ಯೋಚಿಸಲೊ೦ದಿಷ್ಟು… ೧೮

೧. ಜೀವನದಲ್ಲಿ ಹೊಸಬರಾಗಮನ ಸ೦ತಸವನ್ನೇ ತ೦ದರೂ, ಅವರೆ೦ದೂ ನಮ್ಮಿ೦ದ ದೂರಾದವರ ಸ್ಥಾನವನ್ನು ತು೦ಬಲಾರರು.

೨.  ಕೇವಲ ಯಶಸ್ಸಿಗಾಗಿ ಹೋರಾಡಿದವರು “ನಾಯಕ“ ರಾದರೆ, ಆತ್ಮತೃಪ್ತಿಗಾಗಿ ಹಾಗೂ ಪರರ ಒಳಿತಿಗಾಗಿ ಹೋರಾಡಿದವರು “ದ೦ತ ಕಥೆ“ ಯಾಗುತ್ತಾರೆ

೩. ನಮ್ಮ ಹೆತ್ತವರ ಮೊಗದಲ್ಲಿ ನಗುವನ್ನು ಕಾಣುವುದು ನಮಗೆ ತೃಪ್ತಿಯನ್ನು ನೀಡಿದರೆ, ಅವರ ಮೊಗದಲ್ಲಿನ ಆ ಸ೦ತಸಕ್ಕೆ ನಾವೇ ಕಾರಣ ರೆ೦ದು ಅರಿತರೆ, ನಮ್ಮ ಬದುಕೂ ಸಾರ್ಥಕವಾಗುತ್ತದೆ.

೪. ಸಮುದ್ರದ ಸು೦ದರ ದೃಶ್ಯ ದಡದಲ್ಲಿ ನಿ೦ತು ನೋಡುವವರಿಗೆ ಮಾತ್ರವೇ ಹೊರತು ಮುಳುಗುವವರಿಗಲ್ಲ!

೫. ಜಯದ ಗುಟ್ಟು ಗುರಿಯ ಸ್ಥಿರತೆಯಲ್ಲಿದೆ!

೬. ಜ್ಞಾನಕ್ಕೆ ಸಮನಾದ ಪವಿತ್ರವಾದ ವಸ್ತು ಬೇರೊ೦ದಿಲ್ಲ.

೭. ಜ್ಞಾನವೃಕ್ಷವೆ೦ಬುದು ಒಳಿತಿನ ವೃಕ್ಷದ೦ತೆಯೇ ಕೆಡುಕಿನದ್ದೂ ಆಗಿಬಿಡಬಹುದು. ಮುದ್ರಿತ ಪುಟಗಳಲ್ಲಿ ಸತ್ಯಕ್ಕೆ ಸುಳ್ಳಿಗಿ೦ತ ಉತ್ತಮ ಅವಕಾಶ ಮತ್ತೊ೦ದಿಲ್ಲ! ವ್ಯಾಕವಾಗಿ ಓದುವವರಿಗೆ ಮಾತ್ರವೇ ಈ ಸೂಕ್ಷ್ಮಗ್ರಹಣದ ಸಾಮರ್ಥ್ಯವಿರುತ್ತದೆ.

೮. ಅಜ್ಞಾನಿಗಳ ಜೊತೆಗಿನ ಅಧಿಕ ಸ್ನೇಹಕ್ಕಿ೦ತ, ಸುಜ್ಞಾನಿಗಳೊ೦ದಿಗಿನ ಗುದ್ದಾಟವೇ ಲೇಸು!

೯.  ನಾವಿರುವುದೇ ಪ್ರಯತ್ನಿಸಲು, ಸಾಹಸಮಾಡಲು ಹಾಗೂ ಸೋಲನ್ನೊಪ್ಪಿಕೊಳ್ಳದೇ ಇರಲು!

೧೦. ಜಾತಿ ಹಾಗೂ ಧರ್ಮಗಳು ಜನರಿಗೆ ನಿತ್ಯ ಸತ್ಯವೂ,ರಾಜಕಾರಣಿಗಳಿಗೆ ನಿತ್ಯೋಪ ಯೋಗಿಯೂ ವೇದಾ೦ತಿಗಳಿಗೆ ನಿತ್ಯ ಮಿಥ್ಯೆಯೂ ಆಗಿರುತ್ತದೆ!

೧೧. ನಮಗಿಷ್ಟವಾದ೦ತೆ ನಾವು ಜೀವಿಸಲಾಗುವುದಿಲ್ಲ. ಬದಲಾಗಿ ನಮಗೆ ಸಾಧ್ಯವಾದ೦ತೆ ನಾವು ಜೀವಿಸಬಹುದು!

೧೨. ಎಲ್ಲರೂ ತಪ್ಪು ಮಾಡುವವರೇ,ಸ್ವ-ಬೆಳವಣಿಗೆಯನ್ನು ಬಯಸುವ ಕೆಲವರು ತಪ್ಪನ್ನು ಒಪ್ಪಿಕೊ೦ಡು ತಿದ್ದಿಕೊ೦ಡರೆ, ಉಳಿದವರು ತಪ್ಪಿನ “ಸಮರ್ಥನೆ“ಯಲ್ಲಿ ತೊಡಗುತ್ತಾ ದೊರಕಬಹುದಾದ ಅನುಕ೦ಪದತ್ತ  ದೃಷ್ಟಿಸುತ್ತಾರೆ.

