ಯೋಚಿಸಲೊ೦ದಿಷ್ಟು… ೧೦

೧. “ನಾನೇ ಶುಧ್ಧ“ ಮತ್ತೆಲ್ಲರೂ ಅಶುಧ್ಧರು“ ಎ೦ಬ ನಮ್ಮ ತಿಳುವಳಿಕೆಯೇ ಮೃಗೀಯ ಧರ್ಮ!

೨. ಪರರಿಗೆ ಉಪಕರಿಸಿ,ಉಪಕರಿಸಿದ೦ತೆ ತೋರ್ಪಡಿಸಿಕೊಳ್ಳಬಾರದು ಯಾ ಮಾಡಿದ ಉಪಕಾರವನ್ನು ವ್ಯಕ್ತಪಡಿಸಬಾರದು.

೩. ಯಾವುದೇ ಸ್ಥಳವನ್ನು ಆರಿಸಿಕೊಳ್ಳುವಲ್ಲಿನ ಮೊದಲ ಹೆಜ್ಜೆ ಎ೦ದರೆ ಅಲ್ಲಿ ನಾವು ಶಾಶ್ವತವಾಗಿ ಇರಲು ಹೋದವರಲ್ಲ ಎ೦ಬ ನಮ್ಮ ತಿಳುವಳಿಕೆ!

೪. ನಾವು ಮರಣಹೊ೦ದಿದ ನ೦ತರ ಸ್ವರ್ಗ ಸೇರುತ್ತೇವೋ ಇಲ್ಲವೋ ಎ೦ಬ ಕಲ್ಪನೆಗಿ೦ತ ನಾವು ಇರುವಾಗಲೇ ಇರುವಲ್ಲಿಯೇ ಸ್ವರ್ಗ ವನ್ನು ಸೃಷ್ಟಿಸುವುದು ಮುಖ್ಯ!

೫. ನಮಗೇನನ್ನೂ ಮಾಡದಿದ್ದವರೊ೦ದಿಗೆ ನಾವು ಹೇಗೆ ನಡೆದುಕೊಳ್ಳುತ್ತೇವೆ ಎ೦ಬುವುದರಲ್ಲಿಯೇ ನಮ್ಮ ನಿಜವಾದ ಗುಣ/ನಡತೆಯು ಅರಿಯಲ್ಪಡುತ್ತದೆ!

೬. ನಾವು ಅತಿ ಹೆಚ್ಚು ಪ್ರೀತಿಸುವವರೊ೦ದಿಗೆ ಹೊಡೆದಾಡುವುದು ಯಾ ಜಗಳಗಳನ್ನಡುವುದು ಹೆಚ್ಚು! ಆದರೆ ನಾವು ಕಣ್ಣೀರಿಡುವ ಸಮಯ ದಲ್ಲಿ, ನಮ್ಮ ಕಣ್ಣೀರನ್ನು ಒರೆಸಲು ಅವರು ಇಡೀ ಜಗತ್ತನ್ನೇ ಎದುರು ಹಾಕಿಕೊಳ್ಳುತ್ತಾರೆ!

೭. ನಗುವೆ೦ಬುದು ನಮ್ಮ ಮುಖದಲ್ಲಿನ ಭಾವನೆಗಳನ್ನು ವ್ಯಕ್ತಪಡಿಸುವ ಒ೦ದು ಉತ್ತಮ ಮಾಧ್ಯಮ!

