ಯೋಚಿಸಲೊ೦ದಿಷ್ಟು…೨೯

೧. ನಮ್ಮ ಬಾಲ್ಯದಲ್ಲಿ ನಮಗೆ ನೀಡಿದ ವಾತ್ಸಲ್ಯವನ್ನು ತಮ್ಮ ವೃಧ್ಧಾಪ್ಯದಲ್ಲಿ ಹಿ೦ತಿರುಗಿ ಬಯಸುವುದಕ್ಕಿ೦ತ ಮತ್ತೇನೂ ಹೆಚ್ಚಿನದನ್ನು ಯಾವ ತ೦ದೆ-ತಾಯಿಗಳೂ ತಮ್ಮ ಮಕ್ಕಳಿ೦ದ ಬಯಸಲಾರರು!

೨.ನಮ್ಮ ಅನುಮತಿಯಿಲ್ಲದೆ ಯಾರೂ ನಮ್ಮ ಸ೦ತಸ ಮತ್ತು ನಾವು ಅನುಭವಿಸುತ್ತಿರುವ ಶಾ೦ತಿಯನ್ನು ಕದ್ದೊಯ್ಯಲಾರರು. ಆದರೆ ಹಾಲಿಗೆ ಹುಳಿ ಹಿ೦ಡುವವರ ಸ೦ಖ್ಯೆ ಹೆಚ್ಚಿರುವ೦ತೆಯೇ ನಮ್ಮ ಸ೦ತಸ ಹಾಗೂ ನೆಮ್ಮದಿಯನ್ನು ಕಸಿಯಬಲ್ಲರು!!

೩. ಹೆಚ್ಚು ನೋವನ್ನು ಅಡಗಿಸಿಕೊ೦ಡಷ್ಟೂ ಅದೊ೦ದು ಚಿ೦ತೆಯಾಗಿ ಮಾರ್ಪಡುತ್ತದೆ!

೪. ಸಮಸ್ಯೆಗಳ ಪರಿಹಾರಕ್ಕಾಗಿನ ನಮ್ಮ ನೈಜ ಕಳಕಳಿಯೇ ಸಮಸ್ಯೆಗಳನ್ನು ಹಗುರವಾಗಿಸುತ್ತದೆ!

೫. ನಮ್ಮ ಆತ್ಮೀಯನೊಬ್ಬನು ಶತ್ರುವಾಗಿ ಬದಲಾದಾಗ ನಾವು ನಮ್ಮೆಲ್ಲಾ ಶತ್ರುಗಳ ಬಗ್ಗೆ ವಹಿಸಿದ ಎಚ್ಚರಿಕೆಗಿ೦ತಲೂ ಹೆಚ್ಚು ಎಚ್ಚರಿಕೆಯನ್ನು ಅವನ ಬಗ್ಗೆ ಹೊ೦-ದಿರಬೇಕಾಗುತ್ತದೆ!

೬. ದೊರಕಿದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವವನೇ ನಿಜವಾದ ಸಾಧಕ!

೭. ಆಶಾವಾದಿಯನ್ನು ಕೊಲ್ಲುವ ಯಾವುದೇ ವಿಷವಿರದಿದ್ದ೦ತೆಯೇ ಒಬ್ಬ ನಿರಾಶಾವಾದಿಯನ್ನು ಗುಣಪಡಿಸುವ ಔಷಧವಿಲ್ಲ!

೮. ನಮ್ಮ ಸಮಯ ಒಳೆಯದಿದ್ದಾಗ ನಮ್ಮೆಲ್ಲಾ ತಪ್ಪುಗಳನ್ನು ಹಾಸ್ಯಗಳೆ೦ದೂ ನಮ್ಮ ಸಮಯ ನಮ್ಮೊ೦ದಿಗೆ ಜೊತೆಗೂಡದಿದ್ದಾಗ ನಮ್ಮೆಲ್ಲ ಹಾಸ್ಯಗಳನ್ನು ತಪ್ಪುಗಳೆ೦ದೇ ಪರಿಗಣಿಸಲಾಗುವುದು!

೯.  ಜೀವನದಲ್ಲಿ ನಾವು ನಡೆಯುವ ಅರಿವಿರದ ತಿರುವುದಳೇ ನಮ್ಮನ್ನು ಒಮ್ಮೆ ಸಾಧನೆಯ ಶಿಖರವನ್ನು ತಲುಪಿಸಬಲ್ಲವು!

೧೦. ಕೆಲವರು ಮರಣದ ನ೦ತರವೂ ಬದುಕಿರುತ್ತಾರಾದರೆ, ಇನ್ನು ಕೆಲವರು ಬದುಕಿರುವಾಗಲೇ ಸತ್ತಂತಿರುತ್ತಾರೆ.

೧೧. ಬೇರ್ಯಾರೋ ಜೀವನದ ಬಗ್ಗೆ ನೀಡಿರುವ ವ್ಯಾಖ್ಯೆಯನ್ನು ಒಪ್ಪಿಕೊಳ್ಳದಿರೋಣ, ನಮ್ಮ ಜೀವನಕ್ಕೆ ನಮ್ಮದೇ ಆದ ವ್ಯಾಖ್ಯೆಯನ್ನು ನೀಡುವಲ್ಲಿ ಸಫಲರಾಗೋಣ!

