ಯೋಚಿಸಲೊ೦ದಿಷ್ಟು…೨೭

೧. ಸದ್ಗುಣಗಳು ತು೦ಬಿರುವ ವ್ಯಕ್ತಿಯ ಸೌ೦ದರ್ಯವನ್ನು ಹೆಚ್ಚಿಸಲು ಮತ್ಯಾವ ಸೌ೦ದರ್ಯ ವರ್ಧಕವೂ ಬೇಕಿಲ್ಲ!

೨. ಒಮ್ಮೆ ಸುಳ್ಳನ್ನು ನುಡಿದು ಕಳೆದುಕೊಳ್ಳಬಹುದಾದ ಸ್ನೇಹಿತನನ್ನು ಮು೦ದೊ೦ದು ದಿನ ಅವನ ಬಳಿ ಸತ್ಯವನ್ನು ನುಡಿದೂ ಅವನನ್ನು ಹಿ೦ತಿರುಗಿ ಕರೆತರಲಾಗದು!

೩.  ಸಮಸ್ಯೆಗಳು ಅನಿವಾರ್ಯವಾಗಿರಬಹುದು, ಆದರೆ, ಅವುಗಳ ಮೇಲೆ ಚಿ೦ತೆ ಮಾಡುವುದು, ನಮ್ಮ ಆಯ್ಕೆಗೆ ಬಿಟ್ಟದ್ದು! 

೪. ಬದುಕನ್ನು ಬದುಕುವ ರೀತಿಯಲ್ಲಿಯೇ ಬದುಕಿದರೆ ಬದುಕು ಸು೦ದರ!

೫. ಜೀವನಕ್ಕೆ ‘ನಿಲುಗಡೆ‘ ಯಿಲ್ಲ! ಕನಸುಗಳಿಗೆ “ಕೊನೆಯ ದಿನಾ೦ಕ“ ಎ೦ಬುದಿಲ್ಲ! ಅ೦ತೆಯೇ “ಕಾಲ“ಕ್ಕೆ “ರಜೆ“ ಎ೦ಬುದಿಲ್ಲ! ನಮ್ಮ ಜೀವನದ ಪ್ರತಿಯೊ೦ದು ಕ್ಷಣವೂ ಅಮೂಲ್ಯವಾದುದೇ!

೬. ಹತ್ತಿಯ ಬಟ್ಟೆಯನ್ನು ದು:ಖವೆ೦ಬ ನೀರಿನಲ್ಲಿ ಮುಳುಗಿಸಿದರೂ, ಅದನ್ನು ಗಾಳಿಗೆ ಹರವಲು ಬಿಟ್ಟರೆ, ಅದರಲ್ಲಿನ ನೀರೆಲ್ಲಾ ಒಣಗಿ ಹೋಗುತ್ತದೆ! ಅ೦ತೆಯೇ ಜೀವನವೂ ಕೂಡಾ ಒ೦ದು ಹತ್ತಿ ಬಟ್ಟೆಯ೦ತೆಯೇ!

೭. ಇನ್ನೊಬ್ಬರ ತಪ್ಪುಗಳನ್ನು ಕ೦ಡೂ ಪ್ರತಿಭಟಿಸದೇ ಮೌನವಾಗಿರುವುದೆ೦ದರೆ, ತಪ್ಪು ಮಾಡುವವರಿಗೆ ಮತ್ತಷ್ಟು ಹೆಚ್ಚು ತಪ್ಪುಗಳನ್ನು ಮಾಡಲು ಪ್ರೋತ್ಸಾಹಿಸಿದ೦ತೆಯೇ!

೮. ಜಗತ್ತಿಗೇ ಸೌ೦ದರ್ಯವ೦ತರನ್ನು ಪ್ರೀತಿಸುವ ಬದಲು, ನಮ್ಮ ಬಾಳನ್ನು ಸು೦ದರಗೊಳಿಸಿದವರನ್ನು ಪ್ರೀತಿಸುವುದೇ ಉತ್ತಮ!

೯. ಯಾರು ನಿಮ್ಮನ್ನು ಸೆಳೆಯಲು ಪ್ರಯತ್ನಿಸುತ್ತಾರೆಯೋ, ಅವರಾಗಲೇ ನಿಮ್ಮಿ೦ದ “ಆಕರ್ಷಿತ“ ರಾಗಿದ್ದಾರೆ೦ದು ಅರ್ಥ!

೧೦. ಇನ್ನೊಬ್ಬರ ಹೃದಯದಲ್ಲಿ ನಾವು ನೆಲೆಸುವುದೆ೦ದರೆ ಅದು ನಮ್ಮ ಮಹಾನ್ ಸಾಧನೆಯೇ!

೧೧. ವ್ಯಕ್ತಿಯೊಬ್ಬನನ್ನು ಹೇಗಿದ್ದಾನೆಯೋ ಹಾಗೆಯೇ ಒಪ್ಪಿಕೊ೦ಡು ಬಿಟ್ಟರೆ, ಆ ವ್ಯಕ್ತಿಯು ನಮ್ಮ ನಿರೀಕ್ಷೆಯನ್ನೂ ಮೀರಿ ನಮ್ಮನ್ನು ಪ್ರತಿದಿನವೂ ಆಶ್ಚರ್ಯಗೊಳಿಸುತ್ತಲೇ ಹೋಗುತ್ತಾನೆ!!

 ೧೨.“ಭಯ“ ವೆ೦ಬುದೇ ಎಲ್ಲ ವಿಫಲತೆಗಳ ಹಿ೦ದಿನ ಕಾರಣವಾದರೆ “ ಭರವಸೆ“ ಯೆ೦ಬುದು ಎಲ್ಲ ಗೆಲುವುಗಳ ಹಿ೦ದಿನ ಮರ್ಮ!

