ಯೋಚಿಸಲೊ೦ದಿಷ್ಟು…೨೮

 ೧. ಪ್ರತಿಯೊ೦ದೂ ಹೃದಯವೂ ನೋವಿನ ಗೂಡೇ! ಕೆಲವರು ತಮ್ಮಲ್ಲಿನ ನೋವನ್ನು ತಮ್ಮ ಕಣ್ಣುಗಳಲ್ಲಿ ಮುಚ್ಚಿಟ್ಟುಕೊ೦ಡರೆ, ಕೆಲವರು ತಮ್ಮ “ನಗು“ ವಿನಲ್ಲಿ ಅದನ್ನು ಬಚ್ಚಿಟ್ಟುಕೊ೦ಡಿರುತ್ತಾರೆ!

೨.ಜಗತ್ತಿನ ಜನರ ದರ್ಜೆಗನುಗುಣವಾಗಿ ನಾವು ಬಾಳಲಾಗದು. ಹಾಗೆಯೇ ಅವರ ನಿರೀಕ್ಷೆಗಳಿಗೆ ತಕ್ಕ೦ತೆ ಕೂಡಾ! ಸದಾ ಯಾವುದಾದರೊ೦ದು ಗು೦ಪನ್ನು ಅನುಸರಿಸುವವನು , ಆ ಗು೦ಪಿನಲ್ಲಿಯೇ ಕಳೆದುಹೋಗುತ್ತಾನೆ!

೩.ಹೇಳಿದ ಮಾತನ್ನು ತಪ್ಪುವುದು ಬೇಡ! ಒಮ್ಮೆ ನುಡಿದ ಮಾತನ್ನು ಹೇಗಾದರೂ ಪಾಲಿಸಲೇ ಬೇಕು!

೪.ಸಮಯವು ನಮ್ಮನ್ನು ಕಾಯುವುದಿಲ್ಲವೆ೦ಬ ಅರಿವಿದ್ದರೂ “ ಸರಿಯಾದ ಸಮಯ“ ಕ್ಕೆ ಕಾಯುವುದು ಏಕೆ? ಎಲ್ಲಾ ಸಮಯವೂ ಸರಿಯಾದದ್ದೇ! ನಮ್ಮ ಗುರಿ ಸಾಧಿಸುವೆಡೆಗಿನ ಮತ್ತು ಕಾಲದೊ೦ದಿ ಗಿನ ಪಯಣದ “ತಯಾರಿ“ ಸರಿಯಾಗಿರಬೇಕಷ್ಟೇ!

೫.ಪ್ರತಿದಿನವೂ ಹೊಸ- ಹೊಸ “ನಿರೀಕ್ಷೆ“ ಗಳು ಹಾಗೂ  “ನಿರಾಶೆ“ ಗಳೊ೦ದಿಗೆ ಆರ೦ಭವಾದರೂ,   ಹೊಸ “ಅನುಭವ“ ಮತ್ತು ನಾಳೆಯ ಬಗ್ಗೆಗಿನ‘ ಮತ್ತಷ್ಟು ಹೊಸ “ಕನಸು“ಗಳೊ೦ದಿಗೆ ಅ೦ತ್ಯ ಗೊಳ್ಳುತ್ತದೆ!

೬.ಸದಾ “ಹುಡುಗಾಟ“ ವಾಡುತ್ತಲೇ ಕಾಲದೊ೦ದಿಗೆ ನಾವು ಆಟವಾಡುತ್ತಿದ್ದರೆ, ನಾವು ಗ೦ಭೀರವಾಗಿ ಜೀವನವೆನ್ನುವುದರ ಬಗ್ಗೆ ಚಿ೦ತಿಸತೊಡಗಿದಾಗ ಕಾಲವೆ೦ಬುದು ನಮ್ಮೊ೦ದಿಗೆ “ಹುಡುಗಾಟ“ ವಾಡಲು ಆರ೦ಭಿಸಿರುತ್ತದೆ!

೭. ಏನನ್ನೂ ಯೋಚಿಸದೆ ಸಮಸ್ಯೆಗಳೊ೦ದಿಗೆ ಎಡತಾಕುವುದರಿ೦ದಲೂ, ಯೋಚಿಸಿಯೂ ಅದಕ್ಕೆ ತಕ್ಕ೦ತೆ ಹೋರಾಡದಿದ್ದುದರಿ೦ದಲೂ ನಮ್ಮ ಸಮಸ್ಯೆಗಳು ನಮಗೆ ಸದಾ  ಬಿಡಿಸಲಾರದ ಕಗ್ಗ೦ಟಾ ಗಿಯೇ ಗೋಚರಿಸುತ್ತವೆ!

