Menu

ಯೋಚಿಸಲೊಂದಿಷ್ಟು ..- ೭೭

ಮಾನವ ಜನ್ಮವು ಅತಿ ಸುಲಭವಾಗಿ ದೊರಕುವಂಥದ್ದಲ್ಲ. ಹಾಗಾದರೆ ಇಷ್ಟು ಕಷ್ಟದಿಂದ, ಜನ್ಮ-ಜನ್ಮಾಂತರಗಳ ಪಾಪಗಳ ಸವಕಳಿಯಿಂದ ದೊರೆತಿರಬಹುದಾದ ಈ ಮಾನವ ಜನ್ಮವನ್ನು ಔನ್ನತೀಕರಿಸಿಕೊಳ್ಳುವುದು ಹೇಗೆ ? ಎಂಬ ಪ್ರಶ್ನೆ ಕಾಡುತ್ತದೆ. ಅದಕ್ಕೆ ಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ :

ಯೋಗಸ್ಥ : ನ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ |
ಸಿದ್ಧ್ಯಸಿದ್ಧ್ಯೋಃ ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೇ||

ಅಂದರೆ ಯೋಗ ( ಸಮಚಿತ್ತತೆ) ದಲ್ಲಿ ಸ್ಥಿರವಾಗಿ ನಿಂತು, ಸಂಗವನ್ನು ತ್ಯಜಿಸಿ, ಜಯಾಪಜಯಗಳನ್ನು ಸಮತ್ವದಿಂದ ಸ್ವೀಕರಿಸುತ್ತಾ ಕರ್ಮಗಳನ್ನು ಮಾಡು ಎಂದರ್ಥ.

ಆಪೂರ್ಯಮಾಣಮಚಲ ಪ್ರತಿಷ್ಟಂ ಸಮುದ್ರಮಾಪ:ಪ್ರವಿಶಂತಿ ಯದ್ವತ್|
ತದ್ವತ್ಕಾಮಾಯಂ ಪ್ರವಿಶಂತಿ ಸರ್ವೇ ಸ ಶಾಂತಿಮಾಪ್ನೋತಿ ಕಾಮ ಕಾಮೀ ||

ಅಂದರೆ ಶ್ರೀಕೃಷ್ಣನು ಹೇಳುವಂತೆ ತುಂಬಿ ಶಾಂತವಾಗಿರುವ ಸಮುದ್ರಕ್ಕೆ ಹೇಗೆ ಹಲವಾರು ಕಡೆಯಿಂದ ನೀರು ಬಂದು ಸೇರುವುದೋ ಅದೇ ರೀತಿ ಎಲ್ಲಾ ವಿಷಯಗಳೂ ತನ್ನೊಳಗೆ ಲಯವಾಗಿರುವವನು ಶಾಂತಿಯನ್ನು ಪಡೆಯುತ್ತಾನೆ. ಆದರೆ ವಿಷಯಗಳನ್ನು ಬಯಸುವವನಿಗೆ ಈ ಶಾಂತಿಯು ಸಿಗುವುದಿಲ್ಲ.

ಅಂದರೆ ವಿಷಯಾಸಕ್ತಿಗಳನ್ನು ತ್ಯಜಿಸಿ, ರಾಗ-ದ್ವೇಷ ಭಾವಗಳಿಲ್ಲದೆ ಫಲಾಫೇಕ್ಷೆಯಿಲ್ಲದೆ ಕರ್ಮ ಮಾಡುವುದಷ್ಟೇ ನಮ್ಮ ಕೆಲಸವೆಂದು ಶ್ರೀ ಕೃಷ್ಣ ಹೇಳುತ್ತಿದ್ದಾನೆ.

“ಹದಾ ಮಾಂಸಮಯ ದೇಹ ಮಾಮ್
ತಾಸೋ ಜೈಸಿ ಪ್ರಿತ್ತಿ
ವೈಸಿ ಜೋ ಶ್ರೀರಾಮ್ ಮೇ
ಹೋತ್ ನವ ಭವ್ ಭೀತೀ “

ಅರೆಕ್ಷಣವೂ ಬಿಟ್ಟಿರಲಾರದ ತನ್ನನ್ನು ಅತ್ಯಂತ ಹೆಚ್ಚು ಪ್ರೀತಿಸುತ್ತಿದ್ದ ತುಕಾರಾಮನನ್ನು ಉಪಚರಿಸುತ್ತ ಆತನ ಹೆಂಡತಿ ರತ್ನಾವಳೀ ಹೇಳಿದ ಮಾತಿದು !

