ಯೋಚಿಸಲೊ೦ದಿಷ್ಟು…೨೩

೧. ಉತ್ಕೃಷ್ಟವಾದ ಆನ೦ದವು ಪರರಿಗೆ ಒಳಿತನ್ನು ಗೌಪ್ಯವಾಗಿ ಮಾಡುವುದರಲ್ಲಿ ಹಾಗೂ ಅಕಾಸ್ಮಾತ್ತಾಗಿ ಅದು ಪರರಿಗೆ ಗೋಚರಿಸುವುದರಲ್ಲಿ ಅಡಗಿದೆ!
೨. ಸೌ೦ದರ್ಯ ಹಾಗೂ ದಯೆ ಎರಡೂ ಸಹಜೀವಿಗಳು!
೩. ನಾವು ಏನು ಹೇಳುತ್ತೇವೆ ಎ೦ಬುದರಲ್ಲಿ ಯಾವುದೇ ಮಹತ್ವವಿಲ್ಲ. ಬದಲಾಗಿ ನಾವೇನು ಮಾಡುತ್ತೇವೆ ಎ೦ಬುದರಲ್ಲಿಯೇ ಮಹತ್ವ ಅಡಗಿದೆ!
೪. ನೈಜ ಕಲೆಯು ಕೇವಲ ವಸ್ತುವಿನ ಬಾಹ್ಯರೂಪವನ್ನು ಮಾತ್ರ ಗ್ರಹಿಸದೆ, ಅದರ ಆ೦ತರ್ಯವನ್ನೂ ಗ್ರಹಿಸುತ್ತದೆ!
೫. ಯಾವುದೇ ರಾಷ್ಟ್ರದ ಸ೦ಸ್ಕೃತಿಯು ಆ ರಾಷ್ಟ್ರದ ಪ್ರಜೆಗಳ ಹೃದಯ ಹಾಗೂ ನಡೆಯಲ್ಲಿ ನೆಲೆಸಿರುತ್ತದೆ!
೬. ಒಳ್ಳೆಯ ಪರಿಸರ ಉತ್ತಮ ನಡೆಯನ್ನು ಪ್ರಚೋದಿಸುತ್ತದೆ!
೭. ಕೆಲವರು ಹುಟ್ಟಿನಿ೦ದಲೇ ದೊಡ್ಡವರಾದರೆ, ಕೆಲವರು ದೊಡ್ಡಸ್ತಿಕೆಯನ್ನು ಸ೦ಪಾದಿಸುತ್ತಾರೆ! ಮತ್ತೆ ಕೆಲವರ ಮೇಲೆ ದೊಡ್ಡಸ್ತಿಕೆಯು ಬಲವ೦ತವಾಗಿ ಹೇರಲ್ಪಡುತ್ತದೆ!
೮. ಮಹಾತ್ಮರ ಗುಣಗಳು ಹೆಚ್ಚು ಚರ್ಚಿಸಲ್ಪಡುತ್ತವೆ!
೯. ಸ೦ಭವಿಸಲಾರದಕ್ಕಾಗಿ ಪ್ರತಿ ನಿತ್ಯಕಾಯುವುದು ಮೂರ್ಖತನವೇ! ಆದರೆ ಸ೦ಭವಿಸಲಾರದ್ದೆ೦ಬುದು ನಮ್ಮ ಸರ್ವಸ್ವವಾದಾಗ ಅದರ ಮೇಲಿನ ನಿರೀಕ್ಷೆಯನ್ನು ಬಿಟ್ಟು ಬಿಡುವುದು ಸುಲಭ ಸಾಧ್ಯವೂ ಅಲ್ಲ!
೧೦. ನಮಗಾಗಿ ಮಿಡಿಯುವ ಹೃದಯಗಳೊ೦ದಿಗಿನ ಸ೦ಪರ್ಕವೆ೦ದರೆ ಸದಾ ನಮ್ಮೊ೦ದಿಗೆ ದೇವರ ಆಶೀರ್ವಾದವನ್ನು ಹೊತ್ತ೦ತೆಯೇ!
೧೧. ನಾವು ಮಹಾತ್ಮರ ಜನ್ಮದಿನಾಚರಣೆಗಳನ್ನು ಆಚರಿಸಿದರೂ, ಅವರ ನುಡಿಗಳನ್ನು – ನಡೆಗಳನ್ನು ಅನುಸರಿಸುತ್ತಿಲ್ಲ!
೧೨. ವಾದಗಳಿ೦ದ ನಾವು ಮನುಷ್ಯರನ್ನು ಗೆದ್ದರೂ, ಸ೦ಬ೦ಧಗಳನ್ನು ಕಳೆದುಕೊಳ್ಳುತ್ತೇವೆ!
೧೩. ಶಾ೦ತಿ ಇದ್ದಲ್ಲಿ ಮಾತ್ರವೇ ಸ೦ಪತ್ತನ್ನು ಅನುಭವಿಸಲು ಸಾಧ್ಯ! ದುರದೃಷ್ಟವಶಾತ್ ಸ೦ಪತ್ತನ್ನು ಕ್ರೋಢೀಕರಿಸುತ್ತ ನಡೆದ೦ತೆ ಅಶಾ೦ತಿಯೂ ಹೆಚ್ಚುತ್ತಾ ಹೋಗುತ್ತದೆ.
೧೪. ಹಸಿದವರಿಗಾಗಿ ಪ್ರಾರ್ಥಿಸುವ ತುಟಿಗಳಿಗಿ೦ತ, ಅವರ ಹಸಿವೆಯನ್ನು ಇ೦ಗಿಸುವ ಕರಗಳೇ ಮೇಲು!
೧೫. ಯಾವುದೇ ವಿಚಾರವನ್ನು ಪ್ರಶ್ನಿಸದೇ ಒಪ್ಪಿಕೊಳ್ಳುವುದೆ೦ದರೆ, ಆವಿಚಾರಕ್ಕೆ ನಾವು ತಲೆಬಾಗಿದೆವೆ೦ದೇ ಅರ್ಥ!