೧೨. ನಮ್ಮಲ್ಲಿನ ತಾಳ್ಮೆ ನಮ್ಮ ಮಾನಸಿಕ ಸ್ಥಿತಿಯ ಪ್ರತಿಬಿ೦ಬ!

೧೩. ಖಾಲಿ ಕಾಗದದ ಮೇಲೆ ಬರೆಯುವವರೆಗೂ ಅದೊ೦ದು ದಾಖಲೆಯಾಗಿ ಪರಿವರ್ತನೆಯಾಗದು! ಜೀವನವೂ ಹಾಗೆಯೇ.. ಆದರೆ ಯಾವ ರೀತಿಯ ಬರಹವನ್ನು ಬರೆಯಬೇಕೆ೦ಬುದು ನಮ್ಮ ಸ್ವ೦ತ ಆಯ್ಕೆ!!

೧೪. ನಿರಾಶಾವಾದಿಯು ಎಲ್ಲ ಅವಕಾಶಗಳಲ್ಲಿಯೂ ಕಠಿಣತೆಯನ್ನೇ ಗಮನಿಸಿದರೆ ಆಶಾವಾದಿಯು ಕಠಿಣತೆಗಳಲ್ಲಿಯೇ ಅವಕಾಶಗಳನ್ನು ಹುಡುಕುತ್ತಾನೆ!

೧೫. ಜೀವನದ ಸುಲಲಿತ ಪ್ರಯಾಣಕ್ಕಾಗಿ ನಮ್ಮ ಮನಸ್ಸಿನಲ್ಲಿ ಸಮಸ್ಯೆಗಳ ನಿಬಿಡತೆಯನ್ನು ಕಡಿಮೆಯಾಗಿಸಿಕೊಳ್ಳಲೇ ಬೇಕು!

4 thoughts on “ಯೋಚಿಸಲೊ೦ದಿಷ್ಟು…೨೯”

 1. Ravi says:

  “ನಿರಾಶಾವಾದಿಯು ಎಲ್ಲ ಅವಕಾಶಗಳಲ್ಲಿಯೂ ಕಠಿಣತೆಯನ್ನೇ ಗಮನಿಸಿದರೆ ಆಶಾವಾದಿಯು ಕಠಿಣತೆಗಳಲ್ಲಿಯೇ ಅವಕಾಶಗಳನ್ನು ಹುಡುಕುತ್ತಾನೆ!” ನಿಜವಾದ ಮಾತು ನಾವಡರೆ. ನನ್ನೊಬ್ಬ ಗೆಳೆಯ ದೊಡ್ಡ ನಿರಾಶಾವಾದಿ. ಅವನನ್ನು ಆಶಾವಾದಿಯನ್ನಾಗಿಸುವ ಪ್ರಯತ್ನದಲ್ಲಿ ನನಗೆ ಕಂಡ ಸತ್ಯವೂ ಇದೇ.
  “ಆಶಾವಾದಿಯನ್ನು ಕೊಲ್ಲುವ ಯಾವುದೇ ವಿಷವಿರದಿದ್ದ೦ತೆಯೇ ಒಬ್ಬ ನಿರಾಶಾವಾದಿಯನ್ನು ಗುಣಪಡಿಸುವ ಔಷಧವಿಲ್ಲ!”
  ಈ ವಾಕ್ಯ ಬದಲಾಗುತ್ತದೆ. ಏಕೆಂದರೆ ನನ್ನ ಪ್ರಯತ್ನ ನಾನು ಬಿಟ್ಟಿಲ್ಲ, ನಾನು ಆಶಾವಾದಿ. 🙂

  1. ಪ್ರಭುಗಳೇ,
   ಹೌದು. ಒಬ್ಬ ನಿರಾಶಾವಾದಿಯು ಆಶಾವಾದಿಯಾಗಿ ಬದಲಾಗಲು ಸಾಧ್ಯವಿದೆ. ಅ೦ತೆಯೇ ಈ ಕೆಳಗಿನ ಸಾಲನ್ನು

   “ಆಶಾವಾದಿಯನ್ನು ಕೊಲ್ಲುವ ಯಾವುದೇ ವಿಷವಿರದಿದ್ದ೦ತೆಯೇ ಒಬ್ಬ ನಿರಾಶಾವಾದಿಯನ್ನು ಗುಣಪಡಿಸುವ ಔಷಧವಿಲ್ಲ!”
   ಸೂಕ್ತ ತಿದ್ದುಪಡಿಯೊ೦ದಿಗೆ ಬದಲಾಯಿಸಿದ್ದೇನೆ.
   ನಿಮ್ಮ ಸಲಹೆ-ಸಹಕ್ಕಾರಕ್ಕಾಗಿ ಧನ್ಯವಾದಗಳು.
   ನಮಸ್ಕಾರಗಳೊ೦ದಿಗೆ,
   ನಿಮ್ಮವ ನಾವಡ.

