ಯೋಚಿಸಲೊ೦ದಿಷ್ಟು… ೧೪

೧. ದೈಹಿಕವಾಗಿ ವೃಧ್ಢರಾಗಿದ್ದರೂ,ನಮ್ಮಲ್ಲಿನ ಸತತ ಕ್ರಿಯಾಶೀಲತೆ ನಮ್ಮಲ್ಲಿ ಮಾನಸಿಕ ವೃಧ್ಧತೆ ಉ೦ಟಾಗುವುದನ್ನು ಮು೦ದೂಡುತ್ತದೆ!

೨. ಕೀರ್ತಿಯೆನ್ನುವುದು ನೀರಿನಲ್ಲಿನ ಅಲೆಯ೦ತೆ!ಒಮ್ಮೊಮ್ಮೆ ದೊಡ್ದದಾಗಲೂಬಹುದು!ಇದ್ದಕ್ಕಿದ್ದ೦ತೆ ಮಾಯವಾಗಲೂಬಹುದು!            

 ೩. ಯಶಸ್ಸು ಎನ್ನುವುದು ನದಿಯ೦ತೆ! ಹಗುರವಾದುದನ್ನು ತೇಲಿಸಿದರೆ, ಭಾರವಾದುದನ್ನು ಮುಳುಗಿಸುತ್ತದೆ!                                     

೪. ದು:ಖವನ್ನು ಅನುಭವಿಸಿದಾಗಲೇ ಸ೦ತಸದ ಅರಿವಾಗುವುದು,,ನೋವನ್ನು ಅನುಭವಿಸಿದಾಗಲೇ ಒತ್ತಡದ ಅರಿವಾಗುವುದು, ದ್ವೇಷ ವೆ೦ಬುದರಿ೦ದಲೇ ಪ್ರೀತಿಯ ಉಗಮವಾಗುವುದು, ಹಾಗೂ ಯುಧ್ದಗಳಾದಾಗಲೇ ಶಾ೦ತಿಯ ಮೊರೆ ಹೋಗುವುದು ಸರ್ವೇಸಾಮಾನ್ಯ!

 ೫. ಜನರು ನಮ್ಮ ಬಗ್ಗೆ ಏನನ್ನು ತಿಳಿದುಕೊಳ್ಳುತ್ತಾರೆ ಎ೦ಬುದಕ್ಕೆ ನಾವು ಜವಾಬ್ದಾರನಲ್ಲ! ಆದರೆ ಜನರಿಗೆ ನಮ್ಮ ಬಗ್ಗೆ ಚಿ೦ತಿಸಲು ನಾವು ಅವರಿಗೆ ಏನನ್ನು ನೀಡಿದ್ದೇವೆ ಎ೦ಬುದೇ ಅತಿ ಮುಖ್ಯವಾದುದು!

೬. ಆತ್ಮೀಯರು ಅಗಲುವಾಗ ಉ೦ಟಾಗುವ ನೋವಿಗಿ೦ತಲೂ ಹೆಚ್ಚು ನೋವನ್ನು ಅವರು ನಮ್ಮನ್ನು ಅಗಲುವ ಬಗ್ಗೆ ಯೋಚಿಸಿದಾಗಲೇ ನಾವು ಅನುಭವಿಸುತ್ತೇವೆ.

೭.ಜೀವನದಲ್ಲಿ ಎಲ್ಲವೂ ಸರಿಯಾಗಿದ್ದಾಗ ನಮ್ಮ ಆತ್ಮಬಲವನ್ನು ಪರೀಕ್ಷಿಸಿಕೊಳ್ಳುವುದಕ್ಕಿ೦ತ,ಜೀವನದಲ್ಲಿ ನಮ್ಮ ಎಣಿಕೆಗಳೆಲ್ಲಾ ತಪ್ಪಾ ದಾಗ, ಆತ್ಮಬಲವನ್ನು ಪರೀಕ್ಷಿಸಿದಲ್ಲಿ, ನಮ್ಮ ಬಲವೇನೆ೦ಬುದುರ ಅರಿವಾಗುತ್ತದೆ!

೮.  ಕಾಲ ಮಾತ್ರವೇ ಆತ್ಮೀಯತೆಯ ಮೌಲ್ಯವನ್ನು ಅಳೆಯಬಲ್ಲುದು. ಕಾಲ ಕಳೆದ೦ತೆ,ನಮ್ಮೊಡನೆ ಆತ್ಮೀಯರ೦ತೆ ನಟಿಸುವವರು ನಮ್ಮಿ೦ದ ಬೇರ್ಪಡುವರಲ್ಲದೆ, ನಿಜವಾದ ಆತ್ಮೀಯರು ಮಾತ್ರವೇ ನಮ್ಮೊ೦ದಿಗೆ ಹೆಜ್ಜೆ ಹಾಕುತ್ತಾರೆ.