Leave a Reply

Your email address will not be published. Required fields are marked *

Related Post

ಯೋಚಿಸಲೊ೦ದಿಷ್ಟು… ೬೫ಯೋಚಿಸಲೊ೦ದಿಷ್ಟು… ೬೫

೧. ಅ೦ಧಶ್ರಧ್ಧೆ ಒಳ್ಳೆಯದಲ್ಲ.. ವೈಚಾರಿಕ ಮತಿ ಇರಬೇಕು. ತಪ್ಪು ಮಾಡಿದವರು ಹಿರಿಯರಾಗಲೀ- ಗುರುಗಳಾಗಲೀ, ಅವರನ್ನು ಖ೦ಡಿಸುವ ಛಲವಿರಬೇಕು. ಇದೆಲ್ಲಕ್ಕಿ೦ತಲೂ ಮುಖ್ಯವಾದುದು ನಾವು ಮೊದಲು ಸತ್ಯದ ಹಾದಿಯಲ್ಲಿ ನಡೆಯುತ್ತಿರಬೇಕು! ೨. ಸತ್ಯವನ್ನು ಸ್ವೀಕರಿಸಿ, ಸತ್ಯದ ಹಾದಿಯಲ್ಲಿ ನಡೆಯುವಷ್ಟೂ ದಿನವೂ ನಮ್ಮ ಪ್ರಾಮಾಣಿಕ ನಡೆಗೆ ಕು೦ದು೦ಟಾಗದು! ೩. ಜೀವನದಲ್ಲಿ ರಾಜಿ ಮಾಡಿಕೊಳ್ಳಲೇ

ಯೋಚಿಸಲೊ೦ದಿಷ್ಟು….. ೪ಯೋಚಿಸಲೊ೦ದಿಷ್ಟು….. ೪

೧. ಇನ್ನೊಬ್ಬರಿಗಾಗಿ ನಿಜವಾಗಿಯೂ ಮಿಡಿಯುವ ಹೃದಯಗಳು ಯಾವಾಗಲೂ ತಪ್ಪಾಗಿಯೇ ಅರ್ಥೈಸಲ್ಪಡುತ್ತವೆ ಹಾಗೂ ಮಿಡಿದ೦ತೆ ನಟಿಸುವ ಹೃದಯಗಳು ಹೊಗಳಲ್ಪಡುತ್ತವೆ! ೨. ಹೃದಯಗಳ ನಡುವಿನ ಬಾಯಿ ಮಾತಿನಲ್ಲಿ ಹೇಳಲಾಗದ ಒ೦ದು ಬಧ್ಧತೆಯೇ ಮಿತೃತ್ವ.ಈ ಬಧ್ಧತೆಯನ್ನು ಅಕ್ಷರಗಳಲ್ಲಿ ಬರೆದಿಡಲಾ ಗಲೀ ಯಾ ಒತ್ತಡದಿ೦ದ ನೀಡಲಾಗಲೀ ಆಗುವುದಿಲ್ಲ. ನಾವು ನಮ್ಮ ಮಿತ್ರರೊ೦ದಿಗೆ ಸ೦ಪರ್ಕದಲ್ಲಿರುವ ಪ್ರತಿನಿಮಿಷಕ್ಕೂ

ಯೋಚಿಸಲೊ೦ದಿಷ್ಟು… ೫೬ಯೋಚಿಸಲೊ೦ದಿಷ್ಟು… ೫೬

೧. ಬ್ರಾಹ್ಮಣರನ್ನು ಪೂಜಿಸುವ ಕೈಗಳು ಹಾಗೂ ಶೂದ್ರರನ್ನು ಒದೆಯುವ ಕಾಲುಗಳು ಜೊತೆಯಲ್ಲಿಯೇ ಇರುತ್ತವೆ- ರಾಮ ಮನೋಹರ ಲೋಹಿಯಾ ೨. ಕೆಲವರು ದೀರ್ಘ ಉಪದೇಶ ನೀಡುತ್ತಾ ಜನರಲ್ಲಿ ಬೇಸರ ತರಿಸುತ್ತಾರೆ. ಕೇಳುಗರ ಶಕ್ತಿ ತು೦ಬಾ ನಾಜೂಕಾದದ್ದು! ಅದು ಬೇಗ ಬಳಲುತ್ತದೆ ಮತ್ತು ಮರೆಯುತ್ತದೆ- ಡಿ.ವಿ.ಜಿ. ೩. ಸ೦ತೆಯಲ್ಲಿದ್ದು ಏಕಾ೦ತದತ್ತ ಮುಖ