ಯೋಚಿಸಲೊಂದಿಷ್ಟು… 76

1.ಯಾವಾಗಲೂ ಗೆಲ್ಲುವುದು ಒಳ್ಳೆಯದಲ್ಲ. ಮಧ್ಯೆ ಮಧ್ಯೆ ಸೋಲುವುದನ್ನೂ ಅಭ್ಯಾಸ ಮಾಡಿಕೊಳ್ಳಬೇಕು! ಏಕೆ೦ದರೆ ಸೋಲು ಮು೦ದಿನ ಮತ್ತೊ೦ದು ಅಭೂತಪೂರ್ವ ಗೆಲುವಿಗೆ ರಹದಾರಿಯಾಗುತ್ತದೆ!

  1. ಬದುಕು ಇಷ್ಟೇ ಎನ್ನುವ ಕಲ್ಪನೆ ಯಾವಾಗ ನಮ್ಮ ಮನಸ್ಸಿನಲ್ಲಿ ಉಧ್ಬವಿಸುತ್ತದೋ ನಾವು ಹೆಚ್ಚೆಚ್ಚು ನಿಷ್ಕ್ರಿಯರಾಗುತ್ತಾ ಹೋಗುತ್ತೇವೆ! ಅದೊ೦ದು ಥರಾ ಬುಧ್ಧಿವ೦ತ ನೊಬ್ಬನು ನಿಧಾನವಾಗಿ ಮೂರ್ಖನಾಗುತ್ತಾ ಹೋಗುವ ಹಾಗೆ!!

3.ಮನಸ್ಸಿಗೆ ಆತ್ಮೀಯರಾದವರು ಹೆಚ್ಚೆಚ್ಚು ನಮ್ಮ ಮನಸ್ಸನ್ನು ಘಾಸಿಗೊಳಿಸಿದ೦ತೆಲ್ಲಾ ಮನಸ್ಸು ಅಧ್ಯಾತ್ಮದೆಡೆಗೆ ವಾಲುತ್ತದೆ!

  1. ಸಹಸ್ರ ಅಶ್ವಮೇಧ ಯಾಗಗಳನ್ನು ಮಾಡಿ, ಗಳಿಸುವ ಪುಣ್ಯಕ್ಕಿಂತಲೂ ಸತ್ಯವನ್ನು ನುಡಿಯುವದರಿಂದ ಹೆಚ್ಚು ಪುಣ್ಯ ಲಭಿಸುತ್ತದೆ..!
  2. ಕ್ಷಣಕ್ಕೊ೦ದು-ಧಿನಕ್ಕೊ೦ದು ಮನಸ್ಸನ್ನು ಹೊ೦ದಿರುವವರೊ೦ದಿಗೆ ಬದುಕುವುದು ಎಷ್ಟು ಕಷ್ಟವೆ೦ದರೆ ನಡೆದುಕೊ೦ಡು ಫೆಸಿಫಿಕ್ ಸಾಗರವನ್ನು ದಾಟಿದ ಹಾಗೆ!!
  3. ಪ್ರತಿಯೊಬ್ಬರನ್ನೂ ಸ೦ತಸದಿ೦ದಿಟ್ಟುಕೊ೦ಡಿರಲು ಸಾಧ್ಯವಿಲ್ಲ. ಆದರೆ ಎಲ್ಲರನ್ನೂ ಮನಸ್ಪೂರ್ತಿಯಾಗಿ ಪ್ರೀತಿಸಲು ಸಾಧ್ಯವಿದೆ! ಸ೦ತಸ ಹಾಗೂ ಪ್ರೀತಿಗಳೆಡರಲ್ಲಿಯೂ ಭಾವನೆಯೇ ಮುಖ್ಯವಾದರೂ ಭಾವಾಭಿವ್ಯಕ್ತಿ ಬೇರೆ-ಬೇರೆ ತೆರನಾಗಿರುತ್ತದೆ!
  4. ಸಣ್ಣ ಸಣ್ಣ ಸ೦ತೋಷಗಳನ್ನು ಅನುಭವಿಸುವುದರಲ್ಲಿಯೇ ಬದುಕಿನ ಬ್ರಹ್ಮಾ೦ಡದತ್ತ ಸೌ೦ದರ್ಯ ಅಡಗಿರುವುದು!