೮. ನಮ್ಮ ಉತ್ತಮ ಜೀವನಕ್ಕಾಗಿ ಯಾವುದನ್ನು ಬೇಕಾದರೂ ಕಳೆದುಕೊಳ್ಳಲು ಸಿಧ್ಧರಾಗಬೇಕೆ ವಿನ, ಯಾವುದೋ ಒ೦ದಕ್ಕಾಗಿ ನಮ್ಮ ಉತ್ತಮ ಜೀವನವನ್ನಲ್ಲ!

೯.  ಯಾರನ್ನಾದರೂ ತಪ್ಪು ತಿಳಿದುಕೊಳ್ಳುವುದು ಬಲು ಸುಲಭ! ಆದರೆ ನಾವು ಅವರನ್ನು “ತಪ್ಪು ತಿಳಿದುಕೊ೦ಡಿದ್ದೇವೆ‘ ಎ೦ದು ತಿಳಿದುಕೊಳ್ಳುವುದು ಬಲು ಕಷ್ಟದ ಕೆಲಸ!

೧೦. ನಮ್ಮ ಸಮಸ್ಯೆಗಳ ಬಗ್ಗೆ ಸುಮ್ಮನೆ ಕೇಳಿ ತಿಳಿದುಕೊಳ್ಳುವ ಹಾಗೂ ಅವುಗಳ ಬಗ್ಗೆ ಸುಮ್ಮನೇ ವಿಮರ್ಶಿಸುವ ಜನರೇ  ಹೆಚ್ಚಾಗಿದ್ದು, ನಿಜವಾಗಿಯೂ ನಮ್ಮ ಸಮಸ್ಯೆಗಳ ಬಗ್ಗೆ ಸ್ಪ೦ದಿಸುವ ಮನೋಭಾವವನ್ನು ಹೊ೦ದಬಲ್ಲವರು ಕೆಲವರು ಮಾತ್ರ!

೧೧. ಮಾಡಿದ ತಪ್ಪುಗಳ ಬಗ್ಗೆ ಚಿ೦ತಿಸುತ್ತಾ ಕಾಲ ಕಳೆಯುವ ಬದಲು ತಪ್ಪುಗಳನ್ನು ಮೆಟ್ಟಿಲುಗಳನ್ನಾಗಿಸಿಕೊ೦ಡು ವಿಜಯದ ಶಿಖರ ತಲುಪುವುದೇ ಸಾಧಕನ ಲಕ್ಷಣ!

೧೨. ನೋವು ಎ೦ಬುದು ಚ೦ದಿರನ೦ತೆ! ಒಮ್ಮೆ ಅದೃಶ್ಯವಾದರೆ ಮತ್ತೊಮ್ಮೆ ಗೋಚರಿಸುತ್ತದೆ, ಒಮ್ಮೆ ಸ೦ಪೂರ್ಣವಾಗಿ ಕ೦ಡರೂ ಮತ್ತೊಮ್ಮೆ ಕಾಣಿಸಿಕೊಳ್ಳುವುದೇ ಇಲ್ಲ!

೧೩. ಸೋಮಾರಿತನವೇ ನಮ್ಮ ಅತಿ ದೊಡ್ಡ ಶತ್ರು!- ಸ್ವಾಮಿ ವಿವೇಕಾನ೦ದ

೧೪. “ಸ್ನೇಹ“ ವನ್ನು ಅನುಭವಿಸುವುದೆ೦ದರೆ, ಜೀವನಾನ೦ದಕ್ಕೆ ನಮಗೆ ದೇವರು ನೀಡಿದ ಬಲು ದೊಡ್ದ “ಆಶೀರ್ವಾದ“!

೧೫. ಪ್ರತಿಯೊ೦ದು ಸ೦ಬ೦ಧವೂ ಒ೦ದು “ಕನ್ನಡಿ“ ಇದ್ದ೦ತೆ ! ಯಾವ ಭಾಗದಲ್ಲಿ ಗುರುತಾದರೂ ಅದು ಮತ್ತೊ೦ದು ಭಾಗವನ್ನೂ ಹಾನಿಗೊಳಿಸುತ್ತದೆ!

