ಯಾಂತ್ರಿಕ ಜಡತ್ವ

” ಅನುಭವವೇ ಮನುಷ್ಯನ ಬಾಳಿನ ಮೊದಲ ಪಾಠಶಾಲೆ”
ಕರೋನ ಎಂಬ ಎಂಟನೆ ದಿನಾಚರಣೆ ಅಂಗವಾಗಿ
“ಬದುಕು ಬರುಡು ಎಂಬ ಕಲ್ಪನೆ”

ದಟ್ಟ ಕಾನನದಲ್ಲಿಯೂ ಕೂಡ ಸೂರ್ಯನ ಕಿರಣ ಭೂಮಿಯನ್ನು ಒಂದು ಸಲ ಸ್ಪರ್ಶಿಸದೇ ತೆರಳುವುದಿಲ್ಲ, ಹಾಗೆಯೇ ಕತ್ತಲ ಜೀವನದಲ್ಲಿ ಬರಸವಸೆಯ ಬೆಳಕು ಒಂದಲ್ಲ
ಒಂದು ದಿನ ಬಂದೇ ಬರುತ್ತದೆ, ಕಾಯುವ ತಾಳ್ಮೆ ಇರಬೇಕಷ್ಟೇ….. “ಐಶ್ವರ್ಯವು ನೀರಿನ ಗುಳ್ಳೆಯಂತೆ ಭಂಗುರ. ದೇಹವು ದೀಪದ ಜ್ವಾಲೆಯಂತೆ ಅಸ್ಥಿರ. ತಾರುಣ್ಯವು ಯುವತಿಯ
ನೋಟದಂತೆ ಚಂಚಲ. ಭುಜಬಲವು ಮಿಂಚಿನಂತೆ ಕ್ಷಣದಲ್ಲಿ ನಶಿಸತಕ್ಕದ್ದು. ಎಲೈ ಜೀವವೇ, ಏನಾದರೂ ಪುಣ್ಯಕಾರ್ಯವನ್ನು ಬೇಗನೆ ಮಾಡುವ ನಿಟ್ಟಿನಲ್ಲಿ,ದಾನ, ಧ್ಯಾನ, ತಪಸ್ಸು -ಶಿಕ್ಷಣದ ಅವಲೋಕನ ಇತ್ಯಾದಿ ಪವಿತ್ರ ಕಾರ್ಯವನ್ನು ಮಾಡುವಂತರಾಗ ಬೇಕು” ಜೀವನ ಒಂದು ಸುಂದರ ತಾಣ. ಈ ಪಯಣದಲ್ಲಿ ಅನೇಕ ರೀತಿಯ ನೋವು-ನಲಿವುಗಳನ್ನು ನಾವು
ನೋಡುತ್ತೇವೆ. ಒಂದು ಸಾರಿ ಈ ಜೀವನ ಎಷ್ಟು ವಿಶಾಲವಾದುದು ಮತ್ತು ಸುಂದರವಾದ ಬದುಕು ಎನಿಸಿದರೆ.
ಇದಕ್ಕೆ ವಿರುದ್ದವಾಗಿ, ಮತ್ತೊಂದು ಸಾರಿ, ಈ ಜೀವನ ತುಂಬಾ ಕ್ರೂರವಾದುದ್ದು, ಕ್ಷಣಿಕವಾದುದ್ದು. ಇದರ ಅರ್ಥ,
ಒಂದೇ ತೊಟ್ಟು-ಎರಡು ಹುಟ್ಟು, ಒಂದೇ ಇರುವು-ಎರಡು ತೆರವು, ಒಂದೇ ಪ್ರೀತಿ-ಎರಡು ರೀತಿ ಹೀಗೆ ಜೀವನ ಎರಡು ಬಗೆಯಲ್ಲಿ ನಮಗೆ ಗೋಚರಿಸುತ್ತದೆ.