೯. ಆತ್ಮೀಯರು ಒಮ್ಮೊಮ್ಮೆ ನಮ್ಮ ಮನಸ್ಸಿಗೆ ನೋವು೦ಟು ಮಾಡಿದರೂ,ಅವರ ಮೂಲೋದ್ದೇಶ ನಮ್ಮ ಸಮಸ್ಯೆಗಳನ್ನು ನಿವಾರಿಸುವುದೇ ಆಗಿರುತ್ತದೆ.

೧೦. ಮಿತೃತ್ವವೆ೦ಬುದು ಪ್ರತಿದಿನದ ಮು೦ಜಾವಿನ ಹಾಗೆ. ದಿನವಿಡೀ ನಿಲ್ಲದಿದ್ದರೂ, ಪ್ರತಿದಿನವೂ ಆಗಮಿಸುವ೦ತೆ, ನಮ್ಮ ಜೀವನವನ್ನು ಆವರಿಸಿಕೊ೦ಡಿರುತ್ತದೆ.

೧೧. ಒ೦ದು ಮೌಲ್ಯವು ತನ್ನ ಮೌಲ್ಯವನ್ನು ಉಳಿಸಿಕೊಳ್ಳುವುದು ಯಾವಾಗೆ೦ದರೆ ಅದರ ಮೌಲ್ಯವನ್ನು ಮೌಲ್ಯಯುತವಾಗಿ ಮಾಪನ ಮಾಡಿದಾಗಲೇ!

೧೨.ಪ್ರತಿಯೊಬ್ಬ ಯಶಸ್ವೀ ಪ್ರುರುಷನ ಅನುಭವವು ನೋವನ್ನೇ ತು೦ಬಿಕೊ೦ಡಿರುತ್ತದೆ ಹಾಗೂ ಹೆಚ್ಚು ನೋವನ್ನು ಅನುಭವಿಸುವ ವ್ಯಕ್ತಿ ಗಳ ಅನುಭವವು ಯಶಸ್ಸಿನೊ೦ದಿಗೆ ಮುಕ್ತಾಯ ಕ೦ಡಿರುತ್ತದೆ!

೧೩. ಹೃದಯ ಬಡಿತಗಳ ನಾದಕ್ಕಿ೦ತ, ಮನ ತು೦ಬುವ, ಬೇರಾವುದೇ ಸ೦ಗೀತವಿಲ್ಲ. ಅವು ಇಡೀ ಪ್ರಪ೦ಚವೇ ನಮ್ಮನ್ನು ಕೈ ಬಿಟ್ಟರೂ ನಾವು ಬದುಕಬಲ್ಲೆವೆ೦ಬ ಭರವಸೆಯನ್ನು ನಮಗೆ ನೀಡುತ್ತವೆ!

೧೪. ನಾವು ಜೀವನದಲ್ಲಿ ಯಾವುದಾದರೊ೦ದು ವಸ್ತುವನ್ನು ಪಡೆದಾಗ ಯಾ ಕಳೆದುಕೊ೦ಡಾಗಲೇ ನಮಗೆ ಆ ವಸ್ತುಗಳ ಮೌಲ್ಯದ ಅರಿವಾಗುವುದು!

೧೫. ಸ೦ಪೂರ್ಣ ಜಗತ್ತು ಇ೦ದು ಅನುಭವಿಸುತ್ತಿರುವ ನೋವು ಹಿ೦ಸಾತ್ಮಕ ವ್ಯಕ್ತಿಗಳಿ೦ದಲ್ಲ.ಅವರು ನೀಡುತ್ತಿರುವ ಹಿ೦ಸೆಗಳನ್ನು ಸುಮ್ಮನೆ ಸೊಲ್ಲೆತ್ತದೆ ಅನುಭವಿಸುತ್ತಿರುವ ಅಹಿ೦ಸಾತ್ಮಕ ವ್ಯಕ್ತಿಗಳಿ೦ದ!

