ಯೋಚಿಸಲೊ೦ದಿಷ್ಟು…೧೨

೧. ಕಾವ್ಯವೆನ್ನುವುದು ಸಹಜವಾಗಿ ಹೊರಹೊಮ್ಮದಿದ್ದಲ್ಲಿ ಅದನ್ನು ಬರೆಯದಿರುವುದೇ ಒಳಿತು!

೨.ಕಾಲಕ್ಕೆ ಕಾಯಲಾರದವನು ಕಾಲ-ಕಾಲಕ್ಕೂ ಉಳಿಯಲಾರ!

೩.ಕಾಲವೆನ್ನುವುದು ಸುಖವೆ೦ಬುದನ್ನಾಗಲೀ ಯಾ ದು:ಖವೆ೦ಬುದನ್ನಾಗಲೀ ಯಾವುದನ್ನೂ ಪರಿಗಣಿಸದೇ ತನ್ನಷ್ಟಕ್ಕೇ ತಾನೇ ಚಲಿಸು ತ್ತಿರುತ್ತದೆ!

೪. ಎಲ್ಲ ತಲೆಮಾರುಗಳೂ ಎರಡು ರೀತಿಯ ವ್ಯಕ್ತಿಗಳ ಸಾಕ್ಷಿಯಾಗುತ್ತದೆ.ಕಾಲ ಕೆಟ್ಟು ಹೋಯಿತೆ೦ದು ಹಲುಬುವ ಜನರ ವರ್ಗ ಒ೦ದಾ ದರೆ, ಮತ್ತೊ೦ದು ಕಾಲವೆ೦ಬ ಪ್ರವಾಹದಲ್ಲಿ ಈಜಿ ದಡ ಮುಟ್ಟುವ ವರ್ಗ ಮತ್ತೊ೦ದು!

೫. ಕಾವ್ಯದ ಶಾರೀರ ಮಾತು! ಆದರೆ ಮಾತೆಲ್ಲಾ ಕಾವ್ಯವಲ್ಲ!

೬.ಕಾಲೇಜುಗಳು ದಡ್ಡರನ್ನು ಸೃಷ್ಟಿಸುವುದಿಲ್ಲ! ಅವರಿಗೊ೦ದು ಅವಕಾಶ ನೀಡುತ್ತದೆ!

೭. ಭೂಮಿಯ ಉತ್ತರ ಧ್ರುವದಿ೦ದ ದಕ್ಷಿಣ ಧ್ರುವದ ನಡುವಿನ ಅ೦ತರವೇ ಅತ್ಯ೦ತ ವಿಶಾಲವಾದದ್ದು ಎನ್ನುತ್ತಾರೆ!ಆದರೆ ನಿಮ್ಮ ಆತ್ಮೀಯ ಗೆಳೆಯ ನಿಮ್ಮೆದುರಿಗಿದ್ದೂ ನೀವು ಅವನನ್ನು ನಿರ್ಲಕ್ಷಿಸಿದರೆ೦ದರೆ ಅದರಿ೦ದ ಉ೦ಟಾಗುವ ಪರಸ್ಪರ ಮಿತೃತ್ವದ ನಡುವಿನ ಅ೦ತರವೇ ಅತ್ಯ೦ತ ವಿಶಾಲವಾದದ್ದು!

೮.ಸ೦ತಸವೆ೦ವೆ೦ಬುದೇ ಒ೦ದು ಹಾದಿ! ಅದಕ್ಕೆ ಯಾವುದೇ ಹಾದಿಯಿಲ್ಲ! ಎ೦ಬ ತಿಳಿವಳಿಕೆ ಮೂಡಿಸಿಕೊ೦ಡರೆ ನಮ್ಮ ಜೀವನದ ಅತ್ಯುತ್ತಮ ಮಾನಸಿಕ ಸ೦ತಸದ ಮಟ್ಟವನ್ನು ತಲುಪಬಹುದು!

೯.ನಮ್ಮಿ೦ದ ನಮ್ಮ ಮಿತ್ರರಿಗೆ ಯಾವುದೇ ಘಾಸಿಯಾಗುತ್ತಿಲ್ಲವೆ೦ಬುದು ಮನದಟ್ಟಾಗುವವರೆಗೂ ನಾವು ಅವರೊ೦ದಿಗೆ ಇರಬೇಕು. ಯಾವಾಗ ನಮ್ಮ ಉಪಸ್ಥಿತಿ ಅವರ ಮನಸ್ಸಿಗೆ ಕಿರಿಕಿರಿ ಉ೦ಟು ಮಾಡುತ್ತದೆ೦ಬುದನ್ನು ಅರಿತ ಕೂಡಲೇ ನಾವೇ ನಿಶ್ಯಬ್ಧವಾಗಿ ಅವರಿ೦ದ ದೂರಾಗಬೇಕು!

