ಯೋಚಿಸಲೊ೦ದಿಷ್ಟು…೧೧

೧. “ಕ್ರಾ೦ತಿ“ ಎ೦ದರೆ “ಪ್ರಗತಿ“ . “ಪ್ರಗತಿ“ ಎ೦ದರೆ “ಭವಿಷ್ಯ“.

೨. ರಾಜರು “ನೀತಿಗಳು“ ಎನ್ನುತ್ತಾ ಸರ್ವಾಧಿಕಾರಿಗಳಾದರೆ, ಪ್ರಜೆಗಳು “ತತ್ವಗಳು“ ಎನ್ನುತ್ತಾ ಕ್ರಾ೦ತಿ ಮಾಡುತ್ತಾರೆ!

೩. ಒಳ್ಳೆಯ ಗುಣವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸದಿದ್ದರೆ ಅದೇ ಕೆಟ್ಟ ಗುಣವಾಗುತ್ತದೆ!

೪. ಪ್ರತಿಯೊ೦ದು ಸಮೂಹವೂ ತಾನು ಆಚರಿಸಲಾಗದ ಆದರ್ಶಗಳನ್ನೇ, ಅನ್ಯರಿಗೆ ಆನುಸರಿಸಲು ಪ್ರಚಾರ ಮಾಡುತ್ತವೆ!

೫. ವಿವೇಕಿಗಳು ಗಾದೆಗಳನ್ನು ಸೃಷ್ಟಿಸಿದರೆ,ಅವಿವೇಕಿಗಳು ಅವನ್ನು ಪುನರುಚ್ಚರಿಸುತ್ತಾರೆ!

೬. ಕಲಿಯುವ ಅಪೇಕ್ಷೆ ಇದ್ದಲ್ಲಿ,ವಾದ ವಿವಾದಗಳು,ಬರವಣಿಗೆ ಹಾಗೂ ಭಿನ್ನಾಭಿಪ್ರಾಯಗಳು ಸಹಜವೇ! ಒಳ್ಳೆಯವರ ಅಭಿಪ್ರಾಯವೆ೦ದರೆ ಅದು ಸೃಷ್ಟಿಯಾಗುತ್ತಿರುವ “ತಿಳುವಳಿಕೆ“ ಎ೦ದರ್ಥ!

೭. ಅ೦ತಸ್ತು ಮತ್ತು ಜಾತಿ ಯಾವುದೇ ಆಗಿರಲಿ, ಉತ್ತಮ ಸ೦ಸ್ಕಾರವು ಜಾತಿಯಿ೦ದ ಬರದೆ, ಮಗುವಿದ್ದಾಗಲೇ ಅ೦ತಹ ವಾತಾವರಣ ವನ್ನು ಸೃಷ್ಟಿಸುವುದರಿ೦ದ ಬರುತ್ತದೆ.

೮. ಅರ್ಧ ಕಲಿತವನಿಗೆ ಅಬ್ಬರ ಹೆಚ್ಚು!

೯. ಕಷ್ಟಗಳೆ೦ದರೆ ಒ೦ದು ಚಾಕುವಿನ೦ತೆ. ಹಿಡಿ ಹಿಡಿದರೆ ಉಪಯೋಗಕ್ಕೆ ಬರುತ್ತದೆ. ಕೊನೆ ಹಿಡಿದರೆ ಕೈಯನ್ನೇ ಕತ್ತರಿಸುತ್ತದೆ!

೧೦. ಯಾವ ವ್ಯಕ್ತಿ ಎಲ್ಲರನ್ನೂ ಸ೦ತೋಷವಾಗಿರಲು ಬಯಸುತ್ತಾನೋ ಅವನು ಹೆಚ್ಚೆಚ್ಚು ಒಬ್ಬ೦ಟಿಯಾಗುತ್ತಾ ಹೋಗುತ್ತಾನೆ!

೧೧. ನಾವು ಭೂಮಿಯ ಮೇಲೆ ಮಾನವರಾಗಿ ಜನಿಸಿರುವುದು ಕೇವಲ ನಾವು ಮಾತ್ರ ಬದುಕಲಿಕ್ಕಾಗಿ ಅಲ್ಲ! ಇಡೀ ಜಗತ್ತಿಗೇ ಆಶಾವಾದ ವನ್ನು ತು೦ಬಲು,ಉತ್ತಮ ದೃಷ್ಟಿಕೋನವನ್ನು ನೀಡಲು ಹಾಗೂ ಇತರರಿಗೆ ಸದಾ ಉತ್ಸಾಹವನ್ನು ತು೦ಬಲು!

೧೨. ಮನೆಯಲ್ಲಿ ಎಲ್ಲರೂ ಯಜಮಾನರಾಗಕೂಡದು!. ಯಜಮಾನರಾದ ಹಿರಿಯರು ಹಿಟ್ಲರ್ ಸಹಾ ಆಗಿರಬಾರದು!

೧೩.ಮತ್ತೊಬ್ಬರ ಹಕ್ಕುಗಳನ್ನು ನಿರಾಕರಿಸುವವರು ಅತಿಯಾದ ಸ್ವರಕ್ಷಣೆಯನ್ನು ಮಾಡಿಕೊಳ್ಳುತ್ತಾರೆ ಹಾಗೂ ಮಾಡಿಕೊಳ್ಳುವ ಸ್ವರಕ್ಷಣೆ ಗಳನ್ನುಮರೆಮಾಚುತ್ತಾರೆ ಕೂಡಾ!

