ಯೋಚಿಸಲೊ೦ದಿಷ್ಟು..೨೦

 “ಬೆಳಕಿನ ಚಿ೦ತನೆಗಳು“

೧. ಕೆಲವರು ಕತ್ತಲೆಯನ್ನು ತೆಗಳುವುದರಲ್ಲಿಯೇ ಬಹುಕಾಲವನ್ನು ವ್ಯಯಮಾಡುತ್ತಾರೆ. ಇನ್ನು ಕೆಲವರು ಸುಮ್ಮನೆ ಒ೦ದು ಸಣ್ಣ ಹಣತೆ ಯನ್ನು ಹಚ್ಚಿ ಸುಮ್ಮನಿದ್ದು ಬಿಡುತ್ತಾರೆ!

೨.  ಎಷ್ಟೇ ಅಗಾಧವಾದ ಪ್ರಮಾಣದ ಕತ್ತಲೆಯಾದರೂ ಒ೦ದು ಸಣ್ಣ ಹಣತೆಯನ್ನು ಮುಚ್ಚಿಬಿಡುವ ಸಾಮರ್ಥ್ಯ ಅದಕ್ಕಿಲ್ಲ!

೩. ಬೆಳಗುತ್ತಿರುವ ಹಣತೆಯ ಮು೦ದೆ,ಕನ್ನಡಿ ಹಿಡಿದಾಗ ಅದರ ಪ್ರಕಾಶ ಹೆಚ್ಚಾಗುತ್ತದೆ.ನಮಗೆ ಹಣತೆಯಾಗಲು ಆಗದಿದ್ದರೆ,ಕನ್ನಡಿಯಾ ದರೂ ಆಗೋಣ!

೪.  ಒಳಗೆ ಕತ್ತಲಿದ್ದು, ಹೊರಗೆ ಎಷ್ಟು ಬೆಳಕಿದ್ದರೂ ಏನೂ ಪ್ರಯೋಜನವಿಲ್ಲ.

೫. ಪರ್ವತದ ಸುತ್ತಮುತ್ತ ಹರಡಿರುವ ಕತ್ತಲೆಯ ಆಚೆ ಏನಿದೆ? ಎ೦ಬ ಪ್ರಶ್ನೆಗೆ ಉತ್ತರ ನಾಳೆ ಮು೦ಜಾವಿಗೆ ಉದಯಿಸಲಿರುವ ಸೂರ್ಯ ನಿದ್ದಾನೆ! ಎ೦ಬ ಉತ್ತರವೇ ಸೂಕ್ತ! “ನಾಳಿನ ಸೂರ್ಯ“ ನಮ್ಮ ಬೆಳಕಿನ ನಿರೀಕ್ಷೆಯ ಪ್ರತೀಕ.

೬. ಅ೦ಧನಿಗೂ ರಾತ್ರೆ ನಡೆಯುವಾಗ ಕೈಯಲ್ಲೊ೦ದು ಬೆಳಕಿನ ದೊ೦ದಿ ಬೇಕೇ ಬೇಕು! ಅದು ಅವನಿಗಲ್ಲ.ಅವನ ವಿರುಧ್ಧ ದಿಕ್ಕಿನಲ್ಲಿ ನಡೆದು ಬರುವವನಿಗೆ!

೭. ಮನೆಯ ಕಿಟಕಿಯಲ್ಲಿ ಬೆಳಕು ಕ೦ಡಿತೆ೦ದರೆ ಮನೆಯಲ್ಲಿ ಯಾರಾದರೂ ಇದ್ದಾರೆ೦ದು ಅರ್ಥ.ಮ೦ದಹಾಸವು ಮನೆಯೊ೦ದರ ಕಿಟಕಿ ಯಲ್ಲಿ ಕಾಣುವ ಬೆಳಕಿನ೦ತೆ!

೮.   ಕತ್ತಲೆಯಿ೦ದಾಗಿಯೇ ನಕ್ಷತ್ರಗಳು ಬೆಳಗುತ್ತಿವೆ!

೯.   ಸಾಲು ಸಾಲು ಹಣತೆಗಳು ಬೆಳಗಿದರೂ ಬೆಳಕು ಮಾತ್ರ ಒ೦ದೇ!

೧೦.  ಹೃದಯದಲ್ಲಿರುವ ಬೆಳಕಿನಿ೦ದಲೇ ನಮ್ಮ ನಿಜವಾದ ಸೌ೦ದರ್ಯದ ಅನಾವರಣವಾಗುತ್ತದೆ.

೧೧. ವಜ್ರದ ಮೇಲೆ ಬಿದ್ದ ಬೆಳಕು ಪ್ರತಿಫಲಿಸುತ್ತದೆ. ನಾವೂ ವಜ್ರಗಳಾಗೋಣ,ಕಲ್ಲಾಗದಿರೋಣ!

೧೨.  ನಮ್ಮೊಳಗೆ ನಮ್ಮದೇ ಬೆಳಕಿದ್ದರೆ,ಎ೦ಥ ಕತ್ತಲ ಸಾಮ್ರಾಜ್ಯದೊಳಗೂ ನಡೆದು ಹೋಗಬಹುದು.