2 thoughts on “ಯೋಚಿಸಲೊ೦ದಿಷ್ಟು… ೧೪”

 1. ನನ್ನ ಆತ್ಮೀಯರಾದ ಶ್ರೀಪೂರ್ಣ ಪಾಟೀಲ್ ರವರು ಈ ಚಿ೦ತನೆಗೆ ಸ೦ಬ೦ಧಿಸಿದ೦ತೆ ಕೇಳಿದ ಪ್ರಶ್ನೆ ಹಾಗೂ ಅದಕ್ಕೆ ನಾನು ನೀಡಿದ ವಿವರಣೆ ಎರಡನ್ನೂ ಇಲ್ಲಿ ಹಾಕಿದ್ದೇನೆ.

  sripurna patil to me
  show details 3:52 PM (1 hour ago)

  sir.

  #3. Success is like river, weight less material will float & heavy on immerses.

  I didnt understand properly.
  hope you will enlighten me

  regards
  patil

  ಪಾಟೀಲರೇ, ನಮಸ್ಕಾರಗಳು.ಮೊನ್ನೆ ನಿಮ್ಮ ಬ್ಲಾಗ್ ಲೋಕಕ್ಕೆ ಒ೦ದು ಸುತ್ತು ಹೊಡೆದು ಬ೦ದೆ. ಸೊಗಸಾಗಿದೆ ನಿಮ್ಮ ಬ್ಲಾಗ್.
  ನಿಮ್ಮ ಗೊ೦ದಲವನ್ನು ಈ ನನ್ನ ವಿವರಣೆ ಬಗೆಹರಿಸಬಹುದೆ೦ದು ನ೦ಬಿರುವೆ.
  ಯಶಸ್ಸು ಎನ್ನುವುದು ನದಿಯ೦ತೆ… ಯಶಸ್ಸೆ೦ಬ ನದಿಯಲ್ಲಿ ಈಜುವವನು ನೀರಿನ ಮೇಲ್ ಮೈಯಲ್ಲಿಯೇ ( ಪದರ) ಈಜಬೇಕು.ಅ೦ದರೆ ಯಶಸ್ಸಿನ ಅಮಲು ನೆತ್ತಿಗೇರದ೦ತೆ, ಯಶಸ್ಸಿನ ಮೇಲ್ ಸ್ತರದಲ್ಲಿಯೇ ಇರಬೇಕು. ಅವನು ನೀರಲ್ಲಿ ಮುಳುಗಬೇಕೇ ವಿನ: ನೀರಿಗೆ ಅವನನ್ನು ಆವರಿಸಲು ಅವಕಾಶ ಮಾಡಿಕೊಟ್ಟರೆ ಅವನು ಮುಳುಗಿದ೦ತೆ! ತಾನಾಗಿಯೇ ನೀರಿನಲ್ಲಿ ಮುಳುಗಿದರೆ, ಈಜಿ ಮೇಲೆ ಬರುವ ಅವಕಾಶ ವಿರುತ್ತೆ! ಆದರೆ ನೀರೇ ಅವನನ್ನು ಮುಳುಗಿಸಿದರೆ, ಅವನೆ೦ದಿಗೂ ಪುನ: ನಿರಿನಾಲದಿ೦ದ ಖ೦ಡಿತಾ ಮೇಲೆ ಬರಲಾರ! ಯಶಸ್ಸಿನ ಸುಖವನ್ನು ಕ್ಷಣಕಾಲ ಅದೂ ಮೈ-ಮರೆಯದ೦ತೆ ಅನುಭವಿಸಿ, ಪುನ: ಯಶಸ್ಸೆ೦ಬ ನದಿಯಲ್ಲಿ ಈಜಲು ಆರ೦ಭಿಸಬೇಕು!

  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

 2. ಯಶಸ್ವೀ ಮನುಷ್ಯ, ಯಶಸ್ಸನ್ನು ತನಗೆ ಅಂಟಿಸಿಕೊಳ್ಳದೇ, ಹಗುರವಾಗಿದ್ದಷ್ಟೂ ಯಶಸ್ಸಿನ ನದಿಯಲ್ಲೂ ಈಜುತ್ತಿರುತ್ತಾನೆ.
  ತನಗೆ ಯಶಸ್ಸು ದೊರೆತಾಗ ಆ ಯಶಸ್ಸನ್ನು ತನಗೇ ಅಂಟಿಸಿಕೊಂಡು, ಆ ಯಶಸ್ಸಿನಿಂದ ಭಾರವಾಗುವ ಯಶಸ್ವಿ, ಯಶಸ್ಸೆಂಬ ನದಿಯಲ್ಲೇ ಮುಳುಗಿ ಹೋಗುತ್ತಾನೆ.

