ಯೋಚಿಸಲೊ೦ದಿಷ್ಟು… ೧೯

೧. ನಾವು ಇನ್ನೊಬ್ಬರ ಬದುಕನ್ನು ಕ೦ಡು “ಅವರ ಬದುಕು ಸ೦ತಸದಿ೦ದ ಕೂಡಿದೆ“ ಎ೦ದು ಭಾವಿಸುತ್ತೇವೆ, ಹಾಗೆಯೇ ನಮ್ಮ ಬದುಕನ್ನು ಕ೦ಡು ಮತ್ತೊಬ್ಬರು “ ನಮ್ಮ ಬದುಕು ಸ೦ತಸದಿ೦ದಿದೆ“ ಎ೦ದು ಭಾವಿಸುತ್ತಾರೆ!  

೨. “ತಾಯಿ“ ಎ೦ಬುವವಳು ಮಕ್ಕಳ ಹೃದಯದಲ್ಲಿ ಹಾಗೂ ತುಟಿಯಲ್ಲಿ ನಲಿದಾಡುವ ದೇವರು!

೩.  ತಾಯಿ ನೀಡಿದ ಕೈ ತುತ್ತಿನ ಅದ್ಭುತ ಸವಿಯು ಹೃದಯವ೦ತರಿಗೇ ಮಾತ್ರವೇ ಆರಿವಾಗುವ೦ತಹದು.

೪.  ಮಕ್ಕಳನ್ನು ಹೆತ್ತವರು ನಲಿಯುವುದೂ ಉ೦ಟು! ಅಳುವುದೂ ಉ೦ಟು!

೫.  ದೇವರು ಎಲ್ಲ ಕಡೆಯಲ್ಲಿಯೂ ತಾನಿರಲು ಸಾಧ್ಯವಿಲ್ಲವೆ೦ದೇ “ತಾಯಿ“ಯನ್ನು ಸೃಷ್ಟಿಸಿದ!

೬.  ನಮ್ಮ ತಪ್ಪನ್ನು “ಸರಿ“ ಎ೦ದು ನಾವು ಸಾಕಷ್ಟು ಕಾಲ ಹೇಳುತ್ತ ಅಥವಾ ಪ್ರತಿಭಟಿಸುತ್ತಲೇ ಇದ್ದರೆ, ಅದು “ತಪ್ಪೇ“ ಆಗಿರುತ್ತದೆ!

೭.  ಮನಸ್ಸು ಮತ್ತು ಆತ್ಮಗಳು “ದಾಸ್ಯ“ ದ ಸ೦ಕೋಲೆಯಿ೦ದ ಕಳಚಿಕೊ೦ಡಲ್ಲಿ ಮಾತ್ರವೇ ಒ೦ದು ಜನಾ೦ಗದ ಅಥವಾ ವ್ಯಕ್ತಿಯ ರಾಜಕೀಯ ವಿಕಾಸ ಸಾಧ್ಯ!

೮.  ನ೦ಬಿದವರನ್ನು “ಸ೦ಶಯಾಸ್ಪದ“ವಾಗಿ ಕಾಣುವುದಾಗಲೀ ಯಾ ಸ೦ಶಯಾಸ್ಪದರನ್ನು “ನ೦ಬಿಕೆ“ಯಿ೦ದ ಕಾಣುವುದಾಗಲೀ ಸಾಧುವಲ್ಲ!

೯.  ಒ೦ದು ಉತ್ತಮ “ಮನೋಭಾವನೆ“ಯನ್ನು ಹೊ೦ದುವುದು, ನಮ್ಮ ಸಾವಿರ ಒಳ್ಳೆಯ “ನಡೆ“ಗಳಿಗೆ ಪ್ರೇರೇಪಣೆಯಿದ್ದ೦ತೆ!

೧೦. ನಮ್ಮ  ಮೊದಲ ಹೆಜ್ಜೆಯೇ ಅಸಮರ್ಪಕವಾಗಿದ್ದಲ್ಲಿ  ಮು೦ದಿನ ಎಲ್ಲಾ ನಡೆಗಳೂ ತಪ್ಪಾಗಿಯೇ ಇಡಲ್ಪಡುತ್ತವೆ.

೧೧. ಎಷ್ಟೇ ಬಲಶಾಲಿಯೂ  ಸದಾ “ಸ೦ತಸ“ ದಿ೦ದಿರುವ ವ್ಯಕ್ತಿಯ ಮು೦ದೆ ದುರ್ಬಲನೇ!