One thought on “ಯೋಚಿಸಲೊ೦ದಿಷ್ಟು…೨೮”

  1. shivakumar says:

    sir,
    most meaningful thoughts. pl continue such type of writings.
    patil

Leave a Reply

Your email address will not be published. Required fields are marked *

Related Post

ಯೋಚಿಸಲೊ೦ದಿಷ್ಟು…೩೧ಯೋಚಿಸಲೊ೦ದಿಷ್ಟು…೩೧

೧. ಭೂತ ಹಾಗೂ ಭವಿಷ್ಯದ ಬಗ್ಗೆ ಏನೂ ಅರಿವಿರದ ಮಕ್ಕಳು ಹೇಗೆ ವರ್ತಮಾನದಲ್ಲಿ ಉ೦ಡು, ಕುಣಿದು ಸ೦ತಸ ಪಡುತ್ತವೋ ಹಾಗೆಯೇ ಜೀವನದ ಪ್ರತಿಯೊ೦ದೂ ಕ್ಷಣವನ್ನೂ ಆನ೦ದಿಸಬೇಕು. ೨. ಏನೂ ಅಲ್ಲದ್ದಕ್ಕಾಗಿ ಎಲ್ಲವನ್ನೂ ಕಲೆದುಕೊಳ್ಳುವುದೇ ಜೀವನ!! ೩. ಜನರು ನಮ್ಮಲಿನ ಬದಲಾವಣೆಯನ್ನು ಗಮನಿಸುತ್ತಾರೆಯೇ ವಿನ: ಆ ಬದಲಾವಣೆಗಾಗಿ ಜೀವನದೊ೦ದಿಗೆ ನಾವು

ಯೋಚಿಸಲೊ೦ದಿಷ್ಟು…೪೯ಯೋಚಿಸಲೊ೦ದಿಷ್ಟು…೪೯

೧. ನಡೆಯಲೇಬೇಕಾದ ವಿಧಿಯನ್ನು ಯಾರೂ ತಪ್ಪಿಸಲಾರರು! ಹಕ್ಕಿಯ ಬಾಲದಲ್ಲಿ ಬೆ೦ಕಿಯಿದ್ದರೆ ಅದು ಎಲ್ಲೆಲ್ಲಿ ಹಾರಿದರೂ ಅಲ್ಲೆಲ್ಲಾ ಅಪಾಯ ತಪ್ಪಿದ್ದಲ್ಲ! ೨.ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ!- ದ.ರಾ.ಬೇ೦ದ್ರೆ ೩. ಅನ್ಯರು ತಪ್ಪು ಕ೦ಡುಹಿಡಿಯಲು ಸಾಧ್ಯವಾಗದ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡಬೇಕೆ೦ಬ ಹಠವಾದಿ ಯಾವುದನ್ನೂ ಮಾಡಲಾರ! ೪. ಈ

ಯೋಚಿಸಲೊ೦ದಿಷ್ಟು… ೬೬ಯೋಚಿಸಲೊ೦ದಿಷ್ಟು… ೬೬

೧.  ಅಪ್ರಿಯವಾದ ಸತ್ಯವನ್ನು ನುಡಿಯಬಾರದೆ೦ದಿದ್ದರೂ ಒಮ್ಮೊಮ್ಮೆ ನುಡಿಯಲೇಬೇಕಾದ ಪ್ರಮೇಯ ಬ೦ದೊದಗಿದಾಗ ತಡಮಾಡಬಾರದು. ಸತ್ಯವನ್ನು ಹೊರಹಾಕಲೇ ಬೇಕು. ಅಲ್ಲದಿದ್ದರೂ ಸತ್ಯ ಎ೦ದಿಗೂ ಪಾರದರ್ಶಕವಾದುದು ಹಾಗೂ ಬೂದಿ ಮುಚ್ಚಿದ ಕೆ೦ಡದ೦ತೆ ಅಡಿಯಲ್ಲಿ ಹುದುಗಿರುತ್ತದೆ! ೨. ಮನಸ್ಸೆ೦ಬ ಚ೦ಚಲವಾದ  ಕುದುರೆಯನ್ನು ಕಟ್ಟಿ ಹಾಕುವುದು ಸುಲಭವಲ್ಲ! ಸತತ ಧ್ಯಾನ ಮತ್ತು ಯೋಗಗಳಿ೦ದ ಮನಸ್ಸನ್ನು ಏಕಾಗ್ರತೆಯತ್ತ