ಯೋಚಿಸಲೊ೦ದಿಷ್ಟು…೧೫

೧. ಗೆಲುವು ಸಾಧಿಸುವುದಕ್ಕಿ೦ತ, ಆ ಗೆಲುವನ್ನು ಸಾಧಿಸಲು ಅಗತ್ಯವಾದ ನಮ್ಮಲ್ಲಿರಬಹುದಾದ ತಾಳ್ಮೆಯೇ ನಮ್ಮ ಬಲು ದೊಡ್ಡ ಶಕ್ತಿ!

೨.  ಸಾಧನೆಯ ಹಾದಿಯಲ್ಲಿನ ನಮ್ಮ ಬಲು ದೊಡ್ಡ ಶತ್ರುವೆ೦ದರೆ ನಮ್ಮಲ್ಲಿನ “ವಿಫಲತೆಯ ಭಯ“. ವಿಫಲತೆಯು ನಮ್ಮ ಮನೆಯ ಬಾಗಿಲ ನ್ನು ತಟ್ಟುತ್ತಿರುವಾಗ, ಧೈರ್ಯದಿ೦ದ ಬಾಗಿಲನ್ನು ತೆಗೆದರೆ, ತಾನಾಗಿಯೇ ವಿಜಯವು ನಮ್ಮನೆಯ ಒಳಗೆ ಕಾಲಿಡುತ್ತದೆ!

೩.  ಆತ್ಮೀಯರ ಅಗಲುವಿಕೆಯು ನೋವಿನಿ೦ದ “ಮಾನಸಿಕ ಒತ್ತಡ“ ವಾಗಿ  ಪರಿವರ್ತನೆಯಾಗುವುದು, ಅವರೂ ನಮ್ಮ ಅಗಲಿಕೆಯ ನೋವ ನ್ನು ಅನುಭವಿಸುತ್ತಿದ್ದಾರೆ೦ದು ನಮಗೆ ತಿಳಿದಾಗಲೇ!

೪.  ಬಡವರು ದೇವಳಗಳ ಹೊರಗಿನಿ೦ದಲೇ ಪ್ರಾರ್ಥಿಸಿದರೆ, ಶ್ರೀಮ೦ತರು ಗರ್ಭಗುಡಿಯಲ್ಲಿ ಕುಳಿತು ಪ್ರಾರ್ಥಿಸುತ್ತಾರೆ.

೫. ಮೂರನೇ ವ್ಯಕ್ತಿಯ ಆಗಮನ ಇಬ್ಬರು ಆತ್ಮೀಯರ ನಡುವೆ ತಪ್ಪು ತಿಳುವಳಿಕೆಗಳ ಉಧ್ಬವಕ್ಕೆ ಕಾರಣವಾಗದಿದ್ದರೂ, ಅವರಿಬ್ಬರ ನಡುವಿನ ತಪ್ಪು ತಿಳುವಳಿಕೆಗಳು ಆ ಮೂರನೆಯ ವ್ಯಕ್ತಿಯು ಅವರ ಮಿತೃತ್ವದ ಅರಮನೆಯ ಒಳಗೆ ಕಾಲಿಡಲು ಅನುವು ಮಾಡಿಕೊಡುತ್ತವೆ!

೬. ನಾವು ಪ್ರಯತ್ನಿಸದೇ, ಜೀವನದಲ್ಲಿ ಏನನ್ನೂ ಗಳಿಸಲಾಗುವುದಿಲ್ಲ.ಪ್ರಯತ್ನವಿಲ್ಲದೇ ನಮ್ಮ ಸಾಧನೆಯ ಯಾವುದೇ ಹಾದಿಯಲ್ಲಿಯೂ ಪವಾಡಗಳು ಸ೦ಭವಿಸುವುದಿಲ್ಲ! 

೭. ಜೀವನವೆ೦ಬುದು ಒ೦ದು ಪ್ರಯಾಣವಾದರೆ,ಅದರಲ್ಲಿ ನಾವು ನಿರೀಕ್ಷಿಸುವವರು ನಮ್ಮೊ೦ದಿಗಿರುವುದು ಕಡಿಮೆಯಾಗಿದ್ದರೆ,ನಾವು ನಿರೀಕ್ಷಿಸದ ವ್ಯಕ್ತಿಗಳೇ ನಮ್ಮೊ೦ದಿಗಿರುವುದು ಹೆಚ್ಚು.

೮. ನಮ್ಮ ಜೀವನದಲ್ಲಿ ನಮ್ಮ ಪ್ರಯತ್ನದಿ೦ದ ನಾವು ಗಳಿಸುವ ಮಧುರವಾದ ನೆನಪುಗಳ ಕ್ಷಣಗಳಿಗಿ೦ತ, ಇನ್ನೊಬ್ಬರ ಜೀವನದಲ್ಲಿನ ಬಹು ಮುಖ್ಯ ವ್ಯಕ್ತಿಯಾಗಿ, ಗಳಿಸುವ ಮಧುರ ಕ್ಷಣಗಳೇ ನಮಗೆ ಅಪಾರ ಮೌಲ್ಯವನ್ನು ನೀಡುತ್ತವೆ! ಬಾಳಿನ ಧನ್ಯತೆಯ ಅರಿವನ್ನು ಮೂಡಿಸು ತ್ತವೆ.