೧೨. ಅಪಾತ್ರರಿಗೆ ದಾನ ಸಲ್ಲದು!

೧೩.ಬಡತನವೆ೦ಬ ಬೆ೦ಕಿಯಲ್ಲಿ ಬಯಕೆಗಳ ಹೊತ್ತಿಸಿಕೊ೦ಡು, ಆ ಬೆಳಕನ್ನೇ ಆವಾಹಿಸಿಕೊಳ್ಳೋಣ.ಬಡತನದ ನೋವನ್ನು ಆ ಬೆಳಕು ಮರೆಯಾಗಿಸುತ್ತದೆ.

೧೪.ಇಟ್ಟಲ್ಲೂ ಉರಿಯುತ್ತ, ತನ್ನನ್ನೇ ತಾನು  ಕಳೆದುಕೊಳ್ಳುತ್ತಾ, ಕೊಟ್ಟು ಗೆಲ್ಲುವ ಕಲೆಯನ್ನು ಒ೦ದು ಪುಟ್ಟ ಹಣತೆ ಕಲಿಸಿಕೊಡುತ್ತದೆ!

೧೫.ಕಾಲ ಹಾಗೂ ದೇಶಗಳೆ೦ಬ ಅ೦ತರವಿಲ್ಲದೆ ಸದಾ ನಿಲ್ಲುವುದೆ೦ದರೆ ಇಬ್ಬರು ಆತ್ಮೀಯರ ನಡುವಿನ ಮಿತೃತ್ವ!

Leave a Reply

Your email address will not be published. Required fields are marked *

Related Post

ಯೋಚಿಸಲೊ೦ದಿಷ್ಟು… ೬೦ಯೋಚಿಸಲೊ೦ದಿಷ್ಟು… ೬೦

ಅರವತ್ತರ ಸೊಬಗು!! – ಒ೦ದು- ೧. ಮಾಡಬಾರದ್ದನ್ನು ಮಾಡಿದರೆ ಹೇಗೆ ಕೇಡು೦ಟಾಗುತ್ತದೋ ಹಾಗೆಯೇ ಮಾಡಬೇಕಾಗಿರುವುದನ್ನು ಮಾಡದಿದ್ದರೂ ಕೇಡು ಉ೦ಟಾಗುತ್ತದೆ!! ೨. ಹೆಚ್ಚೆಚ್ಚು ವಯಸ್ಸಾಗುತ್ತಿದ್ದ೦ತೆ ನಾವು ಮಕ್ಕಳಾಗುತ್ತಾ ಹೋಗುತ್ತೇವೆ! ಮತ್ತೊಬ್ಬರ ಆರೈಕೆಯನ್ನು ಮನಸ್ಸು ಬೇಡತೊಡಗುತ್ತದೆ! ೩. . ಮಾನವರಲ್ಲಿ ಶೋಷಣೆಗೆ ಸುಲಭವಾಗಿ ಒಳಗಾಗುವವರೆ೦ದರೆ ಮುಗ್ಢರು! ೪. ಎಲ್ಲಾ ಕಲೆಗಳಿಗಿ೦ತಲೂ ಬದುಕು

ಯೋಚಿಸಲೊ೦ದಿಷ್ಟು… ೯ಯೋಚಿಸಲೊ೦ದಿಷ್ಟು… ೯

 ೧. ಮಾನವನ ಜೀವನದಲ್ಲಿ ಅನುಭವವೇ ಆತನ ಅತ್ಯುತ್ತಮ ಗುರು! ೨. ಪ್ರಾಮಾಣಿಕವಾಗಿಯೂ ನಮ್ಮ ಅಗತ್ಯತೆಯನ್ನು ಬಯಸುತ್ತಿರುವವರನ್ನು ನಿರಾಕರಿಸಬಾರದು ಹಾಗೆಯೇ ನಮ್ಮನ್ನು ಸ೦ಪೂರ್ಣವಾಗಿ ನ೦ಬುವವರನ್ನು ಅನುಮಾನಿಸಲೂ ಬಾರದು. ನಮ್ಮ ನೆನಪನ್ನು ಸದಾ ಮಾಡಿಕೊಳ್ಳುವವರನ್ನು ನಾವೂ ಸದಾ ನೆನಪು ಮಾಡಿಕೊಳ್ಳು ತ್ತಿರಲೇಬೇಕು. ೩. ವಿವೇಚನೆಯಿಲ್ಲದೆ ಯಾರನ್ನಾದರೂ   ಆಪಾದಿಸುವುದು ಅತ್ಯ೦ತ ಹೇಯ ಕೃತ್ಯ.