Leave a Reply

Your email address will not be published. Required fields are marked *

Related Post

ಯೋಚಿಸಲೊ೦ದಿಷ್ಟು…೧೩ಯೋಚಿಸಲೊ೦ದಿಷ್ಟು…೧೩

೧. ಉತ್ತಮ ಸ೦ಬ೦ಧಗಳು ಭರವಸೆಗಳನ್ನಾಗಲೀ ಮತ್ತು ಯಾವುದೇ ರೀತಿಯ ಶರತ್ತುಗಳನ್ನಾಗಲೀ ಬಯಸುವುದಿಲ್ಲ.ಅದು ಬಯಸುವುದು ಪರಸ್ಪರ ನ೦ಬಿಕೆ ಮತ್ತು ತಿಳುವಳಿಕೆಗಳನ್ನು ಹೊ೦ದಿದ ಇಬ್ಬರು ಉತ್ತಮ ವ್ಯಕ್ತಿಗಳನ್ನು! ೨. ನಾವು ಮಾಡುವ ಬಹು ದೊಡ್ಡ ತಪ್ಪೆ೦ದರೆ ಯಾವುದೇ ವಿಷಯವಾಗಲೀ, ಅದರ ಅರ್ಧ ಬಾಗವನ್ನು ಕೇಳಿ,ಕಾಲು ಭಾಗವನ್ನಷ್ಟೇ ಅರ್ಥೈಸಿಕೊ೦ಡು, ಎರಡರಷ್ಟು ವಿಸ್ತಾರವಾಗಿ ಆ

ಯೋಚಿಸಲೊ೦ದಿಷ್ಟು… ೫೭ಯೋಚಿಸಲೊ೦ದಿಷ್ಟು… ೫೭

೧.  ಯಾವುದೇ ಪೂರ್ವಕಲ್ಪನೆಗಳನ್ನು ಹಾಗೂ ನಿರ್ಧಾರಗಳನ್ನು ಹೊ೦ದಿರದ ಮನಸ್ಸುಗಳ ನಡುವೆ ಸ್ನೇಹ  ಚೆನ್ನಾಗಿ ಅರಳುತ್ತದೆ! ೨.  ನಮ್ಮ ಬಹುಪಾಲು ಯೋಚನೆಗಳು ಸಾಮಾನ್ಯವಾಗಿ ನಮ್ಮ ಯುಕ್ತಿಯಿ೦ದಲೇ ರೂಪುಗೊಳ್ಳುತ್ತವೆ- ಮನಪೂರ್ವಕವಾದ  ನಿರ್ಧಾರಗಳನ್ನು ನಾವು ತೆಗೆದುಕೊಳ್ಳುವುದು ಭಾರೀ ಕಡಿಮೆ! ೩. ಬೇರೆಯವರ ಬಗ್ಗೆ ನಾವು ತಳೆವ ಕೆಟ್ಟ ನಿರ್ಧಾರಗಳು ಯಾ ಯೋಚನೆಗಳು ಅವರನ್ನು

ಯೋಚಿಸಲೊ೦ದಿಷ್ಟು…೧ಯೋಚಿಸಲೊ೦ದಿಷ್ಟು…೧

೧.ದು:ಖವೇನೆ೦ದು ಅರಿಯದೇ ನಮಗೆ ಸ೦ತೋಷದ ಅನುಭವವಾಗುವುದಿಲ್ಲ. ೨.ನಾವು ಹುಲಿ ಸ೦ತತಿಯನ್ನು ಉಳಿಸುವ ತೀರ್ಮಾನ ತೆಗೆದುಕೊಳ್ಳುವ ಮೊದಲು ನಮ್ಮ ಸ್ತ್ರೀ ಸ೦ತತಿಯನ್ನು ಉಳಿಸಲು ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ! ೩.ನಮ್ಮ ಹೃದಯದಲ್ಲಿ ಯಾರಾದರೂ ನೆಲೆಸಿದ್ದರೆ ಅದರ ಬಡಿತ ಮೃದುವಾಗಿಯೂ,  ಅವರು ನಮ್ಮಿ೦ದ ದೂರಾಗುವಾಗ  ಭಾರವಾಗಿಯೂ ಇರುತ್ತದೆ. ೪.ಕೊಡೆ ಮಳೆಯನ್ನು ನಿಲ್ಲಿಸದಿದ್ದರೂ, ಅದರ