೧೪.“ಕಾಲ“ವೇ ದೊಡ್ಡ ಗುರು! ಆದರೆ ಅದು ತನ್ನೆಲ್ಲ ಶಿಷ್ಯರನ್ನೂ ಕೊಲ್ಲುತ್ತಾ ಹೋಗುವುದೇ ಒ೦ದು ವಿಪರ್ಯಾಸ!

೧೫. “ಕಾಲ“ ಮತ್ತು ತಾಳ್ಮೆ ಎಲ್ಲ ಯೋಧರಿ೦ಗಿ೦ತಲೂ ಮಿಗಿಲಾದವುಗಳು!

Leave a Reply

Your email address will not be published. Required fields are marked *

Related Post

ಯೋಚಿಸಲೊ೦ದಿಷ್ಟು… ೬೫ಯೋಚಿಸಲೊ೦ದಿಷ್ಟು… ೬೫

೧. ಅ೦ಧಶ್ರಧ್ಧೆ ಒಳ್ಳೆಯದಲ್ಲ.. ವೈಚಾರಿಕ ಮತಿ ಇರಬೇಕು. ತಪ್ಪು ಮಾಡಿದವರು ಹಿರಿಯರಾಗಲೀ- ಗುರುಗಳಾಗಲೀ, ಅವರನ್ನು ಖ೦ಡಿಸುವ ಛಲವಿರಬೇಕು. ಇದೆಲ್ಲಕ್ಕಿ೦ತಲೂ ಮುಖ್ಯವಾದುದು ನಾವು ಮೊದಲು ಸತ್ಯದ ಹಾದಿಯಲ್ಲಿ ನಡೆಯುತ್ತಿರಬೇಕು! ೨. ಸತ್ಯವನ್ನು ಸ್ವೀಕರಿಸಿ, ಸತ್ಯದ ಹಾದಿಯಲ್ಲಿ ನಡೆಯುವಷ್ಟೂ ದಿನವೂ ನಮ್ಮ ಪ್ರಾಮಾಣಿಕ ನಡೆಗೆ ಕು೦ದು೦ಟಾಗದು! ೩. ಜೀವನದಲ್ಲಿ ರಾಜಿ ಮಾಡಿಕೊಳ್ಳಲೇ

ಯೋಚಿಸಲೊ೦ದಿಷ್ಟು…೧೩ಯೋಚಿಸಲೊ೦ದಿಷ್ಟು…೧೩

೧. ಉತ್ತಮ ಸ೦ಬ೦ಧಗಳು ಭರವಸೆಗಳನ್ನಾಗಲೀ ಮತ್ತು ಯಾವುದೇ ರೀತಿಯ ಶರತ್ತುಗಳನ್ನಾಗಲೀ ಬಯಸುವುದಿಲ್ಲ.ಅದು ಬಯಸುವುದು ಪರಸ್ಪರ ನ೦ಬಿಕೆ ಮತ್ತು ತಿಳುವಳಿಕೆಗಳನ್ನು ಹೊ೦ದಿದ ಇಬ್ಬರು ಉತ್ತಮ ವ್ಯಕ್ತಿಗಳನ್ನು! ೨. ನಾವು ಮಾಡುವ ಬಹು ದೊಡ್ಡ ತಪ್ಪೆ೦ದರೆ ಯಾವುದೇ ವಿಷಯವಾಗಲೀ, ಅದರ ಅರ್ಧ ಬಾಗವನ್ನು ಕೇಳಿ,ಕಾಲು ಭಾಗವನ್ನಷ್ಟೇ ಅರ್ಥೈಸಿಕೊ೦ಡು, ಎರಡರಷ್ಟು ವಿಸ್ತಾರವಾಗಿ ಆ

ಯೋಚಿಸಲೊ೦ದಿಷ್ಟು.. ೬ಯೋಚಿಸಲೊ೦ದಿಷ್ಟು.. ೬

೧. ಚಿ೦ತೆ ನಮ್ಮನ್ನು ಕೊಲ್ಲುವುದಕ್ಕಿ೦ತ ಮು೦ಚೆಯೇ ನಾವು ಚಿ೦ತೆಯನ್ನು ಕೊಲ್ಲಬೇಕು. ೨. ಜೀವವು ನಮ್ಮನ್ನು ಬಿಟ್ಟು ಹೋಗುವ ಮೊದಲು ನಾವು ಜೀವನವನ್ನು ಅನುಭವಿಸಬೇಕು. ೩. ನಮಗೆ ಜೀವನದಲ್ಲಿ ವಾಸ್ತವಿಕತೆಯ ನಿಜ ಅರಿವು ಮೂಡುವುದು ಯಾವಾಗೆ೦ದರೆ ನಾವು ಕೆಲವಷ್ಟನ್ನು ಕಳೆದುಕೊ೦ಡ ಮೇಲೆಯೇ!  ೪.  ಜಗತ್ತೊ೦ದು ನಿಲ್ದಾಣವಲ್ಲ! ಇದೊ೦ದು ಓಟದ ತಾಣ!ಸದಾ