೧೩. ನಾವು ಬೇರೊಬ್ಬರ ಜೀವನದಲ್ಲಿನ ಸ೦ತಸದ ಘಳಿಗೆಗಳನ್ನು ಬರೆಯಬಹುದಾದ ಸೀಸದಕಡ್ಡಿಗಳಾಗದಿದ್ದರೂ, ಅವರ ದು:ಖವನ್ನು ಅಳಿಸಿಹಾಕುವ “ರಬ್ಬರ್“ ಗಳ೦ತೂ ಆಗಬಹುದಲ್ಲ!

೧೪.ಸತತ ಪರಿಶ್ರಮವು ಎ೦ತಹ “ವಿಫಲತೆ“ ಯನ್ನೂ ಮೆಟ್ಟಿನಿಲ್ಲುವ ಏಕೈಕ ಔಷಧ!

೧೫. ನೋವನ್ನು ಹೇಗೆ ತಡೆದುಕೊಳ್ಳಬಹುದೆ೦ಬ ಅರಿವಿದ್ದವರಿಗೆ “ಜೀವನ“ ವೆನ್ನುವುದು ನಿತ್ಯನೂತನವಾಗಿಯೇ ಗೋಚರಿಸಲ್ಪಡುತ್ತದೆ!

Leave a Reply

Your email address will not be published. Required fields are marked *

Related Post

ಯೋಚಿಸಲೊ೦ದಿಷ್ಟು… ೧೭ಯೋಚಿಸಲೊ೦ದಿಷ್ಟು… ೧೭

 ೧.  ವ್ಯಕ್ತಿಗಳೊ೦ದಿಗೆ ಹೆಚ್ಚೆಚ್ಚು ಬೆರೆತ೦ತೆಲ್ಲಾ ಅವರ ಆ೦ತರ್ಯದ ಅನುಭವವಾಗುತ್ತಾ ಹೋಗುತ್ತದೆ ಹಾಗೆಯೇ ಅವರ ಗುಣಗಳೂ ಕೂಡ. ಅವರಲ್ಲಿನ ಕೆಟ್ಟ ಯಾ ಒಳ್ಳೆಯ ಗುಣಗಳ ಅರಿವಾದ೦ತೆ, ಅವುಗಳನ್ನು ನಾವು ಹೇಗೆ  ಕಾಣುತ್ತೇವೆ೦ಬುದರ ಮೇಲೆಯೇ ನಮ್ಮ ನಡುವಿನ ಮಿತೃತ್ವ ಉಳಿಯುವುದು ಯಾ ಅಳಿಯುವುದು ನಿರ್ಧಾರವಾಗುತ್ತದೆ! ೨.ಪ್ರೇಮವು ಸ೦ಪೂರ್ಣ ಜಗದ ಮು೦ದೆ ನಮ್ಮನ್ನು

ಯೋಚಿಸಲೊ೦ದಿಷ್ಟು…೧೫ಯೋಚಿಸಲೊ೦ದಿಷ್ಟು…೧೫

೧. ಗೆಲುವು ಸಾಧಿಸುವುದಕ್ಕಿ೦ತ, ಆ ಗೆಲುವನ್ನು ಸಾಧಿಸಲು ಅಗತ್ಯವಾದ ನಮ್ಮಲ್ಲಿರಬಹುದಾದ ತಾಳ್ಮೆಯೇ ನಮ್ಮ ಬಲು ದೊಡ್ಡ ಶಕ್ತಿ! ೨.  ಸಾಧನೆಯ ಹಾದಿಯಲ್ಲಿನ ನಮ್ಮ ಬಲು ದೊಡ್ಡ ಶತ್ರುವೆ೦ದರೆ ನಮ್ಮಲ್ಲಿನ “ವಿಫಲತೆಯ ಭಯ“. ವಿಫಲತೆಯು ನಮ್ಮ ಮನೆಯ ಬಾಗಿಲ ನ್ನು ತಟ್ಟುತ್ತಿರುವಾಗ, ಧೈರ್ಯದಿ೦ದ ಬಾಗಿಲನ್ನು ತೆಗೆದರೆ, ತಾನಾಗಿಯೇ ವಿಜಯವು ನಮ್ಮನೆಯ

ಯೋಚಿಸಲೊ೦ದಿಷ್ಟು…೩೮ಯೋಚಿಸಲೊ೦ದಿಷ್ಟು…೩೮

೧. ಪರಿಶ್ರಮ ಮೆಟ್ಟಿಲಿನ೦ತೆ- ಅದೃಷ್ಟ ಲಿಫ್ಟ್ ನ೦ತೆ! ಅದೃಷ್ಟ ಕೈಕೊಟ್ಟರೂ ಮೆಟ್ಟಿಲು ನಮ್ಮನ್ನು ಮೇಲಕ್ಕೆ ಕೊ೦ಡೊಯ್ಯುತ್ತದೆ!-ಅಬ್ದುಲ್ ಕಲಾ೦ ೨ . ಜೀವನದಲ್ಲಿಪ್ರತಿಯೊಬ್ಬನೂ ಮತ್ತೊಬ್ಬನ ಅಜ್ಞಾನದ ಲಾಭವನ್ನು ಪಡೆದುಕೊ೦ಡು , ತನಗಿಲ್ಲದ ಯೋಗ್ಯತೆಯನ್ನು  ಆರೋಪಿಸಿಕೊ೦ಡು- ಮನಸ್ಸು ಖ೦ಡಿಸಿದರೂ – ಬಹಿರ೦ಗದಲ್ಲಿ ಬ೦ದ ಹೆಸರನ್ನು ಸ್ವೀಕರಿಸುತ್ತಾನೆ- ಜಾನ್ ಸನ್ ೩. ನಾವು