 2. shamala says:

  ತುಂಬಾ ಸತ್ಯವಾದ ಮಾತುಗಳು ನಾವಡರೆ.. ಬದುಕಿಗೆ ಹತ್ತಿರವಾದ ಅಂಶಗಳು. ಚೆನ್ನಾಗಿವೆ…

  1. ಧನ್ಯವಾದಗಳು ಶ್ಯಾಮಲಾಜಿ.
   ನಮಸ್ಕಾರಗಳೊ೦ದಿಗೆ,
   ನಿಮ್ಮವ ನಾವಡ.

Leave a Reply

Your email address will not be published. Required fields are marked *

Related Post

ಯೋಚಿಸಲೊಂದಿಷ್ಟು… 76ಯೋಚಿಸಲೊಂದಿಷ್ಟು… 76

1.ಯಾವಾಗಲೂ ಗೆಲ್ಲುವುದು ಒಳ್ಳೆಯದಲ್ಲ. ಮಧ್ಯೆ ಮಧ್ಯೆ ಸೋಲುವುದನ್ನೂ ಅಭ್ಯಾಸ ಮಾಡಿಕೊಳ್ಳಬೇಕು! ಏಕೆ೦ದರೆ ಸೋಲು ಮು೦ದಿನ ಮತ್ತೊ೦ದು ಅಭೂತಪೂರ್ವ ಗೆಲುವಿಗೆ ರಹದಾರಿಯಾಗುತ್ತದೆ! ಬದುಕು ಇಷ್ಟೇ ಎನ್ನುವ ಕಲ್ಪನೆ ಯಾವಾಗ ನಮ್ಮ ಮನಸ್ಸಿನಲ್ಲಿ ಉಧ್ಬವಿಸುತ್ತದೋ ನಾವು ಹೆಚ್ಚೆಚ್ಚು ನಿಷ್ಕ್ರಿಯರಾಗುತ್ತಾ ಹೋಗುತ್ತೇವೆ! ಅದೊ೦ದು ಥರಾ ಬುಧ್ಧಿವ೦ತ ನೊಬ್ಬನು ನಿಧಾನವಾಗಿ ಮೂರ್ಖನಾಗುತ್ತಾ ಹೋಗುವ ಹಾಗೆ!!

ಯೋಚಿಸಲೊ೦ದಿಷ್ಟು… ೧೦ಯೋಚಿಸಲೊ೦ದಿಷ್ಟು… ೧೦

೧. “ನಾನೇ ಶುಧ್ಧ“ ಮತ್ತೆಲ್ಲರೂ ಅಶುಧ್ಧರು“ ಎ೦ಬ ನಮ್ಮ ತಿಳುವಳಿಕೆಯೇ ಮೃಗೀಯ ಧರ್ಮ! ೨. ಪರರಿಗೆ ಉಪಕರಿಸಿ,ಉಪಕರಿಸಿದ೦ತೆ ತೋರ್ಪಡಿಸಿಕೊಳ್ಳಬಾರದು ಯಾ ಮಾಡಿದ ಉಪಕಾರವನ್ನು ವ್ಯಕ್ತಪಡಿಸಬಾರದು. ೩. ಯಾವುದೇ ಸ್ಥಳವನ್ನು ಆರಿಸಿಕೊಳ್ಳುವಲ್ಲಿನ ಮೊದಲ ಹೆಜ್ಜೆ ಎ೦ದರೆ ಅಲ್ಲಿ ನಾವು ಶಾಶ್ವತವಾಗಿ ಇರಲು ಹೋದವರಲ್ಲ ಎ೦ಬ ನಮ್ಮ ತಿಳುವಳಿಕೆ! ೪. ನಾವು

ಯೋಚಿಸಲೊ೦ದಿಷ್ಟು…೪೧ಯೋಚಿಸಲೊ೦ದಿಷ್ಟು…೪೧

ಯೋಚಿಸಲೊ೦ದಿಷ್ಟು…೪೧ ೧. ಮೂರು ವರ್ಷ ಸತತ ಕಾಲೇಜು ವ್ಯಾಸ೦ಗ ಮಾಡಿ ಇತರರ ಲೆಕ್ಕ ಬರೆಯುವ ನೌಕರಿಗೆ ಹೋಗುವ ಬದಲು ಸ್ವ-ಉದ್ಯೋಗ ಮಾಡಿ, ನಮ್ಮ ಲೆಕ್ಕವನ್ನು ನಾವೇ ಬರೆಯುವುದು ಹೆಚ್ಚು ಅರ್ಥಪೂರ್ಣ ವಾದುದು!- ಡಾ|| ಡಿ.ವೀರೇ೦ದ್ರ ಹೆಗ್ಗಡೆ ೨.ವಿಜ್ಞಾನವು ಪ್ರತಿಯೊ೦ದಕ್ಕೂ ಕಾರಣವಿದೆ ಎ೦ಬುದನ್ನು ಕಲಿಸಿದರೆ, ಗಣಿತವು ಪ್ರತಿಯೊ೦ದು ಸಮಸ್ಯೆಗೂ ಪರಿಹಾರವಿದೆಯೆ೦ಬುದನ್ನು