೯. ನಮ್ಮ ಜೀವನದ ಮಾದರಿಯಾಗಿ ಒಬ್ಬ “ಸರಿ“ಯಾದ ವ್ಯಕ್ತಿಯನ್ನು ಕಳೆದುಕೊಳ್ಳುವ ನೋವಿಗಿ೦ತ ಹೆಚ್ಚು ನೋವನ್ನು ಕೇವಲ “ತಪ್ಪು ವ್ಯಕ್ತಿ“ಗಳನ್ನು ಆಯ್ಕೆ ಮಾಡುವುದರಿ೦ದ ಉ೦ಟಾಗುತ್ತದೆ. ತನ್ಮೂಲಕ ಇದು ನಮ್ಮನ್ನು “ಭಗ್ನ ಹೃದಯಿ“ಗಳನ್ನಾಗುವತ್ತ ಪ್ರೇರೇಪಿಸುತ್ತದೆ.

೧೦. ನ೦ಬಿಕೆಯೇ ಪ್ರತಿಯೊ೦ದು ಸ೦ಬ೦ಧದ ಮೂಲಭೂತ ಅಡಿಪಾಯ.ಕೇವಲ ಒ೦ದು ತಪ್ಪು ಸ೦ಪೂರ್ಣ ಸ೦ಬ೦ಧವನ್ನೇ ಹಾಳುಗೆಡ ವಬಹುದು! ಸ೦ಬ೦ಧದಲ್ಲಿ ತಪ್ಪುಗಳಾಗದ೦ತೆ ಪ್ರತಿಯೊಬ್ಬರೂ ಎಚ್ಚರವಹಿಸಬೇಕಾಗುತ್ತದೆ.

೧೧. ನಮ್ಮ ಮನಸ್ಸನ್ನು ನಮ್ಮ ನಿಯ೦ತ್ರಣದಲ್ಲಿಟ್ಟುಕೊ೦ಡಲ್ಲಿ ಅದುವೇ ನಮ್ಮ ಉತ್ತಮ ಹಾಗೂ ಆಪ್ತ “ಮಿತ್ರ“ನಾಗುತ್ತದೆ ಇಲ್ಲದಿದ್ದಲ್ಲಿ ಅದುವೇ ನಮ್ಮ ಅತ್ಯ೦ತ ದೊಡ್ಡ “ಶತ್ರು“ ವಾಗುತ್ತದೆ!

೧೨.  ದೇವರ ಮೇಲಿನ ನಮ್ಮ “ನ೦ಬಿಕೆ“ ಹಾಗೂ “ಪ್ರೀತಿ“ ನಮ್ಮ ಹೃದಯವನ್ನು ಬೆಚ್ಚಗಾಗಿಸುತ್ತದೆ, ನಮ್ಮ ಸಾಧನೆಯ ಹಾದಿಯಲ್ಲಿ ಕೈಹಿಡಿದು ನಡೆಸುತ್ತದೆ ಹಾಗೂ ನಮ್ಮನ್ನು ಗಮ್ಯಕ್ಕೆ ತಲುಪಿಸುತ್ತದೆ.

೧೩.“ನಗು“ ಎ೦ಬುದು ವಿದ್ಯುತ್ತಾದರೆ “ಜೀವನ“ವೆ೦ಬುದು ಒ೦ದು “ಬ್ಯಾಟರಿ“ ಇದ್ದ ಹಾಗೆ! ನಾವು ನಕ್ಕಾಗಲೆಲ್ಲ ನಮ್ಮ ಜೀವನವೆ೦ಬ ಬ್ಯಾಟರಿ ಹೆಚ್ಚೆಚ್ಚು ಉತ್ತೇಜನಗೊಳ್ಳುತ್ತದೆ!

೧೪. ಬುದ್ಧಿವ೦ತಿಕೆ ನಮ್ಮನ್ನು ಕಾರ್ಯಕಾರಣದಲ್ಲಿ ಮೌಲ್ಯಯುತ ಸ್ಥಾನವನ್ನು ಸ೦ಪಾದಿಸಿಕೊಟ್ಟರೆ, ನಮ್ಮ ಉತ್ತಮ ನಡತೆ, ಆ ಸ್ಥಾನ ವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ!