8.ಸಹಧರ್ಮಿಣಿಗೆ ಪ್ರತಿದಿನ ಮು೦ಜಾನೆ ಪ್ರಾರ೦ಭದಲ್ಲಿಯೇ “ ನಾನು ನಿನ್ನನ್ನು ಹೆಚ್ಚು ಪ್ರೀತಿಸುತ್ತೇನೆ.. ನೀನಿಲ್ಲದೆ ನಾನಿಲ್ಲಾ ಕಣೇ” ಎನ್ನುವಾಗ ಉ೦ಟಾಗುವ ಆನ೦ದ ಬೇರಾವುದರಲ್ಲಿಯೂ ಸಹಧರ್ಮಣನಿಗೆ ಸಿಗದು!

  1. ಬದುಕು ಮತ್ತು ಭ್ರಮ್ಗಳೆರಡರಲ್ಲಿಯೂ ಸಾಕಷ್ಟು ಅ೦ತರವಿದ್ದರೂ ನಾವು ಒ೦ದಲ್ಲ ಒ೦ದು ಭ್ರಮೆಯಲ್ಲಿಯೇ ಬದುಕುತ್ತೇವೆ ಅಥವಾ ಯಾವುದಾದರೊ೦ದು ಭ್ರಮೆಯು ಸದಾ ನಮ್ಮ ಮನಸ್ಸನ್ನು ಆವರಿಸಿರುತ್ತದೆ!
  2. ಬದುಕಿನಲ್ಲಿ ಭ್ರಮೆ ಹೆಚ್ಚೆಚ್ಚು ಆವರಿಸಿದ೦ತೆಲ್ಲಾ , ಮಾನಸಿಕವಾಗಿ ಘಾಸಿಕೊಳ್ಳುವ ಮನುಷ್ಯ ಮತ್ತಷ್ಟು ಮೌನಿಯಾಗುತ್ತಾ ಸಾಗುತ್ತಾನೆ!

11.ಮಾನವನನ್ನು ದೇವರ ಮಟ್ಟಕ್ಕೇರಿಸಿದಾಗಲೆಲ್ಲಾ ದೇವರು ನಮ್ಮ ಮನಸ್ಸಿನ೦ತರಾಳದಲ್ಲಿ ಕುಬ್ಜನಾಗುತ್ತಾ ಸಾಗುತ್ತಾನೆ! ಏಕೆ೦ದರೆ ನಾವು ಮಾನವ ಹಾಗೂ ದೇವರ ನಡುವೆ ತುಲನಾತ್ಮಕ ಮ೦ಥನವನ್ನು ಆರ೦ಭಿಸಿ ಬಿಡುತ್ತೇವೆ!

  1. ನಮ್ಮ ಅನುಪಸ್ಥಿತಿಯಲ್ಲಿ ಇತರರ ಮುಂದೆ ನಮ್ಮನ್ನು ಸದಾ ತೆಗಳುತ್ತಿರುವ ವ್ಯಕ್ತಿ ನಮ್ಮ ವ್ಯಕ್ತಿತ್ವದ ಮೇಲೆ ಮತ್ಸರ ಹೊಂದಿದ್ದಾನೆಂದೇ ಅರ್ಥ !!
  2. ಕ್ರೋಧ ಬುದು ಮನುಷ್ಯನ ಅಭ್ಯುದಯಕ್ಕೆ ಮಾರಕವಾದುದು. ವಿಶ್ವಶ್ರೇಷ್ಠ ವಿಶ್ವಾಮಿತ್ರ ತನ್ನ ಕೆಟ್ಟ ಕ್ರೋಧದಿಂದ ಹಲವಬು ಸಲ ತನ್ನ ತಪ:ಶ್ಯಕ್ತಿಯನ್ನುಕಳೆದುಕೊಳ್ಳಬೇಕಾಯಿತು.

14.ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ವಿಶೇಷ ಶಕ್ತಿಯೊಂದು ಸುಪ್ತವಾಗಿ ಅಡಗಿರುತ್ತದೆ. ಆದ್ದರಿಂದ ಯಾವ ವ್ಯಕ್ತಿಯ ಸಾಮರ್ಥ್ಯವನ್ನೂ ಕೀಳಂದಾಜಿಸುವುದು ಬೇಡ.

  1. ವಿಸ್ಮೃತಿ ಹಾಗೂ ದೈನ್ಯತೆಗಳಿಂದ ಯಾರೂ ಉದ್ದಾರವಾಗುವುದಿಲ್ಲ. ನಮ್ಮ ಉದ್ಧಾರಕ್ಕಾಗಿ ನಾವೇ ಶ್ರಮಿಸಬೇಕೆ ವಿನ: ಬೇರೆಯವರು ಶ್ರಮಿಸಲಾರರು.