ಹುಟ್ಟು-ಬದುಕು-ಸಾವು ಈ ಮೂರು ದಿನದ ಆಟದಲ್ಲಿ ನಮಗೆ ಅನೇಕ ಅನುಭವಗಳಾಗುತ್ತವೆ. ಆ ಅನುಭವಗಳನ್ನು ಅನುಭವಿಸಿ ನಡೆಯುವುದು ನಿಜವಾದ ಬದುಕು. ನಾವು ಹಿಂದೆ ನಡೆದ ಕಹಿ-ಸಿಹಿ ಘಟನೆಗಳನ್ನು ಒಳ್ಳೆಯದಕ್ಕೆ ಆಗಿದೆ ಎಂದು ಭಾವಿಸಬೇಕು. ಈಗ ಮುಂದೆ
ಆಗಲಿರುವುದು ಸಹ ಒಳ್ಳೆಯದೇ ಆಗಬಹುದೆಂಬ ನಂಬಿಕೆ ಇರಬೇಕು. ಮುಂದೆ ಆಗಲಿರುವುದು ಈಗ ನಡೆಯುತ್ತಿರುವುದು ಸಹ ಒಳ್ಳೆಯದೆಂದು ಭಾವಿಸಬೇಕು. ಈ ನೀತಿಯನ್ನು ಪಾಲಿಸಬೇಕೆಂದರೆ ತುಂಬಾ ಕಷ್ಟ ಪಡಬೇಕು. ಏಂಕೆಂದರೆ ಒಬ್ಬ ವ್ಯಕ್ತಿಯ ಬಾಳಿನಲ್ಲಿ ಸಿಹಿ ಘಟನೆಗಳಿಗಿಂತ, ಕಹಿ ಘಟನೆಗಳೇ ಹೆಚ್ಚಾದಾಗ ನಾವು ಹೇಗೆ ಬದುಕಲು ಸಾಧ್ಯವಾಗುತ್ತದೆ. ಅದೇ ತರಹ ನಾವು ರೋಧಿಸಲು ಅಥವಾ ಕೋಪ ಮಾಡಿಕೊಳ್ಳಲು ಏನನ್ನು ಕಳೆದುಕೊಂಡಿಲ್ಲ.
ಏಕೆಂದರೆ ನಾವು ಏನನ್ನೆಲ್ಲಾ ಪಡೆದಿದ್ದರು ಅದನ್ನೆಲ್ಲಾ ಇಲ್ಲಿಂದಲೇ ಪಡೆದಿರುವೆ ಮತ್ತು ಇಲ್ಲಿಂದ ಪಡೆದು ಇಲ್ಲಿಯವರೆಗೆ ಕೊಟ್ಟಿರುವೆ ಹಾಗೂ ಬಿಟ್ಟುಹೋದರು ಸಹ ಇಲ್ಲಿ ಗಳಿಸಿದನ್ನೇ ಬಿಟ್ಟು ಹೋಗುವೆ.

ಮಾನವನ ಬಾಳಿನಲ್ಲಿ ಅಂದುಕೊಂಡಂತೆ ಏನು ಆಗುವುದಿಲ್ಲ. ಇಷ್ಟಪಟ್ಟರು ಸಿಗುವುದಿಲ್ಲ. ಏಕೆಂದರೆ ಹಿಂದಿನ ದಿನ ಒಬ್ಬರದು, ಈ ದಿನ ನನ್ನದು, ನಾಳೆ ದಿನವು ಇನ್ನೊಬ್ಬರದು ನಾಳಿದ್ದು ಯಾರದ್ದೋ? ಏಕೆಂದರೆ ಭವಿಷ್ಯವನ್ನು ಊಹೆ ಮಾಡಲು ಸಾಧ್ಯವಿಲ್ಲ.

ಜೀವ ಉಳಿಸಿಕೊಳ್ಳಬೇಕೆಂದರೆ ಅವಶ್ಯಕತೆಗಳನ್ನು ಪೂರೈಸಿಕೊಳ್ಳಬೇಕು. ಆ ಅವಶ್ಯಕತೆಗಳನ್ನು ಪೂರೈಸಿಕೊಳ್ಳಬೇಕೆಂದರೆ ಜೀವನದ ಮೌಲ್ಯಗಳನ್ನು ಬೆಳೆಸಿ ಉಳಿಸಿಕೊಳ್ಳಬೇಕು. ಮನುಷ್ಯನು ಅವಶ್ಯಕತೆಗಳ ದಾರಿಯಲ್ಲಿ ಸಾಗಿ ಪಡೆದುಕೊಳ್ಳಬೇಕು.

ಮನುಷ್ಯನಿಗೆ ಅವಶ್ಯಕತೆಗಳ ದಾಹ ಹೆಚ್ಚಾಗಿ ಹೋದಾಗ ಅವನಲ್ಲಿ ಸಮಸ್ಯೆಗಳು ಹೆಚ್ಚುತ್ತಾ ಹೋಗುತ್ತವೆ. ಅವನು ತನ್ನ ಜೀವನ ಅವಶ್ಯಕತೆ ಪೂರೈಸಿಕೊಳ್ಳಲು ಹೋಗಿ, ಇಡೀ ಜೀವನ ಸಮಸ್ಯೆಗಳ ಸುಳಿಯಲ್ಲಿ ನರಳುತ್ತಾನೆ.