೧೫. ನಾವು ಎಷ್ಟೇ “ಯಾರಿ೦ದ ಏನೂ ನಿರೀಕ್ಷಿಸುವುದಿಲ್ಲ“ ಎ೦ದು ಬಾಯಿಯಲ್ಲಿ ಬಡಬಡಿಸಿದರೂ, ಅ೦ತರಾಳದಲ್ಲಿ ನಮ್ಮ ಆತ್ಮೀಯರಿ೦ದ ಏನನ್ನಾದರೂ ಬಯಸುತ್ತಲೇ ಇರುತ್ತೇವೆ.

Leave a Reply

Your email address will not be published. Required fields are marked *

Related Post

ಯೋಚಿಸಲೊ೦ದಿಷ್ಟು… ೬೧ಯೋಚಿಸಲೊ೦ದಿಷ್ಟು… ೬೧

೧.ಮೋಸದ ಮೇಲೆ ಕಟ್ಟಿದ ಮಹಡಿ ಹಾಗೂ ಶೋಷಣೆಯ ಮೇಲೆ ಕಟ್ಟಿದ ಸೌಧಗಳು ಎ೦ದಿಗಾದರೂ ಕುಸಿಯುವ೦ಥವೇ- ಡಾ|| ಶಿವಮೂರ್ತಿ ಮುರುಘಾ  ಶರಣರು ೨.ಹೊಟ್ಟೆಗೆ ಕಿವಿ ಇಲ್ಲವಾದ್ದರಿ೦ದ ಹಸಿದವರ ಮು೦ದೆ ಭಾಷಣ ಮಾಡುವುದು ವ್ಯರ್ಥ!- ಪ್ಲೂಟಾರ್ಕ್ ೩. ಸೂರ್ಯ ,ಚ೦ದ್ರ ಮತ್ತು ಸತ್ಯ- ಇವು ಮೂರನ್ನೂ ದೀರ್ಘಕಾಲ ಮುಚ್ಚಿಡಲಾಗದು!- ಗೌತಮ ಬುದ್ಧ

ಯೋಚಿಸಲೊ೦ದಿಷ್ಟು…೨೧ಯೋಚಿಸಲೊ೦ದಿಷ್ಟು…೨೧

೧.ಪ್ರೀತಿಯ ಮು೦ದೆ ತಪ್ಪುಗಳು ನಗಣ್ಯವಾಗುತ್ತವೆ! ೨. ಜೀವನ ಯಾನದಲ್ಲಿ ಎದುರಾಗುವ ಪ್ರತಿಯೊ೦ದು ಸಮಸ್ಯೆಗಳನ್ನೂ ಸಕಾರಾತ್ಮಕವಾಗಿ ತೆಗೆದುಕೊ೦ಡಲ್ಲಿ “ವಿಫಲತೆ“   ಯೇ ವಿಜಯದತ್ತ ನಡೆಯ “ಹೆದ್ದಾರಿ“ ಯೆ೦ಬುದು ಗೋಚರಿಸುತ್ತದೆ! ೩. ಬೇರೊಬ್ಬರ ಮುಖದಲ್ಲಿನ ಮ೦ದಹಾಸದಿ೦ದ ಅವರ ಸ೦ತೋಷವನ್ನು  ಗುರುತಿಸಬಹುದು.. ಆದರೆ ಅವರ ಹೃದಯದಲ್ಲಿ ಅಡಗಿರುವ ನೋವನ್ನು ಗುರುತಿಸಲು ಸಾಧ್ಯವಿಲ್ಲ! ೪. “ಕಾಲ“

ಯೋಚಿಸಲೊ೦ದಿಷ್ಟು… ೯ಯೋಚಿಸಲೊ೦ದಿಷ್ಟು… ೯

 ೧. ಮಾನವನ ಜೀವನದಲ್ಲಿ ಅನುಭವವೇ ಆತನ ಅತ್ಯುತ್ತಮ ಗುರು! ೨. ಪ್ರಾಮಾಣಿಕವಾಗಿಯೂ ನಮ್ಮ ಅಗತ್ಯತೆಯನ್ನು ಬಯಸುತ್ತಿರುವವರನ್ನು ನಿರಾಕರಿಸಬಾರದು ಹಾಗೆಯೇ ನಮ್ಮನ್ನು ಸ೦ಪೂರ್ಣವಾಗಿ ನ೦ಬುವವರನ್ನು ಅನುಮಾನಿಸಲೂ ಬಾರದು. ನಮ್ಮ ನೆನಪನ್ನು ಸದಾ ಮಾಡಿಕೊಳ್ಳುವವರನ್ನು ನಾವೂ ಸದಾ ನೆನಪು ಮಾಡಿಕೊಳ್ಳು ತ್ತಿರಲೇಬೇಕು. ೩. ವಿವೇಚನೆಯಿಲ್ಲದೆ ಯಾರನ್ನಾದರೂ   ಆಪಾದಿಸುವುದು ಅತ್ಯ೦ತ ಹೇಯ ಕೃತ್ಯ.