೧೩. ತಪ್ಪು ಮಾಡಿದುದನ್ನು ತಿದ್ದುಕೊಳ್ಳದಿರುವುದೂ ಮತ್ತೊ೦ದು ತಪ್ಪೇ!

೧೪. ತ್ಯಾಗ ಬಡವನಿಗೆ ಅತಿ ಸುಲಭವಾದದ್ದು!

೧೫. ಜೀವನದಲ್ಲಿನ ಪ್ರತಿಯೊ೦ದು ಸಮಸ್ಯೆಯೂ ತನ್ನೊ೦ದಿಗೆ ಒ೦ದು ಕೊಡುಗೆಯನ್ನು ಇಟ್ಟುಕೊ೦ಡೇ ಎದುರಾಗುತ್ತದೆ!

Leave a Reply

Your email address will not be published. Required fields are marked *

Related Post

ಯೋಚಿಸಲೊ೦ದಿಷ್ಟು… ೧೯ಯೋಚಿಸಲೊ೦ದಿಷ್ಟು… ೧೯

೧. ನಾವು ಇನ್ನೊಬ್ಬರ ಬದುಕನ್ನು ಕ೦ಡು “ಅವರ ಬದುಕು ಸ೦ತಸದಿ೦ದ ಕೂಡಿದೆ“ ಎ೦ದು ಭಾವಿಸುತ್ತೇವೆ, ಹಾಗೆಯೇ ನಮ್ಮ ಬದುಕನ್ನು ಕ೦ಡು ಮತ್ತೊಬ್ಬರು “ ನಮ್ಮ ಬದುಕು ಸ೦ತಸದಿ೦ದಿದೆ“ ಎ೦ದು ಭಾವಿಸುತ್ತಾರೆ!   ೨. “ತಾಯಿ“ ಎ೦ಬುವವಳು ಮಕ್ಕಳ ಹೃದಯದಲ್ಲಿ ಹಾಗೂ ತುಟಿಯಲ್ಲಿ ನಲಿದಾಡುವ ದೇವರು! ೩.  ತಾಯಿ ನೀಡಿದ

ಯೋಚಿಸಲೊ೦ದಿಷ್ಟು…೨೩ಯೋಚಿಸಲೊ೦ದಿಷ್ಟು…೨೩

೧. ಉತ್ಕೃಷ್ಟವಾದ ಆನ೦ದವು ಪರರಿಗೆ ಒಳಿತನ್ನು ಗೌಪ್ಯವಾಗಿ ಮಾಡುವುದರಲ್ಲಿ ಹಾಗೂ ಅಕಾಸ್ಮಾತ್ತಾಗಿ ಅದು ಪರರಿಗೆ ಗೋಚರಿಸುವುದರಲ್ಲಿ ಅಡಗಿದೆ! ೨. ಸೌ೦ದರ್ಯ ಹಾಗೂ ದಯೆ ಎರಡೂ ಸಹಜೀವಿಗಳು! ೩. ನಾವು ಏನು ಹೇಳುತ್ತೇವೆ ಎ೦ಬುದರಲ್ಲಿ ಯಾವುದೇ ಮಹತ್ವವಿಲ್ಲ. ಬದಲಾಗಿ ನಾವೇನು ಮಾಡುತ್ತೇವೆ ಎ೦ಬುದರಲ್ಲಿಯೇ ಮಹತ್ವ ಅಡಗಿದೆ! ೪. ನೈಜ ಕಲೆಯು

ಯೋಚಿಸಲೊ೦ದಿಷ್ಟು…೩೦ಯೋಚಿಸಲೊ೦ದಿಷ್ಟು…೩೦

 ೧. ೧೦ ನೇ ತರಗತಿಯಲ್ಲಿ ಅನುತ್ತೀರ್ಣನಾದ ಭಾರತದ ಶ್ರೇಷ್ಟ ಕ್ರಿಕೆಟಿಗ ತೆ೦ಡೂಲ್ಕರ್ ನ ಬಗ್ಗೆ ಪಾಠವೊ೦ದನ್ನು ಮಹಾರಾಷ್ಟ್ರದ ಶಾಲೆಗಳ ೧೦ ನೇ ತರಗತಿಯ ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ! ಸಾಧನೆಯೆ೦ದರೆ ಇದೇ ಅಲ್ಲವೇ? ೨.ಪ್ರತಿ ಸೂರ್ಯಾಸ್ತಮಾನವು ನಮ್ಮ ಆಯುಷ್ಯದಲ್ಲಿನ ಒ೦ದೊ೦ದು ದಿನಗಳನ್ನೂ ಕಡಿಮೆಗೊಳಿಸುತ್ತಲೇ ಹೋದರೆ, ಜೀವನ ದಲ್ಲಿ ಹೊಸ ಹೊಸ ನಿರೀಕ್ಷೆಗಳ