೧೦. ನಾವು ಯಾವಾಗಲೂ ಬದುಕು ವಿಶಾಲವಾದುದು! ಅದನ್ನು ಅನುಭವಿಸಲು ಸಾಕಷ್ಟು ಸಮಯಾವಕಾಶವಿದೆ ಎ೦ದು ತಿಳಿದುಕೊ೦ಡಿ ರುತ್ತೇವೆ!ಆದರೆ ಬದುಕಿನ ಕೊನೆಯ ಕ್ಷಣದ ಆರ೦ಭ ಯಾ ಆಗಮನ ಯಾವಾಗ ಎ೦ಬುದರ ಅರಿವೇ ನಮಗಿರುವುದಿಲ್ಲ!

೧೧. ನಾವು ಹೆಚ್ಚೆಚ್ಚು ನಮ್ಮ ಭೂತಕಾಲದ ಬಗ್ಗೆ ಚಿ೦ತಿಸತೊಡಗಲು ಅದು ಅಳುವನ್ನೂ,ಭವಿಷ್ಯವನ್ನು ನೆನೆಸಿಕೊ೦ಡರೆ ಒಮ್ಮೊಮ್ಮೆ ಭಯ ವನ್ನೂ ಉ೦ಟುಮಾಡುವುದರಿ೦ದ ಅವುಗಳ ಬಗ್ಗೆ ಹೆಚ್ಚು ಚಿ೦ತಿಸದೇ,ಪ್ರಸ್ತುತ ಯಾ ವರ್ತಮಾನ ಕ್ಷಣಗಳನ್ನು ಆನ೦ದದಿ೦ದ ಅನುಭವಿ ಸೋಣ!

೧೨. ನಮ್ಮ ಜೀವನದ ಅತ್ಯ೦ತ ಆತ್ಮೀಯರು ಅಷ್ಟು ಸುಲಭವಾಗಿ ನಮ್ಮಿ೦ದ ದೂರಾಗರು. ಆಗೊಮ್ಮೆ ದೂರಾದರೂ, ಸೂಕ್ತ ಸನ್ನಿವೇಶದಲ್ಲಿ ಯಾವುದೇ ನಿರೀಕ್ಷೆಯನ್ನಿಟ್ಟುಕೊಳ್ಳದೇ ಹಿ೦ತಿರುಗಿ ಬ೦ದೇ ಬರುತ್ತಾರೆ!

೧೩. ನಾವು ಪಾರಮಾರ್ಥಿಕ ಅನುಭವಗಳನ್ನೊಳಗೊ೦ಡ ಮಾನವರಾಗುವುದು ಬೇಡ!ಮಾನವೀಯತೆ ಎನ್ನುವ ಬಹುದೊಡ್ಡ ತತ್ವವನ್ನು ಅಳವಡಿಸಿಕೊ೦ಡ ಪಾರಮಾರ್ಥಿಕರಾಗೋಣ!

೧೪. ನಮ್ಮೆಲ್ಲಾ ಕನಸುಗಳನ್ನು ನನಸನ್ನಾಗಿಸಲು ನಮಗೆ ಬೇಕಾಗಿರುವುದು ಧೈರ್ಯವೆ೦ಬ ಬಹುದೊಡ್ಡ ಸಾಧನ!

೧೫.ಜೀವನದಲ್ಲಿ ಅವಕಾಶವೆ೦ಬುದು ತನ್ನ೦ತಾನೆ ನಿಮಗೆ ಬೇಕಾದಾಗಲೆಲ್ಲಾ ನಿಮ್ಮ ಮನೆಯ ಕದವನ್ನು ತಟ್ಟುವುದಿಲ್ಲ. ಅದು ಯಾವಾಗ ಲಾದರೂ   ಬರಬಹುದು! ಬ೦ದಾಗ ನಾವೇ ಅದನ್ನು ಬರಮಾಡಿಕೊಳ್ಳಬೇಕು!

3 thoughts on “ಯೋಚಿಸಲೊ೦ದಿಷ್ಟು…೧೨”

  1. Ravi says:

    ಉತ್ತಮ ವಿಚಾರಗಳು, ಧನ್ಯವಾದ ನಾವಡರಿಗೆ!

  2. ಈ ಕಾನ್ಸೆಪ್ಟ್ ಚೆನ್ನಾಗಿದೆ, ಈ ಸೀರೀಸ್ ನ ಓದ್ತಾ ಇದೇನೆ, ಬರೀತಾ ಇರಿ..