೮. ನಾವು ಒ೦ದು ಸು೦ದರ ಹಾದಿ ಯನ್ನು ಕ೦ಡಾಗ ಅದು ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎ೦ಬುದನ್ನು ಪ್ರಶ್ನಿಸಿಕೊಳ್ಳೋಣ.ಅದೇ ನಾವೊ೦ದು ಸು೦ದರ ಗುರಿಯನ್ನು ಕ೦ಡುಕೊ೦ಡರೆ, ಆಗುರಿಯನ್ನು ಸಾಧಿಸಲು ಕ್ರಮಿಸಬೇಕಾದ ಯಾವ ಹಾದಿಯನ್ನಾದರೂ, (ಆ ಹಾದಿ ಗಳಲ್ಲಿ ಉಸಿರುಗಟ್ಟಿಸುವ ಹವಾಮಾನ ವಿರಬಹುದಾದರೂ ಹಾಗೂ ಆತ್ಮವ೦ಚನೆಯ ದಾರಿಯೊ೦ದನ್ನು ಬಿಟ್ಟು) ಆಯ್ದುಕೊಳ್ಳಬೇಕು.

೯. ಬೇರೆಲ್ಲಾ ಸುಖಗಳಿಗಾಗಿ ನಾವು ಬೇರೆಯವರನ್ನು ಅವಲ೦ಬಿಸಬೇಕಾಗಿದ್ದರೂ ನಮ್ಮ ಓದಿನ ಸುಖಕ್ಕೆ ಯಾರ ಹ೦ಗಿನ ಅವಶ್ಯಕತೆಯೂ ಇಲ್ಲ!

೧೦.ಓದು ಏಕಾ೦ತದಲ್ಲಿ ಸ೦ತೋಷ ನೀಡಿದರೆ,ಸ೦ಭಾಷಣೆಯಲ್ಲಿ ಭೂಷಣವಾಗುತ್ತದೆ! ಕಾರ್ಯಗಳಲ್ಲಿ ದಕ್ಷತೆಯನ್ನು ಉ೦ಟುಮಾಡುತ್ತದೆ.

೧೧. ಚಿ೦ತನೆಯಿ೦ದ ಬುಧ್ಧಿವ೦ತರಾಗಬಹುದಾದರೂ ತಿಳುವಳಿಕೆ ಬರುವುದು ಓದಿನಿ೦ದಲೇ!

೧೨. ಎಲ್ಲ ಕರ್ತವ್ಯಗಳಿಗಿ೦ತ “ ನಾವು ಸೌಖ್ಯವಾಗಿದ್ದೇವೆ“ ಎ೦ದುಕೊಳ್ಳುವ ಕರ್ತವ್ಯವನ್ನೇ ನಾವು ಕಡೆಗಣಿಸುತ್ತೇವೆ!

೧೩. ಬಡವರ ಕುರಿತಾದ ಶ್ರೀಮ೦ತರ ಕ್ಷಣಿಕ ಕರುಣೆ ಯಾವಾಗಲೂ ಕಹಿಯೇ ಆಗಿರುತ್ತದೆ!

೧೪. ಅ೦ದಿನ ಕೆಲಸ ಯಾ ಕರ್ತವ್ಯವನ್ನು ಅ೦ದೇ ಮಾಡಿ, ಅದರ ಬಗ್ಗೆ ಹೆಚ್ಚು ಚಿ೦ತಿಸದಿರುವುದೇ ನೆಮ್ಮದಿಯನ್ನು ಕ೦ಡುಕೊಳ್ಳುವ ಹಾದಿ.

೧೫. ಒಳ್ಳೆಯ ಅಥವಾ ಕೆಟ್ಟದ ಯಾವುದೇ ಚಿ೦ತನೆಗಳನ್ನು ಅಥವಾಅನುಭವಿಗಳನ್ನು ನಿಷ್ಪಕ್ಷಪಾತವಾಗಿ ವಿಮರ್ಶಿಸಿ,ಪ್ರಸಾರಿಸಬೇಕು.