ಮನುಷ್ಯನಿಗೆ ಅವಶ್ಯಕತೆ ಈಡೇರಿಸಿಕೊಳ್ಳಲು ಕಾರಣ ಮನುಷ್ಯನೇ ಆಗಿರುತ್ತಾನೆ. ಆದರೆ ಪರಿಸರವು ಸ್ವಲ್ಪ ಕಾರಣವಾದರೆ ಇನ್ನು ಉಳಿದು ಮುಖ್ಯ ಕಾರಣ ಮನುಷ್ಯನೇ ಆಗಿರುತ್ತಾನೆ. ನಾ ಕನ್ನಡಿ ಎದುರು ನಿಂತು ನಕ್ಕೆ…ಕನ್ನಡಿ ಕೂಡ ನನ್ನೊಂದಿಗೆ ನಕ್ಕಿತು.
ಇದು ವಾಸ್ತವ…! ಅದೇ ರೀತಿಯಲ್ಲಿ.
ನಾ ಜಗತ್ತಿನೆದುರು ಅತ್ತೆ …
ಜಗತ್ತು ಕೂಡ ನನ್ನೊಂದಿಗೆ ಅತ್ತಿತು. ಎಂಬ ಕಲ್ಪನೆಯಲ್ಲಿ ನಾವುಗಳು ಇದ್ದಿವಿ…!

ಮನುಷ್ಯನಿಗೆ ಜೀವನದಲ್ಲಿ ಒಂದೆರಡು ವಸ್ತುಗಳು ಸಾಲಲ್ಲ ಬದುಕೋಕೆ. ಗೊತ್ತು ಗುರಿ ಇಲ್ಲದ ಅದೆಷ್ಟೋ ವಸ್ತುಗಳು , ಅದೆಷ್ಟೋ ಬೇಡಿಕೆಗಳು ಇರುತ್ತವೆ. ಹಾಗೆಯೇ ಬೇಡಿಕೆಗೆ ಒಂದು ಸಮಯ ಅನ್ನುವುದು ಕೂಡ ಇರುತ್ತೆ. ಆ ನಿಗದಿತ ಸಮಯದೊಳಗೆ ಅವರಿಗೆ ಆ ವಸ್ತು ಪಡೆಯಲು ಆಗ್ಲಿಲ್ಲ ಅಂದರೆ ಅವರು ಮತ್ತೆ ಅದರ ಬಗ್ಗೆ ಯೋಚನೆ ಮಾಡುವುದಿಲ್ಲ. ಕಾರಣ ಜೀವನದ ಬಗ್ಗೆ ಅವರಿಗೆ ಇನ್ನು ಹತ್ತು ಹಲವಾರು ಜವಾಬ್ದಾರಿಗಳು ಇರುತ್ತವೆ. ಆದ್ದರಿಂದ ಬೇರೊಂದು ಆಲೋಚನೆಯ ಕಡೆಗೆ ಮುಖ ಮಾಡಿರುತ್ತಾರೆ. ಸಣ್ಣ ಸಣ್ಣ ಖುಷಿಗಳನ್ನೂ ಮೈದಡವಿ ಸಂಭ್ರಮಿಸಿ
ಯಾವುದೋ ಮಹಾ ಗೆಲುವೊಂದಕ್ಕೆ ಅಣಿಯಾಗುವಂಥಾ ಸಂಭ್ರಮ.
ಸ್ಮಶಾಣವೇ ಆಗಿಹೋಗಿದ್ದ ಮನಸಲ್ಲೀಗ ನಿತ್ಯವೂ ಸಡಗರದ ಸಂತೆ… ಇದೆಲ್ಲವೂ ನಮ್ಮಿಂದಲೆ. ದಿನಾ ಬೆಳಗೆದ್ದರೆ ಅದದೇ ಕೆಲಸ, ತಡರಾತ್ರಿ ಕಸುವೆಲ್ಲ ಬಸಿದು ಹೋದಂತಾದಾಗ ಒಂದಷ್ಟು ನಿದ್ದೆ… ಬದುಕೆಂದರೆ ಇಷ್ಟು ಮತ್ತು ಇಷ್ಟೇ ಎಂಬಂಥಾ ಯಾಂತ್ರಿಕ ಜಡತ್ವ ನನ್ನಿಡೀ ಬದುಕನ್ನೇ ಆವರಿಸಿಕೊಂಡು ಅದೆಷ್ಟು ದಿನವಾಗಿತ್ತೋ… ತುತ್ತಿನ ಚೀಲದ ಮುಲಾಜು ಮತ್ತು ಕಟ್ಟಿಕೊಂಡ ಅಷ್ಟಿಷ್ಟು ಕನಸುಗಳು ಇನ್ನು ಇವೆ ಸಮಯ ಬೇಕು………
“ಮಾನವನು ಬರಿ ಕೈಯಲ್ಲೇ ಬಂದು, ಬರಿ ಕೈಯಲ್ಲೇ ಹೋಗುತ್ತಾನೆ.”