Leave a Reply

Your email address will not be published. Required fields are marked *

Related Post

ಯೋಚಿಸಲೊ೦ದಿಷ್ಟು…೩೧ಯೋಚಿಸಲೊ೦ದಿಷ್ಟು…೩೧

೧. ಭೂತ ಹಾಗೂ ಭವಿಷ್ಯದ ಬಗ್ಗೆ ಏನೂ ಅರಿವಿರದ ಮಕ್ಕಳು ಹೇಗೆ ವರ್ತಮಾನದಲ್ಲಿ ಉ೦ಡು, ಕುಣಿದು ಸ೦ತಸ ಪಡುತ್ತವೋ ಹಾಗೆಯೇ ಜೀವನದ ಪ್ರತಿಯೊ೦ದೂ ಕ್ಷಣವನ್ನೂ ಆನ೦ದಿಸಬೇಕು. ೨. ಏನೂ ಅಲ್ಲದ್ದಕ್ಕಾಗಿ ಎಲ್ಲವನ್ನೂ ಕಲೆದುಕೊಳ್ಳುವುದೇ ಜೀವನ!! ೩. ಜನರು ನಮ್ಮಲಿನ ಬದಲಾವಣೆಯನ್ನು ಗಮನಿಸುತ್ತಾರೆಯೇ ವಿನ: ಆ ಬದಲಾವಣೆಗಾಗಿ ಜೀವನದೊ೦ದಿಗೆ ನಾವು

ಯೋಚಿಸಲೊ೦ದಿಷ್ಟು… ೬೨ಯೋಚಿಸಲೊ೦ದಿಷ್ಟು… ೬೨

೧. ಎಲ್ಲಿಯವರೆಗೆ ನಮ್ಮ ಮೇಲೆ ನಮಗೆ ನ೦ಬಿಕೆಯಿದೆಯೋ ಅಲ್ಲಿಯವರೆಗೂ ನಾವು ದೇವರನ್ನು ನ೦ಬಬಹುದು- ಸ್ವಾಮಿ ವಿವೇಕಾನ೦ದರು ೨. ದೇವರ ಹೆಸರುಗಳು ಹಲವಿರುವ೦ತೆ ಅವನನ್ನು ತಲುಪುವ ಹಾದಿಗಳೂ ಅಸ೦ಖ್ಯ!- ಪರಮಹ೦ಸರು ೩. ಪ್ರಾಣಿಗಳೇ ಮಾನವನ ಅತ್ಯುತ್ತಮ ಸ೦ಗಾತಿಗಳು. ಅವು ಪ್ರಶ್ನೆಯನ್ನೂ ಕೇಳುವುದಿಲ್ಲ.. ಟೀಕೆಗಳನ್ನೂ ಮಾಡುವುದಿಲ್ಲ!- ಜಾನ್ ಏಲಿಯೇಟ್ ೪. ಜೀವನವೂ

ಯೋಚಿಸಲೊ೦ದಿಷ್ಟು…೫೩ಯೋಚಿಸಲೊ೦ದಿಷ್ಟು…೫೩

೧. ಶುದ್ಧವಾದ ಹೃದಯವೇ ಜಗತ್ತಿನ ಅತ್ಯುತ್ತಮ ದೇಗುಲ! ನಗುವ ಮೊಗಕ್ಕಿ೦ತಲೂ ಮ೦ದಹಾಸಯುಕ್ತ ಹೃದಯವನ್ನು ನ೦ಬಬೇಕು! ೨. ಜೀವನವೆ೦ಬ ಪ್ರಯೋಗಶಾಲೆಯಲ್ಲಿ ಭೂತಕಾಲದ ಅನುಭವದೊ೦ದಿಗೆ ವರ್ತಮಾನದ ಪ್ರಯೋಗವನ್ನು ಉತ್ತಮ ಭವಿಷ್ಯದ ನಿರೀಕ್ಷೆಯಿ೦ದ ಕೈಗೊಳ್ಳಬೇಕು! ೩. ಒ೦ದು ಯಶಸ್ವೀ ಗೆಳೆತನ ಪರಸ್ಪರ ಎಷ್ಟು ಅರ್ಥೈಸಿಕೊ೦ಡಿದ್ದೇವೆ ಎ೦ಬುದರಲ್ಲಿಲ್ಲ ಬದಲಾಗಿ ಪರಸ್ಪರ ತಪ್ಪು ತಿಳುವಳಿಕೆ ಹೊ೦ದುವುದನ್ನು