ಅಂದರೆ ‘ ನನ್ನ ಮೂಳೆ ಮಾಂಸಗಳ ಈ ದೇಹದ ಮೇಲೆ ನೀನು ಇಟ್ಟ ಪ್ರೀತಿಯನ್ನು ಶ್ರೀರಾಮನಲ್ಲಿ ನೀನು ಇರಿಸಿದ್ದಲ್ಲಿ ನೀನು ಈ ಭವ ಭೀತಿಯನ್ನೇ ಗೆಲ್ಲುತ್ತಿದ್ದೆ “ ಎಂದರ್ಥ.ಈ ಮಾತಿನಿಂದ ಮನಪರಿವರ್ತನೆ ಯಾಗಿ ತುಕಾರಾಮ್ ಶ್ರೀ ತುಲಸೀದಾಸರಾದರು. ಜಗದ್ವಿಖ್ಯಾತ “ರಾಮಚರಿತಮಾನಸ “ ದ ಕರ್ತೃವಾದರು.

ಕೆ.ವಿ ವರದರಾಜ ಅಯ್ಯಂಗಾರ್ ಒಂದು ಕಡೆ ಹೇಳುತ್ತಾರೆ.
| ಎಲ್ಲಿಯವರೆಗೆ ಗಳಿಸುವೆ ಹಣವನು
ಅಲ್ಲಿಯವರೆಗೆ ಸತಿಸುತರಿರುವರು
ದೇಹವು ಕುಸಿದರೆ ಜರೆ ಜಡಿಯುತಿರೆ
ಯಾರೂ ಕೇಳರು ಕಡೆಗಣಿಸುವರು ||

ಅಂದರೆ, ದೈಹಿಕ ಬಲವಿರುವವರೆಗೂ,ನಿಮ್ಮ ಆರ್ಥಿಕ ಬಲವಿರುವವರೆಗೂ ನಿಮ್ಮೊಂದಿಗೆ ಸತಿ-ಸುತರಾದಿಯಾಗಿ ಬಂಧು ಮಿತ್ರರೆಲ್ಲರೂ ಜೊತೆಗಿರುತ್ತಾರೆ. ಆದರೆ ಕೊನೆಗೆ ಮುಪ್ಪಡರಿ, ದೇಹ ಶಿಥಿಲವಾದಾಗ ಎಲ್ಲರೂ ನಿಮ್ಮಿಂದ ದೂರ ಸರಿಯುವರು.

ಮೇಲಿನ ಎಲ್ಲಾ ಮಾತುಗಳು ಈ ದೇಹ ನಶ್ವರ.. ಶ್ರೀ ಮಾತೆಯ ನಾಮಸ್ಮರಣೆಯೊಂದೇ ಶಾಶ್ವತ ಎನ್ನುತ್ತಿವೆ. ನಮ್ಮನ್ನು ನಾವು ಅವಳಿಗೆ ಅಂದರೆ ಆ ಮಹಾತಾಯಿಗೆ ಸಮರ್ಪಿಸಿಕೊಳ್ಳಬೇಕು. ಈ ಸಂಪೂರ್ಣ ದೇಹದ ಎಲ್ಲಾ ಅಂಗಗಳು ತಾಯಿಯ ಚರಣಕ್ಕೆ- ಚರಣ ಸೇವೆಗೆ ಅರ್ಪಿತವಾಗಬೇಕು. ಶಾಂತಿ ಮಂತ್ರಗಳು ಹೇಳುವುದು ಇದನ್ನೇ….

೨-

ಓಂ || ಭದ್ರಂ ಕರ್ಣೀಭಿಶ್ಮೃಣುಯಾಮ ದೇವಾಃ |
ಭದ್ರಂ ಪಶ್ಶ್ಯೇಮಾಕ್ಷಭಿರ್ಯಜತ್ರಾಃ |
ಸ್ಥಿರೈರಂಗೈಸ್ತುಷ್ಟುವಾಗ್ಂ ಸಸ್ತನೂಭಿಃ |
ವ್ಯಶೇಮ ದೇವಹಿತಂ ಯದಾಯುಃ |

ಓ ದೇವಾ ಪವಿತ್ರವಾದವುಗಳನ್ನೇ ನನ್ನ ಕಿವಿಗಳು ಶ್ರವಣ ಮಾಡಲಿ
ಓ ಪೂಜೆಗೆ ಅರ್ಹನಾದವನೇ ಪವಿತ್ರವಾದವನ್ನೇ ನನ್ನ ಕಣ್ಣುಗಳು ದರ್ಶಿಸಲಿ
ಮಾತು ಮತ್ತು ದೇಹ ಏಕಾಗ್ರತೆಯಿಂದ ನಿನ್ನ ಪೂಜಿಸುವಲ್ಲಿ ಸ್ಥಿರವಾಗಿರಲಿ
ನಿನ್ನಂಕೆಗೆ ಒಳಪಟ್ಟ ಈ ಆಯುಸ್ಸು ನಿನ್ನ ಪೂಜಿಸುವಿಕೆಗೆ ಮೀಸಲಾಗಿರಲಿ