ಸುನಿಲ್ ಕುಮಾರ್. ಡಿ

Leave a Reply

Your email address will not be published. Required fields are marked *

Related Post

“. ಕೊರೋನಾ ಪರಿಹಾರ ನಿಧಿ ““. ಕೊರೋನಾ ಪರಿಹಾರ ನಿಧಿ “

ಸುನಿಲ್ ಕುಮಾರ್. ಡಿ ರವರ ಮಾತುಗಳು ಸತ್ಯವೆನಿಸಿ ಅದನ್ನು ಹಾಗೆಯೇ ಹಾಕುತ್ತಿದ್ದೇನೆ ಮೂರನೇ ಹಂತ ಪ್ರವೇಶಿಸುತ್ತಿರುವ ಕೊರೋನಾ ವೈರಸ್ ಹಾವಳಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತಡೆಯಲು ಕರ್ನಾಟಕ ಸರ್ಕಾರ ಈ ಕ್ರಮಗಳನ್ನೂ ಸೇರಿಸಿಕೊಳ್ಳಬಹುದು….. 1) ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಶಾಲೆ, ಹಾಸ್ಟೆಲ್, ಕಲ್ಯಾಣ ಮಂಟಪ, ಕೆಲವು ಹಾಲ್ ಗಳನ್ನು ಕನಿಷ್ಠ

ಧರ್ಮಗಳು ಪವಿತ್ರವಲ್ಲ.ಧರ್ಮಗಳು ಪವಿತ್ರವಲ್ಲ.

ಧರ್ಮಗಳು ಪವಿತ್ರವಲ್ಲ.ಧರ್ಮಗಳ ಒಳತಿರುಳು ಪವಿತ್ರ.(ಇದು ಎಲ್ಲ ಧರ್ಮಗಳಿಗೂ ಅನ್ವಯಿಸುತ್ತದೆ) ಧರ್ಮದ ಅಂಧಾಭಿಮಾನದಿಂದ ಹೊರಬರದ ಹೊರತು ದೇಶದ ಅಥವಾ ಜಗತ್ತಿನ ಯಾವ ಸಮುದಾಯವು ಮನುಜ ಪ್ರೀತಿಯನ್ನು ಕಾಣಲು ಸಾಧ್ಯವಿಲ್ಲ.ಹುಟ್ಟುವಾಗ ಬೆತ್ತಲೆ!ಹೋಗುವಾಗ ಬೆತ್ತಲೆ!ಈ ನಡುವೆ ಒಳಿತನ್ನು ಬಯಸುತ್ತ ಆನಂದದಿಂದ ಎಲ್ಲೋ ಇರುವ ಸ್ವರ್ಗವನ್ನು ಕಾಣದೆ ಇಲ್ಲೇ ಇರುವ ನಿಸರ್ಗವನ್ನು ಕಾಣಿ. ಈ

ಸೃಷ್ಟಿ ಸಹಜತೆಸೃಷ್ಟಿ ಸಹಜತೆ

ಸುನಿಲ್ ಕುಮಾರ್. ಡಿ ರವರ ಚಿಂತನೆಯಲ್ಲಿ ಸದ್ವಿಚಾರವಿದೆ ಇಂದು ಸಾವಿನ ಭಯದ ಅನಾಥ ಪ್ರಜ್ಞೆಯಲ್ಲಿ ಮನೆಯೊಳಗೆ ಬಂಧಿಯಾಗಿರುವ ಸಂದರ್ಭಗಳಲ್ಲಿ ತುಂಬಾ ಗಾಬರಿಯಾಗುವ ಅವಶ್ಯಕತೆ ಇಲ್ಲ. ಎಲ್ಲಾ ಶತಮಾನ ಗಳಲ್ಲೂ ಈ ರೀತಿಯ ಆತಂಕಗಳು ಜನರನ್ನು ಕಾಡಿವೆ. ಅದಕ್ಕಾಗಿಯೇ ಹೇಳುವುದು, ಬದುಕೊಂದು ಯುದ್ದ ಭೂಮಿ…………… ಗೆಲ್ಲಬಹುದು – ಸೋಲಬಹುದು –