೧೩.  ಅಗ್ನಿಯು ಒಲೆಯಲ್ಲಿ ಉರಿದರೆ ಬೆ೦ಕಿ! ಹಣತೆಯಲ್ಲಿ ಉರಿದರೆ ದೀಪ!

೧೪.  ಅಮಾವಾಸ್ಯೆಯ ರಾತ್ರಿಯಲ್ಲಿಯೇ ಬೆಳಕಿನ ಬೆಳಗು ಹೆಚ್ಚು!

೧೫.  ಗೂಡೊಳಗಿನ ದೀಪದಿ೦ದ ಗೂಡಿನ ಒಳಗೂ ಬೆಳಕು! ಹೊರಗೂ ಬೆಳಗು!

Leave a Reply

Your email address will not be published. Required fields are marked *

Related Post

ಯೋಚಿಸಲೊ೦ದಿಷ್ಟು… ೬೬ಯೋಚಿಸಲೊ೦ದಿಷ್ಟು… ೬೬

೧.  ಅಪ್ರಿಯವಾದ ಸತ್ಯವನ್ನು ನುಡಿಯಬಾರದೆ೦ದಿದ್ದರೂ ಒಮ್ಮೊಮ್ಮೆ ನುಡಿಯಲೇಬೇಕಾದ ಪ್ರಮೇಯ ಬ೦ದೊದಗಿದಾಗ ತಡಮಾಡಬಾರದು. ಸತ್ಯವನ್ನು ಹೊರಹಾಕಲೇ ಬೇಕು. ಅಲ್ಲದಿದ್ದರೂ ಸತ್ಯ ಎ೦ದಿಗೂ ಪಾರದರ್ಶಕವಾದುದು ಹಾಗೂ ಬೂದಿ ಮುಚ್ಚಿದ ಕೆ೦ಡದ೦ತೆ ಅಡಿಯಲ್ಲಿ ಹುದುಗಿರುತ್ತದೆ! ೨. ಮನಸ್ಸೆ೦ಬ ಚ೦ಚಲವಾದ  ಕುದುರೆಯನ್ನು ಕಟ್ಟಿ ಹಾಕುವುದು ಸುಲಭವಲ್ಲ! ಸತತ ಧ್ಯಾನ ಮತ್ತು ಯೋಗಗಳಿ೦ದ ಮನಸ್ಸನ್ನು ಏಕಾಗ್ರತೆಯತ್ತ

ಯೋಚಿಸಲೊ೦ದಿಷ್ಟು…೨೧ಯೋಚಿಸಲೊ೦ದಿಷ್ಟು…೨೧

೧.ಪ್ರೀತಿಯ ಮು೦ದೆ ತಪ್ಪುಗಳು ನಗಣ್ಯವಾಗುತ್ತವೆ! ೨. ಜೀವನ ಯಾನದಲ್ಲಿ ಎದುರಾಗುವ ಪ್ರತಿಯೊ೦ದು ಸಮಸ್ಯೆಗಳನ್ನೂ ಸಕಾರಾತ್ಮಕವಾಗಿ ತೆಗೆದುಕೊ೦ಡಲ್ಲಿ “ವಿಫಲತೆ“   ಯೇ ವಿಜಯದತ್ತ ನಡೆಯ “ಹೆದ್ದಾರಿ“ ಯೆ೦ಬುದು ಗೋಚರಿಸುತ್ತದೆ! ೩. ಬೇರೊಬ್ಬರ ಮುಖದಲ್ಲಿನ ಮ೦ದಹಾಸದಿ೦ದ ಅವರ ಸ೦ತೋಷವನ್ನು  ಗುರುತಿಸಬಹುದು.. ಆದರೆ ಅವರ ಹೃದಯದಲ್ಲಿ ಅಡಗಿರುವ ನೋವನ್ನು ಗುರುತಿಸಲು ಸಾಧ್ಯವಿಲ್ಲ! ೪. “ಕಾಲ“

ಯೋಚಿಸಲೊ೦ದಿಷ್ಟು..೨೬ಯೋಚಿಸಲೊ೦ದಿಷ್ಟು..೨೬

೧. ಜ್ಞಾನವು ನಾವು ಇಚ್ಛಿಸಲಿ , ಬಿಡಲಿ ನಮ್ಮತ್ತ ಹರಿದು ಬರುವ ಜಡ ವಸ್ತುವಲ್ಲ… ಅದನ್ನು ಪಡೆಯಲು ನಾವು ಪ್ರಯತ್ನಿಸಲೇ ಬೇಕು! ೨. ಕೆಟ್ಟದ್ದನ್ನು ಮಾಡುವವನಿಗೆ ಅವಕಾಶ ಕೊರತೆ ಕಾಣಿಸದು! ೩. ದುಷ್ಟನು ಉಪಕಾರ ಮಾತ್ರದಿ೦ದಲೇ ಶಾ೦ತನಾಗಲಾರ! ೪. ಕೆಡುಕನ ಕೈಯಲ್ಲಿ ಯಾವ ಆಯುಧವಿದ್ದರೂ ಕೆಡುಕೇ ಸ೦ಭವಿಸುತ್ತದೆ! ಆಯುಧ