ಎಷ್ಟು ಚಂದದ ಮಂತ್ರವೆಂದರೆ ತನು ಮತ್ತು ಮನಗಳೆರಡೂ ನಿನ್ನ ಸೇವೆಯಲ್ಲಿ ತೊಡಗಿರಲಿ.. ಮತ್ತಾವ ಬದುಕೂ ಬೇಡ ಎನ್ನುತ್ತಿದೆ.. ಪರಮಾನಂದವನ್ನು ನೀಡುವ ಆ ಬ್ರಹ್ಮನಲ್ಲಿ ಲೀನವಾಗುವುದರ ಮೂಲಕ ಬದುಕಿನ ಔನತ್ಯವನ್ನು ಸಾಧಿಸಬೇಕು. ಬ್ರಹ್ಮವನ್ನು ಪಡೆದವನು ಸ್ಥಿತಪ್ರಜ್ಞನಾಗಿರುತ್ತಾನೆ. ಆತನು ಎಂದೂ ಯಾವುದರ ಮೇಲೂ ಮೋಹಗೊಳ್ಳುವುದಿಲ್ಲ. ಅಂತ್ಯ ಕಾಲದಲ್ಲಿಯೂ ಇದೇ ಸ್ಥಿತಿಯಲ್ಲಿದ್ದು ಬ್ರಹ್ಮ ನಿರ್ವಾಣವನ್ನು ಪಡೆಯುತ್ತಾನೆ ಎಂದು ಶ್ರೀ ಕೃಷ್ಣ ಹೇಳುತ್ತಾನೆ. ಭಕ್ತಿ-ಕರ್ಮ – ಜ್ಷಾನ ಯೋಗಗಳ ಮೂಲಕ ಮೋಕ್ಷವನ್ನು ಪಡೆಯಬಹುದು ಎಂದೂ ಅವನೇ ಹೇಳಿದ್ದಾನೆ.. “ ಮಹಾ ಜನೋ ಯೇನ ಗತ: ಸ ಪಂಥಾ ‘ ಎಂಬಂತೆ ಮಹನೀಯರು ನಡೆದ ದಾರಿಯನ್ನು ಅನುಸರಿಸಿ ಬಾಳಬೇಕು. “ ಪರೋಪಕಾರಾರ್ಥಂ ಇದ೦ ಶರೀರಂ“ ಎಂಬಂತೆ ¥ರರಿಗಾಗಿ ಬಾಳಬೇಕು. ನಾನು ನನ್ನದೆಲ್ಲಾ ತೃಣ ಮಾತ್ರವಾಗಿದೆ. ಶ್ರಿÃಮಾತೆಯೊ£ಬ್ಬಳೇ ನಿಜ ಸತ್ಯವೆಂಬುದನ್ನು ಅರಿತು ಬಾಳಿದಲ್ಲಿ ಬಾಳಿಗೊಂದು ಸಾರ್ಥಕತೆ ಲಭಿಸುತ್ತದೆ.ಗಳಿಕೆಯಲ್ಲಿ ಪರರ ಕಷ್ಟಗಳಿಗಾಗಿ ಒಂದಷ್ಟು ಮೀಸಲಿರಲಿ. ಪರರಿಗಾಗಿ ಮಿಡಿಯುವ ಮನಸ್ಸು ನಮ್ಮದಾಗಿರಲಿ. ಕರ್ಮದ ಬಂಧನ ಅಷ್ಟು ಸುಲಭವಾಗಿ ಕಳೆಯುವಂಥದ್ದಲ್ಲ. ಸದಾ ಆ ಮಹಾತಾಯಿಯ ಧ್ಯಾನ, ಜಪ. ತಪ, ಸದಾಚಾರಗಳು ಭವಭಾರವನ್ನು ತಗ್ಗಿಸಬಲ್ಲವು. ಏನನ್ನೂ ತಂದಿಲ್ಲ.. ಏನನ್ನೂ ಒಯ್ಯುವುದಿಲ್ಲವೆಂಬುದು ಸತ್ಯವೇ. ಬದುಕಿಗಾಗಿ ನಿಜಾರ್ಥವನ್ನು ಗಳಿಸೋಣ. ನಿಜಾರ್ಥದಲ್ಲಿ ಪರಾರ್ಥಕ್ಕೂ ಒಂದು ಪಾಲನ್ನು ತೆಗೆದಿಡೋಣ. “ ನಮ್ಮದೇನಿಲ್ಲ ಇಲ್ಲಿ ಅವಳದೇ ಎಲ್ಲ ಇಲ್ಲಿ “ ಎಂಬ ತಿಳುವಳಿಕೆಯ ಬದುಕು ಪರಂಧಾಮಕ್ಕೂ ಮೋಕ್ಷಕ್ಕೂ ಕಾರಣವಾಗಬಲ್ಲುದು.

Leave a Reply

Your email address will not be published. Required fields are marked *