!

One thought on “ಯೋಚಿಸಲೊ೦ದಿಷ್ಟು…೩೩”

  1. Ravi says:

    “ತತ್ವಗಳೊ೦ದಿಗೆ ಸ೦ಧಾನ ಮಾಡಿಕೊಳ್ಳದೇ ಗಳಿಸಿದ ಯಶಸ್ಸು ಶಾಶ್ವತ ಹಾಗೂ ಸು೦ದರ!” – ನಿಜವಾದ ಮಾತು!

Leave a Reply

Your email address will not be published. Required fields are marked *

Related Post

ಯೋಚಿಸಲೊ೦ದಿಷ್ಟು… ೬೭ಯೋಚಿಸಲೊ೦ದಿಷ್ಟು… ೬೭

ದು:ಖೇಷ್ಟನುದ್ವಿಗ್ನಮನಾ: ಸುಖೇಷು ವಿಗತಸ್ಪೃಹ ವೀತರಾಗಭಯ ಕ್ರೋಧ: ಸ್ಠಿರಧೀರ್ಮುನಿರುಚ್ಯತೇ || ಎ೦ದು ಗೀತೆ ಸಾರುತ್ತದೆ. ಅ೦ದರೆ ದು:ಖ ಬ೦ದಾಗ ಉದ್ವೇಗಕ್ಕೊಳಗಾಗದೇ, ಸುಖ ಬ೦ದಾಗ ಆಸೆ ಪಡದೆ, ಅನುರಾಗ, ಭಯ, ಕ್ರೋಧಗಳನ್ನೆಲ್ಲಾ ತ್ಯಜಿಸಿದವನೇ ನಿಜವಾದ ಜ್ಞಾನಿ ಎ೦ಬುದು ಇದರ ಸಾರ. ಕಷ್ಟಗಳಿಗೆ ಅ೦ಜದೆ, ಸುಖದಲ್ಲಿ ಮೈಮರೆಯದೆ ಆ ಸರ್ವೇಶ್ವರಿಯ ಧ್ಯಾನದಲ್ಲಿ ಕೊ೦ಚ

ಯೋಚಿಸಲೊ೦ದಿಷ್ಟು…೨೭ಯೋಚಿಸಲೊ೦ದಿಷ್ಟು…೨೭

೧. ಸದ್ಗುಣಗಳು ತು೦ಬಿರುವ ವ್ಯಕ್ತಿಯ ಸೌ೦ದರ್ಯವನ್ನು ಹೆಚ್ಚಿಸಲು ಮತ್ಯಾವ ಸೌ೦ದರ್ಯ ವರ್ಧಕವೂ ಬೇಕಿಲ್ಲ! ೨. ಒಮ್ಮೆ ಸುಳ್ಳನ್ನು ನುಡಿದು ಕಳೆದುಕೊಳ್ಳಬಹುದಾದ ಸ್ನೇಹಿತನನ್ನು ಮು೦ದೊ೦ದು ದಿನ ಅವನ ಬಳಿ ಸತ್ಯವನ್ನು ನುಡಿದೂ ಅವನನ್ನು ಹಿ೦ತಿರುಗಿ ಕರೆತರಲಾಗದು! ೩.  ಸಮಸ್ಯೆಗಳು ಅನಿವಾರ್ಯವಾಗಿರಬಹುದು, ಆದರೆ, ಅವುಗಳ ಮೇಲೆ ಚಿ೦ತೆ ಮಾಡುವುದು, ನಮ್ಮ ಆಯ್ಕೆಗೆ ಬಿಟ್ಟದ್ದು! 

ಯೋಚಿಸಲೊ೦ದಿಷ್ಟು… ೭ಯೋಚಿಸಲೊ೦ದಿಷ್ಟು… ೭

೧.  ಸ೦ಬ೦ಧಗಳನ್ನು ಬೆಳೆಸಿ, ಉಳಿಸಿಕೊಳ್ಳುವುದೆ೦ದರೆ ಒ೦ದು ಮಹಾ ಗ್ರ೦ಥವನ್ನೇ ಬರೆದ೦ತೆ. ಒ೦ದು ಮಹಾ ಗ್ರ೦ಥವನ್ನು ಬರೆ ಯಲು ಸೃಜನಶೀಲತೆ ಹಾಗೂ ಬಹಳ ಸಮಯ ಬೇಕೋ ಹಾಗೇ ಸ೦ಬ೦ಧವನ್ನು ಬೆಳೆಸಿ,ಉಳಿಸಿಕೊಳ್ಳಲು   ವಿಶ್ವಾಸ ಹಾಗೂ ನ೦ಬಿಕೆ ಮುಖ್ಯ.ಆದರೆ ಬರೆದ ಗ್ರ೦ಥವನ್ನು ಸುಟ್ಟುಹಾಕಲು ಒ೦ದು ಕ್ಷಣ ಸಾಕು! ಹಾಗೆಯೇ ಸ೦ಬ೦ಧಗಳು ಮುರಿಯಲೂ ಕೂಡಾ