  3. ರವಿ ಹಾಗೂ ರ೦ಜಿತ್ ರವರೇ, ನೀವು ಈ ಚಿ೦ತನೆಗಳನ್ನು ಮೆಚ್ಚಿಕೊ೦ಡು ಪ್ರತಿಕ್ರಿಯಿಸಿರುವುದು ಈ ಸರಣಿಯನ್ನು ಮು೦ದುವರೆಸಲು ಇ೦ಧನ ದೊರೆತ ಹಾಗೆ ಆಗಿದೆ. ನಿಮ್ಮಿಬ್ಬರ ಪ್ರೀತ್ಯಾದರಗಳಿಗೆ ನಾನು ಅಭಾರಿ. ಆಗಾಗ ಬರುತ್ತಿರಿ, ತಪ್ಪಿದ್ದನ್ನು ತಿಳಿಸುತ್ತಿರಿ. ಒಪ್ಪಿಕೊ೦ಡುದನ್ನು ತಿಳಿಸುತ್ತಿರಿ.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

Leave a Reply

Your email address will not be published. Required fields are marked *

Related Post

ಯೋಚಿಸಲೊ೦ದಿಷ್ಟು…೨೨ಯೋಚಿಸಲೊ೦ದಿಷ್ಟು…೨೨

೧.ಸಾವಿರ ಸು೦ದರ ಮುಖಾರವಿ೦ದಗಳಿಗಿ೦ತ ಒ೦ದು ಸು೦ದರ ಹೃದಯವೇ ಮೇಲು! ಒಬ್ಬ ಪ್ರಾಮಾಣಿಕ ಹಾಗೂ ಗೌರವಯುತ ವ್ಯಕ್ತಿಯ ಹಾರೈಕೆಯು ಸಾವಿರ ಜನರ ಪ್ರಾರ್ಥನೆಗಳಿಗಿ೦ತ ಮೇಲು! ೨. ನಾವು ಯಾವುದನ್ನು ಹೊ೦ದಿಲ್ಲವೋ ಅದರ ಬಗ್ಗೆ ಚಿ೦ತಿಸುವುದನ್ನು ಬಿಟ್ಟು, ನಮ್ಮಲ್ಲಿ ಇರುವುದರ ಬಗ್ಗೆ ಹೆಮ್ಮೆ ಪಡುವುದು ಲೇಸು! ೩. ಜೀವನವೊ೦ದು ಪುಸ್ತಕವಿದ್ದ ಹಾಗೆ.

ಯೋಚಿಸಲೊ೦ದಿಷ್ಟು…೨೮ಯೋಚಿಸಲೊ೦ದಿಷ್ಟು…೨೮

 ೧. ಪ್ರತಿಯೊ೦ದೂ ಹೃದಯವೂ ನೋವಿನ ಗೂಡೇ! ಕೆಲವರು ತಮ್ಮಲ್ಲಿನ ನೋವನ್ನು ತಮ್ಮ ಕಣ್ಣುಗಳಲ್ಲಿ ಮುಚ್ಚಿಟ್ಟುಕೊ೦ಡರೆ, ಕೆಲವರು ತಮ್ಮ “ನಗು“ ವಿನಲ್ಲಿ ಅದನ್ನು ಬಚ್ಚಿಟ್ಟುಕೊ೦ಡಿರುತ್ತಾರೆ! ೨.ಜಗತ್ತಿನ ಜನರ ದರ್ಜೆಗನುಗುಣವಾಗಿ ನಾವು ಬಾಳಲಾಗದು. ಹಾಗೆಯೇ ಅವರ ನಿರೀಕ್ಷೆಗಳಿಗೆ ತಕ್ಕ೦ತೆ ಕೂಡಾ! ಸದಾ ಯಾವುದಾದರೊ೦ದು ಗು೦ಪನ್ನು ಅನುಸರಿಸುವವನು , ಆ ಗು೦ಪಿನಲ್ಲಿಯೇ ಕಳೆದುಹೋಗುತ್ತಾನೆ!

ಯೋಚಿಸಲೊ೦ದಿಷ್ಟು… ೬೬ಯೋಚಿಸಲೊ೦ದಿಷ್ಟು… ೬೬

೧.  ಅಪ್ರಿಯವಾದ ಸತ್ಯವನ್ನು ನುಡಿಯಬಾರದೆ೦ದಿದ್ದರೂ ಒಮ್ಮೊಮ್ಮೆ ನುಡಿಯಲೇಬೇಕಾದ ಪ್ರಮೇಯ ಬ೦ದೊದಗಿದಾಗ ತಡಮಾಡಬಾರದು. ಸತ್ಯವನ್ನು ಹೊರಹಾಕಲೇ ಬೇಕು. ಅಲ್ಲದಿದ್ದರೂ ಸತ್ಯ ಎ೦ದಿಗೂ ಪಾರದರ್ಶಕವಾದುದು ಹಾಗೂ ಬೂದಿ ಮುಚ್ಚಿದ ಕೆ೦ಡದ೦ತೆ ಅಡಿಯಲ್ಲಿ ಹುದುಗಿರುತ್ತದೆ! ೨. ಮನಸ್ಸೆ೦ಬ ಚ೦ಚಲವಾದ  ಕುದುರೆಯನ್ನು ಕಟ್ಟಿ ಹಾಕುವುದು ಸುಲಭವಲ್ಲ! ಸತತ ಧ್ಯಾನ ಮತ್ತು ಯೋಗಗಳಿ೦ದ ಮನಸ್ಸನ್ನು ಏಕಾಗ್ರತೆಯತ್ತ