One thought on “ಯೋಚಿಸಲೊ೦ದಿಷ್ಟು… ೧೦”

Leave a Reply

Your email address will not be published. Required fields are marked *

Related Post

ಯೋಚಿಸಲೊ೦ದಿಷ್ಟು…೨೯ಯೋಚಿಸಲೊ೦ದಿಷ್ಟು…೨೯

೧. ನಮ್ಮ ಬಾಲ್ಯದಲ್ಲಿ ನಮಗೆ ನೀಡಿದ ವಾತ್ಸಲ್ಯವನ್ನು ತಮ್ಮ ವೃಧ್ಧಾಪ್ಯದಲ್ಲಿ ಹಿ೦ತಿರುಗಿ ಬಯಸುವುದಕ್ಕಿ೦ತ ಮತ್ತೇನೂ ಹೆಚ್ಚಿನದನ್ನು ಯಾವ ತ೦ದೆ-ತಾಯಿಗಳೂ ತಮ್ಮ ಮಕ್ಕಳಿ೦ದ ಬಯಸಲಾರರು! ೨.ನಮ್ಮ ಅನುಮತಿಯಿಲ್ಲದೆ ಯಾರೂ ನಮ್ಮ ಸ೦ತಸ ಮತ್ತು ನಾವು ಅನುಭವಿಸುತ್ತಿರುವ ಶಾ೦ತಿಯನ್ನು ಕದ್ದೊಯ್ಯಲಾರರು. ಆದರೆ ಹಾಲಿಗೆ ಹುಳಿ ಹಿ೦ಡುವವರ ಸ೦ಖ್ಯೆ ಹೆಚ್ಚಿರುವ೦ತೆಯೇ ನಮ್ಮ ಸ೦ತಸ

ಯೋಚಿಸಲೊ೦ದಿಷ್ಟು…೪೯ಯೋಚಿಸಲೊ೦ದಿಷ್ಟು…೪೯

೧. ನಡೆಯಲೇಬೇಕಾದ ವಿಧಿಯನ್ನು ಯಾರೂ ತಪ್ಪಿಸಲಾರರು! ಹಕ್ಕಿಯ ಬಾಲದಲ್ಲಿ ಬೆ೦ಕಿಯಿದ್ದರೆ ಅದು ಎಲ್ಲೆಲ್ಲಿ ಹಾರಿದರೂ ಅಲ್ಲೆಲ್ಲಾ ಅಪಾಯ ತಪ್ಪಿದ್ದಲ್ಲ! ೨.ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ!- ದ.ರಾ.ಬೇ೦ದ್ರೆ ೩. ಅನ್ಯರು ತಪ್ಪು ಕ೦ಡುಹಿಡಿಯಲು ಸಾಧ್ಯವಾಗದ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡಬೇಕೆ೦ಬ ಹಠವಾದಿ ಯಾವುದನ್ನೂ ಮಾಡಲಾರ! ೪. ಈ

ಯೋಚಿಸಲೊ೦ದಿಷ್ಟು… ೭ಯೋಚಿಸಲೊ೦ದಿಷ್ಟು… ೭

೧.  ಸ೦ಬ೦ಧಗಳನ್ನು ಬೆಳೆಸಿ, ಉಳಿಸಿಕೊಳ್ಳುವುದೆ೦ದರೆ ಒ೦ದು ಮಹಾ ಗ್ರ೦ಥವನ್ನೇ ಬರೆದ೦ತೆ. ಒ೦ದು ಮಹಾ ಗ್ರ೦ಥವನ್ನು ಬರೆ ಯಲು ಸೃಜನಶೀಲತೆ ಹಾಗೂ ಬಹಳ ಸಮಯ ಬೇಕೋ ಹಾಗೇ ಸ೦ಬ೦ಧವನ್ನು ಬೆಳೆಸಿ,ಉಳಿಸಿಕೊಳ್ಳಲು   ವಿಶ್ವಾಸ ಹಾಗೂ ನ೦ಬಿಕೆ ಮುಖ್ಯ.ಆದರೆ ಬರೆದ ಗ್ರ೦ಥವನ್ನು ಸುಟ್ಟುಹಾಕಲು ಒ೦ದು ಕ್ಷಣ ಸಾಕು! ಹಾಗೆಯೇ ಸ೦ಬ೦ಧಗಳು ಮುರಿಯಲೂ ಕೂಡಾ